ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು * ಪ್ರಧಾನಿಯ ಮನ್ ಕಿ ಬಾತ್ದಲ್ಲಿ ಮುಧೋಳ ನಾಯಿ ಮಾಹಿತಿಗೆ ಫೀದಾ ಆದ ಜನತೆ
* ದೇಶದ ಮೂಲೆ ಮೂಲೆಗಳಿಂದ ಮತ್ತಷ್ಟು ಹೆಚ್ಚಿದ ಬೇಡಿಕೆ

ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲೆಯ ಮುಧೋಳ ನಾಯಿಗಳ ಬಗ್ಗೆ ಪ್ರಸ್ತಾಪಿಸುವ ಮೂಲಕ ಮುಧೋಳ ಹೌಂಡ್ ಖ್ಯಾತಿಯ ಮುಧೋಳ ನಾಯಿ ತಳಿಯ ಕುರಿತು ಭಾರತಕ್ಕೆ ತಿಳಿಯುವಂತೆ ಮಾಡಿದ್ದಾರೆ. ಮುಧೋಳ ನಾಯಿಗೆ ವಿಶೇಷ ತರಬೇತಿ ನೀಡಿ ಸಿಐಎಸ್ಎಫ್ ಸೇನೆ,ಎನ್ಎಸ್ಜಿ ಸೇರಿ ರಕ್ಷಣಾ ಪಡೆಗಳಲ್ಲಿ ಬಳಸಿಕೊಳ್ಳಲಾಗುವ ಈ ತಳಿಯು ಬಾಂಬ್ ಪತ್ತೆ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ನಾಯಿಗಳು ಪೊಲೀಸರು, ರಕ್ಷಣಾ ಪಡೆಗೆ ಅತ್ಯಮೂಲ್ಯ ನೆರವು ನೀಡುತ್ತಿವೆ. ಮನೆಯಲ್ಲಿ ದೇಸಿ ತಳಿಯ ನಾಯಿಗಳನ್ನು ಸಾಕಿ ಎಂದು ಪ್ರಧಾನಿ ಹೇಳುವ ಮೂಲಕ ದೇಶದ ಮೂಲೆ ಮೂಲೆಗೆ ಮುಧೋಳ ಖ್ಯಾತಿಯಾಗುವಂತೆ ಮಾಡಿದ್ದಾರೆ.
ಮುಧೋಳ ಹೌಂಡ್ ಸೇರಿದಂತೆ ದೇಶದ ಹಲವಾರು ದೇಶಿ ಶ್ವಾನ ತಳಿಗಳ ಬಗ್ಗೆ ಸಂಶೋಧನೆಯನ್ನು ಈಗಾಗಲೆ ನಡೆಸಲಾಗುತ್ತಿದೆ. ತೀಕ್ಷ್ಣ ಕಣ್ಣು, ಚಿರತೆ ವೇಗ, ತೆಳುವಾದ ಚಪ್ಪಟೆ ತಲೆ, ಅಗಲವಾದ ಕಾಲು, ತೆಳ್ಳನೆ ದೇಹ, ಬಿಳಿ ಮತ್ತು ಕಂದು ಬಣ್ಣಗಳಲ್ಲಿ ಕಂಡು ಬರುವ ಮುಧೋಳ ನಾಯಿಯು ಭಾರತದ ಭದ್ರತಾ ಪಡೆಗಳಲ್ಲಿ ಪ್ರಮುಖವಾಗಿ ಕಂಡು ಬರುತ್ತಿರುವ ನಾಯಿಯಾಗಿದೆ. ಕ್ರಿಪೂ 500ರಲ್ಲಿಯೇ ಮುಧೋಳ್ ನಾಯಿ ನಮ್ಮ ಕನರ್ಾಟಕದವರಿಗೆ ಪರಿಚಯವಾಗಿದೆ ಎಂದು ಇತಿಹಾಸ ಹೇಳುತ್ತದೆ. ರಾಜರ ಆಡಳಿತದಲ್ಲಿ ಸಂಸ್ಥಾನವಾದ ಮುಧೋಳದಲ್ಲಿ ಅಂದಿನ ಅರಸನಾದ ರಾಜ ಮಾಲೋಜಿರಾವ್ ಘೋರ್ಪಡೆ ಪಶ್ರಿಯನ್ನಾಯಿಗಳ ಮುಧೋಳ ನಾಯಿ ತಳಿಗಳ ಅಭಿವೃದ್ಧಿಗೆ ಒತ್ತು ನೀಡಿದ್ದರು.
