ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಬಹಳ ದಿನಗಳಿಂದ ನನ್ನಲ್ಲೊಂದು ಪ್ರಶ್ನೆ ಕಾಡುತ್ತಿತ್ತು. ನಾವೇಕೆ ಇನ್ನೊಬ್ಬರನ್ನು ಗೌರವಿಸಬೇಕು? ಎಂದು. ಸ್ವಲ್ಪ ವಿಚಾರದ ನಂತರ ಮತ್ತೊಂದು ಪ್ರಶ್ನೆ ಕೇಳತೊಡಗಿತು. ನಾವು ಗೌರವಿಸುವುದು ವ್ಯಕ್ತಿಗೊ ಅಥವಾ ವ್ಯಕ್ತಿಯಲ್ಲಿರುವ ಜ್ಞಾನಕ್ಕೊ? ಎಂದು. ಆತ್ಮೀಯರೇ, ಜ್ಞಾನಕ್ಕೆ ಇರುವ ಶಕ್ತಿ ಹಾಗೂ ಇದು ತರಬಹುದಾದಂತಹ ಗೌರವ ಪ್ರಾಯಶಃ ಊಹಿಸಲು ಅಸಾಧ್ಯವಾದದ್ದು. ಆದ್ದರಿಂದ, ಸಂಸ್ಕೃತ ಸುಭಾಷಿತ ಹೀಗೆ ಹೇಳುವುದು.
ನ ಚೊರಹಾರ್ಯಂ ನಚ ರಾಜಹಾರ್ಯಂ ನ ಭ್ರಾತೃಭಾಜ್ಯಮ್ ನಚ ಭಾರಕಾರಿ|
ವ್ಯಯೆ ಕೃತೆ ವರ್ಧತ ಏವ ನಿತ್ಯಾಂ ವಿದ್ಯಾಧನಂ ಸರ್ವ ಧನ ಪ್ರಧಾನಮ್||
ಇದರರ್ಥ ಹೀಗೆ. ಇದನ್ನು ಅಪಹರಿಸಲು ಅಸಾಧ್ಯ. ರಾಜನಿಂದ ತೆಗೆದುಕೊಂಡು ಹೋಗಲು ಆಗದು. ಇದನ್ನು ಸಹೋದರರ ಮದ್ಯೆ ಹಂಚಲಾಗದು. ಎಷ್ಟು ವ್ಯಯಿಸುತ್ತಿರೋ ಅಷ್ಟು ಹೆಚ್ಚುವುದು. ಆದ್ದರಿಂದ ಈ ಜ್ಞಾನ ಸಂಪತ್ತು ಎಲ್ಲಾ ಸಂಪತ್ತಿಗಿಂತ ಶ್ರೇಷ್ಠವಾದದ್ದು. ಗುರು ವಸಿಷ್ಠರಿಗೆ ದಶರಥನು ಭಕ್ತಿಯಿಂದ ಕೈ ಮುಗಿದಿದ್ದು ಇದಕ್ಕಲ್ಲವೆ? ದ್ರೋಣರಿಗೆ ಪಾಂಡವರು ಹಾಗೂ ಕೌರವರು ಭಕ್ತಿಯನ್ನು ತೋರಿಸಿದ್ದು ಜ್ಞಾನಕ್ಕಾಗಿಯೇ ಅಲ್ಲವೆ? ಹೀಗಾಗಿ ನಾನು ಒಂದು ತೀಮರ್ಾನಕ್ಕೆ ಬಂದೆ. ಜಗತ್ತಿನಲ್ಲಿ ನೈಜವಾಗಿ ನಿಮಗೆ ಗುರುತಿಸಿಕೊಳ್ಳಲು ನೀವು ನಿಮ್ಮನ್ನು ಜ್ಞಾನ ಸಂಪಾದನೆಯಲ್ಲಿ ತೊಡಗಿಸಿಕೊಳ್ಳಬೇಕಾದದ್ದು ಅನಿವಾರ್ಯ. ಇದಕ್ಕೆ ಬಲ ನೀಡುವಂತಹ ಒಂದು ಸುಂದರವಾದಂತಹ ಒಂದು ಕಥೆಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ಇಂದು ಬಹಳ ಕಾತುರನಾಗಿರುವೆ.
