ಹರಳಕೊಪ್ಪದ ಶಾಲೆಗೆ “ನಗು ಫೌಂಡೇಶನ್” ಡೆಸ್ಕ್ ದೇಣಿಗೆ
“Nagu Foundation” donates desks to Haralakoppa school
ಲೋಕದರ್ಶನ ವರದಿ
ಹರಳಕೊಪ್ಪದ ಶಾಲೆಗೆ “ನಗು ಫೌಂಡೇಶನ್” ಡೆಸ್ಕ್ ದೇಣಿಗೆ
ಹಾವೇರಿ 55: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಹರಳಕೊಪ್ಪ ಸರಕಾರಿ ಶಾಲೆಯ ಮಕ್ಕಳಿಗಾಗಿ ರಾಜ್ಯದ ಅನೇಕ ಶಾಲೆಗಳಿಗೆ ವಿವಿಧ ರೀತಿಯ ವಸ್ತುಗಳನ್ನ ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ದೇಣಿಗೆ ನೀಡುವ ಮೂಲಕ ಅತ್ಯಂತ ಮಹತ್ವದ ಕೆಲಸ ನಿರ್ವಹಿಸುತ್ತಿರುವ ಬೆಂಗಳೂರಿನ ನಗು ಫೌಂಡೇಶನ್ ಕಾರ್ಯ ಅತ್ಯಂತ ಶ್ಲಾಘ ನಿಯವಾಗಿದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ರಮೇಶ ಅಡಗುಂಟಿ ಹೇಳಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಾನಗಲ್ ತಾಲೂಕಿನ ಹರಳಕೊಪ್ಪದ ಶಾಲೆಗೆ ನಗು ಫೌಂಡೇಶನ್ ಬೆಂಗಳೂರು ಇವರು ದಾನಿಗಳಾದ ಗುರುರಾಜ ಕಂಜನ ಇವರ ಮೂಲಕ ನೀಡಿರುವ 17000 ರೂ.ಮೌಲ್ಯದ ಬೆಂಚ್ ಮತ್ತು ಡೆಸ್ಕ್ ಗಳನ್ನು ಶಾಲೆಯ ಮುಖ್ಯ ಗುರುಗಳಿಗೆ ಹಾಗೂ ಮಕ್ಕಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಶಾಲೆಯ ಮಕ್ಕಳ ಕಲಿಕೆಯ ಜೊತೆಗೆ ಶಾಲಾ ಸೌಕರ್ಯ ಹೆಚ್ಚಿಸುವ ಕೆಲಸ ಮಾಡುತ್ತಿರುವ ಶಿಕ್ಷಕರ ಶ್ರಮ ಹಿರಿಯದಾಗಿದೆ ಎಂದರು.ಶಾಲೆಯ ಮುಖ್ಯ ಗುರುಗಳಾದ ನಿಂಗಪ್ಪ ಸಾಳಂಕಿ ಮಾತನಾಡಿ ನಮ್ಮ ಕೋರಿಕೆಯ ಮೇರೆಗೆ ನಗು ಫೌಂಡೇಶನ್ ಪ್ರವರ್ತಕಿಯಾದ ದೀಪ್ತಿ ಶೇಷಾದ್ರಿ ಅವರು ಗುರುರಾಜ್ ಕಂಜನ್ ಇವರ ಮೂಲಕ ನಮ್ಮ ಚಿಕ್ಕ ಶಾಲೆಗೆ ದೇಣಿಗೆ ಕೊಡಿಸುವದರ ಮೂಲಕ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ದೂರದ ಹಾನಗಲ್ ತಾಲೂಕಿನ ಹರಳಕೊಪ್ಪದ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್ ಹಾಗೂ ಬೆಂಚುಗಳು ಲಭ್ಯವಾಗಿವೆ ಎಂದು ನಗು ಫೌಂಡೇಶನ್‌ನ ಕಾರ್ಯವನ್ನು ಮುಕ್ತ ಕಂಠದಿಂದ ಸ್ಮರಿಸಿದರು
