ಬನಹಟ್ಟಿಯಲ್ಲಿ ‘ಗಂಗಿ ನೀ ಜಗ್ಗ ಬ್ಯಾಡ ಲಂಗಿ’ ನಾಟಕ
‘Gangi Nee Jagga Byada Langi’ Play in Banahatti
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 25: ಬನಹಟ್ಟಿಯ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸೆ.26ರಂದು ಸಂಜೆ 5.30ಕ್ಕೆ ಕೆಎಲ್ಬಿ ಎದುರಿನ ಕೆ.ಯು.ಕೆಪ್ಪ ಸವದಿ ಅವರ ಜಾಗದಲ್ಲಿ ‘ಗಂಗಿ ನೀ ಜಗ್ಗ ಬ್ಯಾಡ ಲಂಗಿ’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಾಟಕದ ಆಯೋಜಕ ಭರತ ತಾಳಿಕೋಟಿ ತಿಳಿಸಿದರು. ಗುರು ಖಾಸಗತೇಶ್ವರ ನಾಟ್ಯ ಸಂಘ (ರಿ), ತಾಳಿಕೋಟೆ ವತಿಯಿಂದ ನಾಟಕ ಪ್ರದರ್ಶನ ಆಯೋಜಿಸಲಾಗಿದ್ದು, ಕೃಷ್ಣಮೂರ್ತಿ ಶಾಸ್ತ್ರಿ ರಚಿಸಿರುವ ಈ ನಾಟಕವು ಹಾಸ್ಯ ಮತ್ತು ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ನಗೆಹಬ್ಬ ನೀಡಲಿದೆ.
ಪ್ರತಿದಿನ ಮೂರು ಆಟಗಳಂತೆ ನಾಟಕ ಪ್ರದರ್ಶನ ನಡೆಯಲಿದ್ದು, ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು ಸೀಸನ್-4’ರ ವಿಜೇತ ಹರೀಶ್ ಹಿರಿಯೂರು, ಖ್ಯಾತ ಹಾಸ್ಯ ಕಲಾವಿದ ಮಂಜು ಗುಳೇದಗುಡ್ಡ, ಮಂಗಳೂರಿನ ಕಲಾವಿದೆ ಭವ್ಯ ಸೇರಿದಂತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ.
ಹಾಸ್ಯಭರಿತ ಸಂಭಾಷಣೆ, ಮನರಂಜನಾತ್ಮಕ ಅಭಿನಯ ಹಾಗೂ ರಂಗಭೂಮಿಯ ಅನುಭವಿ ಕಲಾವಿದರ ಪ್ರದರ್ಶನ ನಾಟಕದ ಪ್ರಮುಖ ಆಕರ್ಷಣೆಯಾಗಲಿದೆ. ಜಾತ್ರೆಗೆ ಆಗಮಿಸುವ ಭಕ್ತರು ಹಾಗೂ ಸುತ್ತಮುತ್ತಲಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಹರೀಶ್ ಹಿರಿಯೂರು, ಪ್ರಿಯಾ ಹಿರಿಯೂರು, ಭವ್ಯ ಮಂಗಳೂರು, ಶೇಖರ್ ಜವಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 