ಜಗವಸುತಿಹುದು ನಿನ್ನಯ ಮಾಯೆ
ಹಾಯಾಗಿ ಬೇವು ಬೆಲ್ಲ ತಿಂದು ಹರ್ಷದಿಂದ ಹೊಸ ವರ್ಷವನ್ನು ಸ್ವಾಗತಿಸಬೇಕಾದ ಸಂತಸದ ಘಳಿಗೆ ಯುಗಾದಿಯನ್ನೇ ಸಪ್ಪೆಯಾಗಿಸಿಬಿಟ್ಟಿತು ಜಗವಸುತ್ತಿದ ಈ ಮಾಯೆ `ಕರೋನಾ' ದೇಶವನ್ನೇ `ಲಾಕಡೌನ್' ಮಾಡಿಬಿಟ್ಟಿತು.
`ಕರೋನಾ' ಶಬ್ದ ಕೇಳಿದರೆ ಜಗತ್ತೇ ನಡುಗುವಂತೆ ಮಾಡಿತು. ಮಾರ್ಚ ತಿಂಗಳಲ್ಲಿ ಲಾಕ್ಡೌನ್ ಘೋಷಿಸಿದಾಗ ಪರಿಸ್ಥಿತಿ ಇಸ್ಟೊಂದು ಗಂಭೀರವಾಗುವುದೆಂಬ ಊಹೆ ಇರಲಿಲ್ಲ. ಬರಬರುತ್ತ ಭಯ ಭಯಂಕರವಾಗುತ್ತ ಹೋಯಿತು. ಕಾರಣ ಪ್ರಪಂಚದಾದ್ಯಂತ ರೋಗ ಹರಡುತ್ತಿರುವ `ವೇಗ' ಮತ್ತು ಮರಣಗಳ ಸಂಖ್ಯೆ.
ಟಿ.ವ್ಹಿ. ಸ್ವಿಚ್ ಹಾಕಿದರೆ ಸಾಕು. ಕರೋನಾದ ರಣಕಹಳೆ ಪ್ರಸಾರ, ಫೋನನಲ್ಲಿ ಅದೇ ಕಥೆ. ಎಲ್ಲೆಲ್ಲೂ ಭಯ ಭಯ ಭಯ. ಹೊರಗೆಲ್ಲೂ ಹೋಗುವಂತಿಲ್ಲ ನಗು ಹರಟೆ ಕೇಕೆ ಮರೆತೇ ಹೋದೆವೆನೋ ಎನ್ನುವಷ್ಟು ಸ್ಥಬ್ಧರಾದೆವು. ಭಯದಿಂದ ಬಾಯ್ದೆರುದು ನಿಂತ ನಮ್ಮನ್ನು ಮಾತಿಗೆಳೆದು ನಿರಾಳಗೊಳಿಸಿದವರು ಪ್ರಧಾನಿ ಮೋದಿ ಜಿ.
ಎಲ್ಲರೂ ಒಳ್ಳೆಯ ತಂದೆಗೆ, ಒಬ್ಬ ಶಿಸ್ತಿನ ಸಿಪಾಯಿಗೆ, ಒಬ್ಬ ಸಿದ್ಧನ ಆಜ್ಞೆಗೆ ಮಂತ್ರ ಮುಗ್ಧರಾದಂತೆ ಶಿರಸಾವಹಿಸಿದೆವು. ಒಕ್ಕೂರಲಿನಿಂದ ಚಪ್ಪಾಳೆ ತಟ್ಟಿದೆವು. ಗಂಟೆ, ಜಾಗಟೆ ಭಾರಿಸಿ ಓಂ ಕಾರ ಮೊಳಗಿಸಿದೆವು. ಜ್ಯೋತಿ ಬೆಳಗಿಸಿ ನಮ್ಮೊಳಗೆ ಶಕ್ತಿ ಆವಾಹನೆ ಮಾಡಿಕೊಂಡೆವು. ನಮಗರಿವಿಲ್ಲದೆಯೇ ನಮ್ಮ ಮನೆಗಳಲ್ಲಿ ನಾವು `ಲಾಕ್' ಆಗಿ ಬಿಟ್ಟೆವು!.
ಕಾಮ ದಹನದ ತರುವಾಯ ಪ್ರಕೃತಿ ಸಹಜ ರತಿಯ ಶೋಖ ಧರೆಗಿಳಿಯದೇ ಇದ್ದೀತೇ? ಮಳೆರಾಯ ಆಗಾಗ ಇಣುಕಿ ನೋಡತೊಡಗಿದ. ರೈತಾಪಿಗಳು ತಮ್ಮೆಲ್ಲ ಕೃಷಿ ಪರಿಕರಗಳನ್ನು ಝಾಡಿಸಿ ಬಸವಧ್ವಯರ ಬೆನ್ನು ಸವರಿ ಹೊಲಗಳತ್ತ ಹೆಜ್ಜೆ ಹಾಕುವ ಸಮಯ, ಬೀಜ ಗೊಬ್ಬರಗಳಿಗೆ ಸಾಲು ನಿಲ್ಲುವ ವೇಳೆ, ಬಿತ್ತುವ ಕನಸ ಹೆಣೆಯುವ ವೇಳೆಯಲ್ಲಿ ಪರಿಸ್ಥತಿ ಮತ್ತಷ್ಟು ಗಂಭೀರವಾಯ್ತು.
ಈ ವೇಳೆಯಲ್ಲಿ ಈಗಾಗಲೇ ರೋಗಿಗಳಾಗಿದ್ದವರು ಬಹಳಷ್ಟು ಕಷ್ಟ ಅನುಭವಿಸಬೇಕಯಿತು. ಇತ್ತ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೇ, ಅತ್ತ ಆಸ್ಪತ್ರೆಗಳು ತೆರೆಯದೇ, ತೆರೆದರೂ ಹೋಗಿ ಬರಲು ಸೌಕರ್ಯಗಳ ಕೊರತೆ, ಜೊತೆಗೆ ಹೀನ ಆಥರ್ಿಕ ಪರಿಸ್ಥತಿ ಸಾಮಾನ್ಯ ಜನರನ್ನು ಹಿಂಡಿ ಹಿಪ್ಪೆ ಮಾಡಿದವು. ಸರಕಾರ, ಸಂಘ-ಸಂಸ್ಥೆಗಳು, ಕೆಲ ಶ್ರೀಮಂತರು ಸಾಕಷ್ಟು ಸಹಾಯ ಮಾಡಿದರೂ ಜನ ಮಾನಸಿಕವಾಗಿ ಕುಗ್ಗಿಹೋಗತೊಡಗಿದರು. ಇಂಥವೇಳೆಯಲ್ಲಿ ಆಪತ್ಭಾಂಧವರಂತೆ ಫೋನುಗಳು ಕೆಲಸ ನಿರ್ವಹಿಸತೊಡಗಿದವು!!
ಮೊದಮೊದಲು ಉಭಯ ಕುಶಲೋಪರಿ, ಲಾಕ್ಡೌನ್ `ಕರೋನಾ'ಬಗ್ಗೆ ಮಾತಾಡಿ ಮಾತಾಡಿ ಬೇಜಾರಾಯ್ತು. ಆಗ ಶುರುವಾದವು ಬಿಟ್ಟು ಹೋದ,ಕಲೆತು ಮರೆತು ಹೋದ ವಿದ್ಯೆಗಳು, ಹವ್ಯಾಸಗಳು.
ಯಾರಿಗೇ ಫೋನು ಮಾಡಿದರೂ ಕೇರಂ/ಚಕ್ಕಾ/ಚದುರಂಗ... ಆಡುತ್ತಿದ್ದೇವೆ ಎಂಬ ಸುದ್ದಿ. ರಂಗೋಲಿ ಹೆಣಿಕೆ, ಕಸೂತಿ, ಚಿತ್ರಕಲೆ, ಹಾಡು, ಬ್ಯಾಗ ಹೆಣಿಕೆ, ನಿಟ್ಟಿಂಗ್, ಪೇಂಟಿಂಗ್, ಬಳೆ, ಉಲ್ಲನ್, ಪ್ಲ್ಯಾಸ್ಟಿಕ್ ಬಳಸಿ ವಿವಿಧ ಆಟಿಕೆಗಳ ತಯಾರಿಕೆ, ಹೊಲಿಗೆ, ಸೀರೆಗಳಿಗೆ ಗೊಂಡೆ ಕಟ್ಟುವುದು, ಕಂಪ್ಯೂಟರ್ ಬಳಸುವುದನ್ನು ಕಲಿತರು. ಬಟ್ಟೆ ಹೊಲಿಗೆ ಗೊತ್ತಿದ್ದವರು ಹೊಸ ಹೊಸ ವಿನ್ಯಾಸಗಳನ್ನು ಕಲಿತರು. ಓದು, ಬರಹ, ಹಾಸ್ಯ ತುಣುಕುಗಳನ್ನು ಹೇಳುವುದು, ಕೇಳುವುದು, ಒಂದೋದಾಗಿ ಶುರುವಾದವು.
