ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ National Pulse Polio Program Preparatory Meeting at Primary Health Center

ಲೋಕದರ್ಶನ ವರದಿ 

ಯರಗಟ್ಟಿ 17 : : ಮಕ್ಕಳಲ್ಲಿ ಕಂಡುಬರುವ ಪೋಲಿಯೊ ನಿರ್ಮೂಲನೆಗೆ ಪಲ್ಸ್‌ ಪೋಲಿಯೊ ಅಭಿಯಾನ ಹಮ್ಮಿಕೊಂಡಿದ್ದು. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್‌ ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ವೈದ್ಯಾಧಿಕಾರಿ ಡಾ.ಮಲ್ಲಮ್ಮ ನೇಸರಗಿ ಹೇಳಿದರು.  ಸಮೀಪದ ತಲ್ಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ ಮಂಗಳವಾರ ನೆಡೆದ ಡಿ.28 ರಿಂದ 30 ರವರೆಗೆ ಜರಗುವ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿ, ತೋಟದ ಮನೆ, ಇಟ್ಟಂಗಿ ಭಟ್ಟಿ, ಬಸ್ ನಿಲ್ದಾಣ, ಬೇರೆ ರಾಜ್ಯ ಹಾಗೂ ಜಿಲ್ಲೆಯಿಂದ ಬಂದ ಕಾರ್ಮಿಕ ಮಕ್ಕಳಿಗೆ ಮುಂತಾದ ಸ್ಥಳಗಳಿಗೆ ತೆರಳಿ ಯಾವುದೇ ಮಗು ಪೋಲಿಯೊ ಹನಿಯಿಂದ ದೂರ ಉಳಿಯದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಹಾಯಕಿಯರು ನೋಡಿಕೊಳ್ಳಬೇಕು ಎಂದರು.