ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 

- ಡಾ.ಜಗದೀಶ ಮಾನೆ
ಧಾರವಾಡ
ಮನುಷ್ಯನಿಗೆ ಕಷ್ಟ ವಿಪತ್ತು ಸಂಕಟಗಳು ಒದಗಿ ಬಂದಾಗ ಅಯ್ಯೋ ದೇವರೆ ನನಗೇಕೆ ಈ ರೀತಿಯ ಕಷ್ಟ ಕೋಟ್ಟೆ? ನನ್ನನ್ನು ಕಾಪಾಡು ಭಗವಂತ ಎಂದು ದೇವರ ಮೊರೆ ಹೋಗುವುದು ಸಾಮಾನ್ಯ. ಆದರೆ ಆತನಿಗೆ ಸುಖದ ಸಂದರ್ಭಗಳು ಬಂದಾಗ ಎಲ್ಲವನ್ನೂ ನಾನು ಸಂಪಾದಿಸಿದೆ, ನನ್ನ ಪರಿಶ್ರಮ, ನನ್ನ ಸಾಧನೆಯಿಂದಾಗಿ ಹೊಲದಲ್ಲಿ ಇಷ್ಟೊಂದು ಉತ್ತಮ ಬೆಳೆ ಬಂದಿದೆ. ವ್ಯಾಪಾರದಲ್ಲಿ ನನಗಿಷ್ಟು ಲಾಭವಾಗಿದ್ದು ನನ್ನ ಪರಿಶ್ರಮದಿಂದಾಗಿ. ಪರಿಕ್ಷೆಯಲ್ಲಿ ಈ ರೀತಿಯ ರ್ಯಾಂಕ್ ಬಂದಿದ್ದು ನನ್ನ ದೃಢ ಸಂಕಲ್ಪದಿಂದಾಗಿ, ನನ್ನ ಸತತ ಪ್ರಯತ್ನದಿಂದಾಗಿ ನನಗೆ ಒಳ್ಳೆಯ ಹುದ್ದೆ ದೊರೆತಿದೆ. ಎಂಬ ಅಹಂಕಾರದಿಂದ ಅನೇಕರು ಭಗವಂತನನ್ನು ಮರೆತುಬಿಟ್ಟಿರುತ್ತಾರೆ. ಕೆವಲ ಕಷ್ಟಗಳು ಬಂದಾಗ ಮಾತ್ರ ಭಗವಂತನನ್ನು ಸ್ಮರಿಸುವುದನ್ನು ಬಿಟು,್ಟ ನಿರಂತರ ಭಗವಂತನ ಸ್ಮರಣೆಯಲ್ಲಿದ್ದು ಧರ್ಮ ಕಾರ್ಯಗಳನ್ನು ಮಾಡುವವರ ರಕ್ಷಣೆಗೆ ಭಗವಂತ ಸದಾ ನಿಂತಿರುತ್ತಾನೆ ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಈ ಸಂದರ್ಭದಲ್ಲಿ ಮಹಾಭಾರತದ ಪ್ರಸಂಗವೊಂದನ್ನು ನೆನಪಿಗೆ ಬರುತ್ತದೆ, ಆ ಘಟನೆ ಪ್ರತಿಯೊಬ್ಬ ಮನುಷ್ಯನಿಗೆ ಉತ್ತಮ ಮಾರ್ಗದರ್ಶನ ನೀಡಬಲ್ಲದು. ಕುರುಕ್ಷೇತ್ರದಲ್ಲಿ ಅಂತಿಮವಾಗಿ ಪಾಂಡವರು ಗೆದ್ದನಂತರ ಎಲ್ಲರೂ ಬಹಳ ಸಂತೋಷದಲ್ಲಿರುವ ಸಂದರ್ಭದಲ್ಲಿ ಭಗವಂತ ಶ್ರೀಕೃಷ್ಣನು ಮಾತೆ ಕುಂತಿದೇವಿಗೆ ಅತ್ಯಂತ ವಿನಮ್ರತೆಯಿಂದ ಕೇಳುತ್ತಾನೆ. ಅಮ್ಮಾ ನಿಮಗೇನಾದರು ವರ ಬೇಕಿದ್ದರೆ ಕೇಳಿ, ಬೇಕಾದ ವರವನ್ನು ನಾನು ನಿಮಗೆ ಕೊಡಲು ಸಿದ್ದನಿದ್ದೇನೆ ಎಂಬ ಕೃಷ್ಣನ ಮಾತಿಗೆ ಕುಂತಿದೇವಿ ಹೇಳಿದ ಮಾತು ಜಗತ್ತಿನ ಕಣ್ಣು ತೆರೆಸುವಂತಿದೆ, ಭಗವಂತ ಕೃಷ್ಣನಿಗೆ ಕುಂತಿದೇವಿ ಎರಡು ಕೈ ಜೋಡಿಸಿ ಹೇಳುತ್ತಾಳೆ, "ಇದೀಗ ಧರ್ಮ ಹಾಗೂ ಅಧರ್ಮ ಯುದ್ದದಲ್ಲಿ ನಿನ್ನಿಂದಾಗಿ ಧರ್ಮದ ಜಯವಾಗಿದೆ, ಈಗ ಧರ್ಮದ ಯುಗ ಆರಂಭವಾಗಿದೆ, ಈ ಧರ್ಮದ ಯುಗದಲ್ಲಿ ನನಗೆ ಯಾವ ವರ ಬೇಕಿಲ್ಲ ಭಗವಂತ.
ನನಗೆ ವರವನ್ನು ಕೊಡಲೆಬೇಕೆಂದು ನಿನಗೆ ಅನಿಸಿದ್ದರೆ ನನಗೆ ಇನ್ನೂ ಹೆಚ್ಚಿನ ಕಷ್ಟವನ್ನೇ ಕೊಡು. ಪ್ರತಿನಿತ್ಯ ಒಂದೊಂದು ಕಷ್ಟವನ್ನು ಕೊಡುತ್ತ ಹೋಗು, ಆ ನೆಪದಲ್ಲಾದರೂ ನಾನು ಪ್ರತಿನಿತ್ಯವೂ ನಿನ್ನನ್ನು ಸ್ಮರಿಸುವಂತಾಗುತ್ತದೆ, ಸ್ಮರಿಸಲು ಒಂದು ನೆಪ ಸಿಕ್ಕಂತಾಗುತ್ತದೆ". ಕುಂತಿದೇವಿಯ ಆ ಮಾತು ಕೇಳಿದ ಭಗವಂತ ಒಂದು ಕ್ಷಣ ನಿಬ್ಬೆರಗಾಗಿ ನಿಂತುಬಿಡುತ್ತಾನೆ. ಇಂದಿಗೂ ಹಲವಾರು ಸಂದರ್ಭದಲ್ಲಿ ಭಗವಂತ ನಮಗೆ ಸಹಾಯ ಮಾಡುತ್ತಲೆ ಇರುತ್ತಾನೆ. ಹಾಗಂತ ಕೆಲವೊಮ್ಮೆ ಕಷ್ಟದ ಸಂದರ್ಭಗಳು ಬಂದಾಗ ಅವರ ಕಷ್ಟಗಳನ್ನು ಆಲಿಸಿದ ದೇವರು ದಿಢೀರನೆ ಪ್ರತ್ಯಕ್ಷವಾಗಿ ಅವರ ಕಷ್ಟಗಳನ್ನು ಪರಿಹರಿಸಿಬಿಡುವುದಿಲ್ಲ. ಭಗವಂತನ ಲೀಲೆಯಿಂದ ಯಾವುದೊ ರೂಪದಲ್ಲಿ ಕಷ್ಟಗಳು ನಿಧಾನವಾಗಿ ದೂರಾಗಿಬಿಟ್ಟಿರುತ್ತವೆ. ಅಂತಹ ಘಟನೆಗಳು ನಮ್ಮ ನಿಮ್ಮ ಜೀವನದಲ್ಲಿ ಹಲವಾರು ಬಾರಿ ನಡೆದು ಹೊಗಿರುತ್ತವೆ. ತುಂಬಾ ಕಷ್ಟದ ಸಂದರ್ಭಗಳು ಎದುರಾದಾಗಲೆಲ್ಲ ಆಕಸ್ಮಿಕವಾಗಿ ಯಾರೋ ಒಬ್ಬರು ನಮ್ಮ ಸಹಾಯಕ್ಕೆ ಬಂದಿರುತ್ತಾರೆ. ಅದನ್ನು ನೆನಪಿಸಿಕೊಂಡು ನಾವೆಲ್ಲ 'ದೇವರ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಬಿಟ್ಟಿರಿ. ನಮ್ಮನ್ನು ಕಷ್ಟದಿಂದ ಪಾರು ಮಾಡಿಬಿಟ್ಟಿರಿ' ಎಂದು ಹೇಳುತ್ತೇವೆ. ವಾಸ್ತವದ ಸಂಗತಿ ಎಂದರೆ ಬೇರೊಬ್ಬರ ಪಾಲಿಗೆ ದೇವರ ರೂಪದಲ್ಲಿ ನೆರವಾಗುವಂತಹ ಸಂದರ್ಭಗಳಂತೂ ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತವೆ. ಸತ್ಯ, ಧರ್ಮ, ಪ್ರಾಮಾಣಿಕತೆಯ ಸುತ್ತಲಿರುವ ಕಪ್ಪು ವಾತಾವರಣವನ್ನು ತಿಳಿಗೊಳಿಸಲು ಹಲವು ರೀತಿಯಲ್ಲಿ, ಹಲವು ಬಗೆಯಲ್ಲಿ ಯಾರಾದರೂ ಬಂದೇ ಬಿಟ್ಟಿರುತ್ತಾರೆ. ಕೆಟ್ಟ ಸಂದರ್ಭ, ಪರಿಸ್ಥಿತಿಗಳು ಕ್ಷಣಿಕ ಮಾತ್ರ. ಧರ್ಮದಿಂದ ಬದುಕುವವರಿಗೆ ಕಷ್ಟಗಳು ಬಹುಕಾಲ ಉಳಿಯುವುದಿಲ್ಲ. ದುಷ್ಟ ಶಕ್ತಿಗಳೆಲ್ಲ ಒಂದಾದರೂ ಒಳ್ಳೆಯವರ ರಕ್ಷಣೆಗೆ ಸತ್ವಃ ಭಗವಂತನೇ ನಿಲ್ಲುತ್ತಾನೆ. ಅಂತಹ ಹಲವಾರು ಘಟನೆಗಳನ್ನು ನೋಡಿದ್ದೇವೆ.
ಎಷ್ಟು ಜನರಿಗೆ ಗೊತ್ತಿದೆಯೊ, ಗೊತ್ತಿಲ್ಲವೋ ಗೊತ್ತಿಲ್ಲ ಅಂತಹದ್ದೆ ಘಟನೆಯೊಂದು ಡಾ.ಎ.ಪಿ.ಜಿ. ಅಬ್ದುಲ್ ಕಲಾಂರವರ ಬದುಕಿನಲ್ಲಿ ನಡೆದುಹೋಗಿತ್ತು. ಅದೆಂತಹ ಭಯಾನಕ ಘಟನೆ ಎಂದರೆ ಯಾವತ್ತು ಮರೆಯಲೂ ಸಾಧ್ಯವಿಲ್ಲ. ಇವರ ಜೀವವನ್ನು ಉಳಿಸಲು ಮತ್ತೊಬ್ಬರು ತಮ್ಮ ಜೀವನವನ್ನೇ ಪಣಕ್ಕಿಡಬೇಕಾದ ಸಂದರ್ಭವೊಂದು ಬಂದಿತ್ತು. ಅದು 1970ರ ಕಾಲಘಟ್ಟದಲ್ಲಿ ನಡೆದಂತಹ ಘಟನೆಯದು. ಆಗ ಇಸ್ರೋನ ಫೇ ಲಫಡ್ ತಯಾರಿ ಪ್ರಯೋಗಾಲಯದಲ್ಲಿ ಡಾ. ಕಲಾಂ ರವರು ಕೆಲಸ ಮಾಡುತ್ತಿದ್ದರು. ಅದು ಅತ್ಯಂತ ಅಪಾಯಕಾರಿಯಾದ ಸೋಡಿಯಂ ಹಾಗೂ ಥಮರ್ೈಟ್ ಮಿಶ್ರಣವನ್ನು ರಾಕೆಟ್ನ ಇಂಧನ ಕೋಶದಲ್ಲಿ ದೂರ ನಿಯಂತ್ರಣದ ಮೂಲಕ ಅದುಮಿ ತುಂಬಿಸುವ ಕೆಲಸ. ಈ ಕೇಂದ್ರವು ಸಮುದ್ರ ತೀರದಲ್ಲಿರುವುದರಿಂದ ಅಲ್ಲಿ ಹೆಚ್ಚು ಸೆಖೆ ಇತ್ತು. ಆ ಸಮಯದಲ್ಲಾಗಲೆ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಕಲಾಂ ರವರು ಕಷ್ಟಪಟ್ಟು ಏಕಾಗ್ರತೆಯಿಂದ ಕೆಲಸ ಮಾಡುತ್ತಿದ್ದರು. ಬಿಸಿಲಿನ ತಾಪ ಹೆಚ್ಚಾದರೂ ಆ ಕಡೆಗೆ ಕಿಂಚಿತ್ತು ಗಮನ ಹರಿಸದೇ ಕಾರ್ಯದಲ್ಲಿ ಮಗ್ನರಾಗಿದ್ದರು. ಇಂಧನ ಮಿಶ್ರಣವನ್ನು ಸತತ ಆರು ಬಾರಿ ತುಂಬಿಸಿದ ಮೇಲೆ ಆ ಕೆಲಸ ಸಮರ್ಪಕವಾಗಿ ನಡೆದಿದೆಯೇ ಎನ್ನುವುದನ್ನು ನೋಡಲು ಪೇ ಲೋಡ್ ಕೊಠಡಿಯೊಳಗೆ ಹೋಗಿ ಪ್ರತ್ಯಕ್ಷವಾಗಿ ನೋಡಲು ಕಲಾಂ ರವರು ಬಂದುಬಿಟ್ಟರು. ದುರಾದೃಷ್ಟವೆಂದರೆ ಅದರಲ್ಲೂ ಆ ಸಮಯದಲ್ಲಿ ಶುದ್ಧವಾದ ಸೋಡಿಯಂ ನೀರಿನ ಸಂಪರ್ಕಕ್ಕೆ ಬಂದರೆ ಅಪಾಯಕಾರಿ ಅವಘಡವೊಂದು ಸಂಭವಿಸಬಹುದೆಂಬ ವಿಜ್ಞಾನದ ಮೂಲಭೂತ ವಿಷಯವನ್ನು ಕಲಾಂರು ಮರೆತುಬಿಟ್ಟಿದ್ದರೇನೋ! ಡಾ.ಕಲಾಂರ ಹಣೆಯಿಂದ ಬಂದ ಒಂದು ಬೆವರಿನ ಹನಿ ಆ ಮಿಶ್ರಣಕ್ಕೆ ಬಿದ್ದ ಮರುಕ್ಷಣವೇ ಬಲವಾದ ಸ್ಫೋಟವೊಂದು ಸಂಭವಿಸಿಬಿಟ್ಟಿತು. ಕಲಾಂರು ಆಗ ಹಿಂದಕ್ಕೆ ಸರಿದು ಬಿದ್ದುಬಿಟ್ಟರು. ಆ ಭಯಂಕರ ಸ್ಫೋಟಕ್ಕೆ ಇಡೀ ಕೊಠಡಿಗೆ ಕೊಠಡಿಯೇ ನಲುಗಿ ಹೋಗಿ ಬೆಂಕಿ ವ್ಯಾಪಕವಾಗಿ ಹರಡಲಾರಂಭಿಸಿತು. ಕಲಾಂರವರಿಗೆ ಕೈಕಾಲು ಆಡಲಿಲ್ಲ! ಇಡೀ ಪ್ರಯೋಗ ಶಾಲೆಯೇ ಅಗ್ನಿ ಪರ್ವತವಾಗಿ ದಹಸುತ್ತಿರುವುದನ್ನು ನೋಡಲಾರದೇ ನೋವಿನಿಂದ ಅವರ ಕಣ್ಣುಗಳು ಮುಚ್ಚಿಬಿಟ್ಟವು. ಆಗ ಕಲಾಂ ರವರಿಗೆ ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಕೊಠಡಿಯ ಡೋರಿನ ಬದಿಯಲ್ಲಿ ಬೆಂಕಿ ದಹಿಸುತ್ತ ಮುಂದೆ ಬರುತ್ತಿದೆ, ಕಲಾಂರಿಗೆ ಹೊರಗಡೆ ಪಾರಾಗಲು ಎಲ್ಲಿಯೂ ದಾರಿ ಇಲ್ಲ. ಡೋರ್ ಎದುರುಗಡೆ ಕಿಟಕಿ ಇದೆ. ಅಲ್ಲಿಂದ ಹೊರಹೋಗಲೂ ಸಾಧ್ಯವಾಗದಂತಹ ಸ್ಥಿತಿ, ಅಲ್ಲಿಂದ ಇನ್ನೂರು ಮೀಟರ್ ದೂರದ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಲಾಂರ ಸ್ನೇಹಿತ ಡಾ. ಸುಧಾಕರ ಈ ದೃಶ್ಯವನ್ನು ಕಂಡೊಡನೆ ವೇಗವಾಗಿ ಆ ಬೆಂಕಿಯಲ್ಲಿಯೇ ಪ್ರವೇಶಿಸಿದರು ನಂತರ ಪ್ರಯೋಗಾಲಯದ ಗಾಜಿನ ಕಿಟಕಿಯನ್ನು ಮುಷ್ಠಿ ಕಟ್ಟಿ ಜೋರಾಗಿ ಒಡೆದರು. ಒಂದೆರಡು ಹೊಡೆತಗಳಲ್ಲಿ ಸರಳುಗಳಲ್ಲಿದ ಕಿಟಕಿ ಹೊರಗಿನ ಪ್ರಪಂಚವನ್ನು ತೋರಿಸಿತು. ಒಂದು ಕ್ಷಣವೂ ತಡಮಾಡದೇ ಸುಧಾಕರರು ಕೆಳಗೆ ಬಿದ್ದಿದ್ದ ಕಲಾಂರನ್ನು ಕೈಹಿಡಿದು ಮೇಲೆಬ್ಬಿಸಿ ಆ ಕಿಟಕಿಯ ಮೂಲಕ ಹೊರಗಡೆ ಜಿಗಿದರು. ಒಂದೆರಡು ನಿಮಿಷ ತಡವಾಗಿದ್ದರೆ ಬೆಂಕಿಗೆ ಆಹುತಿಯಾಗುವುದು ಪಕ್ಕಾ ಆಗಿತ್ತು. ಕಲಾಂರಿಗಿಂತ ಹೆಚ್ಚು ಸುಧಾಕರ್ ಮೈಮೇಲೆ ಸುಟ್ಟ ಗಾಯಗಳಾಗಿದ್ದವು. ಕಿಟಕಿಯನ್ನು ಬಲವಾಗಿ ಒಡೆದದ್ದರ ಪರಿಣಾಮವಾಗಿ ಡಾ.