ರಾಷ್ಟ್ರ ಕಂಡ ಹಿರಿಯ ವಿಜ್ಞಾನಿ ಡಾ. ಎಚ್.ಆರ್.ಅರಕೇರಿ


- ಪ್ರೊ.ವಿಜಯಕುಮಾರ ಗಿಡ್ನವರ 

ಧಾರವಾಡ

ಡಾ. ಎಚ್.ಆರ್.ಅರಕೇರಿ ಅವರು ಕೇವಲ ರಾಜ್ಯ, ರಾಷ್ಟ್ರವಲ್ಲ ಅಂತರ್ ರಾಷ್ಟ್ರೀಯ ಮಟ್ಟದ ಹಿರಿಯ ಕೃಷಿ ಯೋಜನೆಗಳನ್ನು ರೂಪಿಸಿದ ಕೃಷಿ ನೀತಿ ಆಯೋಗದಲ್ಲಿ ಸೇವೆ ಸಲ್ಲಿಸಿದ ಕನ್ನಡಿಗರು ಅಷ್ಟೇ ಅಲ್ಲ. ಕೃಷಿ ನೀತಿಗೆ ಸಂಬಂಧಿತ ಸಿದ್ಧಪಡಿಸಿದ ಒಂಭತ್ತು ಸಂಪುಟಗಳು ಇಂದಿಗೂ ಸಹ ಕೃಷಿ ಯೋಜನೆಗಳಿಗೆ ಆಕರ ಗ್ರಂಥಗಳಾಗಿವೆ.

ಡಾ. ಎಚ್.ಆರ್.ಅರಕೇರಿಯವರ ಶತಮಾನೋತ್ಸವ ಸಮಾರಂವನ್ನು ಅತ್ಯಂತ ವಿಜೃಂಬಣೆಯಿಂದ 5 ಅಗಷ್ಟ 2020 ರಂದು ನಾಡಿನಾದ್ಯಂತ ಅವರು ಕಟ್ಟಿದ ಹಲವಾರು ಸಂಸ್ಥೆಗಳಲ್ಲಿ ಜರುಗಿತು. 

5 ಅಗಷ್ಟ 1919 ರಂದು ಹನುಮಂತರೆಡ್ಡಿ ಅರಕೇರಿಯವರು ರಾಜ್ಯದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದಲ್ಲಿ (ಅವರ ತಾಯಿ ತವರೂರು) ಜನಿಸಿದರು.  ವಿಜಯಪುರ ಜಿಲ್ಲೆಯ ಖಜ್ಜಿಡೋಣಿ ಗ್ರಾಮದ ಪ್ರತಿಷ್ಠಿತ ರೈತ ಕುಟುಂಬ ಅರಕೇರಿ ಮನೆತನದ ಇವರ ಬಾಲ್ಯ ಖಜ್ಜಿಡೋಣಿಯಲ್ಲಿ ಶಾಲಾ ಶಿಕ್ಷಣದೊಂದಿಗೆ ಆರಂಭವಾಗಿತ್ತು. ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವವನ್ನು ನೀಡದ ಕೇವಲ ಕೃಷಿ ಕಾರ್ಯಗಳಲ್ಲೇ ಮಕ್ಕಳನ್ನು ತೊಡಗಿಸುವ ಹಿರಿಯರು ಇವರ ಆಸಕ್ತಿಯನ್ನು ಬಾಲ್ಯದಲ್ಲೇ ಗುರುತಿಸಿ ಕೃಷಿ ಕಾರ್ಯದಲ್ಲಿ ತೊಡಗಿಸಿಯೂ ಶಾಲೆಗೆ ಹೋಗಲು ಅನುಮತಿ ನೀಡಿದ್ದರು. 

ಖಜ್ಜಿಡೋಣಿಯಲ್ಲೇ ಶಾಲಾ ಶಿಕ್ಷಣವನ್ನು ಅತ್ಯುತ್ತಮ ಪೂರೈಸಿದ ಶ್ರೀಯುತರು. ನಂತರದಲ್ಲಿ ಪುಣೆಯ ಕೃಷಿ ಕಾಲೇಜಿನಲ್ಲಿ ಕೃಷಿ ಪದವಿಯನ್ನು ಸುವರ್ಣ ಪದವಿಯೊಂದಿಗೆ ಪಡೆದು 'ಆದರ್ಶ ವಿದ್ಯಾಥರ್ಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1940 ರಿಂದ 1947 ಅವಧಿಯಲ್ಲಿ ಮುಂಬೈ ಸರಕಾರದ ಒಕ್ಕಲುತನದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಪಡೇಗಾಂವ್ ಕಬ್ಬು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತ ಆ ಕೇಂದ್ರವನ್ನು ಅಭಿವೃದ್ಧಿ ಪಡಿಸಿ ತಾವು ಒಬ್ಬ 'ವಿಜ್ಞಾನಿ' ಎಂಬ ಹಣೆಪಟ್ಟಿ ಪಡೆಯುವಂಥ ಸೇವೆ ಸಲ್ಲಿಸಿದ್ದರು.

1947 ರಲ್ಲಿ ಧಾರವಾಡ ಒಕ್ಕಲುತನ ಕಾಲೇಜನ್ನು ಮುಂಬೈ ಸರಕಾರ ಸ್ಥಾಪಿಸಿದಾಗ ಶ್ರೀಯುತರ ವಿದ್ವತ್ತತೆಯನ್ನು ಕಂಡ ಸರಕಾರ ಈ ಯುವ ವಿಜ್ಞಾನಿಯನ್ನು ಧಾರವಾಡದ ನೂತನ ಒಕ್ಕಲುತನ ಕಾಲೇಜಿಗೆ ಅಧ್ಯಾಪಕರನ್ನಾಗಿ ನೇಮಿಸಿತ್ತು.  ನಂತರ ಸರಕಾರ ಅವರನ್ನು ಉನ್ನತ ಶಿಕ್ಷಣ ಪಡೆಯಲು ಅಮೇರಿಕೆಯ 'ಮಿನ್ನೇಸೋಟಾ ವಿಶ್ವವಿದ್ಯಾಲಯ'ಕ್ಕೆ ಕಳಿಸಿತ್ತು. 

ಬೇಸಾಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದ ಅಲ್ಲಿಯೂ ಅವರು ಉತ್ತಮ ವಿದ್ಯಾಥರ್ಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಶ್ರೀ ಅರಕೇರಿಯವರು ಮಿನ್ನೇಸೋಟಾ ವಿಶ್ವವಿದ್ಯಾಲಯದ ಎಂ.ಎಸ್. ಹಾಗೂ ಪಿ.ಎಚ್.ಡಿ ಉನ್ನತಶ್ರೇಣಿಯಲ್ಲಿ ಪೂರೈಸಿ ಮರಳಿ ಭಾರತಕ್ಕೆ ಬಂದಾಗ ಅವರನ್ನು ಪ್ರಾಧ್ಯಾಪಕರನ್ನಾಗಿ ನೇಮಿಸಿತ್ತು.  ನಂತರದಲ್ಲಿ ಧಾರವಾಡ ಕೃಷಿ ಕಾಲೇಜು ಮುಂಬೈ ಸರಕಾರದ ವ್ಯಾಪ್ತಿಯಿಂದಾ ಮೈಸೂರು ರಾಜ್ಯ ಸೇರಿತ್ತು. ಹಾಗೆಯೇ ಮುಂಬೈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಧಾರವಾಡ ಒಕ್ಕಲುತನ ಕಾಲೇಜು ಧಾರವಾಡದ ಕನರ್ಾಟಕ ಯುನಿವಸರ್ಿಟಿ ವ್ಯಾಪ್ತಿಗೆ ಸೇರಿತ್ತು. ಸ್ನಾತಕೋತ್ತರ ವಿದ್ಯಾಥರ್ಿಗಳಿಗೆ ಪಾಠ ಮಾಡುವದರೊಂದಿಗೆ ಕಾಲೇಜಿನ 1171 ಎಕರೆ ಕ್ಷೇತ್ರ ಅಭಿವೃದ್ಧಿಯಲ್ಲಿ ತೊಡಗಿದ್ದರು.  ವಿಭಾಗದ ಎಲ್ಲ ಪ್ರಾಧ್ಯಾಪಕರೊಂದಿಗೆ ಅನೋನ್ಯ ಸಂಬಂಧ ಹೊಂದಿದ ಶ್ರೀಯುತರು. ಅವಳಿ ಗ್ರಾಮಗಳ ರೈತರ ಸಹಕಾರದೊಂದಿಗೆ ಮಣ್ಣಿನ ಗುಣ-ಧರ್ಮಗಳನ್ನು ಆಧರಿಸಿ, ಕಡಿಮೆ ಆಳ, ಮಧ್ಯಮ ಆಳ, ಅತೀ ಆಳದ ಕಪ್ಪು ಭೂಮಿ, ಮರಳು ಮಿಶ್ರಿತ ಹಾಗೂ ಜವಳು ಭೂಮಿಯಂತೆ ಹನ್ನೊಂದು ಬ್ಲಾಕ್ಗಳನ್ನು 'ಬ್ಲಂಡ್ ಟ್ರೆಂಚ್ಗಳನ್ನು ಒಳಗೊಂಡು ನಾಲ್ಕು ಎಕರೆಯಂತೆ ನಿಮರ್ಿಸಿದ್ದರು. ಆಯಾ ಪ್ರಕಾರದ ಭೂಮಿ ಗುಣಕ್ಕೆ ಹೊಂದುವಂಥ ಬೆಳೆಗಳ ಆಯ್ಕೆ ಮಾಡಿದರು. ಹೀಗೆ ಸುಮಾರು 20 ಕ್ಕೂ ಹೆಚ್ಚು ಅಧಿಕ ಬೆಳೆಗಳನ್ನು ಈ ಕ್ಷೇತ್ರಗಳಲ್ಲಿ ಬೆಳೆಯುವಂತೆ ಬೇಸಾಯ ಪ್ರಯೋಗಗಳನ್ನು ಅರಂಭಿಸಿದ್ದರು.  ಈ ಪ್ರಕಾರದ ದೂರದೃಷ್ಟಿ ಹೊಂದಿದ ಹಿರಿಯ ವಿಜ್ಞಾನಿಗಳಾದ ಡಾ.ಅರಕೇರಿ ಅವರ ಬ್ಲಾಕ್ಗಳಲ್ಲಿ ಇದುವರೆಗೂ ಸ್ನಾತಕೋತ್ತರ ವಿದ್ಯಾಥರ್ಿಗಳು ನಿರಂತರವಾಗಿ ಬೆಳೆ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಕೃಷಿ ವಿಶ್ವವಿದ್ಯಾಲಯವು ಬಹು ಬೆಳೆ ತಳಿಗಳ ಅಧ್ಯಯನ ಸಂಶೋಧನೆಗಳಿಗಾಗಿ ದೇಶದಲ್ಲಿಯೇ ಹೆಸರುವಾಸಿಯಾಗಿದೆ. 

