‘ಮುಳ್ಳು ಸಜ್ಜೆ ಕಳೆ ನಾಶ ನಿಯಂತ್ರಣಕ್ಕೆ ವಿಡ್ ಮಾಸ್ಟರ್ ಅಧಿಕೃತ ಓಷಧಿಯಲ್ಲ’
‘Weedmaster is not an official drug for controlling prickly pear weed’
ಹಾವೇರಿ, 04: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ನಿರಂತರ ಮಳೆಯಿಂದಾಗಿ ರೈತರ ಜಮೀನುಗಳಲ್ಲಿ ಮುಳ್ಳು ಸಜ್ಜೆ ಕಳೆ ಬೆಳೆದು ನಿಂತಿರುತ್ತದೆ ಇದು ರೈತರಿಗೆ ಸಮಸ್ಯೆಯನ್ನುಂಟು ಮಾಡಿದೆ ಹೀಗಾಗಿ ಮುಳ್ಳುಸಜ್ಜೆ ಕಳೆ ನಿಯಂತ್ರಣಕ್ಕೆ ರೈತರು ಹೈರಾಣಾಗಿದ್ದಾರೆ. ರೈತರು ಮುಳ್ಳುಸಜ್ಜೆ ನಿಯಂತ್ರಣಕ್ಕೆ ಅಮೋನಿಯಂ ಸಲ್ಪೇಟ್ ಮತ್ತು ಟಿಂಜರ್ ಬಳಕೆ ಮಾಡಿ ಮುಳ್ಳುಸಜ್ಜೆ ಕಳೆ ನಿಯಂತ್ರಣ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.
ನಗರದ ಕೃಷಿ ಇಲಾಖೆಯಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾನಗಲ್ ರಸ್ತೆಯಲ್ಲಿನ ಶ್ರೀನಿವಾಸ ಅಗ್ರೋ ಕೇಂದ್ರದಲ್ಲಿ ಮೆಕ್ಕೆಜೋಳದಲ್ಲಿನ ಮುಳ್ಳುಸಜ್ಜೆ ಹತೋಟಿಗೆ ವಿಡ್ ಮಾಸ್ಟರ್ ಹೆಸರಿನ ಕಳೆನಾಶಕ ವಿತರಣೆ ಮಾಡಲಾಗುತ್ತಿದೆ. ಆದರೆ ವಿಡ್ ಮಾಸ್ಟರ್ ಅಧಿಕೃತ ಓಷಧಿಯಲ್ಲ. ಮುಳ್ಳುಸಜ್ಜೆ ಹತೋಟಿಗೆ ಟಿಂಜರ್ ಮಾತ್ರ ಅಧಿಕೃತ ಕಳೆನಾಶಕ ಓಷದವಾಗಿದೆ ಎಂದರು. ಮುಳ್ಳು ಸಜ್ಜೆ ಹತೋಟಿಗೆ ಟಿಂಜರ್ ಮತ್ತು ಅಮೋನಿಯಂ ಸಲ್ಫೇಟ್ ಬಳಸಬಹುದಾಗಿದೆ ಎಲ್ಲ ತಾಲೂಕುಗಳಲ್ಲಿ ಟಿಂಜರ್ ಮತ್ತು ಅಮೋನಿಯಂ ಸಲ್ಫೇಟ್ ಲಭ್ಯವಿದೆ.
