ಮುಂಬೈ, ಆಗಸ್ಟ್ 24 ಇತ್ತೀಚೆಗೆ ಬಾಲಿವುಡ್ ಚಿತ್ರಗಳು ವಿದೇಶಗಳಲ್ಲಿಯೂ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ನಟ ಆಯುಷ್ಮಾನ್ ಖುರಾನಾ ಅಭಿನಯದ 'ಅಂದಾಧುನ್' ಚಿತ್ರ ಕೂಡ ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಗೊಳ್ಳಲು ಸಿದ್ಧಗೊಂಡಿದೆ. ಶ್ರೀರಾಮ್ ರಾಘವನ್ ನಿದರ್ೆಶನದ ಸಸ್ಪೆನ್ಸ್-ಥ್ರಿಲರ್ 'ಅಂದಾಧುನ್' ಚಿತ್ರ, ಕಳೆದ ವರ್ಷ ಬಿಡುಗಡೆಗೊಂಡಿತ್ತು. ಈ ಚಿತ್ರಕ್ಕೆ ಪ್ರೇಕ್ಷಕ ವರ್ಗ ಭಾರಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಈ ಚಿತ್ರದಲ್ಲಿ ಆಯುಷ್ಮಾನ್ ಅಲ್ಲದೇ, ನಟಿಯರಾದ ಟಬು ಹಾಗೂ ರಾಧಿಕಾ ಆಪ್ಟೆ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರದ ಅತ್ಯುತ್ತಮ ನಟನೆಗಾಗಿ ಆಯುಷ್ಮಾನ್ ಖುರಾನಾ ರಾಷ್ಟ್ರ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದಾರೆ 'ಅಂದಾಧುನ್' ಪಿಯಾನೊ ನುಡಿಸುವ ಓರ್ವ ಅಂಧ ವ್ಯಕ್ತಿಯ ಕಥಾ ಹಂದರವುಳ್ಳ ಚಿತ್ರ. ದಕ್ಷಿಣ ಕೊರಿಯಾದಲ್ಲಿ 90 ಪರದೆಗಳಲ್ಲಿ ಆಗಸ್ಟ್ 28 ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ.