“ಡಾ. ಎಸ್.ಆರ್. ಗುಂಜಾಳ ದತ್ತಿ” ಗ್ರಂಥಗಳ ಬಿಡುಗಡೆ ಸಮಾರಂಭ
“Dr. S.R. Gunjala Datti” Book Release Ceremony
ಧಾರವಾಡ 24: ಕರ್ನಾಟಕ ವಿದ್ಯಾವರ್ಧಕ ಸಂಘವು “ಡಾ. ಎಸ್.ಆರ್. ಗುಂಜಾಳ ದತ್ತಿ” ಅಂಗವಾಗಿ ದಿನಾಂಕ: 25-6-2025 ರಂದು ಸಂಜೆ 6 ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಡಾ. ಎಸ್. ಆರ್. ಗುಂಜಾಳ ಅವರ ‘ಬಸವಣ್ಣನವರ ವಚನ ಪದ ಪ್ರಯೋಗ ಕೋಶ’ ಮತ್ತು ಪ್ರಕಾಶ ಗಿರಿಮಲ್ಲನವರ ಸಂಪಾದಿತ ‘ದಿನಚರಿಯಲ್ಲಿ ಕಂಡಂತೆ ಡಾ. ಗುಂಜಾಳರು’ ಗ್ರಂಥಗಳ ಬಿಡುಗಡೆ ಸಮಾರಂಭ ಏರಿ್ಡಸಿದೆ.ಬೆಳಗಾವಿಯ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಗ್ರಂಥ ಬಿಡುಗಡೆ ಹಾಗೂ ಅಧ್ಯಕ್ಷತೆ ವಹಿಸುವರು.ಬೆಳಗಾವಿಯ ಲೇಖಕ ಪ್ರಕಾಶ ಗಿರಿಮಲ್ಲನವರ ಕೃತಿ ಪರಿಚಯಿಸುವರು.
ಗ್ರಂಥಾಲಯ ವಿಜ್ಞಾನ ತಜ್ಞ ಡಾ. ಎಸ್.ಆರ್. ಗುಂಜಾಳ ಗೌರವ ಉಪಸ್ಥಿತರಿರುವರು.
ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಾ. ಎಸ್. ಆರ್. ಗುಂಜಾಳ
ನಯ-ವಿನಯದ ನಡೆ-ನುಡಿಗೆ ಇನ್ನೊಂದು ಹೆಸರೇ ಡಾ. ಎಸ್. ಆರ್. ಗುಂಜಾಳ ಎನ್ನುವಂತೆ ವ್ಯಕ್ತಿತ್ವ ಹೊಂದಿದವರು. ಶರಣರ ಬದುಕಿನಂತೆ ಬಾಳಿ ತೋರಿಸಿದವರು. 91 ಸಂವತ್ಸರ ಕಂಡರೂ ಬತ್ತದ ಉತ್ಸಾಹ.ಮನುಷ್ಯ ಜೀವನ ರೂಪಿಸುವ ಹಾಗೂ ಸಮಾಜವನ್ನು ಮುನ್ನಡೆಸುವುಗಳೆಂದರೆ ಗ್ರಂಥಗಳು. ಆ ಗ್ರಂಥಗಳು ಜನಸಾಮಾನ್ಯರಿಗೆ ಸರಳವಾಗಿ ತಲುಪಬೇಕು ಎಂದು ಹಗಲಿರುಳು ಶ್ರಮಿಸಿದವರು.ಉತ್ತಂಗಿ ಚನ್ನಪ್ಪನವರ ಕನ್ನಡದ ಸೇವೆ ಮತ್ತು ಸಾಧನೆಯನ್ನು ಸಮಾಜಕ್ಕೆ ಪರಿಚಯಿಸಿ ಅವರ ಕೊಡುಗೆಯನ್ನು ಜನರು ಸ್ಮರಿಸಿಕೊಳ್ಳುವಂತೆ ಮಾಡಿದ್ದಾರೆ. ಫ. ಗು. ಹಳಕಟ್ಟಿಯವರ ಜೀವನಕಥೆ ಬರೆದು, ವಚನ ಸಂಶೋಧನ ಪಿತಾಮಹನ ಕೊಡುಗೆಯನ್ನು ನಾಡಿಗೆ ಪರಿಚಯಿಸಿದ ಡಾ. ಗುಂಜಾಳ ಸದಾ ಅಧ್ಯಯನಶೀಲರು. ಶರಣರ ವಚನಗಳ ಆಳಕ್ಕಿಳಿದು ಅಧ್ಯಯನ ಮಾಡಿದವರು.ಬೆಳಗಾವಿ ನಾಗನೂರು ಮಠದಲ್ಲಿ ‘ಲಿಂಗಾಯತ ಸಂಶೋಧನಾ ಕೇಂದ್ರ ಗ್ರಂಥಾಲಯ’ದ ಪ್ರಥಮ ನಿರ್ದೇಶಕರಾಗಿ ಮಾಡಿದ ಕಾರ‌್ಯ ಐತಿಹಾಸಿಕ. ಗ್ರಂಥಾಲಯ ವಿಜ್ಞಾನಿಗಳಾಗಿ ಹತ್ತಾರು ಗ್ರಂಥಾಲಯಗಳಿಗೆ ಜೀವ ನೀಡಿದವರು.
ತಮ್ಮ ಹುಟ್ಟೂರಾದ ಕೋಳಿವಾಡದಲ್ಲಿ ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಹಳ್ಳಿಯ ಬಡಮಕ್ಕಳಿಗೆ ಶಿಕ್ಷಣ ದೊರಕುವಂತೆ ಮಾಡಿದ ಅಕ್ಷರ ಪುರುಷ. ಇತ್ತೀಚೆಗೆ ಗ್ರಂಥಾಲಯ ಮತ್ತು ವಸ್ತು ಸಂಗ್ರಹಾಲಯವನ್ನು ತೆರೆದು ಹುಟ್ಟೂರಿನ ಓದುಗರ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಇಂಥವರ ಕೈಹಿಡಿದು ಅವರ ಎಲ್ಲ ಸಾಧನೆಗೆ ಪ್ರೇರಕರಾಗಿದ್ದ ಧರ್ಮ ಪತ್ನಿ ಶಾಂತಾದೇವಿಯವರು. ತಮ್ಮ ಪತಿ ಜನ್ಮದಿನದ ನಿಮಿತ್ತ ಚಿಂತನ-ಮಂಥನ’ ಕ್ಕಾಗಿ ಸಂಘದಲ್ಲಿ 2014 ರಲ್ಲಿ ದತ್ತಿ ಇರಿಸಿ ಪ್ರತಿ ವರ್ಷ ಕಾರ್ಯಕ್ರಮ ಏರಿ್ಡಸಲು ಅನುವು ಮಾಡಿಕೊಟ್ಟು ಹೋಗಿರುವರು. ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 