ಶಂಕರಾಚಾರ್ಯರ ಹೆಸರು ಕೇಳಿದಾಕ್ಷಣ ನನಗೆ ಅನ್ನಿಸುವುದು ಹೀಗೆ, ಎಂತಹ ಅದ್ಭುತವಾದಂತಹ ಜ್ಞಾನಿ, ತನ್ನ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಂಕಲ್ಪ ಮಾಡಿ ಜ್ಞಾನದ ಬಲದಿಂದ 4 ದಿಕ್ಕಿನಲ್ಲಿ ನಾಲ್ಕು ಪೀಠವನ್ನು ಸ್ಥಾಪಿಸಿ, ಅಪ್ರತಿಮ ಸಾಧನೆ ಮಾಡಿದ ಮಹಾಪುರುಷ, ಈ ಶಂಕರರು. ಅವರ ಜೀವನದ ಒಂದು ಘಟನೆ ನಮ್ಮನ್ನೆಲ್ಲಾ ರೋಮಾಂಚನಗೊಳಿಸುವುದು ಸತ್ಯ.
ಶಂಕರರು ವಿಶ್ವವನ್ನು ಗೆಲ್ಲಲು ಜ್ಞಾನವೆಂಬ ಸಾಧನವನ್ನು ಹಿಡಿದು ಹೊರಟರು. ತಮ್ಮ ಸಿದ್ಧಾಂತದಿಂದ ಎಲ್ಲರನ್ನು ಗೆಲ್ಲಲು ಮುಂದಾದರು. ಕುಮಾರಿಲಾ ಬೆಟ್ಟನ ಸೂಚನೆಯಂತೆ ಮಂಡನ ಮಿಶ್ರರೆಂಬ (ಕುಮಾರಿಲಾ ಬೆಟ್ಟರ ಅನುಯಾಯಿ) ವೀರನಾಯಕನನ್ನು ಭೇಟಿ ಮಾಡಲು ಮಾಹಿಷ್ಮತಿ ಎಂಬ ನಗರಕ್ಕೆ ಬಂದರು ಶಂಕರರು. ಅಲ್ಲಿಯ ದಾರಿಹೋಕನಲ್ಲಿ ಮಂಡನ ಮಿಶ್ರರ ಮನೆ ಕೇಳಿದ ಶಂಕರರಿಗೆ, ಒಂದು ವಿಚಿತ್ರ ಕಾದಿತ್ತು. ದಾರಿಹೋಕನು, ಒಂದು ದಾರಿ ತೋರಿಸಿ ಹೀಗೆ ಹೇಳಿದನು. "ನೀವು ಈ ರಸ್ತೆಯಲ್ಲಿ ನಡೆದು ಹೋದರೆ ನಿಮಗೆ ಒಂದು ಮನೆ ಸಿಗುವುದು. ಮನೆಯ ಹೊರಗಡೆ ಗಿಳಿಗಳು ಇರುವುದು. ಈ ಗಿಳಿಗಳು, ವೇದ, ಸಿದ್ಧಾಂತಗಳ ಬಗ್ಗೆ ಚಚರ್ೆ ಮಾಡುತ್ತಿರುವುದು. ಹಾಗೂ ಕರ್ಮಗಳು, ಅದರ ಫಲಗಳ ಬಗ್ಗೆ ಮಾತನಾಡುತ್ತಿರುವುದು. ಈ ಅದ್ಭುತವನ್ನು ನೋಡಿದಾಕ್ಷಣ, ನೀವು ಮಂಡನ ಮಿಶ್ರರ ಮನೆ ಹೊರಗಡೆ ಇರುತ್ತೀರಿ.
