“ಆಚಾರ್ಯ ಪ್ರಫುಲ್‌ಚಂದ್ರ ರಾಯ್ ಕೆಮಿಕಲ್ ಸೊಸೈಟಿ” ಕಾರ್ಯಕ್ರಮ
“Acharya Prafulchandra Roy Chemical Society” programme
ಧಾರವಾಡ 14: ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ವತಿಯಿಂದ “ಆಚಾರ್ಯ ಪ್ರಫುಲ್‌ಚಂದ್ರ ರಾಯ್ ಕೆಮಿಕಲ್ ಸೊಸೈಟಿ” ಕಾರ್ಯಕ್ರಮವನ್ನು ಜನತಾ ಶಿಕ್ಷಣ ಸಮಿತಿಯ, ಕಾರ್ಯಾಧ್ಯಕ್ಷರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾಯಿತು.
ಜೆ.ಎಸ್.ಎಸ್. ಸಂಸ್ಥೆಯ ಮಾನ್ಯ ಕಾರ್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜೆ.ಎಸ್.ಎಸ್. ಸಂಸ್ಥೆಯ ಶೈಕ್ಷಣಿಕ ಪ್ರಗತಿ, ವಿವಿಧ ವಿಭಾಗಗಳ ಚಟುವಟಿಕೆಗಳು ಮತ್ತು “ಆಚಾರ್ಯ ಪ್ರಫುಲ್‌ಚಂದ್ರ ರಾಯ್ ಕೆಮಿಕಲ್ ಸೊಸೈಟಿ” ಸ್ಥಾಪನೆಯ ಮಹತ್ವ ಕುರಿತು ಹೇಳುತ್ತಾ, ರಸಾಯನಶಾಸ್ತ್ರವು ಬೇಡಿಕೆ ಹೊಂದಿರುವ ವಿಷಯವಾಗಿದ್ದು, ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ತೆರೆದಿಡುವ ವೇದಿಕೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಐ.ಐ.ಟಿ.ಯ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ನೀಲಕಮಲ್ ಮಹಾಂತ ಅವರು, “ರಸಾಯನಶಾಸ್ತ್ರ ಪದವೀಧರರಿಗೆ ಭಾರತ ಮತ್ತು ವಿದೇಶಗಳಲ್ಲಿ ವೃತ್ತಿ ದೃಷ್ಟಿಕೋನಗಳು” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡುತ್ತಾ, ರಸಾಯನಶಾಸ್ತ್ರ ಕ್ಷೇತ್ರದ ಮಹತ್ವ, ತಮ್ಮ ಸಂಶೋಧನಾ ಅನುಭವ, ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಶೈಕ್ಷಣಿಕ ನಿಲುವುಗಳ ಬಗ್ಗೆ ಮನೋಜ್ಞವಾಗಿ ಮಾತನಾಡಿದರು. ಅಲ್ಲದೇ, ರಸಾಯನಶಾಸ್ತ್ರ ಪದವಿಧರರಿಗೆ ದೇಶ ಮತ್ತು ವಿದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಮತ್ತು ಭವಿಷ್ಯದ ವೃತ್ತಿಪರ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ವೆಂಕಟೇಶ ಮುತಾಲಿಕ ಅವರು ವಿವಿಧ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಪ್ರಾಮುಖ್ಯತೆ ಕುರಿತು ತಿಳಿಸಿದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಅರುಣಕುಮಾರ ಎಂ. ಶಿರಹಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ರಸಾಯನಶಾಸ್ತ್ರ ವಿಭಾಗದ ಬೆಳವಣಿಗೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಯತ್ನ, ಹಾಗೂ ಹೊಸದಾಗಿ ಸ್ಥಾಪನೆಯಾದ ಕೆಮಿಕಲ್ ಸೊಸೈಟಿಯ ಉದ್ಧೇಶಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಜೆ.ಎಸ್.ಎಸ್. ಎಂ.ಸಿ.ಎ. ಕಾಲೇಜಿನ ನಿದೇರ್ಶಕರಾದ ಡಾ. ಸೂರಜ್ ಜೈನ್, ಜೆ.ಎಸ್.ಎಸ್. ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಾವೀರ ಉಪಾಧ್ಯೆ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಬೋಧಕ ಸಿಬ್ಬಂದಿಗಳಾದ ಕುಮಾರಿ. ಗೀತಾ ಪೈ, ಶ್ರೀಮತಿ. ಸುಪ್ರೀಯಾ ಕುಂದಗೋಳ, ಶ್ರೀಮತಿ. ಸುರೇಖಾ ಹುಬ್ಬಳ್ಳಿ, ಡಾ. ಓಶಿನ್ ಡಿಸೋಜಾ, ಶ್ರೀಮತಿ. ಶೃತಿ ಪತ್ತಾರ, ಶ್ರೀಮತಿ. ಅಕ್ಷತಾ ಹುಬ್ಬಳ್ಳಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಮಹೇಶ ಆರ್.ಟಿ. ಸ್ವಾಗತಿಸಿದರು. ಕು. ರಕ್ಷಿತಾ ಹೆಗಡೆ ಪ್ರಾರ್ಥಿಸಿದರು. ಡಾ. ವೀಣಾ ಭಟ್ ವಂದಿಸಿದರು. ಅಪೂರ್ವ ಶಬ್ದಮಣಿಮಠ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 