“ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಅಮೋಘ ಸಾಧನೆ”

“ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಅಮೋಘ ಸಾಧನೆ” “Amazing achievement of Sri Vidyaniketan PU College students”

“ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಅಮೋಘ ಸಾಧನೆ” 

ಗಂಗಾವತಿ 13: ತಾಲ್ಲೂಕಿನ ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಗಂಗಾವತಿಯಲ್ಲಿ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.   ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ವಿದ್ಯಾರ್ಥಿಗಳು, ಬಾಲಕರ ವಿಭಾಗದ ಗುಂಪು ಆಟಗಳಾದ  ಹ್ಯಾಂಡ್‌ಬಾಲ್, ಬಾಸ್ಕೇಟ್‌ಬಾಲ್, ನೆಟ್‌ಬಾಲ್, ಬ್ಯಾಡ್ಮೀಟನ್, ಥ್ರೋಬಾಲ್, ವಾಲಿಬಾಲ್ ಹಾಗೂ ಬಾಲಕಿಯರ ವಿಭಾಗದ ಹ್ಯಾಂಡ್‌ಬಾಲ್, ಥ್ರೋಬಾಲ್, ವಾಲಿಬಾಲ್ ಮತ್ತು ರಿಲೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಅದೇ ರೀತಿ ಬಾಲಕಿಯರ ವೈಯಕ್ತಿಕ ಆಟಗಳಾದ 1500ಮೀಟರ್ ಓಟದಲ್ಲಿ ಕುಮಾರಿ ಪ್ರಿಯಾಂಕ, ಹರ್ಡಲ್ಸ್‌ ಮತ್ತು ಟ್ರಿಪಲ್ ಜಂಪ್‌ನಲ್ಲಿ ಕುಮಾರಿ ಪವಿತ್ರ, ಜುಡೋ ವಿಭಾಗದಲ್ಲಿ ಕುಮಾರಿ ನಕ್ಷಿತಾ, ಕರಾಟೆಯಲ್ಲಿ 68 ಕೆ.ಜಿ ವಿಭಾಗದಲ್ಲಿ ಕುಮಾರಿ ಮಹಾಲಕ್ಷ್ಮೀ ಪ್ರಥಮ ಸ್ಥಾನವನ್ನು, 44 ಕೆ.ಜಿ ವಿಭಾಗದಲ್ಲಿ ಕುಮಾರಿ ನಕ್ಷಿತಾ ದ್ವೀತಿಯ ಸ್ಥಾನವನ್ನು, ಗುಂಡು ಎಸೆತ ಮತ್ತು ಹ್ಯಾಮರ್ ಎಸೆತದಲ್ಲಿ ಕುಮಾರಿ ಹಾರಿಕಾ ಪ್ರಥಮ ಸ್ಥಾನವನ್ನು ಹಾಗೂ ತ್ರಿಪಲ್ ಜಂಪ್ ಮತ್ತು ಎತ್ತರ ಜಿಗಿತದಲ್ಲಿ ಕುಮಾರಿ ರೇಖಾ ಹಾಗೂ 100ಮೀಟರ್ ಓಟದಲ್ಲಿ ಕುಮಾರಿ ವಿಜಯಲಕ್ಷ್ಮೀ, ಜಾವಲಿನ್ ಥ್ರೋದಲ್ಲಿ ಕುಮಾರಿ ಪ್ರಣಿತಾ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.  ಬಾಲಕರ ವೈಯಕ್ತಿಕ ಆಟಗಳಾದ ಕರಾಟೆಯಲ್ಲಿ 58 ಕೆ.ಜಿ ವಿಭಾಗದಲ್ಲಿ ಕುಮಾರ ಕೃಷ್ಣ, 70 ಕೆ.ಜಿ ವಿಭಾಗದಲ್ಲಿ ಕುಮಾರ ಮಹೇಶ ಕುಮಾರ, 62 ಕೆ.ಜಿ ವಿಭಾಗದಲ್ಲಿ ಕುಮಾರ ಶರಣೆಗೌಡ, 45 ಕೆ.ಜಿ ವಿಭಾಗದಲ್ಲಿ ಕುಮಾರ ಸಂಪತ್ ಗೌಡ, 54 ಕೆ.ಜಿ ವಿಭಾಗದಲ್ಲಿ ಕುಮಾರ ನಾಗರಾಜ, 82 ಕೆ.