ತದನಂತರ ಇತ್ತೀಜಿಗೆ ಇಂದಿನ ಡಿಸಿಎಂ ಗೋವಿಂದ ಕಾರಜೋಳ ಅವರು ಮುಧೋಳ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಸುಮಾರು 40 ಎಕರೆ ಜಾಗದಲ್ಲಿ ಶ್ವಾನ ಸಂಶೋಧನೆ ಕೇಂದ್ರ ಸ್ಥಾಪಿಸಿದರು. ಇಲ್ಲಿ ಮುಧೋಳ ತಳಿಗಳ ವಂಶಾಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈವರೆಗೆ ರಕ್ಷಣಾ ಪಡೆಗಳು 20 ನಾಯಿಗಳನ್ನು ತರಬೇತಿಗಾಗಿ ಇಲ್ಲಿಂದ ಪಡೆದಿವೆ.2017ರಲ್ಲಿ ದಿಲ್ಲಿಯ ಕೆಂಪುಕೋಟೆ ಆವರಣದಲ್ಲಿ ಜ.26 ರಂದು ನಡೆದಿರುವ ಗಣರಾಜೋತ್ಸ್ಸವದ ಪರೇಡ್ನಲ್ಲಿ ಭಾಗವಹಿಸಿ ಶ್ವಾನ ಪ್ರೀಯರ ಮನದ ಜತೆಗೆ ಅಂದು ಇಡೀ ವಿಶ್ವದ ಗಮನ ಸೆಳೆಯಲು ಯಶಸ್ವ್ವಿಯಾದವು.ಈ ಮೂಲಕ ಕನ್ನಡ ನಾಡಿನ ಹೆಮ್ಮೆಯ ಮುಧೋಳ ಶ್ವಾನ ಪಡೆ ಮೊದಲ ಬಾರಿಗೆ ದೇಶದ ಗಣರಾಜ್ಯೊತ್ಸವ ಪರೇಡನಲ್ಲಿ ಹೆಜ್ಜೆ ಹಾಕಿದ ಇತಿಹಾಸ ಬರೆದವು.
ಮುಂಗಾಲು ಎತ್ತರಿಸಿ ಕುಳಿತುಕೊಳ್ಳುವ ವಿಶಿಷ್ಟ ಶೈಲಿ, ತೆಳ್ಳಗೆ ಉದ್ದ, ಅತ್ಯಂತ ಬಲಿಷ್ಠ ಸ್ನಾಯು ಹೊಂದಿರುತ್ತವೆ. ಓಟಕ್ಕೆ ಅನುಕೂಲವಾಗುವ ದೇಹ ರಚನೆ, ಗಾಳಿ ಸಿಳಿಕೊಂಡು ಮುನ್ನುಗಲು ಚಪ್ಪಟ್ಟವಾಗಿರುವ ಕಿವಿಗಳು, ಅಗಲವಾದ ತಲೆಬುರುಡೆ, ಉದ್ದ ಚೂಪಾದ ಗಟ್ಟಿಯಾದ ಒಸಡುಗಳಿಂದ ಕೂಡಿದ ಬಾಯಿ, ಅಗಲವಾದ ಎದೆ ಗೂಡು, ಉದ್ದನೆ ಮುಂಗಾಲು ಇರುತ್ತದೆ. ಬಿಳಿ, ಕಪ್ಪು, ಕಂದು, ಬೂದು ಬಣ್ಣಗಳಿಂದ ಕೂಡಿವೆ. ಸೂಕ್ಷ್ಮ ಸಂವೇದನೆಗಳನ್ನು ಗ್ರಹಿಸುವ ತಳಿಯಾದ ಈ ನಾಯಿ, ತನ್ನ ಮಾಲೀಕ ನೀಡಿದ ಅನ್ನ ತಿಂದು ನಿಯತ್ತಿನಲ್ಲಿ ಶ್ರೇಷ್ಠತೆ ಗಳಿಸಿದ ಈ ನಾಯಿ ನಿಯತ್ತಿನಲ್ಲಿ ಯಾರಿಗೂ ಯಾವುದಕ್ಕೂ ಸರಿಸಾಟಿಯಾಗಲಾರದು.

ಈ ಕೀರ್ತಿ ಗೆ ಕಾರಣೀತಕರ್ತರಾದವರು ಮುಧೋಳ ಸಂಸ್ಥಾನದ ಅಂದಿನ ಘೋರ್ಪಡೆ ಮಹಾರಾಜರು. ಹಾಗೂ ಇಂದಿನ ಡಿಸಿಎಂ ಮುಧೋಳ ಶಾಸಕ ಗೋವಿಂದ ಕಾರಜೋಳ ಅವರ ಪ್ರಯತ್ನದ ಫಲವಾಗಿ ಮುಧೋಳ ನಾಯಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. 2008-09ರಲ್ಲಿ ಗೋವಿಂದ ಕಾರಜೋಳ ಸಚಿವರಾಗಿದ್ದಾಗ 5 ಕೋಟಿ ರೂಪಾಯಿ ವೆಚ್ಚದಲ್ಲಿ ತಿಮ್ಮಾಪೂರ ಬಳಿ 'ಶ್ವಾನ ಸಂಶೋಧನಾ ಕೇಂದ್ರ' ಆರಂಭಿಸಿದರು. ಬೀದರ್ ಪಶು ಸಂಗೋಪನಾ ವಿಶ್ವವಿದ್ಯಾಲಯ ಅಂದಿನ ಕುಲಪತಿ ಡಾ. ಸುರೇಶ ಹೊನ್ನಪ್ಪಗೋಳ ಮಾರ್ಗದರ್ಶನದಲ್ಲಿ ಸಂಶೋಧನೆ ಕೇಂದ್ರವಾಗಿ ಪರಿವರ್ತನೆಯಾಯಿತು.
1969ರಲ್ಲಿ ರಾಷ್ಟ್ರೀಯ ಕೆನಲ್ ಕ್ಲಬ್ನಿಂದ ಪ್ರದರ್ಶಿಸಲಾಗುತ್ತಿತ್ತು. ನಂತರ 1990ರಲ್ಲಿ ಮೈಸೂರು ಕೆನಲ್ ಕ್ಲಬ್ ಕೂಡ ವಿವಿಧ ತಳಿ ಶ್ವಾನಗಳ ಪ್ರದರ್ಶನ ಏರ್ಪಡಿಸುವ ಮೂಲಕ ಪ್ರಾಮುಖ್ಯತೆ ಕಲ್ಪಿಸಿಕೊಟ್ಟಿದೆ. ಬೆಂಗಳೂರು ಕರುಣಾ ದಯಾ ಸಂಘ, ಸೊಸೈಟಿ ಫಾರ್ ಇಂಡಿಯನ್ ಬಿಡ್ ಆಫ್ ಡಾಗ್ಸ್ ಸಂಸ್ಥೆಯ ಸಹಕಾರದಿಂದ ಮುಧೋಳ ತಾಲೂಕಿನ ತಿಮ್ಮಾಪೂರ ರನ್ನ ಸಹಕಾರಿ ಸಕ್ಕರೆ ಕಾಖರ್ಾನೆ ಬಳಿ ಶ್ವಾನ ಸಂಶೋಧನಾ ಕೇಂದ್ರ ಆರಂಭಿಸಲಾಗಿದೆ. ಹಲಗಲಿ, ಮೆಳ್ಳಿಗೇರಿ, ಲೋಕಾಪೂರ, ಮುಧೋಳ, ಮುಗಳಖೋಡ, ಮಳಲಿ, ಮಂಟೂರ, ಚಿತ್ರಬಾನುಕೋಟಿ ಗ್ರಾಮಗಳಲ್ಲಿ ನಾಯಿಗಳನ್ನು ಸಾಕುವ ರೈತರಿದ್ದಾರೆ. ಮುಧೋಳ ಶ್ವಾನ ತಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಅರೇಬಿಯಾ, ಮದ್ಯ ಏಷ್ಯಾದಿಂದ ಈ ನಾಯಿ ಭಾರತಕ್ಕೆ ಬಂದಿತ್ತು. ಮಧೋಳದ ರಾಜ ಮಾಲೋಜಿ ರಾವ್ ಘೋರ್ಪಡೆ ಅವರಿಗೆ ಈ ನಾಯಿಗಳ ಬಗ್ಗೆ ವಿಶೇಷ ಪ್ರೀತಿಗಾಗಿ ಅಲ್ಲದೆ ಅವರು ಒಂದು ಜೊತೆ ಮುಧೋಳ ಶ್ವಾನವನ್ನು ಬ್ರಿಟನ್ ದೊರೆ ಐದನೇ ಜಾಜರ್್ಗೆ ಉಡುಗೊರೆಯಾಗಿ ನೀಡಿದ್ದರು. ಹಲಗಲಿಯ ಬೇಡರು ಬೇಟೆಗಾಗಿ ಈ ನಾಯಿಗಳನ್ನು ಬಳಸುತ್ತಿದ್ದರು. ಈ ತಳಿಯ ನಾಯಿಗಳ ಆಯಸ್ಸು ಸುಮಾರು 13, 14 ವರ್ಷ. ಒಟ್ಟು 18 ತಿಂಗಳಲ್ಲಿ ಈ ನಾಯಿ ಪೂರ್ಣ ಬೆಳವಣಿಗೆ ಕಾಣುತ್ತದೆ. ನಾಯಿಯ ಒಟ್ಟು ಮೈಕಟ್ಟು 1.8 ರಿಂದ 2.3 ಅಡಿಗಳಷ್ಟು ಇರುತ್ತದೆ. ಈಗಲೂ ಮಧೋಳದ ಸುಮಾರು 750ಕುಟುಂಬಗಳು ಈ ನಾಯಿಯನ್ನು ಸಾಕಿ ಮಾರಾಟ ಮಾಡುತ್ತಿವೆ.