1965-70 ರಲ್ಲಿ ಶ್ರೀಯುತರು ರಾಜ್ಯದ ಕೃಷಿ ಇಲಾಖೆ ನಿದರ್ೆಶಕರಾಗಿ ಆಗಿನ 18 ಜಿಲ್ಲೆಗಳಲ್ಲಿ ವೈವಿಧ್ಯಮಯ ಬೆಳೆಗಳ ಪ್ರತಿ ಎಕರೆ ಇಳುವರಿಯನ್ನು ಹೆಚ್ಚಿಸುವಲ್ಲಿ ಸುಧಾರಿತ ತಂತ್ರಜ್ಞಾನ ರೈತರ ಹೊಲಗಳಲ್ಲಿ ಅಳವಡಿಸುವಲ್ಲಿ ಯಶಸ್ವಿಯಾದರು. ಅದೇ ನಾಲ್ಕು ವರುಷಗಳಲ್ಲಿ ಅವರ ತಾಂತ್ರಿಕ ಸಹಾಯಕನಾಗಿ ಸಾಮಿಪ್ಯದಲ್ಲೇ ಇರುವ ಸದವಕಾಶ ಲಭಿಸಿರುವದರಿಂದಾ ರಾಜ್ಯದ 18 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೆ.  ಅವರ ಮಾರ್ಗದರ್ಶನದಲ್ಲಿ 'ಮೈಸೂರು ರಾಜ್ಯದ ಕೃಷಿ' ಎಂಬ ಪುಸ್ತಕವನ್ನು ಸಿದ್ಧಪಡಿಸುವ ಅವಕಾಶ ಸಿಕ್ಕಿತು. ನಾಲ್ಕು ವರುಷಗಳೊಂದಿಗಿನ ಅವರ ಮಾರ್ಗದರ್ಶನ ನನ್ನ ಜೀವಮಾನವಿಡೀ ಸೇವೆ ಕಷ್ಟಕರವಾಗಿದ್ದರೂ ನಂತರ ಸಾರ್ಥಕ ಸೇವೆ ಎನಿಸಿತು. ಒಂಭತ್ತು ಕೃಷಿ ಸಂಶೋಧನಾ ಕೇಂದ್ರಗಳಲ್ಲಿಯ ನನ್ನ ಸೇವೆಯಲ್ಲಿ ಪ್ರತಿ ಕೇಂದ್ರದಲ್ಲೂ ಅಭಿವೃದ್ಧಿ ಕೈಕೊಳ್ಳುವ ಅವಕಾಶ ಭೂಸ್ವಾಧೀನ ಪಡಿಸಿಕೊಂಡು ನೂತನ ಸಂಶೋಧನಾ ಕೇಂದ್ರ ಸ್ಥಾಪಿಸುವಲ್ಲಿಯೇ ನನ್ನ ಕೃಷಿ ಸೇವೆ ಸಾರ್ಥಕವಾಯುತ. ಬೀದರದಲ್ಲಿಯ ಜನವಾಡಾ, ಕಮಠಾಣಾ, ಹಳ್ಳದಕೇರಿ, ಸಿರುಗುಪ್ಪಾ, ಅರಭಾವಿ ಹೊಸಫಾರ್ಮ, ಮುಗದ, ಹನುಮನಮಟ್ಟಿ ಕೇಂದ್ರಗಳಲ್ಲಿ ಮುಖ್ಯ ವಿಜ್ಞಾನಿಯಾಗಿ ನಾನು ಕಾರ್ಯ ನಿರ್ವಹಿಸುವಾಗ, ಅವರು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆವರು ವರುಷ ನನಗೆ ಮಾರ್ಗದರ್ಶನ ನೀಡಿದ್ದರು.  

ಹೀಗೆ 1966 ರಿಂದಾ 1982 ರ ವರೆಗೂ ನನ್ನ ಅವಶ್ಯಕ ಪೋನ ಕರೆಗೆ ಓಗೊಡುತ್ತಲೇ ನನ್ನ ಹಿತೈಷಿಗಳಾಗಿದ್ದರು.  ಅವರು ಕುಲಪತಿಗಳಾಗಿ, ಅಭಿವೃದ್ಧಿ ಪಯಣಕ್ಕೆ ವೇಗೋತ್ಕರ್ಷ ಚಾಲನೆ ನೀಡಿದರು.  ಗೃಹ ವಿಜ್ಞಾನ ಮಹಾವಿದ್ಯಾಲಯ, ಅರಣ್ಯಕೃಷಿ ಸಂಶೋಧನೆ, ಅಧ್ಯಯನ, ಬೆಂಗಳೂರಲ್ಲಿ .ಂ.ಖಿ.ಆಯ್.ಎ.ಟಿ.,ಧಾರವಾಡದಲ್ಲಿ .ಖ.ಖ.ಂ.ಖ.ಆ ಹೀಗೆ ಹಲವಾರು ನೂತನ ಸಂಶೋಧನಾ ಕೇಂದ್ರಗಳ ಸ್ಥಾಪನೆಗಳೇ ಅವರ ದೂರದೃಷ್ಠಿತ್ವದ ಸಾಕ್ಷಿಗಳು.  1979 ರಲ್ಲಿ ದಿಲ್ಲಿಯ ಕೃಷಿ ವಿಜ್ಞಾನಿಗಳ ಆಯ್ಕೆ ಮಂಡಳಿ ಂ.ಖ.ಖ.ಃ  ಅಧ್ಯಕ್ಷರನ್ನಾಗಿ ಕೇಂದ್ರ ಸರಕಾರ ನೇಮಿಸಿತ್ತು. ಆಗ ದಿಲ್ಲಿಯ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡ ನಾಡು-ನುಡಿಗೆ ಅಮೂಲ್ಯ ಸೇವೆ ಸಲ್ಲಿಸಿದ್ದರು. 1982 ರಲ್ಲಿ ದಿಲ್ಲಿಯಲ್ಲಿರುವಾಗಲೇ ಹೃದಯಾಘಾತದಿಂದ ನಮ್ಮನ್ನಗಲಿದರು.