ಸತ್ವಶಾಲೀ “ಕನ್ನಡ ಸಾಹಿತ್ಯಚರಿತ್ರೆ”ಯ ರೂವಾರಿ ಡಾ. ರಂ. ಶ್ರೀ. ಮುಗಳಿ
“Rasikaranga Dr. Shri. Mugali-A Memory” Lecture Program
ಧಾರವಾಡ 16: ಆಧುನಿಕ ಕನ್ನಡ ಸಾಹಿತ್ಯದ ಚರ್ಚೆ ಬಂದಾಗಲೆಲ್ಲ ಸ್ಮರಿಸಲೇ ಬೇಕಾದ ಸತ್ವಶಾಲೀ ಸಾಹಿತಿಯೆಂದರೆ ಡಾಽಽ ರಂ. ಶ್ರೀ. ಮುಗಳಿಯವರು. ವರಕವಿ ಬೇಂದ್ರೆಯವರ ಒಡನಾಟದಲ್ಲಿದ್ದ ಗೋಕಾಕ, ಮುಗಳಿ ಗೆಳೆಯರ ಗುಂಪಿನ ನಿಕಟವರ್ತಿಗಳಾಗಿದ್ದು ಇದೊಂದು ಅಪರೂಪದ ತ್ರಿವಳಿ ಬಾಂಧವ್ಯವಾಗಿತ್ತು ಎಂದು ಉಪನ್ಯಾಸಕ, ಸಾಹಿತಿ ಡಾಽಽ ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ಡಾಽಽ ರಂ. ಶ್ರೀ. ಮುಗಳಿಯವರ ಜನ್ಮದಿನದ ನಿಮಿತ್ತ ದಿ. 15ರಂದು ಸಾಧನಕೇರಿಯ ‘ಚೈತ್ರ’ದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ “ರಸಿಕರಂಗ ಡಾಽಽ ರಂ. ಶ್ರೀ. ಮುಗಳಿ-ಒಂದು ನೆನಪು” ಎಂಬ ಉಪನ್ಯಾಸ ಕಾರ‌್ಯಕ್ರಮದ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದರು. ಮುಂದುವರಿದು ಮಾತನಾಡಿದ ಅವರು ಅವರ “ಕನ್ನಡ ಸಾಹಿತ್ಯಚರಿತ್ರೆ” ಎನ್ನುವ ಕೇಂದ್ರ ಸಾಹಿತ್ಯ ಅಕೆಡೆಮಿ ಪ್ರಶಸ್ತಿ ಪುರಸ್ಕೃತ ಗ್ರಂಥವೊಂದು ಈ ವಿಷಯ ಕುರಿತಾದ “ಆಚಾರ‌್ಯ” ಕೃತಿಯಾಗಿದ್ದು (ಒಛಿಣಜಡಿ ಠಿಜಛಿಜ) ಸಾಹಿತ್ಯಚರಿತ್ರೆಯೆಂಬ ಪರಿಕಲ್ಪನೆ ಇರುವವರೆಗೂ ಉಳಿಯುವಂಥ ಸಂವಹನದ ಸುಭಗತೆಯಿಂದ ಕೂಡಿದ ಶ್ರೇಷ್ಠ ಗ್ರಂಥವಾಗಿದೆ. ಇವರು ಸಾಹಿತಿಯಾಗಿ, ವಿದ್ವಾಂಸರಾಗಿ, ಅಧ್ಯಯನಶೀಲರಾಗಿ ಕಥೆ, ಕವನ, ಕಾದಂಬರಿ, ನಾಟಕ, ಪ್ರಬಂಧ, ಸಾಹಿತ್ಯ ಚರಿತ್ರೆ ಮುಂತಾದ ಎಲ್ಲ ಸಾಹಿತ್ಯಿಕ ಪ್ರಕಾರಗಳಲ್ಲಿ 60ಕ್ಕೂ ಮೀರಿದ ಕೃತಿ ರಚನೆ ಮಾಡಿದ್ದು ಅವರ ಪುಸ್ತಕಗಳೆಲ್ಲವೂ ಪ್ರಮಾಣಬದ್ಧ ರಚನೆಗಳಾಗಿವೆ. ಮಹರ್ಷಿ ಅರವಿಂದರ ಸಾಹಿತ್ಯವನ್ನು ಕೂಡ ಅಭ್ಯಸಿಸಿ ಅರಗಿಸಿಕೊಂಡು ಅನುವಾದಿಸಿದ್ದು ಕೂಡ ಮಹತ್ವದ ಸಾಧನೆಯೇ ಹೌದು. ಸರಿಸುಮಾರು ಮೂರು ದಶಕಗಳ ಕಾಲ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಕಾಲಘಟ್ಟವೆಂದರೆ ಮುಗಳಿಯವರ ಜೀವನದ ಅಮೃತಕಾಲವಾಗಿತ್ತೆಂದರೆ ತಪ್ಪಾಗಲಿಕ್ಕಿಲ್ಲ. ಅಧ್ಯಾಪನದೊಂದಿಗೆಯೇ ಅವರು ಅಲ್ಲಿ ಬೆಳೆಸಿದ ಸಾಹಿತ್ಯಿಕ ಶಿಷ್ಯಬಳಗ, ಕನ್ನಡ-ಮರಾಠಿ ಮಧುರ ಭಾಷಾ ಬಾಂಧವ್ಯಗಳೆಲ್ಲ ಒಬ್ಬ ಚಿಂತನ ಶೀಲ, ಸೌಜನ್ಯಶೀಲ ವ್ಯಕ್ತಿಯ ಪರಿಶ್ರಮದ ಮಧುರಫಲಗಳೇ ಆಗಿದ್ದವು. ಅಲಂಕಾರ ಮುಕ್ತ, ಸರಳಶೈಲಿಯ ಈ ಬರಹಗಾರನ ಕೃತಿರಾಶಿಯತ್ತ ಕನ್ನಡ ವಿಮರ್ಶಾಲೋಕ ಸಾಕಷ್ಟು ಗಮನಹರಿಸಿರಲಿಲ್ಲವೆಂದು ವಿಶಾದದಿಂದ ಹೇಳಬೇಕಾಗಿದೆ ಎಂದು ಡಾಽಽ ಶ್ರೀಧರ ಹೆಗಡೆ ಭದ್ರನ್ ಮುಗಳಿಯವರ ವಿಶಿಷ್ಟ ಸಾಧನೆಗಳನ್ನು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿಟಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಡಾಽಽ ವಿ.ಟಿ. ನಾಯಕ ಅವರು ಮಾತನಾಡಿ ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಈ ನಾಡು, ಏಕೀಕರಣಗೊಳ್ಳುವವರೆಗೂ ಬೇರೆ ಬೇರೆ ಕ್ಷೇತ್ರಗಳಂತೆ ಸಾಹಿತ್ಯ ಕ್ಷೇತ್ರದಲ್ಲಿಯೂ ಬಹುತೇಕ ವಿದ್ವಾಂಸರೆಲ್ಲರೂ ಪರಸ್ಪರರಿಂದ ದೂರವೇ ಇದ್ದರೆನ್ನಬಹುದು. ಸಾಹಿತ್ಯಕ ಕೊಡುಕೊಳ್ಳುವಿಕೆಯಲ್ಲಿಯೂ ಇದೇ ಕೊರತೆಯಿತ್ತು. ರಂ. ಶ್ರೀ. ಮುಗಳಿಯವರ ಸಾಹಿತ್ಯ ಕೃಷಿಯೂ ಇದಕ್ಕೆ ಹೊರತಾಗಿರಲಿಲ್ಲ. ಇನ್ನಾದರೂ ಇವರ ಹಲವಾರು ಕೃತಿಗಳ ಓದು, ಕೃತಿ ವಿಮರ್ಶೆಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಟಕೇಶ ದೇಸಾಯಿ, ರಾಜೀವ ಪಾಟೀಲಕುಲಕರ್ಣಿ, ಪರಮೇಶ್ವರ ಎಂ.ಎಸ್., ಕೃಷ್ಣ ಬಾಗಲವಾಡಿ, ಅನಂತ ಥಿಟೆ, ಶ್ರೀಧರ ಗಾಂವಕರ, ಡಾಽಽ ಮೋಹನ ಸುಂಕದ, ರಮೇಶ ನಾಡಿಗೇರ, ಎಚ್.ಎಮ್. ಪಾಟೀಲ, ಎಮ್.ವಿ. ಹೊಸಮನಿ, ಅನಂತ ಸಿದ್ಧೇಶ್ವರ, ಎಸ್.ಬಿ. ದ್ವಾರಪಾಲಕ, ಕುಮಾರಸ್ವಾಮಿ ಪುರಾಣಿಕಮಠ, ಆರ್.ಎಮ್. ದೊಡ್ಡಮನಿ, ಎಂ.ಬಿ. ಸದಾನಂದ, ಬದರೀ ವಿಶಾಲ ಪರ‌್ವತೀಕರ, ಡಾಽಽ ಮಂದಾಕಿನಿ ಪುರೋಹಿತ, ಡಾಽಽ ಪ್ರಜ್ಞಾ ಮತ್ತಿಹಳ್ಳಿ, ಸೀಮಾ ಪರಾಂಜಪೆ, ಸರೋಜಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 