ಗ್ರಾಮ ಪಂಚಾಯತ್ ಸದಸ್ಯರಾದ ಶಿವಕುಮಾರ ಅಂಗಡಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಉತ್ತಮ ಸೌಲಭ್ಯಗಳನ್ನು ಇಂದು ಸರಕಾರವು ನೀಡುತ್ತಿದೆ.ಇದರ ಜೊತೆಗೆ ಇಂತಹ ಫೌಂಡೇಶನ್ ಗಳು ಉತ್ತಮ ಸೌಲಭ್ಯ ಕಲ್ಪಿಸುವ ನಿಸ್ವಾರ್ಥ ಕೆಲಸವನ್ನು ಮಾಡುತ್ತಿರುವದು ಹಾಗೂ ನಗು ಫೌಂಡೇಶನ್ ಪ್ರವರ್ತಕಿ ದೀಪ್ತಿಯವರ ಮೂಲಕ ಇಂತಹ ಸೌಲಭ್ಯವನ್ನು ನಮ್ಮ ಶಾಲೆಗೆ ತರುವಲ್ಲಿ ಮುಖ್ಯ ಗುರುಗಳಾದ ನಿಂಗಪ್ಪ ಸಾಳಂಕಿ ಅವರ ಪಾತ್ರ ಅತ್ಯಂತ ಮೆಚ್ಚುವಂತದ್ದು ಎಂದು ಹೇಳಿದರು.ಊರಿನ ಶಿಕ್ಷಣ ಪ್ರೇಮಿಗಳಾದ ಶಾಂತಣ್ಣ ಕಲ್ಮಟ್ಲ ಮಾತನಾಡಿ ಕೆಲವು ವರ್ಷಗಳ ಹಿಂದೆ ಏನು ಸೌಲಭ್ಯ ಇಲ್ಲದ ನಮ್ಮ ಹರಳಕೊಪ್ಪ ಶಾಲೆ ಇಂದು ಇವೆಲ್ಲ ಪಡೆದುಕೊಳ್ಳುತ್ತಿರುವದಕ್ಕೆ ಶಿಕ್ಷಕರ ಉತ್ತಮ ಕಾಳಜಿಗೆ ಇಂದು ಅನೇಕ ಸೌಲಭ್ಯ ಗಳನ್ನು ಪಡೆದುಕೊಳ್ಳುತ್ತಿದೆ ಇದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.
ಎಸ್‌ಡಿಎಂಸಿ ಉಪಾಧ್ಯಕ್ಷರಾದ ಹೇಮಾ ಮಂಜುನಾಥ ಹೊಸಮನಿ ಅವರು ನಗು ಫೌಂಡೇಶನ್ ಬೆಂಗಳೂರು ಇವರಿಗೆ ಶಾಲೆಯ ಹಾಗೂ ಊರಿನ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಕರಬಸಪ್ಪ ಹರಿಜನ,ಮಂಜುನಾಥ ಹೊಸಮನಿ,ರಾಜು ಹೊಸಮನಿ,ಸಹ ಶಿಕ್ಷಕರಾದ ಆನಂದ ನಾಯ್ಕ,ಕುಮಾರ ಕಲ್ಮಟ್ಲ,ರುದ್ರ್ಪ ಆಲೂರು,ನಾಗರಾಜ ಗುಡ್ಡದವರ,ಫಕ್ಕಿರ್ಪ ಗುಡ್ಡದವರ, ಮಂಜುನಾಥ ಶಿವಮೂರ್ತಿಪ್ಪ ಹೊಸಮನಿ,ರಾಯಪ್ಪ ಕುರುಬರ, ಸವಿತಾ ಗುಡ್ಡದವರ, ಗೌರಮ್ಮ ಬೆಣ್ಣಿ, ಲತಾ ಅಂಗಡಿ, ನೀಲಮ್ಮ ಗುಡ್ಡದವರ,ರೇಖಾ ಬೆಣ್ಣಿ, ಬಸವಂತಪ್ಪ ಹರಿಜನ, ಶರಣು ಕಲ್ಮಟ್ಲ,ಅಡುಗೆಯವರಾದ ಮಲ್ಲಮ್ಮ ಹೊಸಮನಿ,ಅಕ್ಕಮ್ಮ ಗೊಲ್ಲರ ಇತರರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 