'ಸಂವಿಧಾನ ಬದ್ಧವಾಗಿ ನೀಡಿದ ಅಧಿಕಾರ ದುರ್ಬಳಕೆ'

ಬ್ಯಾಡಗಿ: ಗ್ರಾಮಸಭೆಗೆ ಮಾಹಿತಿ ನೀಡದೇ ತೋಟಗಾರಿಕೆ ಇಲಾಖೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಇದರಿಂದ ಗ್ರಾಮ ಪಂಚಾಯತ್ಗೆ ಸಂವಿಧಾನ ಬದ್ಧವಾಗಿ ನೀಡಿರುವ ಅಧಿಕಾರವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕೂಡಲೇ ಇಂತಹ ವ್ಯವಸ್ಥೆಗೆ ಕಡಿವಾಣ ಹಾಕುವಂತೆ ಹೆಡಿಗ್ಗೊಂಡ ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದ ಪ್ರಪ್ರಥಮ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

  ತೋಟಗಾರಿಕೆ ಇಲಾಖೆ ಚಚರ್ೆಯ ಸಂದರ್ಭದಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆಯಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದೆ, ಹನಿ (ಡ್ರಿಪ್ ಇರಿಗೇಷನ್) ನೀರಾವರಿ ಪರಿಕರಗಳನ್ನು ವಿತರಿಸುವ ಗುತ್ತಿಗೆದಾರರ ಕಪಿಮುಷ್ಟಿಯಲ್ಲಿ ಅಧಿಕಾರಿಗಳಿದ್ದಾರೆ, ಹೀಗಾಗಿ ಅವರ ತಾಳಕ್ಕೆ ಕುಣಿಯುತ್ತಿದ್ದಾರೆ ಹೀಗಾಗಿ ಇಲಾಖೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ನಿಜವಾದ ಫಲಾನುಭವಿಗಳು ಅನ್ಯಾಯವೆಸಗಲಾಗುತ್ತಿದ್ದು ಇಂತಹುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಇಲಾಖೆಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

  ನೀರಾವರಿ ಇಲ್ಲದವರಿಗೂ ಯೋಜನೆಯ ಭಾಗ್ಯ: ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರದ ಜಮೀನುಗಳಿಗೂ (ನೀರಾವರಿ ಸೌಲಭ್ಯವಿಲ್ಲದ) ಸಹ ಹನಿ ನೀರಾವರಿ ಸೌಲಭ್ಯವನ್ನು ಇಲಾಖೆಯಿಂದ ಈಗಾಗಲೇ ಅನುಷ್ಠಾನಗೊಳಿಸುವ ಮೂಲಕ ಹಣ ಮಾಡುವ ಧಂಧೆಗಿಳಿದಿದ್ದಾರೆ.ಅದರಲ್ಲೂ ರೈತರ ಗಮನಕ್ಕೆ ಭಾರದಿದ್ದರೂ ಇಲಾಖೆಯಡಿ ಅವರು ಫಲಾನುಭವಿಗಳಾಗಿದ್ದಾರೆ, ಪ್ರಶ್ನಿಸಿದವರ ಬಾಯಿ ಮುಚ್ಚಿಸುವ ಕಾರ್ಯದಲ್ಲಿ ತೊಡಗಿರುವ ಹಿರಿಯ ಸಹಾಯಕ ನಿದರ್ೇಶಕರು ಆತ್ಮವಂಚನೆ ಮಾಡಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ..? ಇತ್ತೀಚೆಗೆ ತೋಟಗಾರಿಕೆ ಜಿಲ್ಲಾ ಉಪನಿದರ್ೇಶಕರು ಅಮಾನತುಗೊಂಡಿದ್ದು ಇದಕ್ಕೊಂದು ತಾಜಾ ಉದಾಹರಣೆ ಎಂದು ಆರೋಪಿಸಿದರು.

