“ಹಿರಿಯರೊಂದಿಗೆ ಕಿರಿಯರ ಮಾತುಕತೆ”
“Conversation between the younger and the older generations”
ಲೋಕದರ್ಶನ ವರದಿ
ಧಾರವಾಡ 01 : ಜನತಾ ಶಿಕ್ಷಣ ಸಮಿತಿಯ ಡಿಆರ್‌ಹೆಚ್ ಸಭಾ ಭವನದಲ್ಲಿ ಮಕ್ಕಳ ಅಕಾಡೆಮಿ ಇವರ ವತಿಯಿಂದ ಹಿರಿಯರೊಂದಿಗೆ ಕಿರಿಯರ ಮಾತುಕತೆ ಸಂವಾದ ಕಾರ್ಯಕ್ರಮವನ್ನು ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ 10ನೇ ತರಗತಿಯ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಮಕ್ಕಳ ಅಕಾಡೆಮಿ ಧಾರವಾಡ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಧಾರವಾಡ ಐ.ಐ.ಟಿಯ ನಿರ್ದೇಶಕರಾದ ಡಾಽಽ ವೆಂಕಪ್ಪಯ್ಯ ದೇಸಾಯಿ ಇವರು ಪಾಲ್ಗೊಂಡು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಮಕ್ಕಳು ತಮ್ಮ ಐಚ್ಛಿಕ ವಿಷಯದಲ್ಲಿ ಪರಿಣಿತಿ ಜೀವನದಲ್ಲಿ ಮುಂದೆ ಸಾಗಬೇಕು, ವಿಫಲತೆಗಳಿಗೆ ಕೊರಗುತ್ತಾ ಕೂಡುವುದರಲ್ಲಿ ಯಾವುದೇ ಅರ್ಥವಿಲ್ಲ ವಿಫಲತೆಗಳನ್ನು ಮೀರಿ ಸಫಲತೆಗಾಗಿ ಪ್ರಯತ್ನ ನಡೆಸಬೇಕು.
ವಿಫಲತೆಯನ್ನು ಸಫಲತೆಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಮಕ್ಕಳ ಅಕಾಡೆಮಿ ಧಾರವಾಡದ ಅಧ್ಯಕ್ಷರಾದ ಹಾಗೂ ಪ್ರಸಿದ್ಧ ಮಕ್ಕಳ ತಜ್ಞರಾದ ಡಾಽಽ ರಾಜನ್ ದೇಶಪಾಂಡೆ, ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ್, ಜೆ.ಎಸ್.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ, ಮಕ್ಕಳ ಅಕಾಡೆಮಿಯ ಡಾಽಽ ಸಾವಂತ, ಸತೀಶ್‌ಬಿ ಪರ್ವತೀಕರ್, ಜೆ.ಎಸ್.ಎಸ್ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ಪ್ರಾಚಾರ್ಯೆ. ರಜನೀ ಪಾಟೀಲ್‌ಹಾಗೂ ಮಕ್ಕಳ ಅಕಾಡೆಮಿ ಧಾರವಾಡದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಕ್ಕಳ ಅಕಾಡೆಮಿಯ ಸತೀಶ್ ಬಿ ಪರ್ವತೀಕರ್ ಎಲ್ಲರನ್ನು ಸ್ವಾಗತಿಸಿದರು. ರಜನೀ ಪಾಟೀಲ್ ಅತಿಥಿಗಳನ್ನು ಎಲ್ಲರಿಗೂ ಪರಿಚಯಿಸಿದರು. ಡಾಽಽ ರಾಜನ್ ದೇಶಪಾಂಡೆ ಸರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ್ ಇವರು ಮಾತನಾಡಿ, ಒಳ್ಳೆಯ ವಿಚಾರಗಳನ್ನು ಮಾಡುತ್ತಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ನಮ್ಮ ವ್ಯಕ್ತಿತ್ವದ ನಿರ್ಮಾಣವನ್ನು ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ವಾಣಿಶ್ರೀ ಕೋಳಿವಾಡ ನೆರವೇರಿಸಿದರು ಹಾಗೂ ವಂದನಾರೆ್ಣಯನ್ನು ಶುಭಾಂಗಿ ಲೋಖಂಡೆ ನೆರವೇರಿಸಿದರು. ಮಕ್ಕಳು ಕೇಳಿದ ಪ್ರಶ್ನೆಗಳಲ್ಲಿ ಉತ್ತಮ 3 ಪ್ರಶ್ನೆಗಳನ್ನು ಕೇಳಿದ ಮಕ್ಕಳಿಗೆ ಡಾಽಽ ಸಾವಂತ ಅವರು ಬಹುಮಾನ ನೀಡಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 