-ಪ್ರಭಾ .ಅ. ಪಾಟೀಲ, ಬೆಳಗಾವಿ
ಮೊನ್ನೆ ಬುಧವಾರ ಗೆಳತಿ ರಜನಿ ಮನೆಗೆ ಸಾಯಂಕಾಲ ಹೋಗಿದ್ದೆ ಬಳ್ಳೊಳ್ಳಿ ಒಗ್ಗರಣಿ ಚುರುಮುರಿ ಕೊಟ್ಟಳು ನೋಡ್ರಿ ತಿನ್ನಾಕ ಏನ್ ಮಸ್ತ ಆಗೆದ್ದು ಅಂತೇರೀ ಅದರ ಜೊತೆ ಬಿಸಿಬಿಸಿ ಕಾಫಿ ಕೊಟ್ಲು ಇಬ್ಬರೂ ಮಾತಾಡೋ ಕುಂತ ಎರಡು ಪ್ಲೇಟ್ ಚುರುಮುರಿ ತಿಂದು ಮುಗಿಸಿದರ ಹೊಟ್ಟೆ ತುಂಬೆ ಹೊತು ನನಗಂತೂ ಅಷ್ಟು ಪ್ರೀತಿ ಚುರುಮುರಿ ಅಂದರೆ ಓಕೆನಪ್ಪ ಆನ್ ಬ್ಯಾಡರಿ ಮತ್ತ ಚುರುಮುರಿ ಅಂದ್ರೆ ಯಾರೀಗೇ ಪ್ರೀತಿ ಇಲ್ಲ ಹೇಳರೀ ನೋಡೋಣಾ ನನ್ನ ತವರುಮನೆ ಕಡೆಯಂತೂ ಚುರುಮುರಿ ಎಂದರೆ ಅತ್ಯಂತ ಪ್ರಿಯ ನನ್ನ ಗಂಡನ ಮನೆ ಕಡೆ ಅಂತೂ ಹೇಳತೀರದು ಮುಂಜಾನೆ ಉಪ್ಪಿಟ್ಟು ಅವಲಕ್ಕಿ ಏನು ಮಾಡಿದರು ಮ್ಯಾಲ ಒಂದಿಷ್ಟು ಚುರುಮುರಿ ಹಾಕಿಕೊಂಡ ತಿಂತಾರೆ ಇನ್ನ ಸಂಜಿ ಕಂತು ಚಾ ಜೋಡಿ ಚುರುಮುರಿ ಬೇಕೇ ಬೇಕು.
ದಪ್ಪ ಅಕ್ಕಿ ತೊಗೊಂಡು ಬಟ್ಟಿಯೊಳಗೆ ಹುರುದು ತಯಾರಿಸುತ್ತಾರೆ ಚುರುಮುರಿ ಇದೊಂದು ದೊಡ್ಡ ಉದ್ಯಮವೇ ಇದೆ ಅನೇಕರಿಗೆ ಉದ್ಯೋಗವಕಾಶಗಳನ್ನು ಕೊಡುತ್ತದೆ ಚುರುಮುರಿ ಇನ್ನ ಚುರುಮರಿ ಒಳಗೆ ಬಾಳ ತರಹದ ಅದಾವನೋಡ್ರಿ ಗಟ್ಟಿ ಚುರುಮುರಿ ಪಳ್ಳು ಚುರುಮುರಿ ಈಗ ಗೋಧಿ ಚುರುಮುರಿ ನು ಬಂದಾವು
ನಮ್ ಬೆಳಗಾವಿ ಕಡೆಯಂತೂ ಬರೇ ಗಟ್ಟಿ ಚುರುಮರಿ ನಾನು ಇನ್ನ ಹುಬ್ಬಳ್ಳಿ ಧಾರವಾಡ ಕಡೆ ಹೋದರೆ ಪೊಳ್ಳು ಚುರುಮುರಿನ ಇವನ್ನು ತೋಶಿ ಮಾಡಿದರೆ ಗಿರಮಿಟ್ ಅಂತಾರೆ ಅಲ್ಲಿ ಆ ಕಡೆ ಹೋಗಿದ್ರಿ ಅಂದ್ರ ಗಿಮರ್ಿಟ್ ಬಿಸಿ ಬಜ್ಜಿ ತಿನ್ನಾಕಬೇಕು ನೋಡ್ರಿ ಇನ್ನ ಧಾರವಾಡಕ್ಕೆ ಹೋದರೆ ಎಲ್ಲ ಕ್ಯಾಂಟೀನ್ ದಾಗೂ ಕೆಂಪ ಚುರುಮುರಿ ಹಳದಿ ಚುರುಮುರಿ ತೋಸಿದ ಚುನ ಮರಿ ಬಿಸಿ ಬಿಸಿ ಬಜ್ಜಿ ತಿಂದು ಬರಬೇಕು ನೋಡ್ರಿ ಅದರ ಮಜಾನ ಬ್ಯಾರೆ ಅದರ ಮಜಾನೆ ಬೇರೆ.
