“ಕೋರೆಗಾಂವ ಕದನದ ಕಲಿಗಳು” ಮುಕ್ತ ಕವನ ಸ್ಪರ್ಧೆ
“The scars of the Battle of Koregaon” Open Poetry Competition
ಧಾರವಾಡ 08: 208ನೇಯ ಕೋರೆಗಾಂವ ವಿಜಯೋತ್ಸವ ಆಚರಣೆ ಪ್ರಯುಕ್ತ ಧಾರವಾಡದ ಗಣಕರಂಗ ಸಂಸ್ಥೆಯು “ಕೋರೆಗಾಂವ ಕದನದ ಕಲಿಗಳು” ಶೀರ್ಷಿಕೆಯ ಕವನ ಸ್ಪರ್ಧೆಯನ್ನು ಆಯೋಜಿಸಿದೆ. ಸರಳ, ಸುಂದರ, ಐತಿಹಾಸಿಕ ಅಭಿವ್ಯಕ್ತಿಯ ಕನ್ನಡ ಭಾಷೆಯ ಸ್ವರಚಿತ ಕವನದಲ್ಲಿ ಕನಿಷ್ಠ 20 ಸಾಲುಗಳು ಮತ್ತು ಗರಿಷ್ಠ 30 ಸಾಲುಗಳಿರಬೇಕು. ಸ್ವರಚಿತ ಕವನ ಕಳಿಸಲು 20-12-2025(ಶನಿವಾರ) ಕೊನೆಯ ದಿನಾಂಕವಾಗಿದೆ. ಪ್ರಥಮ ಬಹುಮಾನ ನಗದು ಒಂದು ಸಾವಿರ ರೂ,ಗಳು, ದ್ವಿತೀಯ ಬಹುಮಾನ ನಗದು ಆರುನೂರು ರೂ.ಗಳು ಮತ್ತು ತೃತೀಯ ಬಹುಮಾನ ನಗದು ನಾಲ್ಕು ನೂರು ರೂ.ಗಳು. ಜೊತೆಗೆ ಐವರು ಕವಿಗಳಿಗೆ ಮೆಚ್ಚುಗೆ ಬಹುಮಾನ ನೀಡಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತರಾಗುವ ಮತ್ತು ಭಾಗವಹಿಸುವ ಎಲ್ಲಾ ಕವಿಗಳಿಗೆ ಗಣಕರಂಗ ಪ್ರಕಾಶನದ ಪುಸ್ತಕ ಮತ್ತು ಪ್ರಮಾಣಪತ್ರ ನೀಡಲಾಗುವುದು. ಸ್ಪರ್ಧೆಯ ನಂತರ ಉತ್ತಮವೆನಿಸುವ ಆಯ್ದ ಕವನಗಳ ಸಂಕಲನವನ್ನು ಗಣಕರಂಗ ಪ್ರಕಾಶನದಿಂದ ಋಃಓ ಗುಣಮಟ್ಟದಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಸ್ಪರ್ಧೆಯ ಸಂಪೂರ್ಣ ನಿಯಮಗಳಿಗಾಗಿ 9845109480, 9902674005, 7353359969, 9740691429 ್ಘ 9620685599 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 