ಸುಧಾಕರರ ಮುಂಗೈ ಪೂರಾ ರಕ್ತದ ಮಡುವಾಗಿಬಿಟ್ಟಿತ್ತು. ಮೊದಲಿಗೆ ಸುಧಾಕರರು ಜಿಗಿದಿದಿದರೂ ಕಿಟಕಿಯ ಮೂಲಕ ಹೊರಗೆ ಹೋಗಬಹುದೆಂದು ಕಲಾಂರ ಅಂತರಂಗಕ್ಕೆ ಗೊತ್ತಿದ್ದರೂ ಅಂದು ನಡೆದ ಆಘಾತಕ್ಕೆ ಕಲಾಂರ ಹೊರಬರುವ ಯಾವ ಪ್ರಯತ್ನವನ್ನು ಮಾಡುತ್ತಿರಲಿಲ್ಲವೆನ್ನುವ ಸತ್ಯ ಮನಗಂಡಿದ್ದ ಸುಧಾಕರ್ ತಮ್ಮ ಪ್ರಾಣವನ್ನು ಲೆಕ್ಕಿಸದೇ ಮೊದಲು ಕಲಾಂರನ್ನು ಹೊರಗೆ ದಬ್ಬಿ ನಂತರವಷ್ಟೇ ತಾವು ಹೊರಬಂದಿದ್ದರು. ಈ ಘಟನೆ ಸಂಭವಿಸಿದ ಐದಾರು ದಿನಗಳ ನಂತರ ಡಾ. ಕಲಾಂ ಸರ್ ಪತ್ರಿಕೆಗೆ ಹೇಳಿಕೆಯೊಂದನ್ನು ಕೊಟ್ಟಿದ್ದರು. "ನನ್ನ ಜೀವ ಉಳಿಸಲು ಬೇರೊಬ್ಬರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ನನ್ನನ್ನು ಬದುಕಿಸಿದರೆಂಬ ಸತ್ಯವು ನಮ್ಮಲ್ಲಿ ವಿನಮ್ರತೆಯನ್ನು ಉಂಟು ಮಾಡುತ್ತದೆ. ಮೊದಲ ಬಾರಿಗೆ ನಾನು ಮೃತ್ಯುವಿನ ಬಾಯಿಂದ ಬದುಕಿ ಬಂದಿದ್ದೆ. ಅವರಿಗೆ ನಾನು ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಕಡಿಮೆಯೇ. ಭಯಾನಕ ಕಷ್ಟದ ಸಂದರ್ಭದಲ್ಲಿ ಅವರು ದೇವರಂತೆ ಬಂದು ನನ್ನನ್ನು ಕಾಪಾಡಿಬಿಟ್ಟರು." ಆ ಮುಗ್ಧ ಮನಸ್ಸಿನ ವಿಜ್ಞಾನಿಯ ಈ ಮಾತುಗಳನ್ನು ಕೇಳುತ್ತಿದ್ದ. ಡಾ.ಸುಧಾಕರರು ಅತ್ಯಂತ ಭಾವುಕರಾಗಿ ನಿಂತುಬಿಟ್ಟರು. ಅವರಿಗೆ ಮಾತುಗಳೇ ಹೊರಡಲಿಲ್ಲ. ಈ ಒಂದು ಘಟನಯ ನನಪುೆ ಡಾ.ಕಲಾಂ ರವರ ಬದುಕಿನುದ್ದಕ್ಕೂ ಮಾಸದಂತೆ ಉಳಿದುಬಿಟ್ಟಿತು. ತದನಂತರ ಕಲಾಂರವರ ಪ್ರಯತ್ನದ ಕಾರ್ಯ ಸಾಧನೆಗಳನ್ನು ಇಡೀ ಭಾರತ ಸ್ಮರಿಸುವಂತಹದ್ದು. 1999 ರಲ್ಲಿ ನಡೆದ ಭಾರತದ ಪೋಖ್ರಾನ-2 ಪರಮಾಣು ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಲಾಂರು ಅಗ್ರಗಣ್ಯ ವ್ಯಕ್ತಿತ್ವವನ್ನು ಗಳಿಸಿದರು.
