ನಿಮ್ಮ ಜೀವನದ ಸಮಸ್ಯೆ, ದೇಶ ಕಟ್ಟುವ ಕೆಲಸಕ್ಕೆ ಅಡ್ಡಿಯಾಗದಿರಲಿ
ಕಳೆದ ತಿಂಗಳು ನನ್ನ ಆಫೀಸಿನ ಕ್ಲರ್ಕ (ಗುಮಾಸ್ತ) 80 ಖಾಲಿ ಹಾಳೆಯನ್ನು ಮುದ್ರಿಸಿದ ನನಗೆ ಆಶ್ಚರ್ಯವಾಯಿತು. ನಾನು ಆತನಲ್ಲಿ ಸತಿ ಕುತೂಹಲದಿಂದ ಕೇಳಿದೆ... ಯಾಕಪ್ಪಾ!! ಖಾಲಿ ಹಾಳೆಯನ್ನು ಮುದ್ರಿಸುತ್ತಿರುವೆ? ಎಂದು ಆತ ನನಗೆ ಹೇಳಿದ, ನೋಡಿಸಾರ್... ನನಗೆ 80 ಖಾಲಿ ಹಾಳೆ ಬೇಕಾಗಿದೆ. ಎಣಿಸಲು ಬಹಳ ಸೊಂಬೇರಿತನ. ಹೀಗಾಗಿ ಪ್ರಿಂಟಿಂಗ್ ಮಷೀನ್ನಲ್ಲಿ 80 ಹಾಳೆಗಳು ಎಂದು ಸೆಟ್ ಮಾಡಿ ಖಾಲಿ ಪ್ರಿಂಟ್ ತೆಗೆದುಬಿಟ್ಟೆ ಎಂದ ಅಬ್ಬಬ್ಬಾ.. ಏನು ಆಲೋಚನೆ ಮಾರಾಯರೇ..
ಆತ್ಮೀಯರೆ.. ವಿಶ್ವದಲ್ಲಿ ಇರುವ ಎಲ್ಲ ಮನುಷ್ಯರಿಗೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇದೆ. ಪ್ರಾಯಶಃ ಸಮಸ್ಯೆ ಇಲ್ಲದ ಜೀವಿಯೇ ಇಲ್ಲ ಎಂದು ನನ್ನ ಭಾವನೆ. ಆದರೆ ಸಮಸ್ಯೆಯೇ ಪೆಡಂಭೂತದಂತೆ ಬೆಳೆದು ನಿಂತರೆ ದೇಶ ಕಟ್ಟುವ ಕೆಲಸಕ್ಕೆ ಯಾರು ಮುಂದೆ ಬಂದಾರು? ಸಾವರಕರ್, ಗಾಂಧಿ, ಸುಭಾಷರಂತಹ ನೂರಾರು ಮಹಾಪುರುಷರು ತಮ್ಮ ವೈಯಕ್ತಿಕ ಸಮಸ್ಯೆಯನ್ನು ಬದಿಗೊತ್ತಿ ದೇಶದ ಸಮಸ್ಯೆಯನ್ನು ತಮ್ಮ ಸಮಸ್ಯೆ ಎಂದುಕೊಂಡು ತಮ್ಮ ಜೀವನವನ್ನೇ ಅರ್ಪಣೆ ಮಾಡಿದ್ದು ಎಂದೂ ಮರೆಯಲಾರದ ಸತ್ಯವಲ್ಲವೆ? ಅಂತಹ ತ್ಯಾಗಮಯಿ ಜೀವನದ ಒಂದು ಆಯ್ದ ಕಥೆ ನಿಮ್ಮ ಜೊತೆ ಹಂಚಿಕೊಳ್ಳಲು ನಾನು ಕಾತುರನಾಗಿರುವೆ.
