ಹುಬ್ಬಳ್ಳಿಯಲ್ಲಿ ‘ಜೈ ಜವಾನ್ ಆರ್ಮಿ ಅಂಡ್ ಪೊಲೀಸ್ ಜನರಲ್ ಸ್ಟೋರ್ಸ’ ಮಳಿಗೆ ಉದ್ಘಾಟನೆ

ಹುಬ್ಬಳ್ಳಿಯಲ್ಲಿ ‘ಜೈ ಜವಾನ್ ಆರ್ಮಿ ಅಂಡ್ ಪೊಲೀಸ್ ಜನರಲ್ ಸ್ಟೋರ್ಸ’ ಮಳಿಗೆ ಉದ್ಘಾಟನೆ ‘Jai Jawan Army and Police General Stores’ inaugurated in Hubballi

ಪೊಲೀಸ್, ಸೈನಿಕ, ಅಗ್ನಿಶಾಮಕ ಹಾಗೂ ಸೇವಾ ಸಿಬ್ಬಂದಿಗೆ ಬೇಕಾದ ವಸ್ತುಗಳ ಮಳಿಗೆ ಪ್ರಾರಂಭ

ಹುಬ್ಬಳ್ಳಿ 23 :ನಗರದ ಯುರೇಖಾ    ಟವರ್ನಲ್ಲಿ ಇತ್ತೀಚೆಗೆ ಒಂದು ಮಹತ್ತರವಾದ ಮಳಿಗೆ ‘ಜೈ ಜವಾನ್ ಆರ್ಮಿ ಅಂಡ್ ಪೊಲೀಸ್ ಜನರಲ್ ಸ್ಟೋರ್ಸ’ ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು. ದೇಶದ ಭದ್ರತೆಗೆ ಪ್ರಮುಖ ಪಾತ್ರವಹಿಸುತ್ತಿರುವ ಪೊಲೀಸ್ ಇಲಾಖೆ, ಸೈನಿಕರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಖಕಈ, ಓಅಅ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸೇರಿದಂತೆ ವಿವಿಧ ಸೇವಾ ವಿಭಾಗಗಳಿಗೆ ಅಗತ್ಯವಿರುವ ಸಮವಸ್ತ್ರಗಳು ಹಾಗೂ ಸಜ್ಜು ಸಾಮಗ್ರಿಗಳನ್ನು ಈ ಮಳಿಗೆ ಒದಗಿಸುತ್ತಿದೆ.

ಈ ಮಳಿಗೆಯ ಉದ್ಘಾಟನೆಯನ್ನು ಕಾಂಗ್ರೆಸ್ ಮುಖಂಡ  ಅನಿಲ್ ಕುಮಾರ್ ಪಾಟೀಲ್ ಮತ್ತು ಹುಬ್ಬಳ್ಳಿಯ ಪೊಲೀಸ್ ಉಪ ಆಯುಕ್ತ ಡಿಸಿಪಿ ರವೀಶ್ ಅವರು ಜಂಟಿಯಾಗಿ ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಹಾಗೂ ಸೇವಾ ಸಿಬ್ಬಂದಿ ಉಪಸ್ಥಿತರಿದ್ದರು.ಈ ಮಳಿಗೆಯಲ್ಲಿ ಮೇಲ್ಕಂಡ ಸಿಬ್ಬಂದಿಗೆ ಬೇಕಾದ ಪ್ಯಾಂಟುಗಳು, ಸಮವಸ್ತ್ರಗಳು, ಬಾವುಟಗಳು, ಮೆಡಲ್ಸ್ಗಳು, ಹೆಲ್ಮೆಟ್ಗಳು, ಕ್ಯಾಪ್ಗಳು, ಶೂಗಳು ಮತ್ತು ಇತರೆ ವಿವಿಧ ಶ್ರೇಣಿಯ ವಸ್ತುಗಳು ಲಭ್ಯವಿದ್ದು, ಗುಣಮಟ್ಟದ ಸೇವೆಯನ್ನು ನೀಡಲು ಸಂಸ್ಥೆ ಬದ್ಧವಾಗಿದೆ.ಈ ಮಳಿಗೆ ಪ್ರಾರಂಭವಾಗಿರುವುದು ಹುಬ್ಬಳ್ಳಿ ಸೇರಿದಂತೆ ಇಡೀ ಉತ್ತರ ಕರ್ನಾಟಕದ ಸೇವಾ ವಿಭಾಗದ ಸಿಬ್ಬಂದಿಗೆ ಬಹುಪಾಲು ಅನುಕೂಲವಾಗಲಿದ್ದು, ಇಂತಹ ಒಂದು ವಿಶೇಷ ಅಂಗಡಿ ಶುರುವಾಗಿದೆ ಎಂಬುದು ಹುಬ್ಬಳ್ಳಿಯ ಜನತೆಗೆ   ಸಂತೋಷದ ವಿಷಯ. 

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ  ಧನಂಜಯ ಲಮಾಣಿ ಮತ್ತು ನಿರ್ಮಲ ಧನಂಜಯ್ ಲಮಾಣಿ ಮಾಜಿ ಸೈನಿಕರಾದ ಮಿಸ್ಟರ್ ಪರಶುರಾಮ್ ಮತ್ತು ಹುಬ್ಬಳ್ಳಿಯ ಮಾಜಿ ಸೈನಿಕ ಅಧ್ಯಕ್ಷ  ರಾದ ವೀರ​‍್ಪನ ಹಸಬಿ ಮತ್ತು ಮಾಲಕರಾದ ಶಾದಾಬ್ ಖಾನ್   ಶಿವಳ್ಳಿ ಈ ಸಂದರ್ಭದಲ್ಲಿ ಇದ್ದ.