ಇದನ್ನು ಕೇಳಿದ ಶಂಕರರು ಒಂದು ಕ್ಷಣ ದಂಗಾದರು. ಮಂಡನ ಮಿಶ್ರರು ಮಿಮಾಂಸ ತತ್ವಶಾಸ್ತ್ರವನ್ನು ಅನುಸರಿಸುವರು. ಅಂತೆಯೆ ವಯಸ್ಸಿನಲ್ಲಿ ದೊಡ್ಡವರು ಮತ್ತೆ ಜ್ಞಾನದಲ್ಲಿ ತಾಯಿ ಸರಸ್ವತಿಯ ವರಪುತ್ರರು. ಮಿಶ್ರರು ತಮ್ಮ ಜೀವನದ ಹೆಚ್ಚು ಭಾಗವನ್ನು ಅಧ್ಯಯನಕ್ಕಾಗಿ ಇಟ್ಟವರು. ಅಂತೆಯೆ ತ್ರಿಕಾಲ ಜ್ಞಾನಿ ಎಂದರೂ ಉತ್ಪ್ರೆಕ್ಷೆಯಾಗದು. ಅಂತಹ ದಂತಕಥೆಯ ವ್ಯಕ್ತಿ, ಇನ್ನೂ ಎಳೆ ವಯಸ್ಸಿನ ಶಂಕರರ ಹುರುಪನ್ನು ನೋಡಿ ನಕ್ಕರು. ಅಂತೆಯೆ, ವಾದಕ್ಕೆ ಬರಲು ಒಪ್ಪಿದರು ಹಾಗೂ ಶಂಕರರಿಗೆ ನ್ಯಾಯಾಧೀಶರನ್ನು ಆರಿಸಿಕೊಳ್ಳಲು ಸಲಹೆ ನೀಡಿದರು. ಈ ವಿಚಾರ, ಶಂಕರರಿಗೆ ಅತಿ ಆನಂದವನ್ನು ತಂದಿತು. "ಇಂತಹ ಜ್ಞಾನಿ, ನನ್ನಂತಹ ಯುವಕನಿಗೂ ಇಷ್ಟೆಲ್ಲಾ ಗೌರವ ತೋರಿಸುವರು" ಎಂದು ಮನದಲ್ಲಿ ಅಂದುಕೊಂಡು ಸಂತೋಷಪಟ್ಟರು. ಅದರಂತೆಯೆ ಶಂಕರರು, ಮಂಡನ ಮಿಶ್ರರ ಹೆಂಡತಿಯನ್ನು ನ್ಯಾಯಾಧಿಶೆಯನ್ನಾಗಿ ಬರಲು ಕೇಳಿಕೊಂಡರು. ಮಂಡನ ಮಿಶ್ರರ ಹೆಂಡತಿ ಉಭಯಭಾರತಿ, ಇವಳು ಕೂಡಾ ಮಹಾಜ್ಞಾನಿ. ಇದನ್ನು ಅರಿತಿದ್ದ ಶಂಕರರು ಧನ್ಯತಾಭಾವದಿಂದ ಉಭಯ ಭಾರತಿಯ ಕಾಲುಗಳಿಗೆ ನಮಸ್ಕರಿಸಿದರು. ಮುಂದೇನು? ವಾದವು ಪ್ರಾರಂಭವಾಗಲು ವೇದಿಕೆ ಸಜ್ಜಾಯಿತಿ. ವಾದಕ್ಕಾಗಿ ಮಿಶ್ರರು ಒಂದು ಕಡೆ, ಶಂಕರರು ಮತ್ತೊಂದು ಕಡೆ ಕುಳಿತರು. ಉಭಯಭಾರತಿ ಇಬ್ಬರನ್ನು ಆಲಿಸಲು ಸಜ್ಜಾದರು. ಸೇರಿದ ಜನತೆಗೆ ತತ್ವಶಾಸ್ತ್ರ ಹಾಗೂ ಇನ್ನಿತರ ಜ್ಞಾನ ಭರಿತವಾದ ವಾದ ಕೇಳುವ ಸೌಭಾಗ್ಯ ದೊರೆಯಿತು.