ವಿಕ್ರಂ ಸಾರಾಬಾಯಿಯವರ ಸಾವಿನ ನಂತರ ಇಸ್ರೋಗೆ ಡಾ.ಸತೀಶ ಧವನರು ಅಧ್ಯಕ್ಷರಾದರು. ಡಾ. ಸತೀಶ ಧವನರು ಡಾ.ಕಲಾಂರಿಗೆ ಅತ್ಯಂತ ಪ್ರೇರಣಾದಾಯಕ ವ್ಯಕ್ತಿ. ಹಲವಾರು ಬಾರಿ ಡಾ.ಕಲಾಂರ ಪ್ರಯತ್ನಗಳು ವಿಫಲವಾದಾಗಲೆಲ್ಲೆ ಕಲಾಂರಿಗೆ ಧೈರ್ಯ ತುಂಬಿ ಆ ಸೋಲುಗಳನ್ನೆಲ್ಲ ಡಾ.ಸತೀಶ ಧವನರು ತಾವು ಸ್ವೀಕರಿಸಿ, ಜಯದ ಯಶಸ್ಸಿನ ಸಂದರ್ಭಗಳು ಬಂದಾಗ ಅವುಗಳನ್ನು ಸಂಸ್ಥೆಯ ಸದಸ್ಯರುಗಳಿಗೆ ಬಿಟ್ಟುಕೊಡುತ್ತಿದ್ದರು. ಕಲಾಂರ ಹಾಗೂ ಹಲವು ವಿಜ್ಞಾನಿಗಳ ಪ್ರಯತ್ನಗಳು ವಿಫಲವಾದಾಗ ಮಾಧ್ಯಮಗಳಿಗೆ ಮುಖ ತೋರಿಸಲು ವಿಜ್ಞಾನಿಗಳು ಮುಜುಗರಪಟ್ಟುಕೊಳ್ಳುತ್ತಿರುವಾಗ ಆ ಹೊಣೆಗಳನ್ನು ಅದೆಷ್ಟೋ ಬಾರಿ ಸತೀಶ ಧವನರು ತಮ್ಮ ಮೇಲೆ ಹಾಕಿಕೊಂಡು ಮಾಧ್ಯಮದ ಸಂದರ್ಶನದಲ್ಲಿ ತಾವೇ ಭಾಗಿಯಾಗಿದ್ದಾರೆ. ತಮ್ಮ ಗೆಲುವುಗಳನ್ನು ಉಳಿದ ವಿಜ್ಞಾನಿಗಳಿಗೆ ಬಿಟ್ಟುಕೊಟ್ಟಿದ್ದರು. ಇಂತಹ ಹಲವಾರು ಸೋಲುಗಳ ಮಧ್ಯೆ ಜಯ ಸಾಧಿಸಿ ಮಾನವೀಯತೆಗಿಂತ ತನ್ನ ಯಾವ ಹುದ್ದೆಯೂ ದೊಡ್ಡದಲ್ಲವೆಂದು ಅರಿತಿದ್ದ ಡಾ.ಕಲಾಂರು ರಾಷ್ಟ್ರಾಧ್ಯಕ್ಷರಾಗಿದ್ದಾಗಲೂ ಮಕ್ಕಳ ಜೊತೆ ಮಗುವಾಗಿ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಅತ್ಯಂತ ಸರಳ ರೀತಿಯಲ್ಲಿ ಧರ್ಮದಿಂದ ಬದುಕಿ ಮಹಾನ್ ಸಾಧನೆ ಮಾಡಿದರು.
ಹಾಗಾಗಿ ಧರ್ಮದಿಂದ ಬದುಕುವವರನ್ನು ದೇವರು ಹೇಗಾದರೂ ರಕ್ಷಣೆ ಮಾಡುತ್ತಾನೆ ಎಂದು ಹೇಳಲು ಕಲಾಂರ ಜೀವನದಲ್ಲಿ ನಡೆದಂತಹ ಈ ಘಟನೆಗಿಂತ ಉತ್ತಮ ಉದಾಹರಣೆ ಬೇರೆ ಇಲ್ಲ. ಅವತ್ತೇನಾದರೂ ಡಾ. ಸುಧಾಕರರವರು ಪ್ರಯತ್ನ ಮಾಡಿ ಕಲಾಂರ ಕೊಠಡಿಯೊಳಗೆ ಬರದೇ ಹೋಗಿದ್ದರೆ ಇಂದು ನಮಗ್ಯಾರಿಗೂ ಡಾ.ಕಲಾಂರು ಪರಿಚಯ ಇರುತ್ತಿರಲಿಲ್ಲವೆನೋ ಅನ್ನಿಸುತ್ತದೆ. ನಾವು ನಿವೆಲ್ಲ ಅನೇಕ ಬಾರಿ ದೇವರಿಲ್ಲ ದೇವರಿಲ್ಲ ಎಂದು ವಾದಿಸುತ್ತಲೇ ಇರುತ್ತೇವೆ. ಆದರೆ ಆತ ಯಾವುದೋ ರೂಪದಲ್ಲಿ ಕಾಣಿಸಿಕೊಂಡು ಹಲವು ಬಾರಿ ತನ್ನ ಲೀಲೆಗಳನ್ನು ತೋರಿಸಿಯೇ ಬಿಟ್ಟಿರುತ್ತಾನೆ....