ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
- ಮಲ್ಲಪ್ಪ ಖೊದ್ನಾಪೂರ
ಮಕ್ಕಳು ಬೇಕೆಂದು ನೂರೊಂದುದೇವರಿಗೆ ಹರಕೆ ಹೊತ್ತು-ಹೆತ್ತುತನ್ನೆಲ್ಲ ಆಶೋತ್ತರಗಳನ್ನು ಮಕ್ಕಳಿಗಾಗಿಯೇ ತ್ಯಾಗ ಮಾಡಿ ಕೇವಲ ಗಂಡ, ಮಕ್ಕಳು, ಮನೆ-ಕುಟುಂಬದ ಸದಸ್ಯರ ಒಳಿತಿಗಾಗಿ ಸದಾಜೀವನವನ್ನೇ ಸವೆಯುತ್ತಿರುವ ತ್ಯಾಗಜೀವಿ ಎಂದರೆ ಅವಳೇ ತಾಯಿ. ಕೂಲಿ-ನಾಲಿಯನ್ನಾದರೂ ಮಾಡಿಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಮತ್ತು ಬದುಕಿಗೊಂದು ಆಸರೆ ಕಲ್ಪಿಸಿ ಅವರುತಮ್ಮ ಕಾಲ ಮೇಲೆ ನಿಂತು ಸ್ವಾವಲಂಬಿಗಳನ್ನಾಗಿಸಲು ಯಾವಾಗಲೂ ಚಿಂತಿಸುತ್ತಿರುವ ತಂದೆ-ಪೋಷಕರ ಪಾತ್ರ ಅನನ್ಯವಾದುದು. ಆದರೆ ಇಂದಿನ ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯಜೀವನ ಶೈಲಿಗಳಿಂದಾಗಿ ನಮ್ಮ ಮನ, ಮನೆ-ಕುಟುಂಬ ಮತ್ತು ಸಮಾಜದಲ್ಲಿ ಬದುಕುವರೀತಿ-ನೀತಿ ಮತ್ತುಜೀವನಕ್ರಮ ಬದಲಾಗುತ್ತಿದೆ. ಇಂದು 'ಗಂಡ-ಹೆಂಡತಿ ಮತ್ತು ಮಕ್ಕಳು' ಎಂದು ಸಂಕುಚಿತವಾಗುತ್ತಿರುವ ಪ್ರತಿ ಕುಟುಂಬಗಳಲ್ಲಿ ತಮ್ಮ ಬಹುಪಾಲು ಆಯಸ್ಸನ್ನು ಕೇವಲ ಇತರರ ಪಾಲನೆ-ಪೋಷಣೆ ಮತ್ತು ಶ್ರೇಯಸ್ಸಿಗಾಗಿಯೇ ಹಗಲಿರುಳು ದುಡಿದು ವಯೋವೃದ್ಧತಂದೆ-ತಾಯಿ, ಅಜ್ಜ-ಅಜ್ಜಿ ಮತ್ತುಕುಟುಂಬದ ಹಿರಿಯ ಜೀವಿಗಳನ್ನು ವಯಸ್ಸಾದ ನಂತರಕಾಣುವ, ಗೌರವಿಸುವ ಮತ್ತು ಉಪಚರಿಸುವ ಪರಿಯುಚಿಂತಾಜನಕವಾಗಿದೆ.
