ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಇಂದಿಗೆ ಭಾರತ್ ಪ್ರಥಮ ಸ್ವಾತಂತ್ರ್ಯ ಸಮರ ನಡೆದು 163 ವರ್ಷಗಳು ನಂದಿ ಹೋದವು ಆದರೆ ಈ ಯುದ್ಧ ಭಾರತೀಯರ ನರ ನಾಡಿಯಲ್ಲಿ ಸ್ವಾತಂತ್ರ್ಯ ಪ್ರೇಮವನ್ನು ಉಕ್ಕಿಸಿದ ಯುದ್ಧ ಅವರ ತ್ಯಾಗ, ದೇಶಪ್ರೇಮ, ಬಲಿದಾನಗಳನ್ನು ಭಾರತೀಯರು ಸಿಡಿದೆದ್ದ ಒಕ್ಕೊರಲಿನಿಂದ ಒಕ್ಕಟ್ಟಿನಿಂದ ಫಿರಂಗಿ ಕೋಮಾರೋ ಎಂಬ ಘೋಷಣೆ ಮುಗಿಲೆತ್ತರಕ್ಕೆ ಮುಟ್ಟಿತು. ರಾಜರು ಸೈನಿಕರು ಪ್ರಜೆಗಳು ಪ್ರತಿಯೊಬ್ಬರು ಈ ಯುದ್ಧದಲ್ಲಿ ಪಾಲ್ಗೊಂಡರು. ಬ್ರಿಟಿಷರನ್ನು ಮಣ್ಣು ಮುಕ್ಕಿಸಿತು. ಮೊಗಲ್ ಬಾಹದ್ಧೂರ ಶಹನನ್ನು ಹಿಂದುಸ್ಥಾನದ ಏಕೈಕ ದೊರೆಯಂದು ಪಟ್ಟಗಟ್ಟಿತು. ವಿಜಯ ದುಂದುಭಿ ಮೊಳಗಿತು. ಆದರೆ ಬ್ರಿಟಿಷರ ಕುತಂತ್ರದಿಂದ ಹಿನ್ನಡೆಯಯಿತು ಆದರೆ ಈ ಯುದ್ಧ ಸೋತು ಗೆದ್ದಿತು. ಅವರು ಬಿತ್ತಿದ್ದ ಬೀಜ ಸ್ವಾತಂತ್ರ್ಯದ ಹೆಮ್ಮರವಾಗಿ ಬೆಳೆಯಿತು. ಈ ಯುದ್ಧದ ಪ್ರತೀಕವಾಗಿಯೇ ನಮಗೆ 1947 ರಲ್ಲಿ ಸ್ವಾತಂತ್ರ್ಯ ದೊರೆಯಿತು. ಆದರೆ ಈ ಪ್ರಥಮ ಸ್ವಾತಂತ್ರ್ಯ ಯುದ್ಧವನ್ನು ನಾವು ಎಂದೂ ಮರೆಯುವಂತಿಲ್ಲ. ಇತಿಹಾಸದ ಪುಟಗಳಲ್ಲಿ ಈ ಸ್ವಾತಂತ್ರ್ಯ ಸಮರವನ್ನು ಸುವಣರ್ಾಕ್ಷರಗಳಿಂದ ಬರೆದಿಡುವಂಥ ಯುದ್ಧವೆಂದು ಹೇಳಬಹುದು.
ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ರಾಜಕೀಯದಲ್ಲಿ ಭಾಗವಹಿಸಿ ಕಪಟತನದಿಂದ ಸಾಮ್ರಾಜ್ಯವನ್ನು ಕಟ್ಟಿ ಎರಡು ನೂರು ವರ್ಷಗಳ ವರೆಗೆ ಆಳಿದರು. 1757 ಪ್ಲಾಸಿ ಕದನದಿಂದ ಜಯಗಳಿಸಿದ ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ತಳ ಊರಿದರು. ಮುಂದೆ ನೂರು ವರುಷಗಳ ವರೆಗೆ ತಮ್ಮ ಸ್ವಾರ್ಥ ಕಪಟತನ ಮೋಸದಿಂದ ಭಾರತವನ್ನು ತಮ್ಮ ಕೈಗೆ ತೆಗೆದುಕೊಂಡರು.
