ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಅದರ ಲಾಭವನ್ನು ಪಡೆದುಕೊಳ್ಳಲು ಹಲವು ಮನಸುಗಳು ಕಾಯುತ್ತಿವೆ...
ಅದು 1993ರ ಕಾಲಾವಧಿ, ಸೂಡಾನ್ ಎನ್ನುವ ದೇಶ ಅಕ್ಷರಶಃ ನಲುಗಿ ಹೋಗಿತ್ತು. ಭೀಕರ ಬರಗಾಲದಿಂದಾಗಿ ಅಲ್ಲಿನ ಜನ ನೆಲೆ ಕಳೆದುಕೊಂಡು ಅತಂತ್ರರಾಗಿ ಹೋಗಿದ್ದರು. ಹಸಿವು ಬಾಯಾರಿಕೆಗಳ ಹೊಡೆತಕ್ಕೆ ಹಾದಿ ಬೀದಿಯಲ್ಲಿ ಜನಗಳ ಹೆಣಗಳುರುಳುತ್ತಿದ್ದವು. ತಿನ್ನಲು ಕೂಳಿಲ್ಲ, ಕುಡಿಯಲು ನೀರಿಲ್ಲ. ಜೀವವೇ ಉಳಿಯವುದು ಕಷ್ಟಕರವಾದ ಸಂದರ್ಭದಲ್ಲಿ ಇನ್ನು ಜೀವನದ ಮಾತಂತೂ ಕೇಳಲೇ ಬೇಡಿ. ಆ ಹೃದಯ ವಿದ್ರಾವಕ ಸ್ಥಿತಿಯನ್ನು ಕಂಡಾಗ ನರಕ ಎನ್ನುವುದು ಏನಾದರು ಇದ್ದರೆ ಅದಕ್ಕೆ ಸುಡಾನ್ ಸ್ಪಧರ್ೆ ಒಡ್ಡುತ್ತಿತ್ತೇನೋ ಎನ್ನುವ ಹಾಗಿತ್ತು. ಒಂದೇ ಮಾತಲ್ಲಿ ಹೇಳುವುದಾದರೇ ಅಲ್ಲಿನ ಒಂದೊಂದು ಘಟನೆಗಳು ಇಡೀ ಮನುಕುಲವನ್ನೇ ತಲ್ಲಣಗೊಳಿಸುವುದು ಮಾತ್ರವಲ್ಲ; ಕಣ್ಣೀರಲ್ಲಿ ಕೊಚ್ಚಿ ಹೋಗುವಂತೆ ಮಾಡುತ್ತಿದ್ದವು. ಸೂಡಾನ್ನಲ್ಲಿನ ಮಕ್ಕಳಾದಿಯಾಗಿ ಎಲ್ಲರೂ ಹಸಿವಿನಿಂದ ಬಳಲಿ ಬೆಂಡಾಗಿದ್ದರು. ತುತ್ತು ಅನ್ನಕ್ಕಾಗಿ ಕೈಚಾಚುವ ದೃಶ್ಯವಂತೂ ಕರುಳನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಅಲ್ಲಿನ ಜನರ ಹಸಿವನ್ನು ನೀಗಿಸುವುದಕ್ಕಾಗಿ ವಿಶ್ವ ಸಂಸ್ಥೆಯು ಅನ್ನದ ಕೇಂದ್ರಗಳನ್ನು ತೆರೆದು, ಹಸಿದವ ನೆರವಿಗೆ ಮುಂದಾಗಿತ್ತು. ಈ ಸಂದರ್ಭದಲ್ಲಿ ನಡೆದ ಒಂದು ಘಟನೆ ಇಡೀ ಮನುಕುಲವನ್ನೇ ನೋವಲ್ಲಿ ಮುಳುಗಿಸಿ, ಸಂಕಟದಲ್ಲಿ ತೇಲಿಸಿದರೆ, ಇದಕ್ಕೆ ಸಾಕ್ಷಿಯಾಗಿದ್ದ ಆ ವ್ಯಕ್ತಿಯ ಪ್ರಾಣ ಪಕ್ಷಿಯನ್ನೇ ಹಾರಿಸಿ ಬಿಟ್ಟಿತು.
ಆಹಾರವಿಲ್ಲದೆ ಬಸವಳಿದು, ಅನ್ನಕ್ಕಾಗಿ ಅಂಗಲಾಚುತ್ತ, ಸೂಡಾನ್ ಬೀದಿಯಲ್ಲೊಂದು ಪುಟ್ಟ ಮಗು ತೆವಳುತ್ತ ವಿಶ್ವ ಸಂಸ್ಥೆ ಹಾಕಿದ್ದ ಅನ್ನ ಛತ್ರದ ಕಡೆಗೆ ಹೊರಟಿತ್ತು. ಕಾಲು ಹೊಸೆದುಕೊಂಡು ಸಾಗುತ್ತಿದ್ದ ಮಗು ನಿಶ್ಯಕ್ತಿಯಿಂದ ತಲೆಯನ್ನು ನೆಲಕ್ಕೆ ತಾಗಿಸಿ ಸಂಕಟ ಅನುಭವಿಸುತ್ತಿತ್ತು. ಆ ಮಗು ತೆವಳುವ ರೀತಿಯನ್ನು ನೋಡಿದರೆ ಆ ಛತ್ರವನ್ನು ತಲುಪುವುದು ಕೂಡ ಅನುಮಾನವಾಗಿತ್ತು. ಇದೇ ಸಮಯಕ್ಕೆ ಸರಿಯಾಗಿ ಆ ಮಗುವಿನ ಬಳಿಯಲ್ಲಿಯೇ ಹದ್ದೊಂದು ಹೊಂಚು ಹಾಕಿ ಕುಳಿತು, ಜೀವವಿರುವ ಅಸ್ಥಿಪಂಜರದಂತಿದ್ದ ಆ ಮಗು ಸಾಯುತ್ತದೆ. ತನಗೆ ತಿನ್ನಲು ಆಹಾರ ದೊರಕುತ್ತದೆ ಎಂದು ಎದುರು ನೋಡುತ್ತ ಕಾದಿತ್ತು. ಸುಮಾರು 20 ನಿಮಿಷಗಳ ಕಾಲ ಮಗು ಹಾಗೂ ಹದ್ದುಗಳು ತನ್ನ ಜೀವಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸುತ್ತಿದ್ದವು. ಇಂಥ ದೃಶ್ಯವನ್ನು ದಕ್ಷಿಣಾಫ್ರಿಕಾದ ಖ್ಯಾತ ಪತ್ರಕರ್ತ ಕೆವಿನ್ ಕಾರ್ಟರ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದರು. ನಂತರದ ದಿನಗಳಲ್ಲಿ "ದ ವಲ್ಚರ್ ಆಂಡ್ ದ ಲಿಟಲ್ ಗಲರ್್" ಎನ್ನುವ ವಿಶೇಷ ಶೀಷರ್ಿಕೆ ಹೆಸರಿನಲ್ಲಿ ಅದನ್ನು ಪ್ರಕಟಣೆ ಮಾಡಿದನು. ತಾನು ತೆಗೆದ ಆ ಚಿತ್ರದಿಂದ ಬಹಳಷ್ಟು ಹೆಮ್ಮೆ ಪಟ್ಟುಕೊಂಡನು. ಆತ ತೆಗೆದ ಆ ಚಿತ್ರ ಇಡೀ ಮನುಕುಲವನ್ನೇ ಅಣಕಿಸುವಂತ್ತಿತ್ತು.
ಆ ಚಿತ್ರವನ್ನು ಕಂಡ ಜಗತ್ತು ಆಗಿನ ಸುಡಾನ್ ದೇಶದ ನಿಜವಾದ ಸ್ಥಿತಿಗೆ ಮಮ್ಮಲ ಮರುಗಿ ಸಹಾಯ ಹಸ್ತ ನೀಡಲು ಮುಂದಾದವು. ಅಲ್ಲಿನ ಆ ವಾಸ್ತವ ಸ್ಥಿತಿಯನ್ನು ಜಗತ್ತಿನೆದುರು ಬಿಚ್ಚಿಡುವಲ್ಲಿ ಯಶಸ್ವಿಯಾದ ಕೆವಿನ್ ಕಾರ್ಟರ್ ತೆಗೆದಂತ ಆ ಚಿತ್ರಕ್ಕೆ ಪತ್ರಿಕೋದ್ಯಮ ಜಗತ್ತಿನ ಶ್ರೇಷ್ಠ 'ಪುಲಿಟ್ಜ್ರ್ ಪ್ರಶಸ್ತಿ ದೊರೆಯಿತು. ಆದರೆ ಈ ಪ್ರಶಸ್ತಿಯನ್ನು ಪಡೆದ ನಂತರ ನಡೆದ ಘಟನೆ ಮಾತ್ರ ನಿಜಕ್ಕೂ ಹೃದಯ ತಟ್ಟುತ್ತದೆ. ಇಷ್ಟು ದೊಡ್ಡ ಪ್ರಶಸ್ತಿಯನ್ನು ಪಡೆದ ಕಾರ್ಟರ್ಗೆ ಅಭಿನಂದನೆ ಸಲ್ಲಿಸಲು ಪೋನ್ ಕರೆಗಳು ಬರಲು ಆರಂಭವಾದವು. ಒಬ್ಬಬ್ಬರು ಅಭಿಮಾನದಿಂದ ಅಭಿನಂದಿಸಿದರು. ಇದರ ಮಧ್ಯದಲ್ಲಿ ಬಂದ ಒಂದು ಕರೆಯು ಕೆವಿನ್ ಕಾರ್ಟರ್ ಅವರನ್ನು ಕುರಿತು "ಸರ್..! ಅಂದು ನೀವು ಸುಡಾನ್ನಲ್ಲಿ ಆ ಮಗುವಿನ ಚಿತ್ರ ತೆಗೆದಿರಲ್ಲ, ಆದಾದ ಮೇಲೆ ಮಗು ಏನಾಯಿತು? ತನಗೆ ಬೇಕಾದ ಆಹಾರವನ್ನು ಪಡೆದುಕೊಂಡಿತೆ? ಇಲ್ಲ ಹದ್ದಿನ ಬಾಯಿಗೆ ಆಹಾರವಾಯಿತೆ?" ಎಂದು ಕೇಳುತ್ತಲೇ, "ಇಲ್ಲ, ನಂತರ ಆ ಮಗು ಏನಾಯಿತು ಎನ್ನುವುದು ನನಗೂ ಗೊತ್ತಿಲ್ಲ. ನನ್ನ ವಿಮಾನ ಹೊರಡುವ ಸಮಯವಾಗುತ್ತಲಿದ್ದ ಕಾರಣ ನಾನು ಅಲ್ಲಿಂದ ಬೇಗ ಬರಬೇಕಾಯಿತು" ಎಂದು ಕೇವಿನ್ ಕಾರ್ಟರ್ ಉತ್ತರ ನೀಡಿದ. ಅತ್ತ ಕಡೆಯಿಂದ ಬಂದ ಧ್ವನಿ "ಓಹ್ ಹಾಗಾದರೆ ಅಲ್ಲಿ ಇದ್ದದ್ದು ಒಂದು ಹದ್ದಲ್ಲ, ಬದಲಿಗೆ ಎರಡು ಹದ್ದುಗಳಿದ್ದವು. ಒಂದು ಹದ್ದು ಹೊಂಚು ಹಾಕಿ ಕುಳಿತಿತ್ತು, ಇನ್ನೊಂದು ಹದ್ದು ಕೈಯಲ್ಲಿ ಕ್ಯಾಮರಾ ಹಿಡಿದು ಫೋಟೊ ತೆಗೆಯುತ್ತಲಿತ್ತು" ಎಂದು ಹೇಳಿದ ಆ ಕರೆ ಅಲ್ಲಿಗೆ ಕಟ್ಟಾಯಿತು. ಇದಾದ ಮೂರು ತಿಂಗಳಲ್ಲಿ ಖಿನ್ನತೆಗೆ ಒಳಗಾದ 33 ವರ್ಷದ ಕೇವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದನು.
ನನಡೆದಂತ ಈ ಘಟನೆಯನ್ನು ಎಳೆ ಎಳೆಯಾಗಿ ಬಿಡಿಸುತ್ತ ಹೋದಂತೆ ಇಲ್ಲಿ ಎಲ್ಲವೂ ಸ್ವಾರ್ಥದಿಂದ ಕುಡಿದೆ. ಜೀವಕ್ಕಿಂತ ಸ್ವಾರ್ಥ ದೊಡ್ಡದು ಎನ್ನುವ ಸಂದೇಶವನ್ನು ಮನನ ಮಾಡುತ್ತದೆ. ಹದ್ದು ತಾನು ಬದುಕುವುದಕ್ಕಾಗಿ ಮಗುವಿನ ಸಾವನ್ನು ಬಯಸುತ್ತಿತ್ತು. ಮಗು ತಾನು ಉಳಿಯುವುದಕ್ಕಾಗಿ ಅನ್ನದ ಸಹಾಯವನ್ನು ಬೇಡುತ್ತಿತ್ತು. ಈ ಸಂದರ್ಭದಲ್ಲಿ ಬಂದ ಕೇವಿನ್ ಕಾರ್ಟರ್ ಕೆಲವೇ ಮೀಟರ್ಗಳ ಅಂತರದಲ್ಲಿ ಅನ್ನದ ಛತ್ರಕ್ಕೆ ಆ ಮಗುವನ್ನು ಹೊತ್ತೊಯ್ದು ಅನ್ನ ಕೊಡಿಸುವ ಬದಲು ಅದನ್ನು ಕ್ಯಾಮಾರಾದಲ್ಲಿ ಸೆರೆ ಹಿಡಿದು ಹೆಸರು ಮಾಡಲು ಮುಂದಾದನು. ಸಾಲದ್ದಕ್ಕೆ ಚಿತ್ರವನ್ನು ಕ್ಲಿಕ್ಕಿಸಿ ಹೋದ ಮೇಲೆ ಆ ಮಗು ಏನಾಗಿರಬಹುದು ಎನ್ನುವುದರ ಕುರಿತು ಕನಿಷ್ಟ ಆಲೋಚನೆಯನ್ನು ಮಾಡಲಿಲ್ಲ. ಆ ಕಾರಣಕ್ಕಾಗಿ ಅಲ್ಲಿ ಎರಡು ಹದ್ದುಗಳು ಇದ್ದವು ಎಂದು ಆತ ಹೇಳಿದ್ದು. ಇದರಿಂದ ಮನನೊಂದ ಕೆವಿನ್ ಸಾವಿನ ಮನೆಯ ಕಡೆಗೆ ಸವಾರಿ ಮಾಡಿದನು.
