‘ಮಂತ್ರಾಲಯ, ಶಿರಡಿಸೇರಿ 8 ಧರ್ಮಕ್ಷೇತ್ರಗಳಿಗೆ ‘ಶಿವಸಾಯಿ ಯಾತ್ರೆ’ ಅ.2ರಿಂದ ‘ಭಾರತ್ಗೌರವ್’ ರೈಲು ಆರಂಭ
'Bharat Gaurav' train starts from 2nd day of 'Shiv Sai Yatra' to 8 religious places like Mantralaya,
ಬಳ್ಳಾರಿ 03 : ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ‘ಭಾರತ್ ಗೌರವ್’ರೈಲು ಸಂಚಾರವನ್ನು ಮೊತ್ತಮೊದಲಿಗೆ ಆರಂಭಿಸಿದ ‘ಸೌತ್ ಸ್ಟಾರ್ ರೈಲು’ ಕಂಪನಿಯು ನವ ಬೃಂದಾವನ ಹಾಗೂಶ್ರೀಶೈಲ ಸೇರಿದಂತೆ 8 ಧರ್ಮಕ್ಷೇತ್ರಗಳಿಗೆ ‘ಶಿವ ಸಾಯಿ ಯಾತ್ರೆ’ ಎಂಬ ಹೊಸ ಪ್ರವಾಸ ಕಾರ್ಯಕ್ರಮ ರೂಪಿಸಿದ್ದು, ಅಕ್ಟೋಬರ್ 2ರಿಂದ ಈ ರೈಲು ಸಂಚಾರ ಆರಂಭಿಸಿದೆ.
ಪ್ರವಾಸಿಗರು ರೈಲಿನಲ್ಲಿತೆರಳಿನವ ಬೃಂದಾವನ, ಮಂತ್ರಾಲಯ, ಪಂಡರಿಪುರ, ಶಿರಡಿ, ತ್ರಯಂಬಕೇಶ್ವರ, ಭೀಮಾಶಂಕರ, ಗುಷ್ನೇಶ್ವರಹಾಗೂ ಶ್ರೀಶೈಲಂ ಧರ್ಮಕ್ಷೇತ್ರಗಳ ದರ್ಶನ ಮಾಡಬಹುದು.ಒಟ್ಟು 11 ದಿನಗಳ ಈ ಪ್ರವಾಸವು ಎಲ್ಲೋರಾಗುಹೆಗಳ ಭೇಟಿಯನ್ನೂ ಒಳಗೊಂಡಿದೆ.
ರೈಲು ಬಂಗಾರಪೇಟೆಯಿಂದಹೊರಡಲಿದ್ದು, ಪ್ರವಾಸಿಗರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬೆಂಗಳೂರಿನ ವೈಟ್ ಫೀಲ್ಡ್, ಯಲಹಂಕ, ಧರ್ಮಾವರಂ, ಅನಂತಪುರ, ಬಳ್ಳಾರಿ, ಹೊಸಪೇಟೆಯಲ್ಲೂ ರೈಲು ಹತ್ತಬಹುದು.ಆನ್ ಬೋರ್ಡ್ ಘೋಷಣಾ ವ್ಯವಸ್ಥೆ, ನಿಯೋಜಿತ ಕೋಚ್ ಭದ್ರತಾಸಿಬ್ಬಂದಿ, ಟೂರ್ ಮ್ಯಾನೇಜರ್ ಗಳು, ಪ್ರಯಾಣ ವಿಮೆ, ಹೋಟೆಲ್ ವ್ಯವಸ್ಥೆ, ಸೈಟ್ ಸೀಯಿಂಗ್, ಅನಿಯಮಿತದಕ್ಷಿಣ ಭಾರತದ ಊಟ ಇತ್ಯಾದಿ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಪ್ರವಾಸಕ್ಕೆ ಎಲ್ ಟಿ ಸಿ/ಎಲ್‌ಎಫ್ ಸಿ ಅನ್ವಯವಾಗಲಿದ್ದು, ಭಾರತೀಯ ರೈಲ್ವೆಯ ಶೇಕಡಾ 33ರಷ್ಟು ಸಹಾಯಧನ ಲಭ್ಯವಾಗಲಿದೆ ಎಂದು ವಿಘ್ನೇಶ್‌ಅವರು ವಿವರಿಸಿದ್ದಾರೆ.
ದರಗಳು ಇಂತಿವೆ:ಸ್ಲೀಪರ್ (ರೂ 27,700), 3ಎಸಿ (ರೂ 37,000), 2ಎಸಿ ಡೀಲಕ್ಸ್ (ರೂ 43,000), ಎಸಿ ಲಕ್ಷುರಿ (ರೂ 47,900). ಆಸಕ್ತರು93550 21516ಸಂಪರ್ಕಿಸಿ ಅಥವಾ ಆನ್ ಲೈನ್ ನಲ್ಲಿತಿತಿತಿ.ಣಠಡಿಣಟ.ಟಿಮೂಲಕ ಬುಕಿಂಗ್ ಮಾಡಬಹುದಾಗಿದೆ.
ದೇಶದ ಮುಂಚೂಣಿ ಪ್ರವಾಸಿರೈಲು ನಿರ್ವಾಹಕ ಸಂಸ್ಥೆಯಾದ ಟೂರ್ ಟೈಮ್ಸ್ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ‘ಸೌತ್ಸ್ಟಾರ್’ ನ ಪ್ರಾಡಕ್ಟ್ ಡೈರೆಕ್ಟರ್ ವಿಘ್ನೇಶ್ ಜಿ. ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 