ಆದರೆ ಭಾರತೀಯರು ಸುಮ್ಮನೆ ಕೂಡಲಿಲ್ಲ ಪ್ರತಿಭಟನೆ ಮಾಡುತ್ತಲೆ ಬಂದರು 1824 ರಲ್ಲಿ ಪ್ರಥಮವಾಗಿ ಕಿತ್ತೂರ ಚೆನ್ನಮ್ಮ ಸ್ವಾತಂತ್ರ್ಯದ ಕಹಳೆಯನ್ನೂದಿದಳು ಈ ಹೋರಾಟದಲ್ಲಿ ಜಯ ಸಿಗದಿದ್ದರೂ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿತು. ಬ್ರಿಟಿಷರು ಬಂಗಾಲವನ್ನು ಕೈ ವಶ ಮಾಡಿಕೊಂಡ ನಂತರ ಮೀರಜಾಫರನನ್ನು ನಾಮಕೆ ವಾಸ್ತೆ ರಾಜನನ್ನಾಗಿ ಕುಳ್ಳಿರಿಸಿ ಅಧಿಕಾರದ ಸೂತ್ರವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು.
ನಂತರ ಮೀರ ಕಾಸೀಮನು ಬ್ರಿಟಿಷರ ವಿರುದ್ಧ ಸೆಣಸಾಡಿದನು ಹೀಗೆ ಆಗಾಗ್ಗೆ ಆಳರಸರು ಪ್ರತಿಭಟನೆ ಒಡ್ಡುತ್ತಲೇ ಬಂದರು. ಆದರೆ ಈ ಎಲ್ಲ ಶಕ್ತಿ ಒಟ್ಟುಗೂಡಿದ್ದು 1857 ರಲ್ಲಿ ಯಾಕೆಂದರೆ ಬ್ರಿಟಿಷರ ಕೊಡುವ ಕಷ್ಟಗಳು ಒಂದಲ್ಲ ಎರಡಲ್ಲ ಹಲವಾರು ಮೊಗಲ್ ಸಾಮ್ರಾಜ್ಯವನ್ನು ಮರಾಠರ ರಾಜ್ಯಗಳನ್ನು ಕಬಳಿಸಿ ತಮ್ಮ ಸ್ವಾಯುತ್ತತೆಯನ್ನು ಸ್ಥಾಪಿಸುತ್ತ ಬಂದರು ಸಹಾಯಕ ಸೈನ್ಯ ಪದ್ಧತಿ, ಲ್ಯಾಪ್ಸ ಪದ್ಧತಿ ಇಂಥಹ ಅನಿಷ್ಟ ಪದ್ಧತಿಗಳನ್ನು ಜಾರಿಯಲ್ಲಿ ತಂದು ಭಾರತೀಯರ ಬೆನ್ನೆಲುಬನ್ನು ಮುರಿಯತೊಡಗಿದರು. ಜಹಗೀರದಾರರು, ಜಮೀನುದಾರರು, ತಾಲೂಕಾದಾರರು ತಮ್ಮ ಸಕಲ ಸಂಪತ್ತನ್ನು ಕಳೆದುಕೊಂಡು ದುದರ್ೆಸೆಗೀಡಾದರು. ಪ್ರತಿಯೊಬ್ಬ ಭಾರತೀಯನಲ್ಲಿ ಅಸಂತೋಷ ಅಸಮಾಧಾನ ಹೊಗೆಯಾಡತೊಡಗಿತು.
