ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಅವರನ್ನು ಏನೆಂದು ಕರೆಯುವದು? ನಾಟಕಕಾರರೆಂದೆ, ಕಾದಂಬರಿಕಾರರೆಂದೆ, ಚಿತ್ರಕಲಾವಿದರೆಂದೆ, ಅನುವಾದಕರೆಂದೆ, ಶ್ರೇಷ್ಠ ಚಿಂತಕರೆಂದೆ.....? ಆ ಎಲ್ಲವೂ ಆಗಿದ್ದರು ಚಂದ್ರಕಾಂತ ಕುಸನೂರ ಅವರು. ಹಲವು ಬಗೆಯ ಪ್ರತಿಭೆಗಳ ಶ್ರೇಷ್ಠತ್ವದ ಒಂದು ಮೊತ್ತವಾಗಿ ಅವರು ಕಾಣಿಸಿಕೊಂಡವರು.
ಹೈದರಾಬಾದ ನಿಜಾಮನ ಆಧೀನದಲ್ಲಿದ್ದ ಕಲಬುಗರ್ಿಯಲ್ಲಿ 1931 ರ ಅಕ್ಟೋಬರ್ 21 ರಂದು ಜನಿಸಿದ ಅವರು ಮೊದಲು ಕಲಿತಿದ್ದು ಹಿಂದಿ, ಉದರ್ು ಭಾಷೆಗಳನ್ನು. ಬರೆಯಲಾರಂಭಿಸಿದ್ದೂ ಆ ಭಾಷೆಯಲ್ಲೇ. ಮಾತೃಭಾಷೆ ಕನ್ನಡವೇ ಆಗಿದ್ದರೂ ಕನ್ನಡದ ವಾತಾವರಣವೇ ಇರಲಿಲ್ಲ. ಕೊನೆಗೆ ಧಾರವಾಡದ ಒಂದು ಕವಿ ಸಮ್ಮೇಳನದಲ್ಲಿ ವರಕವಿ ಬೇಂದ್ರೆಯವರಿಂದ ಕನ್ನಡದ ದೀಕ್ಷೆ ಪಡೆದ ಅವರು ಕನ್ನಡದಲ್ಲಿ ಬರೆಯಲಾರಂಭಿಸಿದರು. ಎಮ್. ಎ. ಬಿ.ಎಡ್ ಪದವಿ ಪಡೆದು ಪ್ರಾಧ್ಯಾಪಕರಾಗಿ ಕೆಲಕಾಲ ಕೆಲಸ ಮಾಡಿ ನಂತರ ಕನರ್ಾಟಕ ಸರಕಾರದ ಸೇವೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ನಂತರ ಬೆಳಗಾವಿಯ ನಿವಾಸಿಗಳಾಗಿ ಈಚೆಗೆ ತಮ್ಮ 90 ನೆಯ ವಯಸ್ಸಿನಲ್ಲಿ ನಿಧನ ಹೊಂದಿದ ಕುಸನೂರರು ವಿವಿಧ ಕ್ಷೇತ್ರಗಳಲ್ಲಿ ಕಾಣಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದರು.
60 ನಾಟಕ, 6 ಕಾದಂಬರಿ, 4 ಕಲಾ ವಿಮಶರ್ೆ, 2 ಅನುವಾದ, 1 ಕವನ ಸಂಕಲನ, 3 ಕಥಾ ಸಂಕಲನ ಸಹಿತ 75 ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ ಅವರು ಕನ್ನಡದಲ್ಲೇ ಹಾಯ್ಕು ಮತ್ತು ಅಬ್ಸಡರ್್ ನಾಟಕಗಳನ್ನು ಮೊಟ್ಟಮೊದಲು ತಂದವರೆನಿಸಿದ್ದಾರೆ. ಕಲಬುಗರ್ಿಯಲ್ಲಿದ್ದಾಗಲೇ ರಂಗ ಮಾಧ್ಯಮ ತಂಡ ಕಟ್ಟಿ ನಾಟಕಗಳನ್ನಾಡಿದ ಅವರು ಬರೆದ ದಿಂಡಿ , ಮತ್ತಿತರ ನಾಟಕಗಳು ರಾಜ್ಯದ ವಿವಿಧೆಡೆ ಪ್ರದರ್ಶನ ಕಂಡವು. ರಿಹರ್ಸಲ್, ಆನಿ ಬಂತೊಂದಾನಿ, ರತ್ತೋ ರತ್ತೋ ರಾಯರ ಮಗಳೆ, ವಿದೂಷಕ , ಹೀಗೊಂದೂರಾಗ, ಯಸ್, ಮಿ. ಪಂಡಿತರಾವ್ ಮೊದಲಾದ ನಾಟಕಗಳು ಜನಪ್ರಿಯವಾಗಿವೆ.