ಜಿ ವಿಭಾಗದಲ್ಲಿ ಕುಮಾರ ಶರತ್ ಪ್ರಥಮ ಸ್ಥಾನವನ್ನು, ಅದೇ ರೀತಿ ಕುಮಾರ ಸುರೇಂದ್ರ, ಕುಮಾರ ಬುದ್ದಿಪಾಷಾ, ಕುಮಾರ ಶರಣ, ಕುಮಾರ ರೋಹಿತ್, ಕುಮಾರ ನಾಗರಾಜ ಮತ್ತು ಕುಮಾರ ಶರಣಬಸವ ದ್ವೀತಿಯ ಸ್ಥಾನವನ್ನು ಗಳಿಸಿದ್ದಾರೆ. ಅದೇ ರೀತಿ ಕುಮಾರ ಸಮರ್ಥ ಜಂಪ್‌ಪ್ರೋಪ್ ಪ್ರಥಮ ಸ್ಥಾನವನ್ನು, ಕುಮಾರ ಸುಹಾಸ್ ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಹ್ಯಾಮರ್ ಎಸೆತ ಮತ್ತು ಗುಂಡು ಎಸೆತದಲ್ಲಿ ದ್ವೀತಿಯ ಸ್ಥಾನವನ್ನು, ಕುಮಾರ ರಾಮ್‌ಕುಮಾರ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಹ್ಯಾಮರ್ ಎಸೆತದಲ್ಲಿ ದ್ವೀತಿಯ ಸ್ಥಾನವನ್ನು, ಎತ್ತರ ಜಿಗಿತದಲ್ಲಿ ಕುಮಾರ ರೋಹಿತ್ ಕೆ, ಹರ್ಡಲ್ಸ್‌ನಲ್ಲಿ ಕುಮಾರ ಶ್ರವಂತ್‌ರೆಡ್ಡಿ ದ್ವೀತಿಯ ಸ್ಥಾನವನ್ನು ಪಡೆದ್ದಿದಾರೆ. ಅದೇ ರೀತಿ ಗಂಗಾವತಿಯ ಜುಲೈ ನಗರದ ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ವಿದ್ಯಾರ್ಥಿಗಳು ಬಾಲಕರ ಫುಟ್‌ಬಾಲ್ ವಿಭಾಗ ಹಾಗೂ ಬಾಲಕಿಯರ ಬಾಸ್ಕೇಟ್‌ಬಾಲ್, ನೆಟ್‌ಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಅದೇ ರೀತಿ ಚೆಸ್‌ನಲ್ಲಿ ಕುಮಾರಿ ಅನುಷಾ ಇ, ಚಿನ್ಮಯ, ಬಿ ಪ್ರೀತಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ (ಆರ್‌.ಜಿ ರೋಡ್) ಶ್ರೀ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ಬಾಲಕಿಯರ ಫುಟ್‌ಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ರೆಸಿಡೆನ್ಸಿಯಲ್ ಪಿ.ಯು ಕಾಲೇಜಿನ ವಿದ್ಯಾರ್ಥಿ ಕುಮಾರಿ ಅಶ್ವೀನಿ ಚೆಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಪ್ರದರ್ಶನವನ್ನು ನೀಡಿ, ಶ್ರೇಷ್ಠ ಸಾಧನೆಗೈದ ಈ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರನ್ನು ಸಂಸ್ಥೆಯ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ಅವರು ಅಭಿನಂದಿಸಿ, ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಅವುಗಳ ಸಮರ​‍್ಕ ಪ್ರಯೋಜನವನ್ನು ಪಡೆಯುವ ಮೂಲಕ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಅತ್ಯುನ್ನತ ಸಾಧನೆಗೈಯುವಂತೆ ಪ್ರೋತ್ಸಾಹಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಸಿಬ್ಬಂಧಿ ವರ್ಗ ವಿದ್ಯಾರ್ಥಿಗಳನ್ನು ಅಭಿನಂಧಿಸಿದರು.