ಬ್ರಿಟಿಷರು ಕ್ರೌರ್ಯಯುತ ದಬ್ಬಾಳಿಕೆ ನಡೆಸಿದರು. ಇಂಗ್ಲೀಷರೇ ಹೆಚ್ಚು ಭಾರತೀಯರನ್ನು ಕೀಳು ಎಂಬ ಬೇದಭಾವ ಬೆಳೆಸಿದರು. ಭಾರತೀಯ ಅಪರಾಧಿಗಳಿಗೆ ಅನ್ಯಾಯವಾಗಿ ಶಿಕ್ಷೆ ಕೊಡುತ್ತಿದ್ದರು. ಆದರೆ ಇಂಗ್ಲೀಷರು ಅಪರಾಧ ಮಾಡಿದರೆ ಅವರಿಗೆ ಶಿಕ್ಷೆಯಿರಲಿಲ್ಲ. ಹೆಚ್ಚಿನ ಹುದ್ದೆಗಳು ಬ್ರಟಿಷರಿಗೆ ಮೀಸಲಾದವು ಭಾರತೀಯರಿಗೆ ಉದ್ಯೋಗ ದೊರೆಯದಾದವು. ಭಾರತೀಯ ಧಾಮರ್ಿಕ ಭಾವನೆಯಲ್ಲಿಯೂ ಕೈ ಹಾಕತೊಡಗಿದರು. ತಮ್ಮ ಧರ್ಮ ಪ್ರಸಾರ ಮಾಡತೊಡಗಿದರು. ಆಡಳಿತದಲ್ಲಿ ಇಂಗ್ಲೀಷರಿಗೇ ವಿಶೇಷ ಸ್ಥಾನ ಮಾನಗಳಿದ್ದವು. ಭಾರತೀಯ ಸೈನಿಕರಲ್ಲಿ ತುಂಬಾ ಅಸಮಾಧಾನವಿತ್ತು. ಮೇಲು ದಜರ್ೆಯ ಸ್ಥಾನಗಳೆಲ್ಲಾ ಬ್ರಿಟಿಷ ಸೈನಿಕರಿಗೆ ಮೀಸಲಾಗಿದ್ದವು. ಭಾರತೀಯ ಹಾಗೂ ಮುಸಲ್ಮಾನ ಸೈನಿಕರಿಗೆ ಆಕಳ ಹಾಗೂ ಹಂದಿಯ ನೆಣ ಹಚ್ಚಿದ ತೋಟಾಗಳನ್ನು ಕೊಡಲು ಪ್ರಾರಂಭಿಸಿದರು. ಈ ತೋಟಾಗಳನ್ನು ಬಾಯಿಯಿಂದ ಕಚ್ಚಿ ತೆಗೆಯಬೇಕಾಗುತ್ತಿತ್ತು. ಇದರಿಂದ ಸೈನಿಕರಿಗೆ ತುಂಬಾ ಅಸಮಾಧಾನ ಉಂಟಾಯಿತು.
ಸಂಸ್ಥಾನಿಕರ ರಾಜ್ಯಗಳನ್ನು ವಶಪಡಿಸಿಕೊಳ್ಳತೊಡಗಿದರು. ನಾನಾ ಸಾಹೇಬ ಪೇಶ್ವೆ ಬರಬೇಕಾಗಿದ್ದ ಸಂಭಾವನೆಯನ್ನು ನಿಲ್ಲಿಸಿದರು. ಝಾಂಸಿಯನ್ನು ಸಂತಾನವಿಲ್ಲೆಂದು ವಶಕ್ಕೆ ತೆಗೆದುಕೊಂಡರು. ದಿಲ್ಲಿ ಬಾಹದ್ದೂರಶಹನನ್ನು ಹೊರ ಹಾಕಿದರು. ಇದು ಅಲ್ಲದೆ ಔಧ, ಬಕಾನೇರ, ಜಯಪುರ ಜೋಧಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ಆಧೀನಕ್ಕೆ ಒಳಪಟ್ಟವು.
