‘ದಲಿತರ ಮೇಲಿನ ದೌರ್ಜನ್ಯ ತಡೆಯಲು ನಾಗವಾರ ಬಣ ಕೆಲಸ ಮಾಡುತ್ತಿದೆ’

 ‘ದಲಿತರ ಮೇಲಿನ ದೌರ್ಜನ್ಯ ತಡೆಯಲು ನಾಗವಾರ ಬಣ ಕೆಲಸ ಮಾಡುತ್ತಿದೆ’ ‘Nagwara faction is working to prevent atrocities against Dalits’

ಲೋಕದರ್ಶನ ವರದಿ 

‘ದಲಿತರ ಮೇಲಿನ ದೌರ್ಜನ್ಯ ತಡೆಯಲು ನಾಗವಾರ ಬಣ ಕೆಲಸ ಮಾಡುತ್ತಿದೆ’ 

ಜಮಖಂಡಿ 09: ದೇಶದಲ್ಲಿ ಶತಮಾನದಿಂದ ಅಸ್ಪೃಶ್ಯತೆಯು ತಾಂಡವಾಡುತ್ತಿದೆ. ದಲಿತ ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯ ಸತತವಾಗಿ ನಡೆಯುತ್ತಿವೆ. ಅದನ್ನು ತಡೆಯಲು ದಲಿತ ಸಂಘರ್ಷ ಸಮಿತಿ ನಾಗವಾರ ಬಣ ಕೆಲಸ ಮಾಡುತ್ತಿದೆ ಎಂದು ನೂತನ ರಾಜ್ಯಾಧ್ಯಕ್ಷ ಶ್ಯಾಮರಾವ ಘಾಟಗೆ ಹೇಳಿದರು. 

ನಗರದ ರಮಾ ನಿವಾಸದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ನಾಗವಾರ ಬಣ ನೂತನ ರಾಜ್ಯಾಧ್ಯಕ್ಷ ಶ್ಯಾಮರಾವ ಘಾಟಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ನ್ಯಾಯಾಧೀಶರಾದ ಬಿ,ಆರ್,ಗವಾಯಿ ಅವರು ಸಾಕಷ್ಟು ಕಷ್ಟಗಳನ್ನು ನೊಂದು ಬಂದಿರುವ ವ್ಯಕ್ತಿಯಾಗಿದ್ದಾರೆ. ಅವರಿಗೆ ಶೂ ಎಸೆದು ಅವಮಾನ ಮಾಡಿದ್ದು ಖಂಡನೀಯ. ಇಂತಹ ಘಟನೆಗಳು ನಡೆಯಬಾರದು. ಇದನ್ನು ತೀವ್ರವಾಗಿ ದಲಿತ ಸಂಘರ್ಷ ಸಮಿತಿ ನಾಗವಾರ ಬಣದಿಂದ ಖಂಡಿಸುತ್ತೇವೆ ಎಂದರು.  

ಡಾ, ಬಿ,ಆರ್, ಅಂಬೇಡ್ಕರ್ ಅವರಿಗೂ ಸಹ ಅಸ್ಪೃಶ್ಯತೆಯಿಂದ ಕಾಡಿದರು. ಅದನ್ನು ಹೊಗಲಾಡಿಸಲು ಸಂವಿಧಾನದ ಮೂಲಕದಿಂದ ಮಾತ್ರ ಎಂದು ಸಂವಿಧಾನವನ್ನು ರಚನೆ ಮಾಡಿದರು. ಅಂದಿನಿಂದ ಇಂದಿನವರೆಗೂ ದಲಿತ ಸಮುದಾಯವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿದೆ. ಅದನ್ನು ಹೋಗಲಾಡಿಸಲು ದಲಿತ ಸಂಘರ್ಷ ಸಮಿತಿ ನಾಗವಾರ ಬಣ ಹುಟ್ಟಿಕೊಂಡಿದೆ. ನ್ಯಾಯಾಧೀಶರಾದ ಬಿ,ಆರ್,ಗವಾಯಿ ಅವರಿಗೆ ಶೂ ಎಸೆದ ಬಗ್ಗೆ ರಾಜ್ಯದ 23 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ಸಂಘಟನೆಯ ಎಲ್ಲ ಜಿಲ್ಲಾ ಸಂಚಾಲಕರಿಗೆ ಸೂಚನೆಯನ್ನು ನೀಡಲಾಗಿದೆ ಎಂದರು. 

ಇಂತಹ ಘಟನೆಗಳು ಸಂವಿಧಾನಕ್ಕೆ ಧಕ್ಕೆ ಮಾಡಿದಂತಾಗುತ್ತದೆ. ಇದನ್ನು ಸಹಿಸುವದಿಲ್ಲ. ಇದರ ವಿರುದ್ಧ ರಾಜ್ಯದ 23 ಜಿಲ್ಲೆಗಳಲ್ಲಿಗೆ ಕರ ಪತ್ರಗಳನ್ನು ಹಂಚಲಾಗಿದೆ. ನಮ್ಮ ಹೋರಾಟ ಅಂಬೇಡ್ಕರ್ ಅವರ ತತ್ವ ಸಿದ್ದಾಂತದ ಮೇಲೆ ಶಾಂತಯುತ ರೀತಿಯಿಂದ ಹೋರಾಟ ಮಾಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 


ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮುತ್ತಣ ಮೇತ್ರಿ, ಪುಟ್ಟು ಪಾಣಿ, ಮುಕೇಶ ಅರಳಿಕಟ್ಟಿ, ಪರುಶರಾಮ ಮಾಂಗ, ಪ್ರಕಾಶ ಹುಗ್ಗೆನ್ನವರ, ಸುನೀಲ ಘಾಟಗೆ, ಬಸವರಾಜ ಮಾದರ, ಪ್ರಕಾಶ ಜಂಬಗಿ ಸೇರಿದಂತೆ ಅನೇಕರು ಇದ್ದರು.