ಸ್ನೇಹಿತರೇ, ನಾನು ಡಾ. ಎಪಿಜೆ ಅಬ್ದುಲ್ ಕಲಾಂರ ಜೀವನದಿಂದ ಬಹಳ ಪ್ರೇರೆಪಣೆ ಪಡೆದಿರುವೆ. ಅವರು ನಡೆದು ಬಂದ ಹಾದಿಯಂತೂ ಅತ್ಯಂತ ಕ್ಲಿಷ್ಟಕರವಾದದ್ದು. ಇವರ ಬಾಲ್ಯದ ಘಟನೆಗಳು ಓದುಗರ ಕಣ್ಣನ್ನು ಒದ್ದೆ ಮಾಡುವುದು ಸತ್ಯ. ಆದರೂ ಕೂಡ ತಮ್ಮೆಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಮೆಟ್ಟಿನಿಂತು ತಾಯಿ ಭಾರತಾಂಬೆಯ ಸೇವೆಯನ್ನು ಮಾಡಿ ಮಾದರಿ ವ್ಯಕ್ತಿ ಎನ್ನಿಸಿಕೊಂಡವರು ಈ ಮಹಾನುಭಾವ. ಇವರ 8ನೇ ವಯಸ್ಸಿನಲ್ಲಿ ನಡೆದ ಘಟನೆ ನನಗೆ ಬಹಳ ಪ್ರೇರಣಾದಾಯಕ. 1940ರ ಸುಮಾರಿಗೆ ಎರಡನೇ ವಿಶ್ವಯುದ್ಧ ಪ್ರಾರಂಭವಾಯಿತು. ಜರ್ಮನಿಯ ಮೇಲೆ ಬ್ರಿಟನ್ ಯುದ್ಧಸಾರಿತು. ಅಂದಿನ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿದ್ದರಿಂದ ಇಲ್ಲಿನ ಸರಕು-ಸಾಮಾನು, ಜಾನುವಾರು, ಯುದ್ಧ ಸಾಮಗ್ರಿಗಳು, ಆಹಾರ ಪದಾರ್ಥ ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಯೋಧರನ್ನು ಕಳಿಸಿಕೊಟ್ಟರು. ಅಂತೆಯೇ ಭಾರತದಲ್ಲಿ ಬರಗಾಲದ ಪರಿಸ್ಥಿತಿ ತಲೆದೂರಿತು. ಕಲಾಂರ ಕುಟುಂಬದಲ್ಲಿ ಹಲವಾರು ಜನರಿದ್ದರು. ದಿನ ಕಳೆದಂತೆ ಆಥರ್ಿಕ ಪರಿಸ್ಥಿತಿ ಹದಗೆಡುತ್ತಾ ಹೋಗುತ್ತಿತ್ತು. ಮೊದಲೆ ಇವರ ಕುಟುಂಬದಲ್ಲಿ ಬಡತನ, ಈಗಂತೂ ಕಿತ್ತು ತಿನ್ನುವ ಬಡತನದತ್ತ ಸಾಗಿತು. ದಿನ ಕಳೆದಂತೆ ಅನ್ನದ ತುತ್ತಿನ ಗಾತ್ರ ಕಡಿಮೆ ಆಗುತ್ತಾ ಬರುತ್ತಿದ್ದದ್ದನ್ನು ಈ 8ರ ಪೋರ ನೋಡಿದ. ಇನ್ನೂ ಪ್ರಪಂಚ ನೋಡದ ಬಾಲಕನಲ್ಲಿ, ನಾನು ಕೆಲಸಕ್ಕೆ ಹೋಗಿ ಕುಟುಂಬದ ಹೊಟ್ಟೆ ತುಂಬಿಸಬೇಕೋ ಅಥವಾ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕೋ ಎಂಬ ದ್ವಂದ್ವ ಈ ಚಿಕ್ಕ ಬಾಲಕನಲ್ಲಿ ಶುರುವಾಯಿತು.
ಕಲಾಂರ ಗೆಳೆಯ ಹಾಗೂ ಹತ್ತಿರದ ಬಂಧು ಶಂಸುದ್ದೀನ್. ಆತ ವಾತರ್ಾ ಪತ್ರಿಕೆಯ ಎಜೆನ್ಸಿಯ ಮಾಲೀಕನಾಗಿದ್ದ. ಹೀಗಾಗಿ ಆತನಲ್ಲಿ ತನ್ನ ಅಳಲನ್ನು ತೋಡಿಕೊಂಡ ಕಲಾಂ ಕೆಲಸವಿದ್ದರೆ ಕೊಡಲು ಕೇಳಿಕೊಂಡ. ಅದೇ ಸಮಯಕ್ಕೆ ವಿಶ್ವಯುದ್ಧ ನಡೆಯುತ್ತಿದ್ದರಿಂದ, ಕಲಾಂರ ಊರು ರಾಮೇಶ್ವರದಲ್ಲಿ ರೈಲಿನ ನಿಲುಗಡೆಯನ್ನು ತೆಗೆದು ಮುಂದಿನ ಊರು ಧನುಷ್ಕೊಟಿಯಲ್ಲಿ ರೈಲು ನಿಲುಗಡೆಗೆ ಬ್ರಿಟಿಷ್ ಸರಕಾರ ಆದೇಶಿಸಿತ್ತು. ವಾತರ್ಾಪತ್ರಿಕೆ ರೈಲಿನಿಂದ ಬರುತ್ತಿದ್ದರಿಂದ ಶಂಸುದ್ದೀನ್, ಹೇಗೆ ತಮ್ಮ ಊರಿಗೆ ವಾತರ್ಾಪತ್ರಿಕೆ ತರುವುದು ಎಂದು ಆಲೋಚಿಸುತ್ತಿದ್ದ.