ಈ ಕಥೆಯನ್ನು ಇಲ್ಲೇಕೆ ಹೇಳುತ್ತಿದ್ದೆನೆ ಎನ್ನುವ ಅನುಮಾನವಾಗುತ್ತಿದೆಯೇ? ಖಂಡಿತ ಆಗಲೇ ಬೇಕು. ಏಕೆಂದರೆ ನಾವುಗಳು ಕೂಡ ಹಾಗೆ ಇದ್ದೇವೆ. ಮಗುವಿನ ಸಾವನ್ನು ಬಯಸುತ್ತಿರುವ ಹದ್ದಿನ ಹಾಗೆ, ಅಥವಾ ಮಗುವಿನ ಸಂಕಟಕ್ಕಿಂತ ತಾನು ಹೆಸರು ಮಾಡಲು ಹವಣಿಸುವ ಕೆವಿನ್ ಕಾರ್ಟರ್ ಹಾಗೆ. ಎಲ್ಲರೂ ಸ್ವಾಥರ್ಿಗಳು. ಜಗತ್ತು ಏನಾದರೂ ಆಗಲಿ ನನಗೆ ಬೇಕಿಲ್ಲ. ನನ್ನ ಕೆಲಸ ಆದರೆ ಸಾಕು ಎನ್ನುವ ಗುಣದವರು. ಅದಕ್ಕಾಗಿಯೇ ನಾನಿಲ್ಲಿ ಕೆವಿನ್ ಕಾರ್ಟರ್ನ ಛಾಯಾಚಿತ್ರದ ಜೊತೆಯಲ್ಲಿ ನಮ್ಮ ಬದುಕನ್ನು ಹೊಲಿಸಿ ನೋಡಿದ್ದು. ಆದರೆ ಆ ಘಟನೆ ನಡೆದದ್ದೂ ಸುಡಾನ್ ದೇಶದಲ್ಲಿ ಆದರೆ ಪ್ರಸ್ತುತ ಅದಕ್ಕೆ ಹೋಲಿಕೆಯಾಗುತ್ತಿರುವ ಘಟನೆಗಳು ನಡೆಯುತ್ತಿರುವುದು ಭಾರತದಲ್ಲಿ, ಅದರಲ್ಲೂ ಕನರ್ಾಟಕದಲ್ಲಿ. ಆದರೆ ಇಲ್ಲಿ ಹಸಿದ ಮಗು ಜನಸಾಮಾನ್ಯನಾದರೆ ಅದರ ಸಾವನ್ನು ಎದುರು ನೋಡುತ್ತಿರುವ ಹದ್ದು ಮತ್ತು ಅಲ್ಲಿನ ಪರಸ್ಥಿತಿಯನ್ನು ಲಾಭಕ್ಕಾಗಿ ಬಳಸಿಕೊಳ್ಳುವವರು ಯಾರೆಂಬುದು ಮಾತ್ರ ಕಣ್ಣೆದುರಿಗೆ ಕಾಣುತ್ತಿದ್ದರು ಜಾಣ ಕುರುಡತನ ಪ್ರದಶರ್ಿಸುವುದು ಅನಿವಾರ್ಯ ಎನ್ನುವಂತಾಗಿದೆ. ಜಗತ್ತಿಗೆ ಕೊರೊನಾ ವಕ್ಕರಿಸಿ ಕಂಗೆಡಿಸುತ್ತಿದ್ದಾಗ ನಾವೆಲ್ಲ ಲಾಕ್ಡೌನ್ ಮೊರೆ ಹೊಗಿ ಮನೆ ಸೇರಿಕೊಂಡು ಬೀಗ ಹಾಕಿಕೊಂಡು ಕುಳಿತೆವು. ಕಡಿಮೆ ಇದ್ದ ಸಮಯದಲ್ಲಿ ಸುಮ್ಮನಿದ್ದ ನಾವುಗಳು ಅದು ಅಬ್ಬರಿಸಿ ಬೊಬ್ಬಿರಿಯುವ ಹೊತ್ತಿಗೆ ಎಲ್ಲರೂ ಮನೆಯಿಂದ ಹೊರಬಂದು ನಿತ್ಯ ಕಾಯಕದಲ್ಲಿ ತೊಡಗಿ ಕೊಂಡಿದ್ದೇವೆ. ಹಾಗೆಂದು ಈ ಸಮಸ್ಯೆಗೆ ಲಾಕ್ಡೌನ್ ಮಾತ್ರ ಪರಿಹಾರ ಎನ್ನುವುದು ನನ್ನ ಅಭಿಪ್ರಾಯವಲ್ಲ, ಬದಲಿಗೆ ವಾಸ್ತವದ ಸ್ಥಿತಿಯನ್ನು ವಿವರಿಸುತ್ತಿದ್ದೇನೆ ಅಷ್ಟೆ. ಈಗ ಕೊರೊನಾದ ಅಟ್ಟಹಾಸ ಮುಗಿಲು ಮುಟ್ಟಿದೆ. ಅದರ ಹೊಡೆತಕ್ಕೆ ತತ್ತರಿಸುತ್ತಿರುವ ಜನಗಳ ಆಕ್ರಂದನ ಅದನ್ನು ಮೀರಿ ಸಾಗುತ್ತಲಿದೆ. ಇದರ ಮಧ್ಯದಲ್ಲಿ ಜನರ ನೋವನ್ನು ಲೆಕ್ಕಿಸದೇ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಜನ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿ ವರ್ಗವು ಮುಂದಾಗುತ್ತಿರುವುದನ್ನು ನೋಡಿದಾಗ ಅಂದು ಕೆವಿನ್ ಕಾರ್ಟರ ಮಾಡಿದ ಎಡವಟ್ಟು ಹಾಗೂ ಅಲ್ಲಿ ನಡೆದ ಘಟನೆ ನನ್ನ ಕಣ್ಣೆದುರ ಕಟ್ಟುತ್ತಿದೆ. ಆ ಸಮಯದಲ್ಲಿ ತನ್ನ ಸ್ವಾರ್ಥ ಸಾಧನೆಯನ್ನು ಬದಿಗಿಟ್ಟು ಅ ಮಗುವನ್ನು ಹದ್ದಿನಿಂದ ರಕ್ಷಿಸಿ, ಒಂದು ಹಿಡಿ ಆಹಾರವನ್ನು ಕೊಡಿಸಿದ್ದರೆ ಆ ಮಗು ಬದುಕುತ್ತಿತ್ತು. ಆದರೆ ಕಾರ್ಟರ್ ಅದನ್ನು ಮಾಡದೇ ಪೋಟೋ ಕ್ಲಿಕ್ಕಿಸುವುದರಲ್ಲಿ ಮಾತ್ರ ತೊಡಗಿಕೊಂಡ. ಹಾಗೆ ಇಂದು ಕೂಡ ನೋವಲ್ಲಿ ನರಳುತ್ತಿರುವವರ ಮೊರೆ ಕೇಳದೆ ಅಧಿಕಾರ ಮಾಡುವುದರಲ್ಲಿಯೇ ತೊಡಗಿರುವುದು ಮತ್ತದೆ ಘಟನೆಯನ್ನು ನೆನಪು ಮಾಡಿ ಕೊಡುತ್ತಲಿದೆ.
ಬೆಂಗಳೂರು ಮಹಾನಗರ ಇಂದು ಅಕ್ಷರಶಃ ಕೊರೊನಾದ ರಾಜಧಾನಿಯಾಗಿ ಗುರಿತಿಸಿಕೊಂಡಿದೆ. ಮನೆ ಮನೆಯನ್ನು ಹೊಕ್ಕ ಆ ಕಳ್ಳ ಕ್ರಿಮಿ ಜನ ಜೀವನವನ್ನು ಅಕ್ಷರಶಃ ನರಕ ಸದೃಶವಾಗಿಸಿದೆ. ದಿನಕ್ಕೆ ಸಾವೀರಾರು ಕೇಸುಗಳು ದಾಖಲಾಗುತ್ತಿವೆ. ಆದರೆ ಅವರ ನೋವನ್ನು ಆಲಿಸಬೇಕಾದವರೆ ರಾಜಕೀಯ ಮಾಡುವುದರಲ್ಲಿ ಬ್ಯೂಸಿ ಆಗಿದ್ದಾರೆ. ಎಚ್ಚರಿಸಬೇಕಾದ ವಿರೋಧ ಪಕ್ಷದವರು ಅದರ ಲಾಭವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಇನ್ನು ಇವರನ್ನು ನಂಬಿ ಕುಳಿತರೆ ಬದುಕುತ್ತೇವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎನ್ನುವ ಭಾವನೆಯಿಂದ ಬೆಂಗಳೂರಿಗರಲ್ಲಿ ಮನೆ ಮಾಡಿದೆ. ಆ ಕಾರಣದಿಂದಾಗಿಯೇ ಅಂದು ಬದುಕು ಕಟ್ಟಿಕೊಳ್ಳಲೆಂದು ಹಳ್ಳಿಯನ್ನು ತೊರೆದು ಬಂದವರೆಲ್ಲ ಇಂದು ಮರಳಿಗೂಡಿಗೆ ಎನ್ನುವಂತೆ ಹಳ್ಳಿಗಳ ಕಡೆಗೆ ಪಯಣ ಆರಂಭಿಸಿದ್ದಾರೆ. ಅದರ ಮೂಲಕ ಪಟ್ಟಣದಲ್ಲಿ ಹುಟ್ಟಿಕೊಂಡ ವ್ಯಾದಿಯನ್ನು ಹಳ್ಳಿಗೂ ಹಚ್ಚುತ್ತಿದ್ದಾರೆ. ಆದರೆ ಇದರ ಕುರಿತು ಮಾತನಾಡುವವರಾಗಲಿ, ಅವರ ನೋವಿಗೆ ಸ್ಪಂಧಿಸುವವರಾಗಲಿ ಯಾರೂ ಇಲ್ಲ. ಎಲ್ಲರೂ ಅಧಿಕಾರದ ದಾಹವನ್ನು ನೀಗಿಸಿ ಕೊಳ್ಳುವುದಕ್ಕಾಗಿ ಜನ ಸಾಮಾನ್ಯರ ಬದುಕನ್ನೇ ಕುಡಿಯುತ್ತಾರಾ ಎನ್ನಿಸುತ್ತಿದೆ. ಎಂತದೇ ಪರಸ್ಥಿತಿ ಬಂದರೂ ಅದನ್ನು ನಾವು ಎದುರಿಸಲು ಸಮರ್ಥರಾಗಿದ್ದೇವೆ. ಮತ್ತು ಎಲ್ಲ ರೀತಿಯಿಂದಲೂ ರೋಗಿಗಳನ್ನು ರಕ್ಷಿಸುವುದಕ್ಕೆ ಸನದ್ಧರಾಗಿದ್ದೇವೆ. ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಆಸ್ಪತ್ರೆಗಳನ್ನು, ಬೆಡ್ಗಳನ್ನು, ವೆಂಟಿಲೆಟರ್ಗಳನ್ನು ವ್ಯವಸ್ಥೆ ಮಾಡಿದ್ದೆವೆ ಎಂದು ಮಾಧ್ಯಮಗಳ ಮುಂದೆ ಗಂಟೆಗಟ್ಟಲೇ ಮಾತನಾಡುವ ಪ್ರತಿನಿಧಿಗಳ ಮಾತನ್ನು ಹೇಗೆ ನಂಬಬೇಕೋ ತಿಳಿಯುತ್ತಿಲ್ಲ. ದಿನಂಪ್ರತಿ ಬೆಡ್ ಸಿಗದೇ ಒದ್ದಾಡುವ ರೊಗಿಗಳನ್ನು ಕಂಡಾಗ ಸಂಕಟವಾಗುತ್ತದೆ. ಇದೇ ರೀತಿ ಮುಂದುವರಿದರೆ ನಮ್ಮ ಸರದಿಯು ಬಂದೇ ಬರುತ್ತದೆ ಏನೋ? ಎನ್ನುವ ಭಯ ನಮ್ಮನ್ನು ಆವರಿಸಿಕೋಳ್ಳುತ್ತದೆ. ಸಕರ್ಾರಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಿದರೆ, ಖಾಸಗಿ ಆಸ್ಪತ್ರೆಗಳೂ ಕೂಡ ಸಕರ್ಾರಿ ಆಸ್ಪತ್ರೆಯವರ ಮಾತನ್ನೇ ಪುನರ್ ಉಚ್ಛರಿಸುತ್ತಾರೆ.