ಇವುಗಳಿಂದ ಭಾರತೀಯರು ರೊಚ್ಚಿಗೆದ್ದರು ಬ್ರಿಟಿಷರ ವಿರುದ್ಧ ಹೋರಾಡಲು ಮಹಾಸಂಚನ್ನೇ ರೂಪಿಸಿದರು. ಈ ಸಂದರ್ಭದಲ್ಲಿ ಮೊಗಲ್ ಬಹಾದ್ದೂರಶಹ ತನ್ನ ವೀರಾವೇಶದ ಶಾಯರಿಗಳಿಂದ ಸೈನಿಕರಲ್ಲಿ ಸ್ಪೂತರ್ಿ ತುಂಬತೊಡಗಿದನು. ಅವರ ಒಂದೆರಡು ಶಾಯರಿಗಳನ್ನು ಅವಲೋಕಿಸಿದರೆ ಆ ಶಾಯರಿಗಳಲ್ಲಿ ಎಂಥಹ ಸತ್ವ ಶಕ್ತಿ ಅಡಗಿತ್ತು ಎಂಬುದು ಅರಿವಾಗದೇ ಇರದು ಒಬ್ಬ ಸೈನಿಕ ನಿರಾಶನಾಗಿ ಭಾರತವು ಇನ್ನೊಂದು ಬ್ರಿಟಿಷರ ಸಂಕೋಲೆಗಳ ಬಂಧನದಿಂದ ಬಿಡುಗಡೆಯಾಗಲು ಸಾಧ್ಯವಿಲ್ಲವೆಂದು ಬಹದ್ದೂರ ಶಹನಿಗೆ ಹೇಳುತ್ತಾನೆ.
ದುಮ್ ದುಮಾಯೆ ದಮನಹಿ ಅಬ ಖೈರಮಾಂಗೊ ಜಾನಕಿ ಆಯ ಜಫರ ಟಂಡಿ ಹುವಿ ಸಮಸೇರ ಹಿಂದುಸ್ಥಾನಕಿ 'ಓ ಮಹಾರಾಜನೆ ನೀನು ದಿನದಿನವೂ ಈ ದಿಶೆಯಲ್ಲಿ ಚಿಂತಿಸಿ ದಣಿದು ಸಣ್ಣಾಗು ಹೋಗುತ್ತಿರುವಿ ಈಗ ಉಳಿದಿರುವುದು ಬ್ರಿಟಿಷರಿಗೆ ಶರಣಾಗತಿ ಒಂದೇ ಯಾಕೆಂದರೆ ಈಗ ಹಿಂದುಸ್ಥಾನದ ಖಡ್ಗವು ಇನ್ನೊಂದು ಕೆಲಸಕ್ಕೆ ಬಾರದಂತೆ ಮೊಂಡವಾಗಿಬಿಟ್ಟಿರುವುದು. ಎಂದು ಹೇಳಿದಾಗ ಬಹದ್ದೂರ ಶಹನು ತಮ್ಮ ಶಾಯರಿ ಮೂಲಕ ತಕ್ಕ ಉತ್ತರ ಕೊಡುತ್ತಾನೆ.
'ಗಾಝಿಯೋಮೆ ಭೂ ರಹೇಗಿ ಜಬತಕ ಇಮಾನಕಿ
ತಬತೋ ಲಂಡನ ತಕ್ಕ ಚಲೇಗಿ ಲೋಗ ಹಿಂದುಸ್ಥಾನಕಿ
' ನಮ್ಮ ವೀರರ ಅಂತಃಕರಣದಲ್ಲಿ ಸತ್ವದ ವಿಷಯವಾಗಿ ಪ್ರೇಮದ ಕೊನೆಯ ಒಂದು ಬಿಂದು ಎಲ್ಲಿಯ ವರೆಗೆ ಉಳಿಯುವದೇ ಅಲ್ಲಿಯರೆಗೆ ಹಿಂದುಸ್ಥಾನದ ಖಡ್ಗವು ಎಂದೆಂದೂ ಮೊಂಡವಾಗಲು ಸಾಧ್ಯವಿಲ್ಲ. ಇಷ್ಟೇ ಅಲ್ಲ್ಲದು ಒಂದು ದಿನ ಲಂಡನ್ದ ಪ್ರವೇಶದ್ವಾರದ ಮೇಲೆಯೂ ಪ್ರಹಾರ ಮಾಡುತ್ತಿರುವುದು. ಕಂಡುಬಂದಿತು.
