‘ಮೂಢನಂಬಿಕೆಗಳ ವಿರುದ್ಧ ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’

‘ಮೂಢನಂಬಿಕೆಗಳ ವಿರುದ್ಧ ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ 'Children should develop a scientific attitude against superstitions'

ಲೋಕದರ್ಶನ ವರದಿ 

ಕುಕನೂರು 04: ಸಮಾಜದಲ್ಲಿ ಇಂದಿಗೂ ಮನೆ ಮಾಡಿರುವ ಮೂಢನಂಬಿಕೆಗಳ ವಿರುದ್ಧ ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳು ಶಿಕ್ಷಣದ ಜೊತೆಗೆ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಮುಂದಾಗಬೇಕು ಎಂದು ಯಲಬುರ್ಗಾ ತಣಎನ್‌ಕಢದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ ಅವರು ಕರೆ ನೀಡಿದರು.   

ಕರ್ನಾಟಕ ಅರೋಗ್ಯ ಸಂವರ್ಧನಾ ಪ್ರತಿಷ್ಠಾನದ (ಕೆ.ಹೆಚ್‌.ಪಿ.ಟಿ) ವತಿಯಿಂದ ಕುಕನೂರು ತಾಲ್ಲೂಕಿನ ಕುದರಿಮೋತಿಯ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗಾಗಿ ಸೋಮವಾರ ಜರುಗಿದ ನಾಯಕತ್ವ ಮತ್ತು ಸಂವಹನ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯಗಳು, ಮೌಲ್ಯಗಳು ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ಸಂವಹನ ಕೌಶಲ್ಯ ಮತ್ತು ನಾಯಕತ್ವ ಗುಣಗಳ ಪ್ರಾಮುಖ್ಯತೆ ವಿವರಿಸಿದರು.   

ಸಮಾರಂಭದಲ್ಲಿ ಕೆ.ಹೆಚ್‌.ಪಿ.ಟಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಉಮಾದೇವಿ ಋಢಣಂಃಣಞಢ, ಕಾರ್ಯಕ್ರಮ ಅಧಿಕಾರಿ ಪುಂಡಲೀಕ್ ಬರಮಗೌಡರ್, ಶಾರದಾ ಹಿರೇಮಠ್, ರೇಣುಕಾ, ಉಮಾ, ಸರೋಜ, ಅಕ್ಕಮಹಾದೇವಿ, ರತ್ನಾ ಹಾಗೂ ಸ್ಫೂರ್ತಿ ತಂಡದ ಹೆಣ್ಣುಮಕ್ಕಳು ಮತ್ತು ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.