ಮಠ, ಮಂದಿರ, ಚಚರ್ುಗಳೆಲ್ಲ ಬಂದಾಗಿ ಜಾತ್ರೆ, ತೇರು, ಹರಕೆ ಎಲ್ಲ ನಿಂತು ಕವಿ ಜಿ. ಎಸ್.ಶಿವರುದ್ರಪ್ಪನವರು ಹೇಳಿದ `ಎಲ್ಲೋ ಹುಡುಕಿದೆ ಇಲ್ಲದ ದೇವರ' ನೆನಪಿಗೆ ತಂದು ಬಿಟ್ಟವು. ಆಡಂಬರದ ಜೀವನಕ್ಕೆ ತೆರೆ ಬಿತ್ತು. ಕೆರೆ ಕಟ್ಟಿಗಳು ತಿಳಿಯಾದವು, ನದಿಗಳು ಸ್ವಚ್ಚಂಧವಾಗಿ ಹರಿದವು, ಸುಳಿಗಾಳಿ ಸುಳಿಯಿತು. ಸಾರವಿಲ್ಲದೇ ಗಾಳಿ ಹೊಗೆ, ಧೂಳುಗಳಿಂದ ಉಸಿರು ಗಟ್ಟಿದ್ದ ವಾತಾವರಣ ನಿಟ್ಟುಸಿರು ಬಿಟ್ಟು ಕರಿ ಹರಿದಂತಾಯ್ತು.
ಸಧ್ಯ ಕಿಟ್ಟಿ ಪಾಟರ್ಿ, ಬರ್ತಡೇ ಪಾಟರ್ಿ, ಗೆಟ್ ಟುಗೇದರ್ ಪಾಟರ್ಿಗಳು, ಮದುವೆ, ದಿಬ್ಬಣ, ಹಬ್ಬ ಹರಿದಿನಗಳ ನೆಪದಲ್ಲಿ ಅನಾವಶ್ಯವಾಗಿ ಆಗುುತ್ತಿದ್ದ ಖಚರ್ು, ಹೋಟೆಲ್ ಬಿಲ್ಲು, ಕುಡಿತ, ಮಿತಿ ಮೀರಿದ ಚಟಗಳಿಗೆ ಕಡಿವಾಣ ಬಿತ್ತು. ಮನೆಯ ಗಂಡಸರು ಸಂಡಿಗೆ, ಹಪ್ಪಳ ಒಣ ಹಾಕುವುದು, ಬಟ್ಟೆ ಬರೆ ಮಡಿಕೆ ಹಾಕುವುದು, ಮಕ್ಕಳಿಗೆ ಸ್ನಾನ ಮಾಡಿಸಿ ಬಟ್ಟೆ ತೊಡಿಸುವುದು, ಅಡಿಗೆ ಕೆಲಸಕ್ಕೆ ಸಹಾಯ ಮಾಡುವುದು ಹೀಗೆ ತುಸು ಮೈ ಬಗ್ಗಿಸತೊಡಗಿದರು ಮತ್ತು ಹೆಂಗಸರ ಕಷ್ಟ ಅರ್ಥ ಮಾಡಿಕೊಂಡರು.
ಎಲ್ಲಕ್ಕಿಂತ ಮುಖ್ಯವಾದುದೆಂದರೆ ಮನೆಯ ಹಿರಿಯ ಜೀವಿಗಳ ಜೊತೆ ಮಾತನಾಡಲು ಪುರುಸೊತ್ತಿಲ್ಲದೇ ಮುಖ ತಿರುಗಿಸಿ ಹೊರಡುತ್ತಿದ್ದವರು ಅವರೊಂದಿಗೆ ಕುಳಿತು ಹರಟೆ ಹೊಡೆಯುವಂತಾಯಿತು. ಅವರಿಂದ ಎಷ್ಟೋ ಗಾದೆ ಮಾತು, ನುಡಿಗಟ್ಟು, ಜನಪದ, ಭಾವಗೀತೆಗಳು ಹೊರಬಂದವು. ಜೊತೆಗೆ ಅವರ ಅನುಭವಾಮೃತಗಳೂ ವೇದ್ಯವಾದವು. ಬಹುಶಃ ಹಿರಿಯರು ಹೇಳಿದ್ದು ಸತ್ಯ. `ಅತ್ತೆಗೊಂದು ಕಾಲ;ಸೊಸೆಗೊಂದು ಕಾಲ'ಅಂತ.