ಭಾರತದಂತಹ ಮಹಾ ಶಕ್ತಿಶಾಲಿಯಾದ ದೇಶವು ಅಂತಕಲಹದಿಂದ ಭಿನ್ನವಾಗಿ ಪರಕೀಯ ಪಾರಾಕ್ರಾಂತವಾಗಿ ಬಿಟ್ಟಿದ್ದರೂ ಅದರ ಅಂತಃ ಸತ್ವವು ಸಂಪೂರ್ಣವಾಗಿ ಅಳಿದು ಹೋಗಿರಲಿಲ್ಲ ವೆಂಬುದು ಅಭಿಮಾನದ ಸಂಗತಿ ಎಂದು ಹೇಳಬಹುದು.
ಇದರಂತೆ ಒಬ್ಬ ವೀರ ಭಟ ವೀರಾ ವೇಶದಿಂದ ಹೇಳಿದ ಮಾತು ಗಮನಾರ್ಹವಾದುದು ಅವನು ಹೇಳಿದುದೇನೆಂದರೆ ಭಾರತವು ಸ್ವತಂತ್ರ್ಯವಾಗಬೇಕೆಂದು ಮನಸ್ಸು ಮಾಡಿದರೆ ಭಾರತವು ಒಕ್ಕಟ್ಟಾಗಿ ಒಂದೆಡೆ ಸೇರಿ ಒಮ್ಮಸ್ಸಿನಿಂದ ಉಗುಳಿದರೂ ಸಾಕು ಆ ಉಗುಳಿನ ಮಹಾ ಪ್ರವಾಹದಲ್ಲಿ ಒಂದೆಡೆ ಸೇರಿ ಬ್ರಿಟಿಷ ಸಾಮ್ರಾಜ್ಯ ತೇಲಿ ಹೋಗುತ್ತದೆ. ಈ ವೀರವಾಣಿಯನ್ನು ಗಮನಿಸಿದರೆ ಭಾರತದಲ್ಲಿ ಅದೆಂತಹ ಶಕ್ತಿ ಅಡಗಿತೆಂಬುದು ಲಕ್ಷ್ಯಕ್ಕೆ ಬಾರದಿರುವುದು.
ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸ ಬೇಕೆಂದು ಪಣತೊಟ್ಟರು. ನಾನಾಸಾಹೇಬ ಪೇಶ್ವೆ ಬಹದ್ದೂರಶಹ ಝಾಂಸಿ ರಾಣಿ ಇವರು ಯುದ್ಧದ ಮುಖಂಡತ್ವವನ್ನು ವಹಿಸಿದರು. ಇವರ ಜೊತೆಗೆ ಇತರ ಸಂಸ್ಥಾನಿಕರು ಕೈಜೋಡಿಸಿದರು. ಬಹದ್ದೂರ ಶಹ ಜಯಪೂರ ಜೋಧಪುರ ಬಿಕಾನೇರ ಅಲ್ವಾರ ಈ ಮೊದಲಾದ ರಾಜ್ಯಗಳ ಅರಸರಿಗೆ ಪತ್ರಗಳನ್ನು ಬರೆದು ಯುದ್ಧದಲ್ಲಿ ಪಾಲ್ಗೋಳಲು ವಿನಂತಿಸಿದರು. ನಾನಾ ಸಾಹೇಬ ಮಹಾರಾಷ್ಟ್ರದಿಂದ ದಿಲ್ಲಿಗೆ ಅನೇಕ ಬಾರಿ ಗುಪ್ತವಾಗಿ ಭೇಟಿಯಾದನು. ಈ ಯುದ್ಧದ ನೇತಾರನಾಗಿ ತನ್ನ ನಿಷ್ಠಾವಂತ ಸೇನಾಪತಿ ತಾತ್ಯಾಟೋಪಿಯನ್ನು ನೇಮಿಸಿದನು. ಅನೇಕರು ಫಕೀರ ಸನ್ಯಾಸಿ ಭಿಕ್ಷುಕ ಮುಂತಾದ ವೇಷಗಳಿಂದ ದೇಶವನ್ನು ಸುತ್ತಿ ಗುಪ್ತವಾಗಿ ಸಂಘಟನೆಗೆ ನೆರವಾದರು. ಸಂಘಟನೆಯು ಅತ್ಯಂತ ಗುಪ್ತವಾಗಿ ನಡೆಯಿತು. ಈ ಕಾರ್ಯಕ್ಕಾಗಿ ಬೇರೆ ಬೇರೆ ಸಂಕೇತಗಳನ್ನು ಇಟ್ಟುಕೊಂಡು ಕಮಲದ ಸಂಕೇತವನ್ನು ಸೈನಿಕ ಸಂಘಟನೆಯದ್ದಾಗಿತ್ತು. ಈ ಕಮಲವನ್ನು ಮುಟ್ಟಿದವರು ಕ್ರಾಂತಿಯಲ್ಲಿ ಪಾಲ್ಗೊಳಲು ಅನುಮತಿಸಿದ್ದಂತೆ ಎಂಬುದಾಗಿತ್ತು.
ಗ್ರಾಮಾಂತರ ಸಂಘಟನೆಗೆ ಚಪಾತಿಯು ಮುಖ್ಯವಾಗಿತ್ತು. ಚಪಾತಿಯನ್ನು ತಿಂದವರೆಲ್ಲರೂ ಈ ಕ್ರಾಂತಿಗೆ ಸಿದ್ಧರು ಎಂಬುದು ಸಂಕೇತವಾಗಿತ್ತು. ಗುಪ್ತವಾಗಿ ಊರಿಂದೂರಿಗೆ ಚಪಾತಿಗಳ ಗಂಟುಗಳು ಸಾಗುತ್ತಿದ್ದವು. ಇದೆಲ್ಲಾ ಗೌಪ್ಯವಾಗಿಯೇ ನಡೆಯಿತು. ಬ್ರಿಟಿಷರಿಗೆ ಈ ಬಗ್ಗೆ ಸ್ಪಲ್ಪ ಸುಳಿವು ದೊರೆಯಲಿಲ್ಲ. ಇಷ್ಟೆಲ್ಲಾ ಸಂಘಟನೆಯಾದ ಮೇಲೆ ಒಂದು ನಿದರ್ಿಷ್ಟ ದಿನಾಂಕ ಗೊತ್ತು ಮಾಡಿದರು.
1857 ಮಾರ್ಚ 29 ರಂದು 11 ನೇ ರೆಜಮೆಂಟಿನ ಮಂಗಲಪಾಂಡೆ ಎಂಬುವನು ತುಪಾಕಿಗೆ ಕೊಬ್ಬನ್ನು ಸವರಿರುವರೆಂದು ಪ್ರತಿಭಟಿಸಿದರು. ಹಾಗೂ ಇಬ್ಬರು ಇಂಗ್ಲೀಷ ಅಧಿಕಾರಿಗಳನ್ನು ಕೊಂದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಪಾಂಡೆನನ್ನು ಗಲ್ಲಿಗೆರಿಸಿದರು. ಇದುವೆ ಸಮರ ಸ್ಪೋಟಗೊಳಲಿಕ್ಕೆ ಕಾರಣವಾಯಿತು. ನಿಗದಿತ ಸಮಯಕ್ಕಿಂತ ಮೊದಲೇ ಯುದ್ಧ ಪ್ರಾರಂಭವಾಯಿತು. 1857 ಮೇ 10 ರಂದು ಮಿರತದಲ್ಲಿ ಭುಗಿಲೆದ್ದಿತು ಮೂರು ದೇಶಿ ಪಡೆಗಳು ಯುದ್ಧದಲ್ಲಿ ನಿರತವಾದವು. ಕಂಡ ಕಂಡಲ್ಲಿ ಬ್ರಿಟಿಷರನ್ನೂ ಕೊಲ್ಲ ತೊಡಗಿತು. ತಾತ್ಯಾ ಟೋಪಿ ತನ್ನ ಇಪ್ಪತ್ತು ಸಾವಿರ ಸೈನ್ಯದೊಡನೆ ಖಾನಪೂರವನ್ನು ವಶಪಡಿಸಿಕೊಂಡನು. ಇತ್ತ ರಾಣಿ ಲಕ್ಷ್ಮೀಬಾಯಿಯೂ ತನ್ನ ರಾಜ್ಯದಲ್ಲಿಯ ಬ್ರಿಟಿಷರನ್ನು ಹೊರ ಹಾಕಿದಳು. ಬ್ರಿಟಿಷ ಅಧಿಕಾರಗಳನ್ನು ಕೊಲ್ಲಲಾಯಿತು.