    ಚಾಲಕರ ವಿರುದ್ಧ ಕ್ರಮಕೈಗೊಳ್ಳಿ: ಹೆಡಿಗ್ಗೊಂಡ ಗ್ರಾಮಕ್ಕೆ ಸಂಚರಿಸುತ್ತಿರುವ ಸಾರಿಗೆ ಬಸ್ ಸರಿಯಾದ ವೇಳೆಗೆ ಸಂಚರಿಸುತ್ತಿಲ್ಲ, ಇದರಿಂದ ಸರಿಯಾದ ವೇಳೆಗೆ ಶಾಲೆಗೆ ಮಕ್ಕಳು ತಲುಪದಂತಾಗಿದ್ದು, ಅವರ ಶೈಕ್ಷಣಿಕ ಪ್ರಗತಿಗೆ ಸಾರಿಗೆ ಬಸ್ಗಳು ತೊಡಕಾಗುತ್ತಿವೆ. ಅಷ್ಟಕ್ಕೂ ಅಂಗವಿಕಲ ವಿದ್ಯಾಥರ್ಿನಿಯೊಬ್ಬಳು ಹತ್ತುವಾಗ ಉದ್ದೇಶಪೂರ್ವಕವಾಗಿ ಬಸ್ ಮುಂದಕ್ಕೆ ಬಿಡುವ ಮೂಲಕ ಉದ್ಧಟತನ ತೋರುತ್ತಿದ್ದಾರೆ ಕೂಡಲೇ ಘಟಕ ವ್ಯವಸ್ಥಾಪಕರು ಸಂಬಂಧಿಸಿದ ರೂಟ್ ಚಾಲಕನ ವಿರುದ್ಧ ಕ್ರಮಕ್ಕೆ ಮೂಕಪ್ಪ ಅಂಗರಗಟ್ಟಿ ಅಗ್ರಹಿಸಿದರು.

  ಕಾಮಗಾರಿ ಪೂರ್ಣಗೊಳಿಸಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮೇಲಿನ ಚಚರ್ೆಯ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಸಹದೇವಪ್ಪ, ಹೆಡಿಗ್ಗೊಂಡ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಸಂಸದರ ಅನುದಾನದಲ್ಲಿ ನಿಮರ್ಿಸಲಾಗುತ್ತಿರುವ ಕಾಂಕ್ರೀಟ್ ರಸ್ತೆ ಅಪೂರ್ಣ ಗೊಂಡಿದ್ದು, ಇದರಿಂದ ವಯೋವೃದ್ಧರು ಮಹಿಳೆಯರು ಮಕ್ಕಳು ಬಾಣಂತಿಯರು ಓಡಾಡದಂತಹ ಸ್ಥಿತಿ ನಿಮರ್ಾಣವಾಗಿದೆ ಅದರಲ್ಲೂ ಮಳೆಗಾಲದಲ್ಲಂತೂ ಜನರ ಗೋಳಂತೂ ಹೇಳತೀರದಾಗಿದೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ದಲಿತ ಕಾಲೋನಿಗಳನ್ನು ಸ್ವಚ್ಚಗೊಳಿಸುವಂತೆ ಆಗ್ರಹಿಸಿದರು.

 ವೇದಿಕೆಯಲ್ಲಿ ಟಿಇಓ ಪರುಶರಾಮ ಪೂಜಾರ, ಗ್ರಾಪಂ ಉಪಾಧ್ಯಕ್ಷೆ ಅನಿಲವ್ವ ದೊಡ್ಡಕುರುಬರ, ಸದಸ್ಯರಾದ ಹನುಮಂತಪ್ಪ ಚೂರಿ, ಬಸಪ್ಪ ಕಾಶಿ, ಶಂಭುಲಿಂಗಪ್ಪ ದ್ಯಾವಣ್ಣನವರ, ಪಿಡಿಓ ರಮೇಶ ಹುಲಸೋಗಿ, ಕಾರ್ಯದಶರ್ಿ ಜಗದೀಶ ಮಣ್ಣಮ್ಮನವರ, ಲೆಕ್ಕ ಪರಿಶೋಧಕ ಆರ್.ಬಿ.ಶೆಟ್ಟರ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.