ಮೂರು ಮೂರು ದಿನಗಳ ವರೆಗೂ ಆಸ್ಪತ್ರೆ ಆಸ್ಪತ್ರೆ ಅಲೆದು ಕೊನೆಗೆ ಮನೆಯಲ್ಲಿ ನರಳಿ ಪ್ರಾಣ ಬಿಡುತ್ತಿರುವ ಜನಗಳನ್ನು ಕಂಡಾಗ ನಮ್ಮನ್ನು ಕಾಪಾಡಲು ಯಾರು ಇಲ್ಲವಲ್ಲ ಎನ್ನುವ ನೋವು ಆವರಿಸದೇ ಇರಲಾರದು. ಅಂದು ಪ್ರಧಾನಿ ಹೇಳಿದರು ಎಂದು ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಶೆಂಖ ಊದಿ, ಶಿಳ್ಳೆ ಹೊಡೆದು ಕೊರೊನಾ ವಾರಿಯರ್ಸ್ಗಳ ಸೇವೆಗೆ ಕೃತಜ್ಞತೆ ಸಲ್ಲಿಸಿದೆವು. ಅದರ ಬೆನ್ನಲ್ಲೇ ಇಂದು ಕೃತಘ್ನರಾಗಿ ಜೀವನ ಸಾಗಿಸುತ್ತಿದ್ದೇವೆ ಎನ್ನುವುದಕ್ಕೆ ಮೊನ್ನೆ ಬೆಂಗಳೂರಲ್ಲಿ ಮೃತರಾದ ಕೊರೊನಾ ವಾರಿಯರ್ ಒಬ್ಬರ ಸಾವೇ ಸಾಕ್ಷಿಯಾಗುತ್ತದೆ. ಕೊರೊನಾ ವಾರಿಯರ್ ಎಂದು ಹೇಳಿ ಅವರಿಂದ ಸೇವೆ ಮಾಡಿಸಿಕೊಂಡ ಸಕರ್ಾರ ಇಂದು ಅದೇ ವಾರಿಯರ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಒದ್ದಾಡಿ 30ರ ಪ್ರಾಯದಲ್ಲಿಯೇ ಮರಣ ಹೊಂದಿರುವುದನ್ನು ನೋಡಿದಾಗ ನಾವು ಚಪ್ಪಳೆ ತಟ್ಟುತ್ತೆವೆ. ಆದರೆ ನೋವಲ್ಲಿರುವಾಗ ಕೈ ತುತ್ತು ನಿಡುವವರಲ್ಲ ಎನ್ನುವುದನ್ನು ಸಾಬೀತು ಮಾಡಿದ್ದೇವೆ ಎನ್ನಿಸುತ್ತಿದೆ.
