ರೈತರಿಗೆ 19 ಬಿಲಿಯನ್ ಡಾಲರ್ ನೆರವು; ಟ್ರಂಪ್

ವಾಷಿಂಗ್ಟನ್, ಏ 18, 80  ಮಿಲಿಯನ್  ಅಮೆರಿಕಾ ನಾಗರೀಕರು ಕೊರೊನಾ ವೈರಸ್  ಪರಿಹಾರ  ಹಣವನ್ನು ಪಡೆದುಕೊಂಡಿದ್ದು, ತಮ್ಮ  ಆಡಳಿತ  ದೇಶದ ರೈತರಿಗೆ  19 ಬಿಲಿಯನ್ ಡಾಲರ್ ನೆರವನ್ನು  ಪ್ರಕಟಿಸಲಿದೆ ಎಂದು  ಅಧ್ಯಕ್ಷ  ಡೊನಾಲ್ಡ್  ಟ್ರಂಪ್   ಪ್ರಕಟಿಸಿದ್ದಾರೆ.80 ದಶಲಕ್ಷಕ್ಕೂ ಹೆಚ್ಚಿನ ಅಮೆರಿಕಾ ನಾಗರಿಕರಿಗೆ  ಖಜಾನೆ  ಇಲಾಖೆ  ಹಣಕಾಸು ಪರಿಹಾರ ಪಾವತಿಗಳನ್ನು ರವಾನಿಸಿದೆ ಎಂದು  ಟ್ರಂಪ್  ಶುಕ್ರವಾರ  ಮಾಹಿತಿ ನೀಡಿದ್ದಾರೆ. ರೈತರಿಗೆ  ಸಂಬಂಧಿಸಿದ  ನೆರವು ಪ್ಯಾಕೇಜ್ ನಲ್ಲಿ    16 ಬಿಲಿಯನ್ ಡಾಲರ್   ಹಣವನ್ನು  ನೇರವಾಗಿ     ರೈತರಿಗೆ ಪಾವತಿಸಲು ಬಳಸಲಾಗುವುದು. ಉಳಿದ  3 ಬಿಲಿಯನ್ ಡಾಲರ್  ಜನರಿಗೆ ವಿತರಿಸಲು     ರೈತರಿಂದ  ಆಹಾರ ಧಾನ್ಯ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.