ಬಹುಬೇಗನೆ ದೆಹಲಿ ಖಾನಪೂರ ಲಖನೌ ಝಾನ್ಸಿ ಮುಂತಾದ ಕಡೆ ಕಾಳ್ಗಿಚ್ಚಿನಂತೆ ಯುದ್ಧ ಹರಡಿತು. ಸಾಕಷ್ಟು ಸಂಖ್ಯೆಯಲ್ಲಿ ಬ್ರಿಟಿಷರು ಹತರಾದರು. ದೆಹಲಿ ಸುಲಭವಾಗಿ ವಶವಾಯಿತು. ಅಲ್ಲಿ ಸೈನ್ಯವೂ ಇರಲಿಲ್ಲ ಬ್ರಟಿಷರ ತಯಾರಿಯೂ ಇರಲಿಲ್ಲ. ಅಲ್ಲಿಯ ಮೊಗಲ ದೊರೆ ಬಹದ್ದೂರಶಹನನ್ನು ಭಾರತದ ಸಾಮ್ರಾಟನೆಂದು ಸಾರಿದರು ಇತ್ತ ನಾನಾ ಸಾಹೇಬನೂ ಪೇಶ್ವೆ ಎಂದು ಸಾರಿದನು. ಝಾಂಸಿಯೂ ಸ್ವತಂತ್ರ್ಯವಾಯಿತು. ಭಾರತೀಯರ ಕೆಚ್ಚೆದೆಯ ಹೋರಾಟದಿಂದ ಜಯ ಲಭಿಸಿತು. ಬ್ರಿಟಿಷರಿಗೆ ದಿಕ್ಕೆ ತೋಚದಂತಾಯಿತು. ಯುದ್ಧವು ಮುಗಿಯಿತು. ಎಲ್ಲೆಡೆ ಶಾಂತಿ ಹರಡಿತು. ಆದರೆ ಬ್ರಿಟಿಷರು ಸುಮ್ಮನೆ ಕೂಡಲಿಲ್ಲ ಇಂಗ್ಲೇಂದಿಂದ ದೊಡ್ಡ ಸೈನ್ಯ ಸಜ್ಜುಗೊಳಿಸಿ ಪ್ರತಿದಾಳಿ ಪ್ರಾರಂಭಿಸಿದರು.