ಮಕ್ಕಳಿಗಾಗಿ ಆಸ್ತಿಯನ್ನು ಮಾಡುವ ಬದಲು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ಗ್ರಹಸ್ಥರನ್ನಾಗಿ ಮಾಡಿ ಸದಾ ಮಕ್ಕಳ ಅಭಿವೃದ್ಧಿಯನ್ನೇ ಬಯಸುವತಂದೆ-ತಾಯಿಯರನ್ನು ನೋಡಿಕೊಳ್ಳುವ ರೀತಿ-ನೀತಿ, ನೀಡುವಗೌರವ, ಆರೋಗ್ಯ ರಕ್ಷಣೆ ಇಲ್ಲದಂತಾಗಿ ಬಹಳ ಕ್ರೌರ್ಯದಿಂದಕಾಣುವದು ಮತ್ತು ಚಿತ್ರಹಿಂಸೆ ನೀಡುತ್ತಿರುವದನ್ನು ಕಂಡರೆ ಮನಕಲುಕುವಂತಾಗುತ್ತದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ 10 ಹಿರಿಯ ಜೀವಿಗಳಲ್ಲಿ ಸುಮಾರು 6 ಕ್ಕಿಂತಲೂ ಹೆಚ್ಚು ಜನ ವಯೋವೃದ್ಧತಂದೆ-ತಾಯಿಯರನ್ನು ಮನೆಯಿಂದ ಬಲವಂತವಾಗಿ ಹೊರಹಾಕುತ್ತಿರುವ ಘಟನೆಗಳು ನಡೆಯುತ್ತಿರುವತೀರ ಕಳವಳಕಾರಿ ಸಂಗತಿ. ಹೊತ್ತು-ಹೆತ್ತು ಮತ್ತು ಬದುಕಿಗೊಂದು ಆಶ್ರಯ ನೀಡಿದತಂದೆ-ತಾಯಿಯರನ್ನು ಹೊರೆಯಾಗಿ ನೋಡಲಾರಂಭಿಸಿದ್ದಾರೆ. ಇಂದು ವಯೋವೃದ್ಧ ಹಿರಿಯ ಜೀವಿಗಳು ಕುಟುಂಬದಲ್ಲಿ ನೀಡುವ ಹಿಂಸೆ, ಅಗೌರವ ಮತ್ತು ನೀಡುವ ಕಷ್ಟಗಳಿಂದ ನೊಂದು-ಬೆಂದು, ಮನನೊಂದು ಕೊನೆಗೆ ವೃದ್ಧಾಶ್ರಮಗಳನ್ನು ಸೇರುವ ಪರಿಸ್ಥಿತಿಯು ನಮ್ಮ ಸಂಸ್ಕೃತಿಗೆ ಒಂದು ಕಪ್ಪುಚಿಕ್ಕೆ ಬಿದ್ದಂತಾಗಿದೆ. ಬಡತನ-ಶ್ರೀಮಂತಿಕೆಯ ಹಂಗುಮೀರಿದ, ದಿಕ್ಕಿಲ್ಲದ ಅನೇಕ ವಯೋವೃದ್ಧ ಹಿರಿಯ ಜೀವಿಗಳ ಬದುಕು ತೀರಾ ಅತಂತ್ರವಾಗುತ್ತಾ ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ ದುಸ್ಥಿತಿಗೆ ನಾವೆಲ್ಲರೂ ಅಸಹ್ಯಪಡಬೇಕಾಗಿದೆ.
ಅಷ್ಟೇ ಅಲ್ಲದೇ ಮಕ್ಕಳೇ ತನ್ನೆಲ್ಲಾ ಸರ್ವಸ್ವವೆಂದು ತಿಳಿದು ಇಡೀ ಬದುಕನ್ನೇ ಅವರಿಗಾಗಿಯೇ ಸಮಪರ್ಿಸಿದ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಮತ್ತು ಪೋಷಕರನ್ನು ಅವರ ಜೀವನದ ಸಂಧ್ಯಾಕಾಲದಲ್ಲಿ ನೋಡಿಕೊಳ್ಳುವವರು ಯಾರು? ಎಂಬ ಪ್ರಶ್ನೆಗೆ ಉತ್ತರಗಳೇ ಸಿಗುತ್ತಿಲ್ಲ. ವಯಸ್ಸಾದ ನಂತರ ಆರೋಗ್ಯ ಸಮಸ್ಯೆ, ದೈಹಿಕ-ಮಾನಸಿಕವಾಗಿ ಕುಂದುಹೋಗಿರುವ ಮತ್ತು ಜೀವನವೇ ಇಷ್ಟೇ ಎಂಬ ಭಾವ ತಾಳಿ, ಮಕ್ಕಳೊಂದಿಗೆ ಮಕ್ಕಳಾಗಿ ಬದುಕಿ ಕಾಲ ಕಳೆಯುತ್ತಿರುವ ತಂದೆ-ತಾಯಿ ಗಳಿಸಿಟ್ಟ ಹಣ, ನಗ-ನಾಣ್ಯ, ಆಸ್ತಿ-ಪಾಸ್ತಿ ಮತ್ತು ಇತರ ಎಲ್ಲ ವಸ್ತುಗಳು ಮಕ್ಕಳಿಗೆ ಬೇಕು. ಆದರೆ ಚಿಕ್ಕಂದಿನಲ್ಲಿತಂದೆ-ತಾಯಿಯೇ ನೈಜದೇವರು ಎಂದು ಗೌರವಿಸುವ ನಾವಿಂದು ಹಿರಿಯ ಜೀವಿಗಳನ್ನು ತಿರಸ್ಕಾರ ಭಾವದಿಂದ ಕಾಣುವುದು ಸರಿಯಲ್ಲ. ಮೊಮ್ಮಕ್ಕಳೊಂದಿಗೆ ನಕ್ಕು-ನಲಿದು ಅಂಬೆಗಾಲಿಕ್ಕುತ್ತಾ ಆಟವಾಡುವ ಮತ್ತು ಮಕ್ಕಳೊಂದಿಗೆ ಮಕ್ಕಳಾಗಿ ಬದುಕುವ, ಸದಾ ಅಧ್ಯಾತ್ಮ-ಪ್ರವಚನ ಮತ್ತು ದೇವರ ನಾಮಸ್ಮರಣೆ ಪಠಿಸುತ್ತಾ ಕಾಲ ಕಳೆಯುತ್ತಿರುವ ಹಿರಿಯ ಜೀವಿಗಳನ್ನು ತುಂಬಾ ಪ್ರೀತಿ, ವಾತ್ಸಲ್ಯ ಮತ್ತು ಕರುಣೆಯಿಂದ ನೋಡಿಕೊಳ್ಳುವುದು ನಮ್ಮೆಲ್ಲರಆದ್ಯಕರ್ತವ್ಯವೆಂದುಅರಿಯಬೇಕು. ನಮ್ಮನ್ನು ಈ ಭೂಮಿಗೆ ಬರಲುಕಾರಣಿಕರ್ತರಾಗಿ ಹುಟ್ಟಿನಿಂದ ಬೆಳೆದು ದೊಡ್ಡವರಾಗುವವರೆಗೂ ಬದುಕಿನಲ್ಲಿ ಏನೇ ಬರಲಿ ಸಂತೋಷದಿಂದ ಎದುರಿಸಿ, ನಮಗಾಗಿ ಏನೆಲ್ಲವನ್ನುತ್ಯಾಗ ಮಾಡಿದ ಶ್ರಮಜೀವಿಗಳನ್ನು ಅತಿ ಗೌರವಯುತವಾಗಿಕ ಾಣುವ ಮನೋಭಾವ ನಮ್ಮದಾಗಬೇಕು.
ಅಮೂಲ್ಯವಾದ ಅನುಭವ, ಸಂಸ್ಕೃತಿ-ಸಂಸ್ಕಾರದ ಪ್ರತೀಕ, ಸಂಪ್ರದಾಯ, ಆಚರಣೆ ಮತ್ತು ಪದ್ಧತಿಗಳ ಅನುಸರಣೆಯ ಪ್ರತಿಬಿಂಬವಾಗಿರುವ ನಮ್ಮ ಹಿರಿಯರಾದಅಜ್ಜ-ಅಜ್ಜಿ, ತಂದೆ-ತಾಯಿ ಮತ್ತು ಇತರ ಕುಟುಂಬದ ವಯೋವೃದ್ಧ ಹಿರಿಯ ಜೀವಿಗಳ ಆಶೀವರ್ಾದ ಮತ್ತು ಮಾರ್ಗದರ್ಶನ ಪಡೆದು ಜೀವನವನ್ನು ಪಾವನ ಮಾಡಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ-ಸಂಸ್ಕಾರ, ಮನೆಯ ಪದ್ಧತಿ, ಆಚರಣೆ ಮತ್ತು ಸಾಮಾಜಿಕ-ಧಾಮರ್ಿಕ ವಿಧಿವಿಧಾನಗಳನ್ನು ಪರಿಚಯಿಸಲು ಹಾಗೂ ಉಳಿಸಿ-ಬೆಳೆಸಲು ನಮ್ಮ ಹಿರಿಯರು ನಮಗೆ ಬೇಕು. ಆದ್ದರಿಂದ ನಮಗೆ ಜನ್ಮ ನೀಡಿ, ತಪ್ಪು ಮಾಡಿದಾಗತಿದ್ದಿ-ತೀಡಿ, ಶಿಕ್ಷಣ ನೀಡಿ, ಉದ್ಯೋಗದೊರಕಲು ಸದಾಶಯ ಮಾಡಿದ ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಿದ ಅವರನ್ನು ಗೌರವ-ಪೂಜ್ಯನೀಯ ಭಾವನೆಯಿಂದ ಕಾಣುವಂತಹ ಮನೋಧರ್ಮವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು.
