‘ಕೆಲ ಕಳ್ಳ ಸ್ವಾಮಿಗಳು ಒಂದು ಕೋಮಿನವರನ್ನು ಮೆಚ್ಚಿಸಲು ಹೊರಟಿದ್ದಾರೆ’
‘Some thieving swamiji's are out to please a certain community’
ಲೋಕದರ್ಶನ ವರದಿ
ಜಮಖಂಡಿ 30: ವಿಶ್ವಗುರು ಬಸವಣ್ಣನವರನ್ನು ಕಮ್ಯುನಿಸ್ಟ್‌ರನ್ನಾಗಿಸಲು ಹೊರಟಿರುವ ಕೆಲ ಕಳ್ಳ ಸ್ವಾಮಿಗಳು ಬಸವತತ್ವ ತಿರುಚಿ ಮಾತನಾಡುವ ಮೂಲಕ ಒಂದು ಕೋಮಿನವರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ವಿಜಯಪುರ ಶಾಸಕ ಬಸವನಗೌಡಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
ನಗರದ ಮುಖಂಡ ಬಸವರಾಜ ಸಿಂಧೂರ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರು ಸನಾತನ ಧರ್ಮ ಬಿಡಿ ಎಂದು ಎಲ್ಲಿಯೂ ಹೇಳಿಲ್ಲ. ಅವರು ಅನುಭವ ಮಂಟಪ ಸ್ಥಾಪಿಸಿ ಮೇಲು-ಕೀಳು ಹಾಗೂ ಮೂಢನಂಬಿಕೆ ಬಿಡಲು ಹೇಳಿದ್ದರು. ಬಸವಣ್ಣನವರ ಹೆಸರು ಹೇಳಿಕೊಂಡು ಅಪಪ್ರಚಾರ ಮಾಡುವ ಇಂತಹ ಸ್ವಾಮಿಗಳಿಗೆ ಯಾರೂ ಮರ್ಯಾದೆ ಕೊಡಬಾರದು. ಇವರೆಲ್ಲ ಹಿಂದುಗಳೋ ಅಲ್ಲವೋ ಎಂಬುವುದನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು. ಬಸವಣ್ಣನವರು ಲಿಂಗಾಯತ ಬೇರೆ ಧರ್ಮ ಮಾಡಲಿಲ್ಲ. ಅದಕ್ಕೆ ಯಾವ ಪುರಾವೆಯೂ ಇಲ್ಲ ಎಂದು ಕಿಡಿಕಾರಿದರು.
ಇಸ್ಲಾಂ ಪರ ಮಾತನಾಡುವ ಸ್ವಾಮಿಗಳು ಕಾವಿ ತೆಗೆದು ಹೋಗಲಿ. ಇವರೇನಾದರೂ ದನದ ಮಾಂಸ ತಿನ್ನುತ್ತಾರೆಯೇ?. ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುವ ಸ್ವಾಮಿಗಳು, ಹಿಂದೂ ದೇವರನ್ನು ಅವಹೇಳನ ಮಾಡುವ ಮುಸಲ್ಮಾನ ನಾಯಕರನ್ನು ಬಂಧಿಸುವ ಶಕ್ತಿ ಸಚಿವ ಎಂ.ಬಿ.ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಯೇ ಎಂದು ಪ್ರಶ್ನಿಸಿದರು.