ಅನಂತಮೂತರ್ಿಯವರ ಸಂಸ್ಕಾರ ಕಾದಂಬರಿ, ಆಲನಹಳ್ಳಿಯವರ ಕಾಡು ಕಾದಂಬರಿಗಳನ್ನು ಹಿಂದಿ ಭಾಷೆಗೆ ಅನುವಾದಿಸಿದರು. ಅವಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಬಂದವು. ಹಿಂದಿಯಲ್ಲಿ ಅವರೇ ಬರೆದ ಕಥೆಗಳ ಸಂಕಲನ ರೇಶಮ್ ಕಿ ಗುಡಿಯಾ, ಮಹಾಪುರುಷ್ ನಾಟಕಗಳೂ ಪ್ರಕಟವಾಗಿವೆ. ಯಾತನಾ ಶಿಬಿರ, ಕೆರೂರನಾಮಾ, ಗೋಹರಜಾನ ಮಾಲತಿ ಮತ್ತು ನಾನು, ಒಂದು ಕೈಫಿಯತ್ ಮತ್ತು ಚರ್ಚಗೇಟ್ ಮೊದಲಾದ ಕಾದಂಬರಿಗಳು ಉತ್ತಮ ವಿಮಶರ್ೆ ಪಡೆದ ಕೃತಿಗಳೆನಿಸಿವೆ.
ಚಿತ್ರಕಲೆಯ ಕ್ಷೇತ್ರದಲ್ಲೂ ಕೈಯಾಡಿಸಿದ ಅವರು 500 ಕ್ಕೂ ಹೆಚ್ಚು ರೇಖಾ ಚಿತ್ರ, ತೈಲಚಿತ್ರಗಳನ್ನು ರಚಿಸಿದ್ದು ದೇಶದ ಪ್ರಮುಖ ನಗರಗಳಲ್ಲೆಲ್ಲ ಪ್ರದರ್ಶನ ಕಂಡಿವೆ. ಅಷ್ಟೇ ಅಲ್ಲ, ಕಲೆ ಮತ್ತು ಚಿಂತನೆ, ಕಲೆ - ಅನುಭವ- ಅನುಭಾವ ಮೊದಲಾದ ಕಲಾವಿಚಾರ ವಿಮಶರ್ೆಯ ಕೃತಿಗಳು ತುಂಬ ಮಹತ್ವ ಪಡೆದುಕೊಂಡಿವೆ. ಅವರದು ವಿಶೇಷವಾಗಿ ನವ್ಯ ಮತ್ತು ಅಬ್ಸಡರ್್ ಆಟರ್್ ಪ್ರಕಾರಕ್ಕೆ ಸೇರುವಂತಹದು. ಸಾಕಷ್ಟು ಸಾಹಿತಿಗಳ ಪುಸ್ತಕದ ಮುಖಪುಟವನ್ನು ಅವರ ಚಿತ್ರಗಳು ಅಲಂಕರಿಸಿವೆ. ಕನರ್ಾಟಕದಲ್ಲಿ ಬಹುಶಃ ನಾಟಕ ಅಕಾಡೆಮಿ, ಸಾಹಿತ್ಯ ಅಕಾಡೆಮಿ , ಮತ್ತು ಲಲಿತಕಲಾ ಅಕಾಡೆಮಿ ಈ ಮೂರೂ ಸಂಸ್ಥೆಗಳ ಗೌರವ ಪ್ರಶಸ್ತಿಗೆ ಪಾತ್ರರಾದ ಏಕೈಕ ವ್ಯಕ್ತಿ ಅವರೆನ್ನಬಹುದೇನೊ. ಅದೇ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ.
ಕುಸನೂರರಿಗೆ ಸಂಗೀತ ಜ್ಞಾನವೂ ಚೆನ್ನಾಗಿತ್ತು. ವಿಶೇಷವೆಂದರೆ ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ವಲಯಗಳೆರಡರಲ್ಲೂ ಅವರಿಗೆ ತುಂಬ ಗೌರವವಿತ್ತು. ಮರಾಠಿಗರು ಸಾಹಿತ್ಯ, ಸಂಗೀತ, ನಾಟಕ , ಚಿತ್ರಕಲೆಗಳಿಗೆ ಸಂಬಂಧಿಸಿದ ಯಾವ ಕಾರ್ಯಕ್ರಮವಿದ್ದರೂ ಕುಸನೂರರನ್ನು ಆಮಂತ್ರಿಸುತ್ತಿದ್ದರು. ಅವರಿಗೆ ಮರಾಠಿ, ಹಿಂದಿ, ಕನ್ನಡ, ಇಂಗ್ಲಿಷ್ ಮತ್ತು ಉದರ್ು ಈ ಐದು ಭಾಷೆಗಳ ಮೇಲೂ ಹಿಡಿತವಿತ್ತು. ಅವರ ಗಂಭೀರ ಅಧ್ಯಯನದಿಂದ ಕೂಡಿದ ಭಾಷಣಗಳ ಶೈಲಿಯೇ ವಿಶಿಷ್ಟವಾದುದಾಗಿತ್ತು. ಕಲೆ ಸಾಹಿತ್ಯ ನಾಟಕಗಳ ಕುರಿತು ಅವರ ಬಾಯಿಂದ ಚಿಂತನಶೀಲ ವಿಚಾರಗಳನ್ನು ಕೇಳುವದೇ ಒಂದು ಸೊಗಸಾದ ಅನುಭವವಾಗಿರುತ್ತಿತ್ತು.
ಬೆಳಗಾವಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹನಿದರ್ೆಶಕರಾಗಿ ಕಾರ್ಯ ನಿರ್ವಹಿಸಿದ ಅವರು ಜಿಲ್ಲೆಯ ಕಲಾವಿದರಿಗೆ ತುಂಬ ಪ್ರೋತ್ಸಾಹ ನೀಡಿದರು. ಅವರಿದ್ದಾಗ ನಾನೂ ಹಲವು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡುವ ಅವಕಾಶ ಒದಗಿಸಿದ್ದರು. ಅಲ್ಲದೇ ನನ್ನ ಸಾಹಿತ್ಯ ಸಂಗೀತ ನಾಟಕ ಮತ್ತು ಪತ್ರಿಕಾ ಕ್ಷೇತ್ರಗಳ ಆಸಕ್ತಿ ಕುರಿತು ಅರಿತಿದ್ದರಿಂದ ನಮ್ಮ ನಡುವೆ ಸಾಕಷ್ಟು ಆತ್ಮೀಯವಾದ ಒಡನಾಟವೂ ಇತ್ತು. ನಮ್ಮ ವಿವಿಧ ವೇದಿಕೆಗಳ ಕಾರ್ಯಕ್ರಮದಲ್ಲಿ ಯಾವತ್ತೂ ಭಾಗವಹಿಸುತ್ತಿದ್ದರು.
( ಒಮ್ಮೆ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಶಿವರಾಮ ಕಾರಂತರನ್ನು ಕರೆಸಬೇಕೆಂದುಕೊಂಡಾಗ ನನ್ನನ್ನೇ ಕೋಟ ಸಾಲಿಗ್ರಾಮಕ್ಕೆ ಕಳಿಸಿದ್ದರು). ನಾನು ಕನ್ನಡಮ್ಮ ದಿನಪತ್ರಿಕೆಯಲ್ಲಿದ್ದಾಗ ಕುಸನೂರರಿಂದ " ನಿರ್ಗಮನ" ಎಂಬ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸಲು ಪಡೆದುಕೊಂಡಿದ್ದೆ.
ಅವರು ಕಟು ವಿಮರ್ಶಕರೂ ಆಗಿದ್ದರು. ಅವರ ವಸ್ತುನಿಷ್ಠ ವಿಮಶರ್ೆಗೆ ಬಹಳ ಜನ ಸಾಹಿತಿ ಕಲಾವಿದರು ಅಂಜುತ್ತಿದ್ದರು. ಕುಸನೂರರ ನಿಧನದೊಂದಿಗೆ ಬೆಳಗಾವಿ ಹಲವು ಕ್ಷೇತ್ರಗಳಲ್ಲಿ ಕೊರತೆಯನ್ನು ಅನುಭವಿಸಬೇಕಾಗಿದೆಯೆನ್ನುವದಂತೂ ನಿಜ. ಇಂತವರು ಸತ್ತಾಗ ಮಾತ್ರ ನಿಜವಾದ ನಷ್ಟವಾಗುವದು. ಅವರ ಧರ್ಮಪತ್ನಿಯ ಹೆಸರು ಸರೋಜಾಬಾಯಿ ಮತ್ತು ಅವರ ಮನೆಯ ಹೆಸರೂ ಅದೇ ಆಗಿದೆ..
- ಎಲ್. ಎಸ್. ಶಾಸ್ತ್ರಿ