ಮಾದರಿ ನೆರೆಹೊರೆ-ಮಾದರಿ ಸಮಾಜ” ರಾಷ್ಟ್ರವ್ಯಾಪಿ ಅಭಿಯಾನ: ದಿಲಾವರ್ ಖಾನ್

ಮಾದರಿ ನೆರೆಹೊರೆ-ಮಾದರಿ ಸಮಾಜ” ರಾಷ್ಟ್ರವ್ಯಾಪಿ ಅಭಿಯಾನ: ದಿಲಾವರ್ ಖಾನ್ “Model Neighborhood-Model Society” nationwide campaign: Dilawar Khan

                    ಕೊಪ್ಪಳ 22 : ಜಮಾಅತೆ ಇಸ್ಲಾಮಿ ಹಿಂದ್ “ಮಾದರಿ ನೆರೆಹೊರೆ  ಮಾದರಿಯ ಸಮಾಜ” ಎಂಬ ಹೆಸರಿನ ಹತ್ತು ದಿನಗಳ ‘ನೆರೆಹೊರೆಯ ಹಕ್ಕುಗಳು” ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಇಂದು ಚಾಲನೆ ನೀಡಿದೆ. ಅಭಿಯಾನವು ನವೆಂಬರ್ 21 ರಿಂದ 30ರ ವರೆಗೆ ನಡೆಯಲಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ದಿಲಾವರ್ ಖಾನ್ ಅವರು ಹೇಳಿದರು.  ಅವರು ಕೊಪ್ಪಳದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನೂದ್ದೇಶಿಸಿ ಮಾತನಾಡುತ್ತಾ ಅತಿಯಾದ ಖಾಸಗಿತನದ ಮೇಲೆ ಕೇಂದ್ರೀಕೃತವಾಗಿರುವ ಇಂದಿನ ನಗರ ಜೀವನವು ನೆರೆಯವರ ನಡುವಿನ ಒಡನಾಟ ಹಾಗೂ ಪರಸ್ಪರ ಕಾಳಜಿಯನ್ನು ನಿಧಾನವಾಗಿ ಕುಗ್ಗಿಸುತ್ತಿದೆ ಎಂದು ವಿವರಿಸಿದರು. “ನೆರೆಯವರ ಬಗ್ಗೆ ನಿರ್ಲಕ್ಷ್ಯ ಹೆಚ್ಚುತ್ತಿದ್ದು, ಅವರ ಹಕ್ಕುಗಳನ್ನು ಕಡೆಗಣಿಸುವ ಪ್ರವೃತ್ತಿ ಗಂಭೀರವಾಗಿದೆ. ಸಮಾಜವನ್ನು ಈ ವಿಷಯದತ್ತ ಎಚ್ಚರಗೊಳಿಸುವ ತುರ್ತು ಅಗತ್ಯವಿದೆ,” ಎಂದು ಹೇಳಿದರು.  

                       ಅವರು ಈ ಅಭಿಯಾನವು ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಕರುಣೆ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಆಸಕ್ತಿ ಇರುವ ಪ್ರತಿಯೊಬ್ಬ ನಾಗರಿಕನಿಗೂ ಮುಕ್ತ ಆಹ್ವಾನವಾಗಿದೆ ಎಂದು ಹೇಳಿದರು.ನವೆಂಬರ್ 21ರಿಂದ 30ರವರೆಗೆ ನಡೆಯಲಿರುವ ಈ ಅಭಿಯಾನದ ಮುಖ್ಯ ಉದ್ದೇಶಗಳು:ನೆರೆಯವರ ಹಕ್ಕುಗಳ ಕುರಿತು ಇಸ್ಲಾಮಿನ ಮಾದರಿಯ ಉಪದೇಶಗಳನ್ನು ಪರಿಚಯಿಸುವುದು.ಪರಸ್ಪರ ಕಾಳಜಿ, ಸಹಕಾರ, ಶಿಸ್ತು, ಸ್ವಚ್ಛತೆ ಮತ್ತು ನಾಗರಿಕ ಜವಾಬ್ದಾರಿಯನ್ನು ಉತ್ತೇಜಿಸುವುದು.ನೆರೆಯವರ ನಡುವೆ ಇರುವ ಅಂತರಗಳನ್ನು ದೂರ ಮಾಡಿ, ಸಹೋದರತ್ವ ಮತ್ತು ಸೌಹಾರ್ದತೆಯನ್ನು ಬೆಳೆಸುವುದು.

                  ರಸ್ತೆ ಸುರಕ್ಷತೆ, ಟ್ರಾಫಿಕ್ ನಿಯಮಗಳು, ಪಾದಚಾರಿಗಳ ಹಾಗೂ ಸಹಪ್ರಯಾಣಿಕರ ಗೌರವದ ಬಗ್ಗೆ ಜಾಗೃತಿ ಮೂಡಿಸುವುದು.ಈ ಅಭಿಯನದ ಪ್ರಯುಕ್ತ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಸಾರ್ವಜನಿಕ ಉಪನ್ಯಾಸಗಳು, ನೆರೆಹೊರೆಯ ಸಭೆಗಳು, ಜಾಗೃತಿ ಸಾಹಿತ್ಯ ವಿತರಣಾ, ಮನೆ ಮನೆಗೆ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಟ್ರಾಫಿಕ್ ಜಾಗೃತಿ ಕಾರ್ಯಾಗಾರಗಳು, ವಿದ್ಯಾರ್ಥಿಗಳು ಮತ್ತು ಯುವಕರಿಂದ ಮೆರವಣಿಗೆಗಳು ಸೇರಿದಂತೆ ಅನೇಕ ಚಟುವಟಿಕೆಗಳು ಕೊಪ್ಪಳ ನಗರದಲ್ಲಿ ಹಮ್ಮಿಕೊಂಡಿದ್ದು ಸೇರಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಆಧ್ಯಕ್ಷ ಸೈಯದ್ ಹಿದಾಯತ್ ಅಲಿ, ಅಸ್ಗರ್ ಖಾನ್, ಅಯಾಜ್ ಅಹ್ಮದ್ ಹಾಗೂ ಇನ್ನು ಮುಂತಾದವರು ಭಾಗವಹಿದ್ದರು.