“ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ”

 “ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ”  “The boy who shared the paper is a writer who has written 20 works”

ಲೋಕದರ್ಶನ ವರದಿ 

ವಿಜಯಪುರ 25: “ಶ್ರೀ ರಾಘವೇಂದ್ರ ಕುಲಕರ್ಣಿ ಕನ್ನೂರಕರ ವಿರಚಿತ ‘ಮುಂಜಾನೆ ಮಾತು’ ಕೃತಿಯಲ್ಲಿ ಹಲವಾರು ಮೌಲ್ಯಯುತವಾದ ಉಪದೇಶದ ಮಾತುಗಳಿದ್ದು, ಪ್ರತಿಯೊಬ್ಬರೂ ಅವುಗಳನ್ನು ಓದಿ ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ‘ಆಧುನಿಕ ಶಾಕುಂತಲೆ’ ಎಂಬ ಕೃತಿಯು ತಾವು ನವೋದಯ ವಿದ್ಯಾಲಯದಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದುದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿಯ ಸಮಸ್ಯೆಗಳನ್ನು ಜೀವನಾನುಭವದ ಮೂಲಕ ಪರಿಹರಿಸಿದ ಆಪದ್ಭಾಂದವರು. ಕುಲಕರ್ಣಿಯವರು ವಿದ್ಯಾರ್ಥಿ ದೆಶೆಯಲ್ಲಿಯೇ ಪೇಪರ ಹಂಚಿ ಆಗಿನ ವಿದ್ಯಾರ್ಥಿ ಇಂದು ಸಾಹಿತಿಯಾಗಿ ಸುಮಾರು 20 ಕೃತಿಗಳನ್ನು ರಚಿಸಿದರೆಂದರು” ಎಂದು ವಿಶ್ರಾಂತ ಪ್ರಾಚಾರ್ಯ ಡಾ. ವಿ.ಡಿ.ಐಹೊಳ್ಳಿಯವರು ಕೃತಿಗಳನ್ನು ಪರಿಚಯಿಸಿ ಮಾತನಾಡಿದರು.  

ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು “ಪೋಷಕರು, ಪಾಲಕರು ಮತ್ತು ಶಿಕ್ಷಕರು ಈ ಕೃತಿಗಳನ್ನು ಓದಿದಾಗ ಬದಲಾವಣೆ ಕಾಣಲು ಸಾಧ್ಯ” ಎಂದರು.  ಹಿರಿಯ ಸಂಶೋಧಕರಾದ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮತ್ತು ಡಾ. ಎಂ.ಎಸ್‌.ಮದಭಾವಿ ಮುಂಜಾನೆ ಮಾತು ಹಾಗೂ ಆಧುನಿಕ ಶಾಕುಂತಲೆ ಎಂಬ ನೂತನ ಕೃತಿಗಳನ್ನು ಲೋಕಾರೆ​‍್ಣಗೊಳಿಸಿ ಮಾತನಾಡಿದರು. ಲೇಖಕ ರಾಘವೇಂದ್ರ ಕುಲಕರ್ಣಿ ಸ್ವರಚಿತ ಕವನ ವಾಚಿಸಿ ಕೃತಿಯ ಆಶಯ ಹೇಳಿದರು. ಬಿ.ಆರ್‌.ಬನಸೋಡೆ ವಚನಗಾಯನ ಮಾಡಿದರು. ಸುಭಾಸ ಕನ್ನೂರ ಅತಿಥಿಗಳನ್ನು ಪರಿಚಯಿಸಿ ಕಾರ‌್ಯಕ್ರಮ ನಿರೂಪಿಸಿದರು. ಜಿ.ಆರ್‌.ಕುಲಕರ್ಣಿ, ದಾಬಡೆ ಎಚ್‌.ಜಿ., ದಾಬಡೆ ಎಸ್‌.ಜಿ, ಚೇತನ ಕುಲಕರ್ಣಿ, ಎಸ್‌.ಎನ್‌.ಶಿವಣಗಿ, ಎಂ.ಜಿ.ಯಾದವಾಡ, ಜೆ.ಎಸ್‌.ಮೋಟಗಿ, ಆನಂದ ಗೊಡಸೆ, ಆಯ್‌.ಎಸ್‌.ಚಿಮ್ಮಲಗಿ, ಡಾ. ಆರ್‌.ಎಂ.ಯಲಗೋಡ, ಸುಖಾಂತ ಕುಲಕರ್ಣಿ, ಮಾಧವ ಗುಡಿ, ವಿ.ಎಂ.ಬಾಗಾಯತ ಮುಂತಾದವರು ಉಪಸ್ಥಿತರಿದ್ದರು.