ಇನ್ನು ನಮ್ಮ ನೆರೆಯ ರಾಜ್ಯ ಮಹಾರಾಷ್ಟದಲ್ಲಿ ಚುರುಮುರಿ ಗೇನ ಬಡಂಗ ಅಂತಾರೆ ಬಹಳಷ್ಟು ಶೇಂಗಾ ಹಾಕಿ ಗರಂ ಮಸಾಲೆ ಹಾಕಿ ಮಾಡ್ತಾರೆ ಏನು ರುಚಿ ಅಂತೆನಯವ್ವಾ ನಿನ್ನೆ ನಮ್ಮ ಬೆಳಗಾವಿ ದಾಗ ಬೇಲ್ ಪುರಿ ಮಾಡ್ತಾರೆ ಹುಳಿ ಖಾರ ಜಾಸ್ತಿಯಾಗಿ ಹಾಕಿ ಮ್ಯಾಲೆ ಹಸಿ ಉಳ್ಳಾಗಡ್ಡಿ ಸಣ್ಣ ಸೇವು ಹಾಕಿ ಕೊಟ್ರೆ ಮಾಡುದ ನೊಡಾಕತ್ತರ ಬಾಯ್ಯಾಗ ಜುಳು ಜುಳು ನೀರು ಬರಾಕ ಸುರು ಅಷ್ಟು ಸಿವಿ ಈ ಬೇಲಪುರಿ ನನ್ನ ಮಗಗಂತು ಬೇಲ ಅಂದರೆ ಪಂಚ ಪ್ರಾಣ ಈಗಿನ ಕಾಲೇಜು ಹುಡುಗರಂತೂ ಪಾಳೆ ಹಚ್ಚಿ ನಿಂತು ಬೇಲ್ ತಿಂತಾರೆ ಇನ್ನ ಬಡವರಿಗಂತೂ ಕಾಮಧೇನುಈ ಚುರುಮುರಿ ಒಂದು ಪ್ಲೇಟ್ ತಿಂದು ನೀರು ಕುಡಿದರೆ ಹೊಟ್ಟೆ ತುಂಬಿ ಹೋಗುತ್ತದೆ ಅಂದ ಅವರು ಊಟ ಮುಗಿದುಹೋಗುತ್ತದೆ ಇದರಿಂದ ಸಣ್ಣ ಚಾದಂಗಡಿ ಇಟ್ಕೊಂಡ ಕಡಿಮೆ ಬಂಡವಾಳದ ಆಗ ಈ ಚುರುಮುರಿ ವ್ಯಾಪಾರ ಮಾಡಿ ಹೊಟ್ಟಿ ತುಂಬ ಸಕೋಂತಾರ ನೋಡ್ರಿ ಏನ ಅಂದ್ರೂ ಸಣ್ಣ ಹುಡುಗರಿಂದ ಹಿಡಿದು ದೊಡ್ಡವರ ತನಕ ಎಲ್ಲರಿಗೂ ಪ್ರೀತಿ ಚುರುಮುರಿ.
ಇನ್ನ ದಾವಣಗೆರೆ ಕಡೆ ಹೋದರೆ ಸುಮಾರಿಗೆ ಮಂಡಕ್ಕಿ ಅಂತ ಹಸಿಮೆಣಸಿನಕಾಯಿ ಹಾಕಿ ಹಳದಿ ಕಲರ್ ಮಂಡಕ್ಕಿ ಭಾಳ ಫೇಮಸ್ ಅಲ್ಲೇ ತೋಸರ್ಿ ಮಾಡಿದ್ರೆ ಸೂಸಲಾ ಅಂತಾರೆ ಬೇಕಾದವರು ಬೇಕಾದ್ದು ಅನ್ನಲೀ ಚುರುಮರಿಗೆ ಚುರುಮರಿ ನೀನೇ ಸಾಟಿ.
ಇವತ್ತು ಬಹಳಷ್ಟು ಉಳ್ಳಾಗಡ್ಡಿ ಹಾಕಿ ಕೆಂಪು ಖಾರದ ಚುಮರ್ುರಿ ಮಾಡಲ್ಲ ಅಂದರ ನಮ್ಮನೆಯವರು ನಾ ತಯಾರಿ ಮಾಡ್ಕೋತೀನಿ ನಿಮ್ಮಗ ಹೆಂತವು ಸೇರತಾವೊ ನೀವು ತಯಾರಿ ಮಾಡಕ್ಕೋರಿ ಇಲ್ಲ ಅಂದರೆ ನಮ್ಮ ಮನಿಕಡೇ ಬರ್ಯ ತಿನ್ನಾಕ ಗರಿಗರಿ ಚುರುಮುರಿ ಕುರು ಕುರು ಚುರುಮುರಿ ಬಿಸಿಬಿಸಿ ಚುರುಮುರಿ ಹುಬ್ಬಳ್ಳಿಪೊಳ್ಳನ ಚುರುಮುರಿ ಬೆಳಗಾವಿ ಗಟ್ಟಿ ಚುರುಮುರಿ ಬೆಂಗಳೂರ ಕಳ್ಳೆಪುರಿ ದಾವಣಗೆರೆ ಮಂಡಕ್ಕಿ ಏನಂದ್ರು ಒಂದೇ ಅದ ನಮ್ಮ ಚುರುಮುರಿ ಚುರುಮುರಿ.