ವಿಜಯಪುರ 12: ‘ಒಕಾನಾಮಾ’ ಜಪಾನಿನ ಒಂದು ದ್ವೀಪ. ಅಲ್ಲಿ ಜನ ಸಾವಿರಕ್ಕೆ ಎರಡುನೂರ ಐವತ್ತು ಜನರು ನೂರುವರ್ಷ ಬದುಕುತ್ತಾರೆ. ಅದಕ್ಕೆ ಮುಖ್ಯ ಕಾರಣ ಹಿತಮಿತ ಆಹಾರ ಪದ್ಧತಿ, ಸಮುದಾಯದೊಂದಿಗೆ ಒಂದಾಗುವುದು ಮತ್ತು ವ್ಯಾಯಾಮ ಮಾಡುವುದರಿಂದ ಉಲ್ಲಾಸಭರಿತ ಜೀವನದೊಂದಿಗೆ ದೀರ್ಘಾಯುಷಿಗಳಾಗಿ ಬದುಕುತ್ತಾರೆಂದು ಮುಖ್ಯ ಅತಿಥಿಸ್ಥಾನದಿಂದ ಡಾ. ವಿ.ಡಿ.ಐಹೊಳ್ಳಿಯವರು ಮಾತನಾಡಿದರು.
ವಿಜಯಪುರದ ರೋಟರಿಕ್ಲಬ್ ಉತ್ತರವಲಯದಿಂದ ಮಾಸಿಕ ಸಭೆಯಲ್ಲಿ ಹಿರಿಯನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು. ಜಪಾನಿನ ‘ಇಕಿಗಾಯ್’ವನ್ನು ಪಾಲಿಸುವದರಿಂದ ಮಾನಸಿಕ ನೆಮ್ಮದಿ, ನಂಬಿಗೆ, ಶಾಂತಿ, ಸಮಾಧಾನ ಉಂಟಾಗುವುದು. ಪರಸ್ಪರ ಸಹಾಯ ಮಾಡುವುದು ದೀರ್ಘಾಯುಷಿಗಳಿಗೆ ಸತ್ಕರಿಸುವುದು. ಚಟುವಟಿಕೆಗಯಿಂದಿರುವುದು. ವಂದನೆ ಸಲ್ಲಿಸುವುದು. ಎಲ್ಲವನ್ನು ನಿಧಾನವಾಗಿ ನಡೆಯಿರಿ. ಮಂದಹಾಸ ಬೀರುವುದು, ಒಳ್ಳೆಯ ಸ್ನೇಹಿತರಿಂದ, ಸುತ್ತುವರಿಯಿರಿ, ಪ್ರಕೃತಿ ಜೊತೆ ಸಂಬಂಧ, ಹೊಟ್ಟೆ ಪೂರಾ ತುಂಬಬೇಡಿ, ಈ ಕ್ಷಣದಲ್ಲಿ ಬದುಕಿರಿ ಎಂದು ಹತ್ತು ನಿಯಮ ಯಾವತ್ತು ಪಾಲಿಸಿರಿ ಅಂದರೆ ಇಕಿಗಾಯ್ ಸಾರ್ಥಕ ಪಡೆಯುತ್ತದೆ ಎಂದರು.
ಶಾರದಾ ಐಹೊಳ್ಳಿಯವರು ತಾಯಂದಿರ ದಿನೋತ್ಸವದ ಮಹತ್ವ ಹೇಳುತ್ತ ನಾವು ಬದುಕುವ ನಿಯಮಗಳನ್ನು ಪಾಲಿಸದೇ ಹೋದಲ್ಲಿ ನೀವು ನಿಧಾನವಾಗಿ ಸಾಯಲು ಪ್ರಾರಂಭಿಸುತ್ತಾರೆಂದು ಅಧ್ಯಕ್ಷಸ್ಥಾನದಿಂದ ಮಾತನಾಡಿದರು. ಕಾಯಕಯೋಗಿ ಪ್ರಶಸ್ತಿ ಪಡೆದ ವಿ.ಸಿ.ನಾಗಠಾಣ ಅವರನ್ನು ಸನ್ಮಾನಿಸಲಾಯಿತು. ಸುಭಾಸ ಬೇಟಗೇರಿ ಸ್ವಾಗತಿಸಿ ಪರಿಚಯಿಸಿದರು. ಮಹಾದೇವ ಹಾಲಳ್ಳಿ ಕಾರ‌್ಯಕ್ರಮ ನಿರೂಪಿಸಿದರು. ಸುವರ್ಣಾ ತೇಲಿ ವಂದಿಸಿದರು.
ಸಮಾರಂಭದಲ್ಲಿ ಆರ್.ಎಸ್.ಭೋವಿ, ಎನ್.ಆರ್.ಬ್ಯಾಕೋಡ, ಎಂ.ಎಲ್.ಮದಭಾವಿ, ಎಸ್.ಟಿ.ಬಗಲಿ, ಎಸ್.ಎಸ್.ಗಜಕೋಶ, ಡಾ. ವಾಯ್.ಬಿ.ಪಟ್ಟಣಶೆಟ್ಟಿ, ಡಾ. ಎನ್.ಸಿ.ಹಿರೇಮಠ, ಎಂ.ಆರ್.ಬಾಗಿ, ಕವೀಂದ್ರ ಸಾತಿಹಾಳ, ಜಗದೀಶ ಮೋಟಗಿ, ಬಿ.ವಾಯ್.ಪಾಟೀಲ, ಬಿ.ಎಸ್.ಮೋದಿ ದಂಪತಿ, ಬಿ.ಎಂ.ಜುಮನಾಳ, ಶಶಿಕಲಾ ಇಜೇರಿ, ಪುಷ್ಪಾ ಮಹಾಂತಮಠ, ವಿದ್ಯಾ ಕೊಟೆನ್ನವರ, ಎಸ್.ಜಿ.ದೇವೂರ, ತೋಟಪ್ಪ ವಾಲಿ, ಸೋಮಶೇಖರ ಬಳ್ಳೊಳ್ಳಿ ಮುಂತಾದವರು ಉಪಸ್ಥಿತರಿದ್ದರು.