ಈ ಸಮಯಕ್ಕೆ ಸರಿಯಾಗಿ ಶಂಸುದ್ದೀನ್ ಹಾಗೂ ಕಲಾಂರು ಒಂದು ಉಪಾಯ ಮಾಡಿದರು. ಶಂಸುದ್ದೀನ್ ರೈಲಿನಲ್ಲಿ ಬಂದು, ರಾಮೇಶ್ವರ ರೈಲ್ವೇ ನಿಲ್ದಾಣದಲ್ಲಿ ಪತ್ರಿಕೆಯ ಬಂಡಲ್ನ್ನು ಎಸೆಯುವುದು ಹಾಗೂ ಕಲಾಂರು ಅದನ್ನು ಸರಿಯಾಗಿ ಜೋಡಿಸಿಕೊಂಡು ಮನೆ ಮನೆಗೆ ತಲುಪಿಸುವುದು. ಇದೆಂತಾ ಕಷ್ಟರೀ.. ಕಲಾಂರು ಬೆಳಗ್ಗೆ 4 ಗಂಟೆಗೆ ಗಣಿತದ ಟ್ಯೂಶನ್, 5 ಗಂಟೆಗೆ ಕುರಾನ್ ಶರೀಫ್ ಕಲಿಯುವುದು, ಇದಾದನಂತರ ಶಾಲೆ. ಇದಿಷ್ಟರ ಮಧ್ಯದಲ್ಲಿ ಪೇಪರ್ ಹಂಚುವುದು ಪ್ರಾಯಶಃ ನಾವೆಲ್ಲಾ ಇಷ್ಟುಕೆಲಸ ಮಾಡುವುದಿರಲಿ, ಕೇಳಿಯೇ ಎಚ್ಚರ ತಪ್ಪುವುದು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಈ 8ರ ಬಾಲಕ ಇದಾವುದು ಕಷ್ಟವೇ ಅಲ್ಲ ಎಂದುಕೊಂಡು ಶಂಸುದ್ದೀನ್ಗೆ ಸಹಾಯಮಾಡಿ, ತನ್ನ ಕೆಲಸವನ್ನುಕೂಡ ಮಾಡ ತೊಡಗಿದ. ಕಲಾಂ ತಾಯಿ, ಈ ಪುಟ್ಟ ಬಾಲಕ ಪಡುತ್ತಿದ್ದ ಕಷ್ಟನೋಡಿ ಕಣ್ಣೀರು ಹಾಕುತ್ತಿದ್ದಳು. ಆದರೂ ಕಲಾಂರಿಗೆ ತಾನು ಮನೆಯ ಆಥರ್ಿಕ ಪರಿಸ್ಥಿತಿಯನ್ನು ಚೇತರಿಕೆ ಮಾಡಬೇಕೆಂಬ ಹುಮ್ಮಸ್ಸು. ವರ್ಷಗಟ್ಟಲೆ ಈ ಪುಟ್ಟಬಾಲಕ ಇವಿಷ್ಟೂ ಕೆಲಸ ಮಾಡಿಕೊಂಡು, ತನ್ನ ಓದಿನ ವೇಗ ಕಡಿಮೆ ಆಗದಂತೆ ನೋಡಿಕೊಂಡ.
ಆತ್ಮೀಯರೆ, ನಿಜಕ್ಕೂ ಕಲಾಂರ ಕೊಡುಗೆ ಅಪಾರ. ಇಷ್ಟು ಕಷ್ಟದಿಂದ ವಿದ್ಯಾಭ್ಯಾಸ ಮುಗಿಸಿ, ದೇಶ ಕಂಡ ಅತ್ಯುನ್ನತ ವಿಜ್ಞಾನಿಗಳಲ್ಲಿ ಒಬ್ಬರು ಎಂದು ಹೆಸರು ಪಡೆದು ಅಗ್ನಿ, ಪುಷ್ಟಿ ಅಂತಹ ಹಲವಾರು ರಾಕೆಟ್ ಉಡಾವಣೆ ಮಾಡಿ, ಭಾರತ ದೇಶದ ಸೇನೆಗೆ ಶಕ್ತಿ ತುಂಬಿದರು. ಪತ್ರಿಕೆಯನ್ನು ಮನೆ ಮನೆಗೆ ತಲುಪಿಸುತ್ತಿದ್ದ ಈ ಬಾಲಕ ತನ್ನೆಲ್ಲಾ ಆಥರ್ಿಕ, ಸಾಮಾಜಿಕ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿನಿಂತು ತಾಯಿ ಭಾರತಾಂಬೆಯ ಸೇವೆಯನ್ನು ಮಾಡಿದ್ದು ಮಾದರಿಯಲ್ಲವೆ? ಪೊಕ್ರಾನ್-2 ಅನುಪರೀಕ್ಷೆ ಮಾಡುವಲ್ಲಿ ಕಲಾಂ ನಾಯಕ ಪಾತ್ರವಹಿಸಿದ್ದು ನಮ್ಮ ಕಣ್ಣಿನಲ್ಲಿ ಇಂದಿಗೂ ಇಲ್ಲವೆ? ಹೀಗಾಗಿ ಇವರಿಂದ ನಾವೂ ಪ್ರೇರಣೆ ಪಡೆದು ನಮ್ಮ ಎಲ್ಲ ಕಷ್ಟಗಳನ್ನು ಬದಿಗೊತ್ತಿ, ಭಾರತವನ್ನು ಕಟ್ಟಲು ಹೆಗಲು ಕೊಡಬಹುದಲ್ಲವೇ?