ಈ ಸಾರೆ ಭಾರತೀಯರಲ್ಲಿ ಮೊದಲಿನ ಸಂಘಟನೆ ಒಕ್ಕಟ್ಟು ಉಳಿಯಲಿಲ್ಲ. ಚದುರಿದಂತೆ ಅಲ್ಲಲ್ಲಿ ಪ್ರತಿಭಟಿಸಿದರು. ಆದರೆ ಕೊನೆಗೆ ಈ ಪ್ರಥಮ ಸ್ವಾತಂತ್ರ್ಯ ಸಮರ ಪರಾಜಯ ಹೊಂದಿತು. ಈ ಯುದ್ಧದಲ್ಲಿ ಭಾರತೀಯರು ಸೋತರೂ ಗೆದ್ದರೆಂದೇ ಹೇಳಬೇಕು. ಯಾಕೆಂದರೆ ಅವರ ದೇಶಪ್ರೇಮ ತ್ಯಾಗ ಬಲಿದಾನ ಒಕ್ಕಟ್ಟು ಮುಂದಿನ ಪೀಳಿಗೆಯವರಿಗೆ ಪ್ರಚೋದನಕಾರಿಯಾದವು. ಅವರ ಸ್ವಾತಂತ್ರ್ಯ ಪ್ರೇಮ ದೇಶಭಕ್ತಿ ಮುಂದಿನ ಆವೇಶವರೆಗೆ ಸ್ಪೂತರ್ಿ ಆದೇಶಗಳ ಸ್ಪುರದ್ರೂಪಿಯಾದ ಸೆಲೆಗಳಾದವು. ಈ ಯುದ್ಧದಿಂದ ಬ್ರಿಟಿಷರು ಮತ್ತೆ ನೂರು ವರುಷಗಳ ವರೆಗೆ ಆಯುಷ್ಯ ಪಡೆದರೂ ಅದು 1857ನೇ ಸ್ವಾತಂತ್ರ್ಯ ಸಮರದಿಂದ ಪ್ರೇರಣೆ ಪಡೆದು ಸುಮ್ಮನೆ ಕೂಡಲಿಲ್ಲ ನಿರಂತರ ಹೋರಾಟನ್ನು ಮುಂದುವರೆಸಿಕೊಂಡೆ ಬಂದರು.
1857 ರಲ್ಲಿ ಹೇಗೆ ಫಿರಂಗಿಕೋಮಾರೋ ಎಂಬ ಘೋಷ ವಾಕ್ಯ ಆವೇಶದಿಂದ ಹೊರಬಿತ್ತು ಹಾಗೆ ಗಾಂಧೀಜಿಯವರ ನೇತೃತ್ವದಲ್ಲಿ ಚಲೇಜಾವ್ ಚಳವಳಿ ಪ್ರಾರಂಭವಾಯಿತು. ಬ್ರಿಟಿಷರ ಭಾರತವನ್ನು ಬಿಟ್ಟು ತೊಲಗಿರಿ ಎಂಬುದು ಭಾರತದ ಮೂಲೆ ಮೂಲೆಯಲ್ಲಿ ಅನುರಣಿಸಿತು. ಇಡೀ ಭಾರತವೇ ಒಂದಾಗಿ ಒಕ್ಕಟ್ಟಿನಿಂದ ಅಹಿಂಸೆಯಿಂದ ಸತ್ಯಾಗ್ರಹದ ಮೂಲಕ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಗಸ್ಟ 15 1947 ರಂದು ನಮಗೆ ಸ್ವಾತಂತ್ರ್ಯ ದೊರೆಯಿತು. ಮೂರು ವರುಷಗಳಲ್ಲಿ ಭಾರತವೂ ಅಂತಃ ಸತ್ವವನ್ನು ಪಡೆದು ಅನೇಕ ವಿಧವಾಗಿ ಸ್ಪುರಣಗೊಂಡು ರಾಷ್ಟ್ರದ ನವಚೇತನವನ್ನು ಪ್ರಜ್ವಲಗೊಳಿಸಿ ಅಜೇಯವಾಯಿತು ಇಡೀ ಭೂಮಂಡಲಕ್ಕೆ ಆದರ್ಶ ಪ್ರಾಯವೆನಿಸಿತು.
ಇದಕ್ಕೆ 1857ರ ಪ್ರಥಮ ಸ್ವಾತಂತ್ರ್ಯ ಸಮರವೇ ಕಾರಣ ನಮ್ಮ ಸ್ವಾತಂತ್ರ್ಯ ದಿನದಂದು ಆ ವೀರ ಪುರುಷರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
- ಪ್ರೊ. ನಾಗರಾಜ ಅಂಗಡಿ
ಬೆಳಗಾ