ಅರೆ! ಡಾಣಿ ಮಂಡಕ್ಕಿ ತಿನ್ನುತ್ತಿದ್ದಾಗ ಪೂತರ್ಿ ತಿನ್ನದೇ ಆ ಹಾಳೇಯನ್ನೂ ಬಿಡದೇ ಆಚೀಚೆ ಸರಿಸಿ ಓದುತ್ತಿದ್ದೆವು. ಒಮ್ಮೆ ಅಣ್ಣ ತಿನ್ನುತ್ತಿದ್ದ ಹಾಳೆಯೊಳಗೆ ಏನೋ ವಿಷಯ ಓದುತ್ತ ಓದುತ್ತ ತಿರುಗಿಸಿ ಎಳೆದು ಅವನ ತಿಂಡಿಯನ್ನೆಲ್ಲ ನೆಲಕ್ಕೆ ಚೆಲ್ಲಿ ಭಾರಿಸಿಕೊಂಡ ನೆನಪು ಮರುಕಳಿಸಿ ನಗು ತರಿಸಿತ್ತು ಓದಿಗಾಗಿ ಅವಸರವಸರವಾಗಿ ಪಾಲಿನ ಕೆಲಸ ಮಾಡಿ ಕೂರುತ್ತಿದ್ದೆವು. . ಅಕ್ಕಂದಿರನ್ನು ರಮಿಸಿ ಕೆಲಸಕ್ಕೆ ಹಚ್ಚಿ ಓದುತ್ತಿದ್ದುದು, ಊಟ ಮಾಡುತ್ತಲೇ ಓದಿ ಬೈಗುಳ ತಿಂದದ್ದು ನೆನಪಿದೆ. ಒಮ್ಮೊಮ್ಮೆ ನಸುಕಿನಲ್ಲಿ ಎದ್ದಾಗ ಶಾಲೆ-ಕಾಲೇಜುಗಳ ಅಭ್ಯಾಸದೊಂದಿಗೆ ರಾತ್ರಿ ಅರ್ಧಕ್ಕೇ ಬಿಟ್ಟ ಕಾದಂಬರಿಗಳನ್ನು ಪೂತರ್ಿಗೊಳಿಸಿದ್ದು ರಾತ್ರಿ ಝೀರೋ ಬೆಳಕಿನಲ್ಲಿ ಓದಿದ್ದು ಅದೆ. (ಇರಲಿ ಓದಿಗಾಗಿ ಮಾಡಿದ ಕಸರತ್ತುಗಳನ್ನು ಇನ್ನೊಮ್ಮೆ ಹೇಳುವೆ).
ನಮ್ಮ ಅಂಗಡಿಯೊಳಗಿನ ಪೇಪರಿನ ಮೂಲೆ ಮೂಲೆಗಳನ್ನೆಲ್ಲ ಜಲಾಡಿಸಿ ಬಿಡುತ್ತಿದ್ದೆ. ನನ್ನಂತೆ ಓದುಗರಾದ ನಿಮ್ಮ ಅನುಭವಗಳೂ ಇಲ್ಲಿರಲು ಸಾಕು. ಆದರೆ ಅಂಥ ಓದಿನ ರಾಕ್ಷಸ ಹಸಿವನ್ನು ಸಂಸಾರ ಬಂಧನವು ಕಸಿದುಕೊಂಡು ಬಿಟ್ಟಿತ್ತು ಎಂದರೆ ತಪ್ಪಲ್ಲ!! ಆದರೆ `ಲಕ್ಡೌನ್' ಆದದ್ದೇ ತಡ ಶುರುವಾಯ್ತು ಹಳೇ ಚಾಳಿ. ಕಲಿತ ಚಾಳಿ ಬಿಟ್ಟೀತು ಹೇಗೆ?
