ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್
ನವದೆಹಲಿ, ಡಿ20: ಚಿನ್ನ ಮತ್ತು ವಜ್ರಾಭರಣ ವಲಯದಲ್ಲಿನ ನಡೆದಿರುವ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ವಲಯದಲ್ಲಿನ ವಹಿವಾಟು ಸದ್ಯದ 40 ಶತಕೋಟಿ ಡಾಲನರ್ಿಂದ 75 ಶತಕೋಟಿ ಡಾಲರ್ ಗುರಿ ಸಾಧಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಬುಧವಾರ 46ನೇ ಭಾರತೀಯ ವಜ್ರ ಮತ್ತು ಚಿನ್ನಾಭರಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯಾಪಾರದಲ್ಲಿ ಭಾರತೀಯ ಚಿನ್ನ ಮತ್ತು ವಜ್ರಾಭರಣ ವಲಯ ಪ್ರಗತಿಗೆ ಮತ್ತು ಉದ್ಯೋಗ ಸೃಷ್ಟಿಗೆ ಅಪಾರ ಅವಕಾಶಗಳಿವೆ ಎಂದು ಹೇಳಿದ್ದಾರೆ.
75 ಶತಕೋಟಿ ಡಾಲರ್ ಗುರಿಮುಟ್ಟಲು ಈ ವಲಯಕ್ಕೆ ಕೈಗಾರಿಕಾ ಮತ್ತು ವಾಣಿಜ್ಯ ಸಚಿವಾಲಯ ಎಲ್ಲ ನೆರವು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಚಿನ್ನಾಭರಣಕ್ಕೆ ಭಾರತೀಯ ವಜ್ರ ಮತ್ತು ಚಿನ್ನಾಭರಣ ವಲಯ ಜಾಗತಿಕ ಕೇಂದ್ರವಾಗಿದ್ದು, ಇದು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ7ರಷ್ಟು ಕೊಡುಗೆ ನೀಡುತ್ತದೆಯಲ್ಲದೆ, ಭಾರತದ ಒಟ್ಟು ಸರಕು ರಫ್ತಿನಲ್ಲಿ ಶೇ 15ರಷ್ಟು ಪಾಲು ಹೊಂದಿದೆ.
ಚಿನ್ನ, ವಜ್ರಾಭರಣ ರಫ್ತುದಾರರಿಗೆ ಸಾಲ ಲಭ್ಯತೆ ಹೆಚ್ಚಿಸಲು ಮತ್ತು ಸಾಲ ಪಡೆಯುವ ಪ್ರಕ್ರಿಯೆ ಸುಲಭವಾಗಿಲು ಸರ್ಕಾರ ಶೀಘ್ರವೇ ನಿರ್ವಾಕ್ ಯೋಜನೆಯನ್ನು ಆರಂಭಿಸಲಿದ್ದು, ಉದ್ಯಮಿಗಳು ಇದರ ಗರಿಷ್ಠ ಲಾಭ ಪಡೆಯಬೇಕು ಎಂದು ಪಿಯೂಷ್ ಗೋಯಲ್ ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 