ವಾದವು ಪ್ರಾರಂಭವಾಯಿತು. ಮಂಡನ ಮಿಶ್ರರ ಅಪಾರವಾದ ಜ್ಞಾನದ ಆಳವನ್ನು ತಿಳಿದ ಶಂಕರರು, ಬಹಳ ಸಂತೋಷಪಟ್ಟರು. ಅಂತೆಯೆ ಶಂಕರರ ಪಾಂಡಿತ್ಯವನ್ನು ತಿಳಿದ ಮಂಡನ ಮಿಶ್ರರಿಗೆ, ಶಂಕರರ ಮೇಲೆ ಗರ್ವ ಎನಿಸಿತು. ವಾದವು 6ತಿಂಗಳು ನಡೆಯಿತು. ಮಂಡನ ಮಿಶ್ರರು ಸೋಲುತ್ತಾ ಬಂದರು. ಇನ್ನೇನು ಸೋಲು ಒಪ್ಪಿಕೊಳ್ಳುವಷ್ಟರಲ್ಲಿ, ಉಭಯಭಾರತಿ "ತಾನು ಮಂಡನ ಮಿಶ್ರರ ಅಧರ್ಾಂಗಿ. ಅಂತೆಯೆ ನನ್ನನ್ನು ಸೋಲಿಸಿದರೆ ಮಾತ್ರ ನೀನು ಮಂಡನ ಮಿಶ್ರರನ್ನು ಸೋಲಿಸಿದಂತೆ" ಎಂದು ಶಂಕರರಿಗೆ ಹೇಳಿದಳು. ಶಂಕರರು ಇದಕ್ಕೆ ಒಪ್ಪಿ, ವಾದವನ್ನು ಉಭಯಭಾರತಿಯೊಂದಿಗೆ ಪ್ರಾರಂಭಿಸಿದರು. ಆಶ್ಚರ್ಯವೆಂದರೆ, ಅವಳು ಕೂಡಾ ಸೋಲುತ್ತಾ ಬಂದರು. ಇದನ್ನು ಅರಿತ ಉಭಯಭಾರತಿ ಉದ್ದೇಶಪೂರ್ವಕವಾಗಿ ಗ್ರಹಸ್ಥಾಶ್ರಮ ಹಾಗೂ ಗಂಡ ಹೆಂಡತಿಯ ಸಂಬಂಧದ ಬಗ್ಗೆ ಪ್ರಶ್ನೆ ಕೇಳತೊಡಗಿದಳು. ಇದನ್ನು ಕೇಳಿ ಶಂಕರರು ಹೀಗೆ ಹೇಳಿದರು "ತಾಯಿ ಉಭಯಭಾರತಿ, ನಾನು ಇನ್ನು ನನ್ನ ತರುಣಾವಸ್ತೆಯಲ್ಲಿ ಇರುವೆ. ಅಂತೆಯೆ ಸಂಸಾರದ ಸುಖ, ದುಃಖಗಳ ಬಗ್ಗೆ ನಾನರಿಯೆ ಒಂದು ತಿಂಗಳ ಕಾಲಾವಕಾಶ ಕೊಟ್ಟರೆ ಇದನ್ನು ಉತ್ತರಿಸುವೆ" ಎಂದು ಕೇಳಿಕೊಂಡರು. ಇದಕ್ಕೊಪಿದ ಉಭಯಭಾರತಿ ವಿಷಯದ ಬಗ್ಗೆ ತಿಳಿದುಕೊಂಡ ಮೇಲೆ ಮತ್ತೆ ಬರಲು ಸೂಚಿಸಿದಳು. ಅಂತೆಯೆ ಶಂಕರರು ಅಲ್ಲಿಂದ ಹೊರನಡೆದರು.
