ಲೋಕದರ್ಶನ ವರದಿ
ಬೈಲಹೊಂಗಲ: ಹೈನೋದ್ಯಮಕ್ಕೆ ಮಾರಕವಾಗಿರುವ ಆರ್.ಸಿ.ಇ.ಪಿ.ಒಪ್ಪಂದದ ಕರಡು ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲ ವಿಧಾನಸಭೆ, ಸಂಸತ್ತಿನಲ್ಲಿ ಚಚರ್ೆ, ಅನುಮೋದನೆ ಪಡೆಯದೆ ಸಹಿ ಹಾಕಬಾರದು ಎಂದು ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಕೇಂದ್ರ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೊಷ್ಠಿ ಉದ್ದೇಶಿಸಿ ಮಾತನಾಡಿ, ಜನತೆಯ ಸಮಸ್ಯೆಗೆ ಸ್ಪಂದಿಸಬೇಕಾದ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರಬೇಕು. ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಅರ್.ಸಿ.ಇ.ಪಿ.ಒಪ್ಪಂದಕ್ಕೆ ಸಹಿ ಹಾಕಲಿಕ್ಕೆ ನಮ್ಮದು ಸಂಪೂರ್ಣ ವಿರೋಧವಿದೆ ಎಂದರು.
ಈ ಯೋಜನೆಯಿಂದ ಗ್ರಾಮಾಂತರ ಜನರಿಗೆ, ಚಿಲ್ಲರೆ ವ್ಯಾಪಾರಸ್ಥರ ಉದ್ಯಮಕ್ಕೆ ಸಂಭಂದಿಸಿದ ವಿಷಯಕ್ಕೆ ಕರಾರು ಪ್ರತಿಗಳು ಸಂಸತ್ತಿನಲ್ಲಿ ಚಚರ್ೆಯಾಗಿಲ್ಲ. ಇದೊಂದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಸಂಸತ್ತಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಹಕ್ಕು ನಮಗೂ ಇದೆ.
ಈಚೆಗೆ ಕೆಲವು ಸಂಭಂದಿಸಿದ ಮತ್ತು ತಜ್ಞರ ಹೇಳಿಕೆಗಳು ಗಮನಿಸಿದರೆ ಪ್ರಧಾನಿಯವರು ನಿನ್ನೆ ಒಪ್ಪಂದಕ್ಕೆ ತಾತ್ಕಾಲಿಕ ನೀಡಲಿಲ್ಲ. ಆದರೆ ಅವರು 2020 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕುವ ಸೂಚನೆ ನೀಡಿದ್ದಾರೆ ಎಂದರು.
ಭಾರತದಲ್ಲಿ ಹೈನುಗಾರಿಕೆ ಬದುಕಿಗಾಗಿ ಇದೆ. ಆಸ್ರ್ಟೇಲಿಯಾದಲ್ಲಿ ಹೈನೋದ್ಯಮ ಒಂದು ದೊಡ್ಡ ಉದ್ದಿಮೆಯಾಗಿದೆ. ಅಲ್ಲಿ ಪ್ರತಿಯೊಬ್ಬ ರೈತರು ಸಾವಿರಾರು ಆಕಳುಗಳನ್ನು ಹೊಂದಿದ್ದಾರೆ. ನಮ್ಮಲ್ಲಿ ಹುಡುಕಾಡಿದರೂ ರೈತರ ಮನೆಯಲ್ಲಿ ಎಮ್ಮೆ ಸಿಗಲ್ಲ.
ಆ ದೇಶಕ್ಕೆ ಭಾರತ ದೇಶ ಮುಕ್ತ ಮಾರುಕಟ್ಟೆಯಾಗಿದೆ. ಇದನ್ನು ತಡೆಗಟ್ಟದಿದ್ದರೆ ದೇಶದಲ್ಲಿ ಹೈನುಗಾರಿಕೆ ನಶಿಸಿ ಮುಂಬರವ ದಿನಗಳಲ್ಲಿ ಪ್ರತಿ ಲೀಟರಗೆ 100 ರೂ ಕೊಡುವ ಕಾಲ ಬರಲಿದೆ ಎಂದರು.
ಕೇಂದ್ರ ಸಕರ್ಾರ ಆಸಿಯನ್ 15 ದೇಶಗಳೊಂದಿಗೆ ಸೇರಿ ಪ್ರಾದೇಶಿಕ ಸಮಗ್ರ ಆಥರ್ಿಕ ಸಹಭಾಗಿತ್ವ(ಆರ್.ಸಿ.ಇ.ಪಿ) ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾದರೆ ನಮ್ಮ ಆಹಾರ, ಕೃಷಿ ಕ್ಷೇತ್ರ ತುಂಬಾ ನಷ್ಟಕ್ಕೆ ಗುರಿಯಾಗುತ್ತದೆ.
ಇದರಿಂದ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಇಂತಹ ಸಮಯದಲ್ಲಿ ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಕಾದು ಕುಳಿತಿವೆ.
ಇದರಿಂದ ಕೋಟ್ಯಾಂತರ ಸಣ್ಣ ರೈತರ, ವಿಶೇಷವಾಗಿ ಮಹಿಳೆಯರ ಜೀವನೋಪಾಯವನ್ನು ಬೆಂಬಲಿಸುವ ಹೈನುಗಾರಿಕೆ ಕ್ಷೇತ್ರಕ್ಕೆ ತೀವೃ ಅಪಾಯ ಒಡ್ಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ವಿದೇಶಿ ಹಾಲು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.ಇದನ್ನು ಕೇಂದ್ರ ಸಕರ್ಾರ ಕೂಡಲೇ ಆರ್.ಸಿ.ಇ.ಪಿ.ಯೋಜನೆ ಒಪ್ಪಂದವನ್ನು ಕೈಬಿಡಬೇಕು ಎಂದರು.
ಬೆಂಬಲ ಬೆಲೆ- ಹೆಸರು, ತೊಗರಿ, ಕಡಲೆ, ಗೋವಿನಜೋಳ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದ್ದು ನಿದರ್ಿಷ್ಟ ಪ್ರಮಾಣದ ಹಣಕಾಸಿನ ವ್ಯವಸ್ಥೆ ಮಾಡದೇ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚು ಧಾರಣಿ ಬರುವರೆಗೂ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು. ಸರಕಾರಗಳು ಪೊಳ್ಳು ಭರವಸೆ ನೀಡಬಾರದು ಎಂದರು.
ಗೋಷ್ಠಿಯಲ್ಲಿ ಸಿ.ಕೆ.ಮೆಕ್ಕೆದ, ಬಸನಗೌಡ ಪಾಟೀಲ, ಶ್ರೀಕಾಂತ ಶಿರಹಟ್ಟಿ, ಮಲ್ಲಿಕಾಜರ್ುನ ಹುಂಬಿ ಇದ್ದರು.