ಆಟೋ ಚಾಲಕ ಹಾಗೂ ಆತನ ಕುಟುಂಬ ಕೊರೊನಾದಿಂದ ಹೈರಾಣಾಗಿ ಆಸ್ಪತ್ರೆಗಳಿಗೆ ತಿರುಗಾಡಿ ಬೆಡ್ ಸಿಗದೇ ಸುಸ್ತಾಗಿ ಮುಖ್ಯಮಂತ್ರಿಗಳ ಮನೆ ಎದುರು ಬಂದು ಕುಳಿತುಕೊಂಡು ನಮ್ಮನ್ನು ಬದುಕಿಸಿ ಎಂದು ಅಂಗಲಾಚುವ ದೃಶ್ಯವನ್ನು ನೋಡಿದಾಗಲಂತೂ ನಮ್ಮ ವ್ಯವಸ್ಥೆಯ ಕರಾಳ ಮುಖದ ದರ್ಶನವಾಗುತ್ತದೆ. ಇನ್ನು ಕ್ವಾರಂಟೈನ್ ಮಾಡಿದ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ಅಲ್ಲಿನ ಸೋಂಕಿತರು ಪರದಾಡುತ್ತಿರುವುದನ್ನು ಕಂಡಾಗಲಂತೂ ಈ ನರಕ ನನ್ನ ಶತ್ರುಗಳಿಗೂ ಬರುವುದು ಬೇಡಪ್ಪ ಎನ್ನಿಸುತ್ತದೆ. ಆದರೂ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ನಮ್ಮ ಮಂತ್ರಿ ಮಹೋದಯರು ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ. ಹಾಸಿಗೆ ಖರೀದಿ ಮಾಡಿ ತಕ್ಷಣ ಪರಿಹಾರ ಮಾಡಬೇಕಾದ ಸಮಯದಲ್ಲಿ ಬಾಡಿಗೆಗೆ ಹಾಸಿಗೆಗಳನ್ನು ಪಡೆಯುತ್ತೇವೆ ಎಂದು ವ್ಯರ್ಥ ಕಾಲಹರಣ ಮಾಡುತ್ತಿರುವುದು ಅದ್ಯಾವ ಪುರುಷಾರ್ಥಕ್ಕೋ ಗೊತ್ತಾಗುತ್ತಿಲ್ಲ. ಪುಣ್ಯಕ್ಕೆ ಸಾವಿನ ಪ್ರಮಾಣ ಕಡಿಮೆಯಾಗಿ ಚೇತರಿಕೆ ಆಗುತ್ತಿರುವವರ ಪ್ರಮಾಣ ಅಧಿಕವಾಗುತ್ತಿದೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಏನಾಗುತ್ತಿತ್ತೋ ಎನ್ನುವುದು ನೆನೆಸಿಕೊಂಡರೆ ನಡುಕ ಉಂಟಾಗುತ್ತದೆ. ರೋಗಿಗಳನ್ನು ಬದುಕಿಸುವುದಕ್ಕೆ ಮುಂದಾಗಬೇಕಾದವರು ಅವರ ಜೀವನದ ಜೊತೆ ಹುಡುಗಾಟ ಆಡುತ್ತಿರುವುದು ನಿಜಕ್ಕೂ ನೋವುಂಟು ಮಾಡುತ್ತಿದೆ.
ಕೊರೊನಾ ಬಂದಾಗ ಅವರಿಂದ ಹರಡಿತು, ಇವರಿಂದ ಹರಡಿತು ಎಂದು ಬೊಬ್ಬೆ ಹೊಡೆದವರೇ ಇಂದು ತಣ್ಣಗೆ ಕುಳಿತುಕೊಂಡು ಬಿಟ್ಟಿದ್ದಾರೆ. ವೈರಸ್ಗಿಲ್ಲದ ಜಾತಿ, ಸಾವಿಗಿಲ್ಲದ ಧರ್ಮ, ರೋಗಕ್ಕಿಲ್ಲದ ಪಂಥಗಳನ್ನು ಪ್ರದಶರ್ಿಸಿ ದೊಡ್ಡದಾಗಿ ಮಾತಾಡುತ್ತಿದ್ದ ಮಹಾಶಯರೆಲ್ಲ ಇಂದು ರೋಗಿಗಳ ಸಮಸ್ಯೆಗಳು ಅವರು ಎದುರಿಸುತ್ತಿರುವ ತೊಂದರೆಗಳ ಕುರಿತಾಗಿ ಒಂದು ಸಣ್ಣ ಧ್ವನಿಯನ್ನು ಎತ್ತದೆ ಕುಳಿತಿರುವುದು ವಿಶಾಧನೀಯ. ಇಲ್ಲಿ ತಪ್ಪು ಯಾರದು? ಎನ್ನುವುದಕ್ಕಿಂತ ತಪ್ಪು ಯಾವ ಕಾರಣದಿಂದಾಗುತ್ತಿದೆ ಎನ್ನುವುದನ್ನು ಮನಗಾಣಬೇಕಿದೆ. ಮನೆಯಲ್ಲಿದ್ದು ನಿಮ್ಮ ಜೀವ ಉಳಿಸಿಕೊಳ್ಳಿ ಎಂದು ಸಕರ್ಾರ ಮನವಿ ಮಾಡಿಕೊಂಡರೂ ಲೆಕ್ಕಿಸದೆ ಹೊರಗಡೆ ಅಡ್ಡಾಡಿದ್ದರ ಪರಿಣಾಮವನ್ನು ಇಂದು ಎದುರಿಸಬೇಕಾಗಿದೆ. ಮಾಸ್ಕ ಧರಿಸಿ ಎಂದು ಕೈ ಮುಗಿದು ಬೇಡಿಕೊಂಡರು ಅದನ್ನು ನಿರ್ಲಕ್ಷಿಸಿದ್ದಕ್ಕೆ ಈ ದಂಡ ತೆರಬೇಕಾಗಿದೆ. ನಾವು ತುಂಬಾ ಗಟ್ಟಿ ಈ ಸಣ್ಣ ವೈರಸ್ ನಮಗೇನು ಮಾಡಲು ಸಾಧ್ಯ ಎಂದು ಹೇಳಿಕೆ ಕೊಡುವ ಮೂಲಕ ಎಚ್ಚರ ವಹಿಸಿಬೇಕಾದ ಸಂದರ್ಭದಲ್ಲಿ ಮೈ ಮರೆತಿದ್ದರ ಪರಿಣಾಮ ಇಂಥ ಸ್ಥಿತಿಯನ್ನು ಕಾಣಬೇಕಾಗಿದೆ. ಕೈ ಹಿಡಿದು ಕಾಪಾಡಬೇಕಾದ ನಾಯಕರುಗಳು ಒಣ ಪ್ರತಿಷ್ಠೆಗೆ ಈಡಾಗುತ್ತಿರುವುದರಿಂದ ಜನ ಸಾಮಾನ್ಯ ನರಳಬೇಕಾಗಿದೆ. ಶಾಶ್ವತವಲ್ಲದ ಅಧಿಕಾರದ ಬೆನ್ನತ್ತಿ ಮಾನವೀಯತೆಯನ್ನು ಶಾಶ್ವತವಾಗಿ ಸಾಯಿಸಲು ಹೊರಟವರ ಕಾರಣದಿಂದಾಗಿ, ದುಡ್ಡು ಮಾಡಿಕೊಳ್ಳುವುದಕ್ಕೆ ಇದು ಉತ್ತಮ ಅವಕಾಶ ಎಂದು ಬಳಸಿಕೊಳ್ಳುವುದಕ್ಕೆ ಮುಂದಾಗಿರುವುದು ಇಷ್ಟೆಲ್ಲ ದುರಂತಕ್ಕೆ ಕಾರಣವಾಗುತ್ತಿದೆ.