ಶಿಕಾರಿಪುರದಲ್ಲಿ ನಡೆಸಿರುವ ಮುಸ್ಲಿಂ ಸಮಾವೇಶದಲ್ಲಿ ಶಿಕಾರಿಪುರದಲ್ಲಿ ಮಾತ್ರ ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಇರೋಣ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿದ ಅವರು, ಬಿ. ವೈ.ವಿಜಯೇಂದ್ರ ರಾಜ್ಯಾಧ್ಯಕ್ಷನಾಗಿ ರಾಜ್ಯ ಹಾಗೂ ದೇಶ ವಿದೇಶಗಳಲ್ಲಿ ಹಿಂದುಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿಲ್ಲ. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆಯ ಬಗ್ಗೆ ಮಾತನಾಡಿಲ್ಲ. ಚಿನ್ನದ ತಟ್ಟೆಯಲ್ಲಿ ಬಿರಿಯಾನಿ ತಿನ್ನಿಸಿದರೂ ಮುಸಲ್ಮಾನರು ಬಿಜೆಪಿಗೆ ವೋಟು ಹಾಕುವುದಿಲ್ಲ ಎಂದು ವ್ಯಂಗ್ಯವಾಡಿದರು.
ಸ್ಥಳೀಯ ಶಾಸಕ ನಮ್ಮ ಪಾಕಿಸ್ತಾನ ಎಂದಿದಕ್ಕೆ ಬಿಜೆಪಿಗರಿಗೆ ಕೇಲವಂದಿಷ್ಟುರಲ್ಲಿ ಬಿಜೆಪಿಗೆ ಮುಸ್ಲಿಂರ ವೋಟು ಹಾಕುತ್ತಾರೆಂದು ತಿಳಿದಿದ್ದಾರೆ. ಮುಸ್ಲಿಂರ ವೋಟು ಒಂದು ಬಿಳುವುದಿಲ್ಲ. ಸುಮ್ಮನೆ ತಿಳಿದುಕೊಂಡಿದ್ದಾರೆ. ಶಾಸಕ ಗುಡಗುಂಟಿಗೆ ಸಾಬರು ಎಷ್ಟು ವೋಟು ಹಾಕಿದ್ದಾರೆಂದು ಮೊದಲು ತಿಳಿಸಲ್ಲಿ ? ಚುನಾವಣೆಯ ಸಮಯಲ್ಲಿ ಕೀಟು ಹಂಚುವುದು, ತಾಟಿನಲ್ಲಿ ಬೀರಾ್ಯನಿ ಮಾಡಿ ಊಟ ಮಾಡಿಸಿದರು ಸಹ ಬಿಜೆಪಿಗೆ ವೋಟು ಹಾಕುದಿಲ್ಲ. ಶಾಸಕ ಗುಡಗುಂಟಿ ಮುಂದಿನ ರಮಜಾನ ಹಬ್ಬದಲ್ಲಿ ಅವರ ಪರ ಕೀಟ್‌ಗಳನ್ನು ಹಂಚಿದರೆ ನಿಮ್ಮಗೆ ರಾಜಕೀಯ ನಾಶ ಪ್ರಾರಂಭವಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ದೇಶಭಾಷಣ ನಿಬಂರ್ಧಕ ಕಾನೂನು ಸಂವಿದಾನ ವಿರೋಧಿಯಾಗಿದೆ. ಅದನ್ನು ರಾಜ್ಯಪಾಲರು ತಿರಸ್ಕರಿಸುತ್ತಾರೆ. ಜನ ವಿರೋಧಿ ಕಾನೂನನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ದ್ವೇಶ ಭಾಷಣ ಸಾಬೀತಾದರೆ ಸಂವಿಧಾನದಲ್ಲಿಯೇ ಅದಕ್ಕೆ ಕಾನೂನು ಇದೆ. ಪ್ರತ್ಯೇಕ ಕಾನೂನಿನ ಅವಶ್ಯಕತೆ ಇಲ್ಲ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅನೇಕ ಹಿಂದು ಕಾರ್ಯಕರ್ತರು ಇದ್ದರು.
ಬೆಳಗಾವಿಯಲ್ಲಿ ನ್ಯಾಯವಾದಿ ಮನೆ ಮೇಲೆ ಗುಂಡಿನ ದಾಳಿ, ಹತ್ಯೆಗೆ ಯತ್ನ : ಅತಂಕದಲ್ಲಿ ಜನ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 