ಸಂದಿ ಗೊಂದಿಗಳಿಂದ ಪುಸ್ತಕಗಳೆಲ್ಲ ಹೊರಬಂದವು. ಹೊಸ ಓದು ಮುಗಿದಿದ್ದೇ ತಡ. ಈಗಾಗಲೇ ಅರ್ಧವಾಗಿ ಉಳಿದ ಪುಸ್ತಕಗಳು ಓದಿಸಿಕೊಂಡವು. ಖರೀದಿಸಿ ಹಾಗೆಯೇ ಇಟ್ಟ ಪುಸ್ತಕಗಳು ಓದಿಸಿಕೊಂಡವು. ಒಂದೇ ಪುಸ್ತಕವನ್ನು ಕೆಲ ದಿನ ಬಿಟ್ಟ ಮೇಲೆ ಓದುವ ಮಜವೇ ಬೇರೆ. ಅದೇ ಶಬ್ಧ/ ಪದ, ಅದೇ ವಿಷಯಗಳು ಆದರೆ ನಮ್ಮರಿವಿಗೆ ಬರುವ ರೀತಿ ಮಾತ್ರ ಬೇರೆ ಬೇರೆ. 15&20 ವರ್ಷಗಳ ಹಿಂದೆ ಓದಿದ ಓದಿಗೂ ಅದೇ ಪುಸ್ತಕದ ಈಗಿನ ಓದಿಗೂ ತುಂಬಾ ವ್ಯತ್ಯಾಸ ಕಂಡು ಬಂತು ಹೌದಲ್ವ!. ಓದಿದ ಪುಸ್ತಕಗಳೇ ಅದ್ಹೇಗೆ ಬೇರೆ ಜ್ಞಾನವನ್ನು ನೀಡಿದವು. ಮರು ಓದಿಗೆ ಸಮಯ ಒದಗಿಸಿ ಕೊಟ್ಟ `ಕರೋನಾ' ನಾಗೆ ಥ್ಯಾಂಕ್ಸ ಹೇಳಬೇಕಲ್ವಾ?
ಬದಲಾದದ್ದು ಪುಸ್ತಕಗಳಲ್ಲ; ಅವುಗಳಲ್ಲಿಯ ವಿಷಯಗಳೂ ಅಲ್ಲ ಬದಲಾದದ್ದು ನಾವು. ಅವುಗಳನ್ನು ಓದುವ ರೀತಿ ಹಾಗೂ ಅಥರ್ೈಸಿಕೊಳ್ಳುಲು ಸಾಥ್ ನೀಡಿದ ಬದುಕಿನ ಅನುಭವದ ಮಜಲುಗಳು. ಅವು ಸಮಾಜಕ್ಕೆ ಏನು ಹೇಳಲು ಹೊರಟಿದ್ದವು ಎಂಬುದನ್ನು ತಿಳಿದದ್ದೂ ಸಹ ಈಗ!!. ಈಗನಿಸುತ್ತಿದೆ ಛೇ ವ್ಯರ್ಥವಾಗಿ ಸಮಯ ಕಳೆದು ಬಿಟ್ಟೆವೇನೋ ಅಂತ.
ನನಗಂತೂ ಟಿ.ವ್ಹಿ ನೋಡುವ ಹುಚ್ಚು ಇಲ್ಲ ಅಥವಾ ತೀರಾ ಕಡಿಮೆ. ಮನೆ/ಮನ/ಮನೆತನಗಳನ್ನು ಹಾಳು ಮಾಡುವ ಮನಸ್ಥಿತಿ ಹದಗೆಡಿಸುವ ಧಾರವಾಹಿಗಳು ಬಹಳಷ್ಟು ಜನರ ನೆಮ್ಮದಿಗೆಡಿಸಿದ್ದವು. ಇದರಿಂದಾಗಿ ಬಂದು-ಬಾಧವರನ್ನು ವಿಚಾರಿಸುವುದಿರಲಿ ಮನೆಗೆ ಬಂದರೆ ಹೊರಳಿ ನೋಡಲೂ ಪುರುಸೊತ್ತಿರಲಿಲ್ಲ. ಆತಿಥ್ಯಕ್ಕೆ ಹೆಸರಾದ ನಮ್ಮ ದೇಶದಲ್ಲಿ ಆದರಾತಿಥ್ಯದ ಸವಿ ಕಸಿದುಕೊಂಡಿದ್ದವು ಈ ದಾರಾವಹಿಗಳು. `ಲಾಕ್ಡೌನ್'ದಿಂದಾಗಿ ಸಂಬಂಧಗಳ ಬೆಲೆ ತಿಳಿದುಕೊಳ್ಳುವಂತಾಗಿದೆ. ಅತಿಥಿಗಳು, ಸಂಬಂದಿಕರ ಮಾತುಕತೆಗಳು ಕೆಲನಿಮಿಷಗಳ ಹರಟೆ ಬಿಗಿಗೊಂಡ ಮನಸ್ಸುಗಳನ್ನು ತಿಳಿಗೊಳಿಸುತ್ತಿವೆ ಎಂಬ ಸತ್ಯದ ಅರಿವಾಗಿದೆ. ನಮ್ಮಷ್ಟಕ್ಕೆ ಕುಂತು ಕುಡಿಯುವ ಚಹಾ/ಕಾಫಿಗೂ ಹಂಚಿಕೊಂಡು ಕುಡಿಯುವ ಚಹಾ/ಕಾಫಿಗೂ ವ್ಯತ್ಯಾಸದ ಅರಿವಾಗಿದೆ.
