‘ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಶಪಥ ಮಾಡಬೇಕು’
‘We must take an oath to follow the path laid down by Basavadi Sharan’
ಕೊಲ್ಹಾರ 21: ತಾಲೂಕಿನ ಕೂಡಗಿ ಗ್ರಾಮದ ಜ್ಞಾನ ಭಾರತಿ ಹಿರಿಯ ಮತ್ತು ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ’ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಶಪಥ ಮಾಡಬೇಕು. ಜಾತಿ ವ್ಯವಸ್ಥೆಯಿಂದ ಜಡ್ಡುಗಟ್ಟಿರುವ ಸಮಾಜದಲ್ಲಿ ಚಲನಶೀಲತೆ ತರಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆಯಲೇಬೇಕು ಗಂಗಾಧರ ಅಂಕಲಗಿ ಪ್ರತಿಪಾದಿಸಿದರು.
ಅವರು ಸಮಸಮಾಜ ನಿರ್ಮಾಣದ ಗುರಿ ಸಾಧನೆಯ ನಿಟ್ಟಿನಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಕಾಯಕಯೋಗಿ ಬಸವಣ್ಣನವರ ಕೊಡುಗೆ ಅನನ್ಯ ಎಂದು ಬಣ್ಣಿಸಿದರು.ಜಾತಿ ಪದ್ಧತಿ, ಕಂದಾಚಾರ ಮತ್ತು ಮೌಢ್ಯತೆಯ ಕೂಪದಲ್ಲಿ ಸಿಲುಕಿದ್ದ ಅಂದಿನ ವ್ಯವಸ್ಥೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಲಿಂಗ ಸಮಾನತೆಯ ಆಶಯಗಳನ್ನು ದಿಟ್ಟತನದಿಂದ ಎತ್ತಿಹಿಡಿಯುವ ಮೂಲಕ ಬಸವಣ್ಣನವರು ಕ್ರಾಂತಿಕಾರಿ ಪರಿಣಾಮ ಬೀರಿದರೆಂದು ಅವರು ಶಿವು ಸರ್ ವಿಶ್ಲೇಷಿಸಿದರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಬಸವಣ್ಣನವರು, ಕಾಯಕವೇ ಕೈಲಾಸ ಎಂಬ ಧ್ಯೇಯದ ಮೂಲಕ ಶ್ರಮ ಸಂಸ್ಕೃತಿಯ ಸಂದೇಶವನ್ನು ಪ್ರತಿಪಾದಿಸಿದರೆಂದು ಸೋಮು ಸಾಗರ ಅವರು ವಿಶ್ಲೇಷಿಸಿದರು.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವಣ್ಣನವರ ವಿಚಾರಧಾರೆ ಚಲನಶೀಲತೆ ತತ್ವಾಧಾರಿತ ಸಾರ್ವಕಾಲಿಕ ವೈಜ್ಞಾನಿಕ ಸತ್ಯವೆಂದು ರಾಣಿ ಚನ್ನಮ್ಮ ವಸತಿ ಶಾಲೆ ಕಾರಜೋಳ ಪ್ರಾಂಶುಪಾಲರಾದ ಗಂಗಾಧರ ಅಂಕಲಗಿ ವ್ಯಾಖ್ಯಾನಿಸಿದರು. ಶರಣ ಚಳವಳಿಯ ಉದಾತ್ತ ಆದರ್ಶಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜ್ಞಾನ ಭಾರತಿ ಹಿರಿಯ ಮತ್ತು ಪ್ರೌಢ ಶಾಲೆಯ ಮುಖ್ಯ ಗುರುಮಾತೆಯಾದ ಸೀಮಾ ಸಾಗರ ರವರು ಅಂತರ್ಜಾತೀಯ ವಿವಾಹದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ ಬಸವಣ್ಣನವರು ಸಾಮಾಜಿಕ ಸಮಾನತೆಯ ಹರಿಕಾರರೆಂದು ಕೊಂಡಾಡಿದರು.ವೈದಿಕ ಧರ್ಮ ಮತ್ತು ಸಂಸ್ಕೃತಿಯನ್ನು ತಿರಸ್ಕರಿಸಿದ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಮಹತ್ಕಾರ್ಯದಲ್ಲಿ ಮಹಿಳೆಯರೂ ಸೇರಿದಂತೆ ಶೋಷಿತ ಜನವರ್ಗವನ್ನು ತೊಡಗಿಸಿದರೆಂದು ಶಿಕ್ಷಕಿ ಭಾಗ್ಯಶ್ರೀ ಅವರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಸತಿ ಶಾಲೆ ಕಾರಜೋಳ ಪ್ರಾಂಶುಪಾಲರಾದ ಗಂಗಾಧರ ಅಂಕಲಗಿ, ಜ್ಞಾನ ಭಾರತಿ ಹಿರಿಯ ಮತ್ತು ಪ್ರೌಢ ಶಾಲೆಯ ಅಧ್ಯಕ್ಷರಾದ ಸೋಮು ಸಾಗರ, ಮಹಾದೇವಿ ಮೇಡಂ, ಸೀಮಾ ಸಾಗರ, ಭಾಗ್ಯಶ್ರೀ ಮೇಡಂ,ಶಿವು ಸರ್ , ಬಸವರಾಜ ಸರ್ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 