ಕೊಪ್ಪಳದ ಷಡ್ಜ ಸಭಾ ಭವನದಲ್ಲಿ “ಗಾನ ಸಂಜೆ”

ಕೊಪ್ಪಳದ ಷಡ್ಜ ಸಭಾ ಭವನದಲ್ಲಿ “ಗಾನ ಸಂಜೆ” “Singing Evening” at Shadja Sabha Bhavan, Koppal

ಲೋಕದರ್ಶನ ವರದಿ 

ಕೊಪ್ಪಳ 24:   ಗುರುಕಲ ಸಂಗೀತ ಕಲಾ ಸಂಸ್ಥೆ ಭಾಗ್ಯನಗರವತಿಯಿಂದ ಕೊಪ್ಪಳದ ಷಡ್ಜ ಸಭಾ ಭವನದಲ್ಲಿ “ಗಾನ ಸಂಜೆ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಿಕ್ಷಕರಾದ ಸುರೇಶ ಹಂಚಿನಾಳ ಸಂಗೀತದಿಂದ ಮಾನಸಿಕ ನೆಮ್ಮದಿ ಸಿಗುತ್ತದೆ, ಸಂಗೀತದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವದರಿಂದ ನಮ್ಮ ಮಾನಸಿಕ ಸದೃಢತೆ ಹೆಚ್ಚುತ್ತದೆ.

ಮತ್ತು ಮಕ್ಕಳಿಗೆ ಸಂಸ್ಕಾರ ಸಿಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೇವಣಸಿದ್ಧಸಾ ಶಿದ್ಲಿಂಗರವರು ನಶಿಸಿ ಹೋಗುತ್ತಿರುವ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ, ಈ ಕಾರ್ಯಕ್ಕೆ ಆರ್ಥಿಕವಾಗಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಒಳ್ಳೆಯ ನೆರವು ಸಿಕ್ಕರೆ ಇನ್ನಷ್ಟು ಅನುಕೂಲವಾಗಲಿದೆ, ಆ ನಿಟ್ಟಿನಲ್ಲಿ ಸರಕಾರವು ಒಂದು ವ್ಯವಸ್ಥೆಯನ್ನು ಮಾಡಬೇಕು ಎಂದರು, ಮುಖ್ಯ ಅತಿಥಿಗಳಾಗಿ ಬಸವರಾಜ ಮಸ್ಕಿ ಶರಣಪ್ಪ ಪೂಜಾರ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ವಿಕಾಸ ಹಂಚಿನಾಳ ಹಾಗೂ  ಕಿಶನ ಪೂಜಾರರವರಿಂದ ಬಾನ್ಸೂರಿ ವಾದನ, ಅಲ್ಲಾಭಕ್ಷಿ ವಾಲಿಕಾರರಿಂದ ಸುಗಮ ಸಂಗೀತ, ಲತಾ ಮೇಟಿಯವರಿಂದ ಭಕ್ತಿ ಗೀತೆಗಳು, ಸಂಜನ ಬೆಲ್ಲದರವರಿಂದ ತಬಲಾ ಸೋಲೋ ಕೊನೆಯಲ್ಲಿ ಅಭಿಷೇಕ ಚಿತ್ರಗಾರರವರ ಬಾನ್ಸೂರಿ ವಾದನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ​‍್ಪ ಉಪ್ಪಾರ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿಧಮ ಪ್ಯಾಡ ನಲ್ಲಿ ಸಂಜನ ಬೆಲ್ಲದ ಸಾಥ್ ನೀಡಿದರು.