ಸ್ಟ್ಯಾಂಪ್ ಬಿಡುಗಡೆ: 2005ರಲ್ಲಿ ಭಾರತ ಸರಕಾರ ಈ ತಳಿಯನ್ನು ಗುರುತಿಸಿ, ಮುಧೋಳ ಶ್ವಾನದ ಚಿತ್ರವನ್ನೊಳಗೊಂಡ 5 ರೂ. ಮುಖಬೆಲೆಯ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತ್ತು
ಬೆಂಗಳೂರ ಪ್ರಾಣಿದಯಾ ಸಂಘದಿಂದ 2014ರಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ವಿಶೇಷ ದೇಸಿ ಶ್ವಾನಗಳ ಪ್ರದರ್ಶನದಲ್ಲಿ ಈ ನಾಯಿಗಳು ಭಾಗವಹಿಸಿ, ಹೆಚ್ಚು ಜನಪ್ರಿಯ ಪಡೆಯಲು ಸಾಧ್ಯವಾಯಿತು.. ಜಿಲ್ಲೆ, ಅಂತಾರಾಜ್ಯಗಳಲ್ಲಿ ಪ್ರದರ್ಶನಕ್ಕೂ ಇವುಗಳನ್ನು ಕಳುಹಿಸಲಾಯಿತು ಉತ್ತರ ಪ್ರದೇಶದ ಲಖನೌದಲ್ಲಿರುವ ಭಾರತೀಯ ಭೂ ಸೇನೆ ತರಬೇತಿ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಸುರೇಂದ್ರ ಸೈನಿ ಅವರು ತಿಮ್ಮಾಪೂರ ಶ್ವಾನ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ಮುಧೋಳ ಶ್ವಾನದ 3.5 ತಿಂಗಳ ತಳಿಯಿಂದ ಹಿಡಿದು ವರ್ಷದ ಮರಿಗಳನ್ನು ಪರಿಶೀಲಿಸಿದ್ದರು. 2016 ಫೆಬ್ರವರಿಯಲ್ಲಿ ಈ ತಳಿಯನ್ನು ಪಡೆದುಕೊಂಡಿದ್ದರು. ಮೀರತದಲ್ಲಿ 3ರಿಂದ 4 ತಿಂಗಳ ಎಂಟು ಮರಿಗಳನ್ನು ಉಚಿತವಾಗಿ ಪಡೆದುಕೊಂಡು ತರಬೇತುಗೊಳಿಸಿದ್ದರು ಸದ್ಯ 20 ಮುಧೋಳ ನಾಯಿಗಳು ರಕ್ಷಣಾ ಪಡೆಯಲ್ಲಿವೆ.
2003-04ರಿಂದ ಕೆನಲ್ ಕ್ಲಬ್ನಿಂದ ಈ ನಾಯಿಗಳಿಗೆ ಮೈಕ್ರೋಚಿಪ್ ಅಳವಡಿಕೆ ಮಾಡಲಾಗಿದೆ ವಂಶಾವಳಿ ಪತ್ತೆ ಹಚ್ಚಲು., ದೇಹ ರಚನೆ, ನಿಲವು,ಕೂದಲಿನ ಆಳತೆ,ವೈಖರಿ, ಬಣ್ಣ, ಹಲ್ಲು, ಕಣ್ಣು ವೃಷಣಗಳು ಪರಿಶೀಲನೆ ಮಾಡಲು, ಮರಿಗಳ ತಂದೆ, ತಾಯಿ ಸಂಬಂಧ ಪರಿಶೀಲನೆ ಮಾಡಲು ಇದು ಸಹಾಯಕವಾಗುತ್ತದೆ ಮತ್ತು ಯಾವುದೇ ವಿದೇಶ, ರಾಜ್ಯಗಳಲ್ಲಿರಲಿ ಶ್ವಾನದ ಮಾಹಿತಿಯನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ.
