“ಬಂದುದನರಿದು ಬಳಸು” - ಡಾ ವೀರಣ್ಣ ರಾಜೂರ
“Use what comes” - Dr. Veeranna Rajura
ಲೋಕದರ್ಶನ ವರದಿ
ಧಾರವಾಡ 06: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ 112 ನೆಯ ಸಂಸ್ಥಾಪನಾ ದಿನಾಚರಣೆ ಮತ್ತು ಶ್ರೀ ಮಹಾಂತೇಶ ಶ್ರೀಶೈಲಪ್ಪ ನರೇಗಲ್ಲ ಮತ್ತು ಶ್ರೀಮತಿ ನಾಗರತ್ನ ಮಹಾಂತೇಶ ನರೇಗಲ್ಲ ದತ್ತಿ ಅಂಗವಾಗಿ ಉಪನ್ಯಾಸ, ಕನ್ನಡ ನಾಡು ನುಡಿ ಗೀತ ಗಾಯನ ಹಾಗೂ ಸಾಹಿತ್ಯಕ ಮತ್ತು ಸಂಘಟಕ ದಂಪತಿಗಳ ಗೌರವ ಸನ್ಮಾನ ಕಾರ್ಯಕ್ರಮವನ್ನು ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ಡಾ ವೀರಣ್ಣ ರಾಜೂರ ಉದ್ಘಾಟಿಸಿ ಮಾತನಾಡಿದರು.ಶರಣರ ವಚನಗಳಲ್ಲಿ ದಾಂಪತ್ಯ ಜೀವನಕ್ಕೆ ಕುರಿತಾದ ವಚನಗಳನ್ನು ಉಲ್ಲೇಖಿಸಿ, ಜೇಡರ ದಾಸಿಮಯ್ಯನ ವಚನದಲ್ಲಿ,ಬಂದುದನರಿದು ಬಳಸಿ,ಸತಿ ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ..ಈ ಕುರಿತು ವಿವರವಾಗಿ ತಿಳಿಸಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಕುರಿತು ಮಾತನಾಡಿದರು.. ಅಧ್ಯಕ್ಷತೆ ವಹಿಸಿದ್ದ ಡಾ ಲಿಂಗರಾಜ ಅಂಗಡಿ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡ ಇವರು ಮಾತನಾಡಿದರು.ಡಾ ವೀರಣ್ಣ ರಾಜೂರ ಮತ್ತು ಶ್ರೀಮತಿ ಮಂಗಳಾ ವೀರಣ್ಣ ರಾಜೂರ ದಂಪತಿಗಳಿಗೆ ಗೌರವ ಸನ್ಮಾನ ಮಾಡಲಾಯಿತು.. ವೇದಿಕೆಯ ಮೇಲೆ ದತ್ತಿ ದಾನಿಗಳಾದ ಶ್ರೀಮತಿ ನಾಗರತ್ನ ನರೇಗಲ್ಲ ಇದ್ದರು.ಐದು ಮಹಿಳಾ ಮಂಡಳಗಳು ಕನ್ನಡ ನಾಡು ನುಡಿ ಗೀತ ಗಾಯನ ಪ್ರಸ್ತುತ ಪಡಿಸಿದರು.
ಸ್ನೇಹ ರಂಗ ಕಲಾ ಬಳಗದವರು ನಾಡಗೀತೆಯನ್ನು ಹಾಡಿದರು.. ಶ್ರೀ ಎಫ್ ಬಿ ಕಣವಿ ಮತ್ತು ಉಮಾಕಾಂತ ಅರ್ಕಸಾಲಿ ಅವರು ಕನ್ನಡ ಗೀತೆ ಹಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪ್ರಮೀಳಾ ಜಕ್ಕಣ್ಣವರ ಮಾಡಿದರು.. ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತೇಶ ನರೇಗಲ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.. ಕೋಶಾಧಿಕಾರಿ ಆದ ಶ್ರೀಮತಿ ಮೇಘಾ ಹುಕ್ಕೇರಿ ಪ್ರಾರ್ಥನೆ ಸಲ್ಲಿಸಿ, ಕೊನೆಗೆ ವಂದಿಸಿದರು... ಕಾರ್ಯಕ್ರಮದಲ್ಲಿ ಡಾ ವೀಣಾ ಬಿರಾದಾರ,ಸ್ಮಿತಾ ವಡಗಾವೆ ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ್ ಸುಜಾತಾ ಹಡಗಲಿ ಚಂದ್ರಶೇಖರ ರೊಟ್ಟಿಗವಾಡ, ರಾಠೋಡ, ಕೇಶವ ಕೊಂಗಿ,ಬಸವರಾಜ ಗೊರವರ ಸಿ ಎಂ ಕೆಂಗಾರ,ಆರ್ ಎಂ ಕನ್ನೂರ, ಗುರು ತಿಗಡಿ ಎಚ್ ಎಸ್ ಬಡಿಗೇರ, ಎಸ್ ರೇವಣಸಿದ್ದಪ್ಪ.ಬಿ ಜಿ ಬಾರ್ಕಿ ದಾನಪ್ಪಗೌಡರ ಕೆಲಗೇರಿ ದೇಸಾಯಿ, ಮುಳಗುಂದ.. ಶ್ರೀಧರ ಗಸ್ತಿ,ಎಂ ಎಂ ಭಾವಿಕಟ್ಟಿ ಸುನಂದಾ ಯಡಾಲ, ಸಿದ್ಧರಾಮ ಹಿಪ್ಪರಗಿ...ಮುಂತಾದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 