‘ಕನ್ನಡಿಗರಲ್ಲಿ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಅಭಿಮಾನ ಬೆಳೆಯಲಿ’
‘Let Kannada people leave their obsession with English and develop a love for Kannada’
ಧಾರವಾಡ 05: ಕನ್ನಡ ನಾಡು- ನುಡಿ, ನೆಲ-ಜಲ ಸಂಸ್ಕೃತಿಯ ಶಿಕ್ಷಣಕ್ಕಾಗಿ ಅನೇಕ ಮಹನೀಯರು ಅವಿರತವಾಗಿ ಪರಿಶ್ರಮ ಫಲವಾಗಿ ಕರುನಾಡು ಕನ್ನಡ ನಾಡಿಗೆ ತನ್ನದೇ ಆದ ಘನತೆ ಗೌರವದ ಇತಿಹಾಸವಿದೆ. ಈ ಇತಿಹಾಸ ಮರುಕಳಿಸಲು ಕನ್ನಡಿಗರಲ್ಲಿ ಆತ್ಮಭಿಮಾನ ಬೆಳೆಸಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಮನೋಹರ ಮೋರೆ ಅವರು ಹೇಳಿದರು.ಕರ್ನಾಟಕ ಏಕೀಕರಣದ ರೂವಾರಿಗಳಾದ ಆಲೂರು ವೆಂಕಟರಾವ, ಸರ್ ಸಿದ್ದಪ್ಪ ಕಂಬಳಿ, ರಾ.ಹ ದೇಶಪಾಂಡೆ , ಕನ್ನಡದ ಕೂಲಿಯಾದ ರಾಮ್ ಜಾಧವ್, ಕನ್ನಡ ಶ್ರೇಷ್ಠ ಕವಿಗಳು ಮತ್ತು ಕಲೆ ಸಂಗೀತ ಕ್ಷೇತ್ರದ ಸಾಧನೆಗೈದ ಮಹನೀಯರನ್ನು ಸ್ಮರಣೆ ಮಾಡಲಾಯಿತು. ವೇದಿಕೆಯ ಮೇಲೆ ಗೌರವ ಕಾರ್ಯದರ್ಶಿಗಳಾದ ರಾಜು ಬಿರ್ಜನವರ ಮತ್ತು ನಿರ್ದೇಶಕರಾದ ಸುನಿಲ ಮೊರೆ, ಪುರುಷೋತ್ತಮ ಜಾಧವ, ಈಶ್ವರ ಪಾಟೀಲ, ಪ್ರಸಾದ ಹಂಗಳಕಿ, ಶಿವಾಜಿ ಸೂರ್ಯವಂಶಿ ಅಂಗ ಸಂಸ್ಥೆಯ ಮುಖ್ಯಸ್ಥರಾದ ಅಶೋಕ ಬಾಬರ, ಎಂ ಎಸ್ ಗಾಣಿಗೇರ ಮೀನಾಕ್ಷಿ ಘಾಟಗೆ, ನಾಗರಾಜ ಆರೇರ ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಶಾಲೆಯ ಹಿರಿಯ ಶಿಕ್ಷಕಿಯಾದ ಸುನಿತಾ ಮುಳಿಕನವರ ಮಾತನಾಡಿದರು ಮುಖ್ಯೋಧ್ಯಾಪಕರಾದ ಅಶೋಕ ಬಾಬರ ಸ್ವಾಗತಿಸಿದರು. ಲಕ್ಷ್ಮಿ ಹಿರೇಕುಂಬಿ ಕಾರ್ಯಕ್ರಮವನ್ನು ನಿರೂಪಿಸಿದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 