ಓದಿನೊಂದಿಗೆ ಬರೆಯುವ ಹಂಬಲವೂ ಹೆಚ್ಚಾಯ್ತು. ಕಾರಣ ಮರುಓದು ಬರಹಕ್ಕೊಂದು ಹೊಸಜನ್ಮ ನೀಡಿದ್ದವು. ಯಾವುದೇ ಧಾವಂತವಿಲ್ಲದ ಸಮಾಜ ಹಾಗಾಗಿ ಓದಿನಲ್ಲಿ ಆಸಕ್ತಿ ಇಲ್ಲವದರೂ ಓದತೊಡಗಿದರು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಏಕೆಂದರೆ
ಸಾಹಿತ್ಯವು ಬರೀ ಚುರುಮುರಿ, ಅವಲಕ್ಕಿ, ಉಪ್ಪಿಟ್ಟು, ಪಾಯಸ, ಚಿತ್ರಾನ್ನ, ಸಂಡಿಗೆ, ಹೋಳಿಗೆ, ಕಡುಬು, ಇಡ್ಲಿ, ದೋಸೆಗಳ ರುಚಿ ಅಲ್ಲ; ಇದರ ಜೊತೆಗೆ ಇಲ್ಲೂ ಪಿಜ್ಯಾ,ಬರ್ಗರ್, ನ್ಯೂಡಲ್ಸ, ಮಂಚೂರಿ, ಕಾರ್ನ, ಪಾವ್ಭಾಜಿ, ಪಾನೀಪುರಿಗಳಂಥ ರುಚಿಯನ್ನು ಬಡಿಸಿತು.
ಮತ್ತೊಂದು ಮಹತ್ವದ ವಿಷಯವೆಂದರೆ ಫೋನು, ಫೇಸ್ಬುಕ್ಗಳೂ ಸಹ ಓದಿಗೆ ಬರಹಕ್ಕೆ ನಮ್ಮನ್ನು ತೊಡಗಿಸಿದ್ದು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಂಸ್ಥೆಗಳ ಹುಟ್ಟಿವೆ. ನಿತ್ಯವೂ ಒಂದಿಲ್ಲೊಂದು ಸ್ಪಧರ್ೆ ಏರ್ಪಡಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜೊತೆ ಅಭಿನಂದನಾ ಪತ್ರ ನೀಡಿ ಗೌರವಿಸುತ್ತಿವೆ. ಹಾಗಾಗಿ ಓದು-ಬರಹ ಎರಡರ ಕೃಷಿ ಜೋರಾಗಿ ನಡೆದವು. ಹಾಡು,ನೃತ್ಯ, ಹಾಸ್ಯ ಅಭಿನಯಗಳ ವಿಡಿಯೋಗಳು ಫೇಸ್ಬುಕ್ನಲ್ಲಿ ಹರಿದಾಡಿದವು. ಹವ್ಯಾಸಗಳಿಗೆ ಸೂಕ್ತ ಸಮಯ ಒದಗಿಸಿಕೊಟ್ಟಿತು. ಮರೆತುಹೋದ ಆಟಪಾಠಗಳ ಹವ್ಯಾಸಗಳ ನೆನಪಿಸುವುದರ ಜೊತೆ ಜೊತೆಗೆ ಸಂಬಂಧಗಳ ಗಟ್ಟಿಗೊಳಿಸುವಲ್ಲಿ ಸಹಾಯ ಮಾಡಿದೆ.