ಅದ್ದರಿಂದಕೌಟುಂಬಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ವ್ಯವಸ್ಥೆಗೆ ಹೆಸರುವಾಸಿಯಾದ ನಮ್ಮದೇಶದಲ್ಲಿ ಹಿರಿಯ ಜೀವಿಗಳನ್ನು ಮನೆಯಿಂದ ದೂರ ತಳ್ಳಿ ಅವರು ವೃದ್ಧಾಶ್ರಮ ಸೇರುವಂತಹ ದುಸ್ಥಿತಿ ಬರದಂತೆ ನಾವೆಲ್ಲರೂ ಅವರನ್ನು ನಮ್ಮ ಮಕ್ಕಳಂತೆ ಕಾಣುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮತ್ತು ಪ್ರೀತಿ-ವಾತ್ಸಲ್ಯ, ತಾಯಿ ಹೃದಯದಿಂದ ಉಪಚರಿಸುವಂತೆ ಮತ್ತು ಗೌರಯುತವಾಗಿ ಕಾಣುವಂತಹ ವಾತಾವರಣ ಪ್ರತಿ ಮನೆ, ಕುಟುಂಬ ಮತ್ತುಕುಟುಂಬದ ಸದಸ್ಯರಲ್ಲಿ ಅರಿವು ಮೂಡಬೇಕು. ದೇವರು ಬೇರೆಲ್ಲೂ ಇಲ್ಲ, ಅವರು ನಮ್ಮ ಹಿರಿಯ ಜೀವಿಗಳ ರೂಪದಲ್ಲೇ ಇರುತ್ತಾನೆ ಎಂಬುದನ್ನುಅರಿತು ವಯೋಸಹಜವಾಗಿದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಂದು ಹೋಗುತ್ತಿರುವ ಅವರನ್ನು ಗೌರವದಿಂದ ಕಂಡು ಸಂತೋಷ-ಖುಷಿಯಾಗಿ ಇನ್ನಷ್ಟು ಕಾಲ ಮಕ್ಕಳು-ಮೊಮ್ಮಕ್ಕಳು ಮತ್ತು ಕುಟುಂಬದ ಇತರ ಸದಸ್ಯರಾಗಿ ನೂರು ಕಾಲ ಬಾಳಿ-ಬದುಕುವಂತೆ ನೋಡಿಕೊಂಡಾಗ ಮಾತ್ರ ನಾವು ಅವರ ವಂಶದ ಕುಡಿಗಳಾಗಿ ಅವರ ಋಣ ತೀರಿಸುವುದು ನಮ್ಮಕರ್ತವ್ಯವಾಗಿದೆ, ಕುಟುಂಬದ ಊರುಗೋಲಾಗಿರುವ ಹಿರಿಯ ಜೀವಿಗಳಿಗೆ ಹಕ್ಕು, ಅವಕಾಶ, ಆರೋಗ್ಯರಕ್ಷಣೆ, ಬದುಕಿಗೊಂದು ಆಶ್ರಯ ಮತ್ತು ಜೀವ-ಭದ್ರತೆಯುದೊರೆತು ಅವರು ಇತರರಂತೆ ಬಾಳಿ ಬದುಕಲು ಸೂಕ್ತ ಕಾನೂನುಗಳನ್ನು ರೂಪಿಸಬೇಕಾಗಿರುವದು ಇಂದಿನ ಅಗತ್ಯತೆಯಾಗಿದೆ. ಹಿರಿಯ ಜೀವಿಗಳಿಗೆ ತೊಂದರೆ ನೀಡುವ, ಮಕ್ಕಳು ಇದ್ದಾಗಲೂ ವೃದ್ಧಾಶ್ರಮಕ್ಕೆ ತಳ್ಳುವ, ಚಿತ್ರಹಿಂಸೆ ನೀಡುವ ಮಕ್ಕಳ ಮೇಲೆ ಕಾನೂನು ಕ್ರಮಗಳನ್ನು ಜಾರಿಗೊಳಿಸಿ ಅವರಿಗೆಅವಶ್ಯಕ ಭದ್ರತೆ ನೀಡುವಂತಾಬೇಕು. ಅಷ್ಟೇ ಅಲ್ಲದೇ ಮುಂದೆ ನಮ್ಮ ಮಕ್ಕಳು ವಯೋವೃದ್ಧರಾದ ಸಂದರ್ಭದಲ್ಲಿ ನಮ್ಮನ್ನು ವೃದ್ಧಾಶ್ರಮಗಳಿಗೆ ಕಳಿಸಬಾರದೆಂದು ಕನಿಷ್ಠ ವಿಷಯವನ್ನು ಅಥರ್ೈಸಿಕೊಂಡು ಹಿರಿಯ ಜೀವಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ.