'ಐಹೊಳೆ ಗಾಯನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ'

ಲೋಕದರ್ಶನ ವರದಿ

ರಾಯಬಾಗ 26: ಪಟ್ಟಣದಲ್ಲಿ ಪ್ರತಿವರ್ಷ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯವರು 'ಐಹೊಳೆ ಗಾಯನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ' ಹಮ್ಮಿಕೊಂಡು ಉತ್ತರಕನರ್ಾಟಕದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು ಯುವಗಾಯಕರಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬುಧವಾರ ಹುಕ್ಕೇರಿ ಹಿರೇಮಠದಲ್ಲಿ 'ಐಹೊಳೆ ಗಾಯನಪ್ರತಿಭಾ ಪುರಸ್ಕಾರ ಸೀಜನ್-4'ಕಾರ್ಯಕ್ರಮದ ಪ್ರಚಾರ ಸಾಮಗ್ರಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಐಹೊಳೆ ಗಾಯನ ಸ್ಪಧರ್ೆಯಲ್ಲಿ ಭಾಗವಹಿಸಿದ ಯುವಗಾಯಕರು, ಖಾಸಗಿ ಟಿ.ವ್ಹಿ. ವಾಹಿನಿಗಳು ನಡೆಸುವ ಸರಿಗಮಪ ಗಾಯನ ಸ್ಪಧರ್ೆಗಳಲ್ಲಿ ಆಯ್ಕೆಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಉತ್ತರಕನರ್ಾಟಕದ ಯುವ ಪ್ರತಿಭೆಗಳು ಈ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಅರುಣ ಐಹೊಳೆ ಮಾತನಾಡಿ, ಜ.19 ರಂದು ಸಂಜೆ 6 ಗಂಟೆಗೆ ಪಟ್ಟಣದ ಮಹಾವೀರ ಭವನದಲ್ಲಿ ನಡೆಯುವ ಅಂತಿಮ ಸ್ಪಧರ್ೆಯಲ್ಲಿ ಅತಿಥಿಗಳಾಗಿ ಕನ್ನಡ ಚಿತ್ರರಂಗದ ನಟ ವಿಜಯರಾಘವೇಂದ್ರ ಆಗಮಿಸಲಿದ್ದಾರೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದಾರೆ. 

ಅಂದು ಸುಕ್ಷೇತ್ರ ಹುಕ್ಕೇರಿ ಹಿರೇಮಠದ 'ಶ್ರೀ ಸದ್ಗುರುವಿನ ಸನ್ನಿಧಿ ಭಕ್ತಿ ಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜ.9 ಮತ್ತು 10 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸಾಯಿನಗರದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸ್ಪಧರ್ಿಗಳ ಅಡಿಶನ್ ನಡೆಯಲಿದೆ.14 ವರ್ಷದೊಗಿನ ಬಾಲಕ, ಬಾಲಕಿಯರಿಗೆ ಚಲನಚಿತ್ರ ಗೀತೆಗಳ ಸ್ಪಧರ್ೆ ಮತ್ತು 15 ರಿಂದ 30 ವರ್ಷದೊಳಿಗನ ಯುವಕ, ಯುವತಿಯರಿಗೆ ಜಾನಪದ ಮತ್ತು ಚಲನಚಿತ್ರ ಗೀತೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ. 

ಆಸಕ್ತರು ಜ.7 ರ ಒಳಗಾಗಿ ತಮ್ಮ ಹೆಸರುಗಳನ್ನು ಮೊ.ನಂ.9741650105, 7676376381, 9449581730 ಗಳಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು. 

ಗಾಯಕರಾದ ಶಬ್ಬೀರಡಾಂಗೆ, ಎಮ್.ಡಿ.ಆನಂದ ಹಾಗೂ ಆಡಳಿತಾಧಿಕಾರಿ ಎಸ್.ಎಸ್.ಕಾಂಬಳೆ, ದಯಾನಂದ ಬಂಬಲವಾಡ, ಬಿ.ಬಿ.ಪೂಜಾರಿ ಉಪಸ್ಥಿತರಿದ್ದರು