ವಿಶ್ವದಲ್ಲಿ 332ಕ್ಕೂ ಹೆಚ್ಚು ನಾಯಿಯ ತಳಿಗಳಿದ್ದರೆ, ಭಾರತದಲ್ಲೇ 20 ತಳಿಯ ಶ್ವಾನಗಳಿವೆ. ಮುಧೋಳ ತಳಿಯ ನಾಯಿಯನ್ನು ಪೋಷಿಸಿ ಬೆಳೆಸಿದ್ದು ಮಾಲೋಜಿರಾವ್ ಘೋರ್ಪಡೆ. ಈ ಮಹಾರಾಜರು ಶ್ವಾನಗಳೊಂದಿಗೆ ಬೇಟೆಯಾಡುವುದನ್ನು ಇಷ್ಟ ಪಡುತ್ತಿದ್ದರು. ಸಂಸ್ಥಾನಿಕರ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಗಣ್ಯರಿಗೆ ನಾಯಿಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಅಂದಿನಿಂದಲೂ ಮುಧೋಳ ತಳಿ ಉಳಿಸಿ ಬೆಳೆಸಲು, ಈ ಬೇಟೆ ನಾಯಿಯ ಸಂತತಿ ಅಭಿವೃದ್ಧಿಪಡಿಸಲು ಚಂದನಶಿವ ಕುಟುಂಬಕ್ಕೆ ಇನಾಮು ನೀಡಿದ್ದರು. ಈಗಲೂ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ
" ಮುಧೋಳ ಶ್ವಾನಗಳು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಭಾಷಣದಲ್ಲಿ ಪ್ರಸಾರಗೊಂಡ ನಂತರ ಈಗಾಗಲೇ ಭಾರತೀಯ ಸೈನ್ಯದಲ್ಲಿರುವ ಈ ನಾಯಿಗೆ ಮತ್ತಷ್ಟು ಖ್ಯಾತಿ ಬಂದಿದೆ. ಜತೆಗೆ ಹೆಮ್ಮೆ ಮೂಡಿಸಿದೆ. ಸೈನಿಕರ ಜತೆ ದಿನದ 24 ಗಂಟೆಗಳ ಕಾಲ ನಂಬಿಕೆಗೆ ಹೆಸರಾಗಿರುವ ಶ್ವಾನಗಳು ಇರುವದು ಸಂತಸದ ಸಂಗತಿ ಎಂದು ಇಂದಿನ ಡಿಸಿಎಂ ಹಾಗೂ ಮುಧೋಳ ಶಾಸಕರಾದ ಗೋವಿಂದ ಕಾರಜೋಳ ಹೇಳುತ್ತಾರೆ. "ಪ್ರಧಾನಿಯವರು ಮನ್ ಕಿ ಬಾತ್ದಲ್ಲಿ ಭಾಷಣ ಮಾಡಿದ ನಂತರ ಮುಧೋಳ ನಾಯಿಗೆ ಬಾರಿ ಬೇಡಿಕೆ ಬಂದಿದೆ,ನಮಗೆ ಕೋರಿಯರ್ ಮಾಡಿ ಎಂದು ಸಹ ಕೇಳುತ್ತಾರೆ,ಆದರೆ ಸದ್ಯ ನಾವು ಕೇವಲ 16 ಮರಿಗಳಿಗೆ ಮಾತ್ರ ಪೋಷಣೆ ಮಾಡುತ್ತಿದ್ದು,ಸದ್ಯ ಮರಿಗಳನ್ನು ಈ ಹಿಂದೆ ಬುಕ್ ಮಾಡಿದವರಿಗೆ ಹಾಗೂ ರಕ್ಷಣಾ ಪಡೆಗಳಿಗೆ ನೀಡಲಾಗುತ್ತಿದೆ. ಉಳಿದವರು ತಾಲ್ಲೂಕಿನ ವಿವಿಧ ಜನರು ಈ ನಾಯಿ ತಳಿ ಸಂವರ್ದನೆ ಮಾಡುತ್ತಿದ್ದು ಅವರಲ್ಲಿ ಪಡೆಯಬಹುದು. ಮುಧೋಳ ಶ್ವಾನ ತಳಿ ಸವಂರ್ಧನೆ ಕೇಂದ್ರದ ಸಿಬ್ಬಂದಿಯ ಮಾತಾಗಿದೆ.