ಯುವ ಪ್ರತಿಭೆ ರೀಶ್ ಹಿರೇಮಠ ಮೊದಲಬಾರಿ ನಿರ್ದೇಶನದ ಜೊತೆಗೆ ನಾಯಕನಾಗಿ ಅಭಿನಯ ಮಾಡಿರುವ ‘ಬರ್ಗೆಟ್ ಬಸ್ಯಾ’ ಸಿನಿಮಾ ಇತ್ತೀಚೆಗೆ ಸೆನ್ಸಾರ್ ಪಾಸ್ ಆಗಿದೆ. ಯು/ಎ ಪ್ರಮಾಣಪತ್ರ ಪಡೆದಿರುವ ಈ ಚಿತ್ರವನ್ನು ಮೂಲತಃ ಬಳ್ಳಾರಿಯವರಾದ ನಾಗಾರ್ಜುನ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಬಸ್ಯಾ ಒಂದು ಕಚೇರಿಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಾ ಇರ್ತಾನೆ. ಇವನು ಕಂಡ ಕಂಡ ಹುಡುಗಿಯರನ್ನೆಲ್ಲ ಪ್ರೀತಿಸಬೇಕೆಂದು ಹಠ ಹಿಡಿಯುತ್ತಾನೆ. ಹುಡುಗಿಯರಿಗೆ ಪ್ರಿಯಕರನಿದ್ದರೂ ಸಹ ತನ್ನನ್ನು ಪ್ರೀತಿಸುವಂತೆ ಕೇಳುತ್ತಾನೇ. ಸರಿಸುಮಾರು 55 ಜನ ಹುಡುಗಿಯರು ಇವನ ಜೀವನದಲ್ಲಿ ಹಾದು ಹೋಗುತ್ತಾರೆ. ಇದರ ಹಿಂದೆ ಏನನ್ನೂ ಹೇಳೋಕೆ ಹೊರಟಿದ್ದಾನೆ ಎಂಬುದಕ್ಕೆ ನೀವು ಈ ಸಿನಿಮಾವನ್ನು ನೋಡಲೇ ಬೇಕು.
ಜನವರಿ 9ರಂದು ಚಿತ್ರದ ಟೀಸರ್ ಬಿಡುಗಡೆ ಆಗಲಿದ್ದು, ಸಿನಿಮಾವನ್ನು ಫೆಬ್ರವರಿ ಅಲ್ಲಿ ರೀಲೀಸ್ ಮಾಡಲು ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಂದಂಗೆ ಚಿತ್ರದ ನಾಯಕನಾಗಿ ರೀಶ್ ನಟಿಸಿದ್ದು, ನಾಯಕಿಯಾಗಿ ಸಂಗೀತ ಎನ್ ಸ್ವಾಮಿ ಅಭಿನಯವಿದೆ. ಚಿತ್ರಕ್ಕೆ ಸಿದ್ದಾರ್ಥ ಕಾಮತ್ ಸಂಗೀತ, ಸಿದ್ದು ದಳವಾಯಿ ಸಂಕಲನ, ಶಾಮ್ ಸಾಲ್ವಿನ್ ಛಾಯಾಗ್ರಹಣವಿದೆ.