ಅಂದು ಕೆವಿನ್ ಕಾರ್ಟರ್ ಮಾಡಿದ್ದು ಸರಿ ಎನ್ನುವುದಾದರೆ ಇಂದು ನಮ್ಮ ನಾಯಕರುಗಳು ಮಾಡುತ್ತಿರುವುದು ಕೂಡ ಸರಿಯಾಗಿಯೇ ಇದೆ. ಆದರೆ ಕಾರ್ಟರ್ನ ನಿರ್ಲಕ್ಷದ ಪರಿಣಾಮದಿಂದ ಮಗು ಏನಾಯಿತೋ ತಿಳಿಯದಾಯಿತು. ಹಾಗೆ ನಮ್ಮವರ ನಿರ್ಲಕ್ಷ್ಯದಿಂದಾಗಿ ನಮ್ಮ ಸ್ಥಿತಿ ಏನಾಗುವುದೋ ಗೊತ್ತಿಲ್ಲ. ತನ್ನ ತಪ್ಪಿಗೆ ಮನ ನೊಂದ ಕಾರ್ಟರ್ ಕೊನೆಗೆ ಆತ್ಮಹತ್ಯಗೆ ಶರಣಾದ. ಆದರೆ ನಮ್ಮವರು ತಾವು ಮಾಡಿದ ತಪ್ಪುಗಳಿಗೆ ನಮ್ಮನ್ನು ಬಲಿ ಕೊಡುತ್ತಾರೆ. ಇಲ್ಲಿ ಪಕ್ಷವಾಗಲಿ, ಅಧಿಕಾರವಾಗಲಿ ಯಾವುದು ಮುಖ್ಯವಾಗುವುದಿಲ್ಲ. ಎಲ್ಲಕ್ಕಿಂತ ಬದುಕು ಮುಖ್ಯವಾಗುತ್ತದೆ. ಆ ಬದುಕನ್ನೇ ಉಳಿಸುವುದಕ್ಕೆ ಮುಂದಾಗದಾದ ಮೇಲೆ ಇವರನ್ನು ಆಯ್ಕೆ ಮಾಡಿಯಾದರೂ ಏನು ಲಾಭ? ಹಾಗೆಂದು ಮುಂದೆ ಬಂದವರು ನಮ್ಮ ನೋವಿಗೆ ಸ್ಪಂಧಿಸುತ್ತಾರೆ ಎಂದು ಕೊಂಡರೆ ಅದು ನಮ್ಮ ಮೂರ್ಖತನವಷ್ಟೆ. ನಮ್ಮ ಸುತ್ತ ಮುತ್ತಲು ನಮ್ಮನ್ನು ಕಿತ್ತು ತಿನ್ನಲು ಕಾದು ಕುಳಿತ ರಣಹದ್ದುಗಳಿವೆ. ಅದರ ಲಾಭವನ್ನು ಪಡೆಯುವುದಕ್ಕಾಗಿ ಕಾದು ಕುಳಿತ ಮನಸ್ಸುಗಳು ಸಾಕಷ್ಟಿವೆ. ಅವರಿಗೆ ಆಹಾರವಾಗದೇ, ಇವರ ಲಾಭಕ್ಕೆ ಬಂಡವಾಳವಾಗದೇ ನಾವು ನಾವಾದಾಗ ಮಾತ್ರ ಬದುಕು ಮಾಡಲು ಸಾಧ್ಯ. ಅಂದರೆ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸೂಡಾನ್ನಲ್ಲಿ ನರಳಾಡಿದ ಮಗುವಿನಂತೆ ನಾವು ನರಳಾಡಿ ಯಾರಿಗೂ ಗೊತ್ತಾಗದಂತೆ ಕಳೆದು ಹೋಗಬೇಕಷ್ಟೆ.
- ಮಂಜುನಾಥ ಜುನಗೊಂಡ, ವಿಜಯಪುರ