ಮಹಿಷ್ಮತಿ ನಗರಕ್ಕೆ ಬಂದ ಶಂಕರರು ಹಾಗೂ ಅವರ ಶಿಷ್ಯಂದಿರು, ಸಾಯಲು ಬಿದ್ದಿದ್ದ ರಾಜನನ್ನು ನೋಡಿದರು. ತಕ್ಷಣ ಶಂಕರರು ಯೋಗದ ಸಹಾಯದಿಂದ ತಮ್ಮ ದೇಹದಿಂದ ಆ ರಾಜನ ದೇಹಕ್ಕೆ ಪ್ರವೇಶಿಸಿದರು. (ಪರಕಾಯ ಪ್ರವೇಶ) ರಾಜನು ಚೇತರಿಸಿಕೊಂಡು ದಿನ ನಿತ್ಯದ ಕರ್ಮಗಳನ್ನು ನೆರವೇರಿಸಲು ಪ್ರಾರಂಭಿಸಿದನು. ರಾಜನಿಗೆ ಹೆಂಡಂದಿಯರಿದ್ದರು. ರಾಜನ ದೇಹದಲ್ಲಿ ಪ್ರವೇಶಿಸಿದ್ದ ಶಂಕರರು, ತಮಗೆ ಬೇಕಾದ ದಾಂಪತ್ಯ ಜೀವನದ ಜ್ಞಾನವನ್ನು ಪಡೆದು ಒಂದು ತಿಂಗಳಲ್ಲಿ ಮತ್ತೆ ತನ್ನದೇ ಶರೀರಕ್ಕೆ ಬಂದರು. ಇನ್ನೇನು? ಉಭಯಭಾರತಿ ಹಾಗೂ ಮಂಡನ ಮಿಶ್ರರ ಜೊತೆ ಮತ್ತೆ ಸೆಣಸಾಡಲು ಸಿದ್ಧರಾದರು. ಇದನ್ನು ಅರಿತ ಉಭಯಭಾರತಿ, ತನ್ನ ಮತ್ತು ತನ್ನ ಗಂಡನ ಸೋಲೊಪ್ಪಿಕೊಂಡಳು. ಶಂಕರರ ಜ್ಞಾನದ ಹೆಮ್ಮರವನ್ನು ನೋಡಿ ಶರಣಾದರು. ಪಾಂಡಿತ್ಯದ ಸಾಗರವಾಗಿದ್ದ ಮಂಡನ ಮಿಶ್ರರು, ಶಂಕರರಿಗೆ ಅಪಾರ ಗೌರವ ನೀಡಿದರು.
ಆತ್ಮೀಯರೇ, ಈ ಕಥೆ ನಿಮಗೆ 2 ವಿಷಯವನ್ನು ತಿಳಿಸುವುದು ನಿಜ. ಜ್ಞಾನವೆಂಬ ಕಿರಣವು ಎಂದಿಗೂ ಆರಲಾರದು ಹಾಗೂ ಸೈದ್ಧಾಂತಿಕವಾಗಿ ನಾವು ವಿರೋಧಿಗಳಿದ್ದರು, ವ್ಯಕ್ತಿಗತ ವಿರೋಧ ಎಂದಿಗೂ ಒಳ್ಳೆಯದಾಗದು. ಮೇಲಿನ ಕಥೆಯನ್ನು ನೋಡಿದಾಗ ನನಗೆ ಬಹಳ ಆನಂದವಾಗುವ ವಿಷಯವೆಂದರೆ, ಶಂಕರರು ಹಾಗೂ ಮಿಶ್ರರಿಗೆ ಕಿಂಚಿತ್ತು ಅಸೂಯೆ, ದ್ವೇಶ ಬಂದಿರಲಿಲ್ಲ. ಮೇಲಾಗಿ ಪಾಂಡಿತ್ಯವನ್ನು ಒಬ್ಬರಿಗೊಬ್ಬರು ಹಂಚಿಕೊಂಡು, ಗೌರವ ಎಂಬ ಗಿಡಕ್ಕೆ ಇಬ್ಬರೂ ನೀರುಣಿಸಿದ್ದರು. ಇದು 'ವಿದ್ಯಾ ದಧಾತಿ ವಿನಯಂ' ಎಂಬ ಸುಭಾಷಿತಕ್ಕೆ ಹಿಡಿದ ಕನ್ನಡಿಯಾಗಿತ್ತು. ಮತ್ತೊಂದು ಕಡೆ, ಶಂಕರರ ಹೆಸರನ್ನು ನಾವು ಇಂದೂ ಕೂಡಾ ಏಕೆ ನೆನಪಿಸುತ್ತೇವೆಂದರೆ, ಅವರ ಜ್ಞಾನದ ಹಸಿವು. 'ಯಾವಜ್ಜೀವಂತ ವಿದ್ಯಯಾ' ಎಂಬ ಮಾತಿಗೆ ಶಂಕರರು ಪುಷ್ಠಿ ತುಂಬಿದರು. ಅವರ ಅಪಾರವಾದ ಜ್ಞಾನ, ಅವರಿಗೆ ಗೌರವವೆಂಬ ಕಿರೀಟವನ್ನು ತೊಡಿಸಿತ್ತು.