ಶ್ರೀ ಅಂಬಣ್ಣ ಕೊಪ್ಪರದರವರ “6ನೇ ಪುಣ್ಯಸ್ಮರಣೋತ್ಸವದ” ಅಂಗವಾಗಿ “ಸ್ವರ ಸಾಧನ ಮಹೋತ್ಸವ” ಕಾರ್ಯಕ್ರಮ

ಶ್ರೀ ಅಂಬಣ್ಣ ಕೊಪ್ಪರದರವರ “6ನೇ ಪುಣ್ಯಸ್ಮರಣೋತ್ಸವದ” ಅಂಗವಾಗಿ “ಸ್ವರ ಸಾಧನ ಮಹೋತ್ಸವ” ಕಾರ್ಯಕ್ರಮ  “Swara Sadhana Mahotsava” program as part of the “6th Punyasmaranotsava” of Sri Ambanna Kopparadara

ಭಾಗ್ಯನಗರ 27:  ಭಾಗ್ಯನಗರದ ಸ್ವರ ಸೌರಭ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ/ಬೆಂಗಳೂರು ಇವರ ಸಹಯೋಗದಲ್ಲಿ ಗುರುವಾರ ಸಂಜೆ ಭಾಗ್ಯನಗರ ಪಟ್ಟಣ ಪಂಚಾಯತ ಹಿಂಭಾಗದ ಬಯಲು ರಂಗಮಂದಿರದಲ್ಲಿ  ಪಂಡಿತ ದಿಽಽ ಶ್ರೀ ಗೋವಿಂದರಾಜ ಬೊಮ್ಮಲಾಪುರ ಹಾಗೂ ಪಂಡಿತ ದಿಽಽ ಶ್ರೀ ಅಂಬಣ್ಣ ಕೊಪ್ಪರದರವರ “6ನೇ ಪುಣ್ಯಸ್ಮರಣೋತ್ಸವದ” ಅಂಗವಾಗಿ “ಸ್ವರ ಸಾಧನ ಮಹೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿಯವರು, ಸಂಗೀತಗರಾರೆಂದರೆ ಹೃದಯ ಸಾಮ್ರಾಟರು ಒಮ್ಮೆ ಜನರ ಮನಸ್ಸನ್ನು ಗೆದ್ದರೆ ಶಾಶ್ವತವಾಗಿ ಅವರನ್ನು ಅಲ್ಲಿಂದ ತೆಗೆದು ಹಾಕಲು ಸಾಧ್ಯವೇ ಇಲ್ಲ, ಅಂತಹ ಅತ್ಯದ್ಭುತ ಶಕ್ತಿ ಸಂಗೀತದಲ್ಲಿದೆ ಆದರೆ ಇತ್ತೀಚಿನ ದಿನಮಾನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಮಾನಸಿಕ ಸ್ಥಿತಿಯನ್ನು ಹದಗೆಡಿಸುವ ಧಾರವಾಹಿಗಳು ಸಿನೆಮಾಗಳು ಈ ಮೂಲ ಸಂಗೀತಕ್ಕೆ ಪೆಟ್ಟು ಬಿದ್ದು ಇಂದು ನಿರ್ಲಕ್ಷಕ್ಕೆ ಒಳಪಟ್ಟಿದೆ, ರಾಜಕುಮಾರರ ಬಂಗಾರದ ಮನುಷ್ಯ ಚಿತ್ರವನ್ನು ನೋಡಿ ಎಷ್ಟೋ ಜನರು ವಿದ್ಯಾವಂತರಾದವರು

ಕೂಡ ರೈತರಾದರು ಆದರೆ ಇತ್ತೀಚಿನ ಚಿತ್ರಗಳಲ್ಲಿ ನಾಯಕನ ಕೆಟ್ಟ ಚಟಗಳನ್ನು, ಕುಡಿತವನ್ನು ಮಾದಕ ದ್ರವ್ಯಗಳ ಸೇವನೆಯನ್ನು, ಬರಿಯ ಹೊಡೆದಾಟವನ್ನು, ರೌಡಿಸಂ ಹೀಗೆ ಬರಿಯ ಕೆಟ್ಟ ಸನ್ನಿವೇಶಗಳನ್ನೇ ಹೆಚ್ಚಾಗಿ ವೈಭಕರಿಸಿದಾಗ ಸಹಜವಾಗಿ ಜನರ ಮಾನಸಿಕ ಸ್ವಾಸ್ತ್ಯವನ್ನು ಹದಗೆಡಿಸುತ್ತವೆ. ಅಂತಹ ಸಿನೆಮಾಗಳು ಧಾರವಾಹಿಗಳು ಬದಲಾದಾಗ ಮಾತ್ರ ಮತ್ತೆ ಇಂತಹ ಮೂಲ ಸಂಸ್ಕೃತಿಗೆ ಮೂಲ ಸಂಗೀತಕ್ಕೆ ಮೂಲ ಜನಪದಕ್ಕೆ ಒಂದು ವಿಶೇಷ ಮೆರುಗು ಬರುತ್ತದೆ ಎಂದರು. ಪಟ್ಟಣ ಪಂಚಾಯತ ಅಧ್ಯಕ್ಷರಾದ ರಮೇಶ್ ಹ್ಯಾಟಿಯವರು ಮಾತನಾಡಿ ಸುಂದರ ಸಮಾಜವನ್ನು ಸೃಷ್ಟಿಸಬೇಕಾದರೆ

