ಕೋಲ್ಕತ, ನ 19 : ಭಾರತದಲ್ಲಿನ ನೈರ್ಮಲ್ಯ ಆರ್ಥಿಕತೆ ಸದ್ಯ, 14 ಶತಕೋಟಿ ಡಾಲರ್ ಮಾರುಕಟ್ಟೆಯಾಗಿದ್ದು, ಇದು 2021 ರ ವೇಳೆಗೆ 62 ಶತಕೋಟಿ ಡಾಲರ್ಗೆ ತಲುಪುವ ನಿರೀಕ್ಷೆ ಇದೆ. ಶೌಚಾಲಯ ನಿಮರ್ಾಣ ಹೆಚ್ಚಳ, ಸ್ವಚ್ಛಗೊಳಿಸುವಿಕೆ ಸೇರಿದಂತೆ ಕಾರ್ಯಾಚರಣೆ ಮತ್ತು ನಿರ್ವಹಣೆಯಿಂದ ದೇಶದಲ್ಲಿ ನೈರ್ಮಲ್ಯ ಸಾರ್ವತ್ರಿಕವಾಗುತ್ತಿದೆ. ಸಂಸ್ಕರಿಸಿದ ನೀರು, ನವೀಕರಿಸಬಹುದಾದ ಇಂಧನ, ಜೈವಿಕ ಆಹಾರ ಮತ್ತು ಪೋಷಕಾಂಶಗಳಿಗೆ ಹೊಸ ಮಾರುಕಟ್ಟೆಗಳು ಹೊರಹೊಮ್ಮಲು ಭಾರತದಲ್ಲಿ ಹೆಚ್ಚಿನ ಅವಕಾಶಗಳಿವೆ. ಕಡಿಮೆ ವೆಚ್ಚದಲ್ಲಿ ನೈರ್ಮಲ್ಯದ ಪ್ರಯೋಜನಗಳು ದೊರೆಯುವಂತಾಗಲು ಹೊಸ ವಿಧಾನಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಮತ್ತು ಆಡಳಿತಗಳು ಅಳವಡಿಸಿಕೊಳ್ಳಬೇಕಾಗಿದೆ. ಈ ವಲಯದಲ್ಲಿ ಖಾಸಗಿ ಸಂಸ್ಥೆಗಳು ಹೆಚ್ಚು ಹೂಡಿಕೆ ಮಾಡಲು ಉತ್ತೇಜಿಸಬೇಕಾಗಿದೆ. ವಿಶ್ವ ಶೌಚಾಲಯ ದಿನಾಚರಣೆಯಂದು ಜಿನೀವಾ ಮೂಲದ ಟಾಯ್ಲೆಟ್ ಬೋರ್ಡ್ ಒಕ್ಕೂಟ (ಟಿಬಿಸಿ) ನ 18 ರಿಂದ 21 ರವರೆಗೆ ಪುಣೆಯಲ್ಲಿ ಜಾಗತಿಕ ನೈರ್ಮಲ್ಯ ಆಥರ್ಿಕ ಶೃಂಗಸಭೆಯನ್ನು ಆಯೋಜಿಸಿದೆ. ಜಾಗತಿಕ ನೈರ್ಮಲ್ಯ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ವಾಣಿಜ್ಯೋದ್ಯಮಿಗಳು, ಹೂಡಿಕೆದಾರರು ಮತ್ತು ನೈರ್ಮಲ್ಯ ತಜ್ಞರಿಗೆ ಈ ಶೃಂಗಸಭೆ,ವಿವಿಧ ಕೈಗಾರಿಕೆಗಳು, ನಾಗರಿಕರು ಮತ್ತು ಅಭಿವೃದ್ಧಿ ಕಾರ್ಯಸೂಚಿಗಳಿಗೆ 'ನೈರ್ಮಲ್ಯ ಆರ್ಥಿಕತೆ' ಪರಿಹಾರಗಳನ್ನು ಒದಗಿಸಲು ಉತ್ತಮ ವೇದಿಕೆಯಾಗಿದೆ. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಕಾರ್ಯದರ್ಶಿ ಪಿ. ಅಯ್ಯರ್, ಟಾಯ್ಲೆಟ್ ಬೋರ್ಡ್ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಚೆರಿಲ್ ಹಿಕ್ಸ್ ಮಾತನಾಡಿದರು.