ರೈತರು ಟಿಂಜರ್ ಮತ್ತು ಅಮೋನಿಯಂ ಸಲ್ಪೇಟ್ ಬಳಕೆ ಮಾಡುವ ಮೂಲಕ ಮುಳ್ಳುಸಜ್ಜೆ ಕಳೆಯನ್ನು ನಿಯಂತ್ರಣ ಮಾಡಬಹುದಾಗಿ ತಿಳಿಸಿದರು. *ವಿಜ್ಞಾನಿಗಳು ವರದಿ ನೀಡುವರೆಗೆ ವಿಡ್ ಮಾಸ್ಟರ್ ಮಾರಾಟಕ್ಕೆ ಅವಕಾಶವಿಲ್ಲ* ಜಿಲ್ಲೆಯ ರೈತರು ಕಳೆದ ಕೆಲವು ದಿನಗಳಿಂದ ನಗರದ ಹಾನಗಲ್ ರಸ್ತೆಯಲ್ಲಿ ಶ್ರೀನಿವಾಸ ಅಗ್ರೋ ಕೇಂದ್ರದಲ್ಲಿ ದೊರೆಯುವ ವಿಡ್ ಮಾಸ್ಟರ್ ಕಳೆನಾಶಕವನ್ನು ಮುಳ್ಳುಸಜ್ಜೆ ನಿಯಂತ್ರಣಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ ಅದು ಅಧಿಕೃತವಲ್ಲ ಹೀಗಾಗಿ ಗುರುವಾರ ಶ್ರೀನಿವಾಸ ಅಗ್ರೋ ಕೇಂದ್ರದಲ್ಲಿನ ವಿಡ್ ಮಾಸ್ಟರ್ ಕಳೆ ನಶಾಕದ ಸ್ಯಾಂಪಲ್‌ನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎರಡ್ಮೂರು ದಿನಗಳಲ್ಲಿ ಪ್ರಯೋಗಾಲಯದ ವರದಿ ಬರುತ್ತದೆ. ಪ್ರಯೋಗಾಲಯದ ವರದಿ ಬರುವವರೆಗೆ ಅನಧಿಕೃತವಾಗಿ ವಿಡ್ ಮಾಸ್ಟರ್ ಮಾರಾಟಕ್ಕೆ ಅವಕಾಶವಿಲ್ಲ ಎಂದರು. ಶ್ರೀನಿವಾಸ ಅಗ್ರೋ ಕೇಂದ್ರದಲ್ಲಿ ಮಾರಾಟ ಮಾಡುತ್ತಿರುವ ವಿಡ್ ಮಾಸ್ಟರ್ ಕುರಿತು ಈಗಾಗಲೆ ಅಂಗಡಿಯವರನ್ನು ಕರೆದು ವಿಚಾರಣೆ ಮಾಡಿದ್ದೇವೆ ಈಗ ಸಧ್ಯ ಅವರ ಬಳಿ ಸ್ಟಾಕ್ ಮುಗಿದಿರುವುದಾಗಿ ತಿಳಿಸಿದ್ದಾರೆ ಅದು ಅಧಿಕೃತವಲ್ಲ ಎಂದು ಸಂಬಂಧಪಟ್ಟವರಿಗೆ ತಿಳಿಸಿದರು.
ಬಳಿಕ ಬಿಎಸ್‌ಎಫ್ ಕಂಪನಿಯ ದಾವಣಗೆರೆ ಪ್ರಾದೇಶಿಕ ವಿಭಾಗದ ಸಿಬ್ಬಂದಿ ಶಶಿಧರ ಅವರು ಮಾತನಾಡಿ, ಟಿಂಜರ್ ಕಳೆನಾಶಕ ಬಂದು ಹತ್ತು ವರ್ಷಗಳಾಗಿದೆ. ರೈತರು ಇಪ್ಪತ್ತು ದಿನಗಳ ನಂತರ ಟಿಂಜರ್ ಬಳಕೆ ಮಾಡುತ್ತಾರೆ. ಮುಳ್ಳುಸಜ್ಜೆ ಇಪ್ಪತ್ತು ದಿನಗಳ ನಂತರ ಬಳಕೆ ಮಾಡಿದರೆ ಕಳೆನಾಶಕ ಕೆಲಸ ಮಾಡುವುದಿಲ್ಲ. 2015 ರಲ್ಲಿ ಟಿಂಜರ್ ನೋಂದಣಿ ಮಾಡಿದ್ದೇವೆ. ಎರಡರಿಂದ ಮೂರು ಎಲೆಗಳ ಪ್ರಮಾಣದಲ್ಲಿ ಇದ್ದಾಗ ಮಾತ್ರ ಟಿಂಜರ್ ಬಳಕೆ ಮಾಡಿದರೆ ಮುಳ್ಳು ಸಜ್ಜೆ ನಿಯಂತ್ರಣ ಹತೋಟಿಗೆ ಬರುತ್ತದೆ. ಟಿಂಜರಿ್ನಂದ ಮೆಕ್ಕೆಜೋಳಕ್ಕೆ ಯಾವುದೇ ತೊಂದರೆ ಇಲ್ಲ ಎಂದರು. ಶ್ರೀನಿವಾಸ ಅಗ್ರೋ ಕೇಂದ್ರದ ಮಾಲೀಕ ತಿಪ್ಪೇಶ್ ಪೂಜಾರಿ ಮಾತನಾಡಿ, ಮೂರು ವರ್ಷಗಳಿಂದ ವಿಡ್ ಮಾಸ್ಟರ್ ವಿತರಣೆ ಮಾಡುತ್ತಿದ್ದೇನೆ. ಇದರಿಂದ ರೈತರಿಗೆ ಯಾವುದೇ ತೊಂದರೆ ಆಗಿಲ್ಲ ಅಧಿಕೃತವಾಗಿ ನಮ್ಮ ಅಂಗಡಿಯಲ್ಲಿ ವಿತರಣೆ ಮಾಡುತ್ತಿರುವ ವಿಡ್ ಮಾಸ್ಟರ್ ಫಾರ್ಮುಲಾಗೆ ಲೈಸನ್ಸ್ ಪಡೆದಿಲ್ಲ. ವಿಡ್ ಮಾಸ್ಟರ್ ನಾನು ಹಾವೇರಿ ಭಾಗಕ್ಕೆ ವಿತರಣೆ ಮಾಡಿದ್ದೇನೆ. ಹಾವೇರಿ ತಾಲೂಕಿನ ಸಣ್ಣ ಅಂಗಡಿ ನಮ್ಮದು. ನಮ್ಮ ಬಳಿ ಖಾಯಂ ವ್ಯಾಪಾರ ಮಾಡುವ ರೈತರಿಗೆ ನಾನು ವಿಡ್ ಮಾಸ್ಟರ್ ವಿತರಣೆ ಮಾಡಿದ್ದೇನೆ. ಸರಕಾರ ನನಗೆ ಅನುಮತಿ ನೀಡಿದರೆ ರಾಜ್ಯದ ಎಲ್ಲ ರೈತರಿಗೆ ವಿಡ್ ಮಾಸ್ಟರ್ ವಿತರಣೆ ಮಾಡುತ್ತೇನೆ. ರೆಗ್ಯುಲರ್ ಕಸ್ಟಮರ್ ಆಗಿರುವ ರೈತರಿಗೆ ಮಾತ್ರ್ರ ನಾನು ವಿತರಣೆ ಮಾಡುತ್ತೇನೆ ಈ ಕುರಿತು ಡೆಮೋ ಕೊಟ್ಟಿದ್ದೇನೆ. ಈಗ ಕೃಷಿ ಇಲಾಖೆಯವರು ವಿಡ್ ಮಾಸ್ಟರ್ ಸ್ಯಾಂಪಲ್‌ನ್ನು ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.
ವರದಿಯಲ್ಲಿ ವಿಡ್ ಮಾಸ್ಟರ್ ಬಳಕೆಯಿಂದ ಯಾವುದೇ ತೊಂದರೆ ಇಲ್ಲ ಅಂತಾದರೆ ಎಲ್ಲ ರೈತರಿಗೆ ವಿಡ್ ಮಾಸ್ಟರ್ ವಿತರಣೆ ಮಾಡುತ್ತೇನೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 