ಇಂತಹ ಅತ್ಯುತ್ತಮ ಕಾರ್ಯಕ್ರಮಗಳು ಹೆಚ್ಚಾಗಿ ಮೂಡಿಬರಬೇಕು, ಯುವ ಮನಸ್ಸುಗಳು ಇಂತಹ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಬೇಕು, ಅಂದಾಗ ಮಾತ್ರ ಸದೃಢ ಸಮಾಜವನ್ನು ಕಟ್ಟಬಹುದಾಗಿದೆ ಎಂದರು. ಸಹಾಯಕ ನಿರ್ದೇಶಕರಾದ ಕರ್ಣಕುಮಾರ್  ಮಾತನಾಡಿ ಇಲಾಖೆಯ ನೀಡುವ ಧನಸಹಾಯವನ್ನು ಎಲ್ಲಾ ಸಂಸ್ಥೆಗಳು ಸಮರ​‍್ಕವಾಗಿ ಬಳಸಿಕೊಂಡು ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ವಿವಿಧ ಕಲಾ ಪ್ರಕಾರಗಳಿಗೆ ಅವಕಾಶವನ್ನು ನೀಡಿ ಸದ್ವಿನಿಯೋಗ ಮಾಡಿಕೊಂಡಾಗ ಮಾತ್ರ ಇಲಾಖೆ ನೀಡಿದ ಧನಸಹಾಯಕ್ಕೆ ಒಂದು ಸಾರ್ಥಕತೆ ಬರುತ್ತದೆ ಎಂದರು. ಅಧ್ಯಕ್ಷತೆಯನ್ನು ವೀರ​‍್ಪ ಶ್ಯಾವಿಯವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಹೇಮಾವತಿ ಅಂಬಣ್ಣ, ರುಕ್ಮಣ್ಣ ಶ್ಯಾವಿ, ಕನಕರಾಜ ರೂಢಿಗಿ ಮುಂತಾದವರು ಆಸಿನರಾಗಿದ್ದರು.  

ಸಂಸ್ಥೆಯವತಿಯಿಂದ ಪ್ರತಿ ವರ್ಷ ವಿಶೇಷ ಸಾಧನೆಗೈದ ಇಬ್ಬರನ್ನು ಗುರುತಿಸಿ ಸನ್ಮಾನಿಸುವ ದಿಷೆಯಲ್ಲಿ ಈ ಬಾರಿ ಪತ್ರಿಕೋದ್ಯಮದಲ್ಲಿ ಸಾಧನೆಗೈದ ಪ್ರಮೋದ ಕುಲಕರ್ಣಿಯವರಿಗೆ “ಪತ್ರಿಕಾ ಸೌರಭ ಸಿರಿ” ಪ್ರಶಸ್ತಿಯನ್ನು ಹಾಗೂ ಕ್ರೀಢಾ ವಿಭಾಗದ ಜಂಪ್ ರೋಪ್‌ನಲ್ಲಿ ಅಂತರಾಷ್ಟ್ರಿಯಮಟ್ಟದಲ್ಲಿ ಸಾಧನೆಗೈದ ಅಬ್ದುಲರಜಾಕ್  ಟೈಲರರವರಿಗೆ “ಕ್ರೀಢಾ ಸೌರಭ ಸಿರಿ” ಪ್ರಶಸ್ತಿಯನ್ನು ನೀಡಿ ಸಂಸ್ಥೆಯವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. 

ಪಂಡಿತ ರವೀಂದ್ರ ಸೊರಗಾವಿಯವರ ಸರಸ್ವತಿ ರಾಗದ ಅದ್ಬುತ ಗಾಯನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭಾಷಾ ಹಿರೇಮನಿಯವರ ತತ್ವಪದಗಳು, ಮಾರುತಿ ದೊಡ್ಡಮನಿಯವರ ವಚನ ಸಂಗೀತ, ರಾಘವೇಂದ್ರ ಗಂಗಾವತಿಯವರ ತಬಲಾ ಸೋಲೋ,  ವಿಜಯಲಕ್ಷ್ಮೀ ನಾಗರಾಜರರವರ ಸುಗಮ ಸಂಗೀತ, ಅಭಿಷೇಕ ಚಿತ್ರಗಾರರ ಬಾನ್ಸೂರಿ ವಾದನ, ಆರತಿ ಮೇಟಿಯವರ ಜನಪದ ಹಾಗೂ ಸಾಗರದ ವಿಧುಷಿ ಸಂಜನಾರವರ  ಭರತನಾಟ್ಯ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದವು.