‘ಭೀಮರಾವ ಕುಲಕರ್ಣಿ ಫ.ಗು ಹಳಕಟ್ಟಿಯವರ ಅತ್ಯಂತ ನಿಕಟವರ್ತಿಗಳಾಗಿದ್ದರು’
‘Bheemarao Kulkarni was a very close associate of F.G. Halakatti’
ಲೋಕದರ್ಶನ ವರದಿ
ವಿಜಯಪುರ 15: ಫ.ಗು ಹಳಕಟ್ಟಿಯವರ ಮುದ್ರಣಾಲಯದಲ್ಲಿ ಮುದ್ರಣಯಂತ್ರದ ಮೊಳೆ ಜೋಡುವ ಕೆಲಸ ಮಾಡುತ್ತಿದ್ದ ಭೀಮರಾವ ಕುಲಕರ್ಣಿಯವರು ಹಳಕಟ್ಟಿಯವರ ಒಡನಾಟದಿಂದ ಹದಿನೇಳು ಲೇಖನವನ್ನು ಬರೆದರು ಎಂದು ವ್ಹಿ ಡಿ ಐಹೊಳ್ಳಿ ಹೇಳಿದರು.
ಮಂಗಳವಾರ 14 ರಂದು ನಗರದ ಪಿಡಿಜೆ ಹೈಸ್ಕೂಲ್ ಸಭಾಭವನದಲ್ಲಿ ದಿ. ಭೀಮರಾವ. ಕುಲಕರ್ಣಿ ಸ್ಮರಣಾರ್ಥ , 'ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ಜಿಲ್ಲಾ ಸಮಿತಿ' ಆಯೋಜನೆಯ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿಯವರ ಜೀವನ ದರ್ಶನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಭೀಮರಾವ ಕುಲಕರ್ಣಿ ಅವರು ಫ.ಗು ಹಳಕಟ್ಟಿಯವರ ನಿಕಟ ಒಡನಾಡಿಗಳು. ಫ.ಗು ಹಳಕಟ್ಟಿಯವರಿಗೆ ಭೀಮರಾವ ಕುಲಕರ್ಣಿ ಅವರ ಮೇಲೆ ಬಹಳಷ್ಟು ನಂಬಿಕೆಯಿತ್ತು. ಒಮ್ಮೆ ಬೇರೊಬ್ಬ ಕೆಲಸಗಾರ ಬೇಕಂತಲೇ ಭೀಮರಾವ ಬಗ್ಗೆ ಹಳಕಟ್ಟಿಯವರಲ್ಲಿ ದೂರು ಹೇಳಿದಾಗ ಹಳಕಟ್ಟಿಯವರ ಅದನ್ನು ನಂಬಲಿಲ್ಲ. ಭೀಮರಾವ ಕುಲಕರ್ಣಿ ಅವರು ಅಷ್ಟೇ ಸ್ವಾಮಿ ನಿಷ್ಠೆರಾಗಿದ್ದರು ಎಂದು ತಿಳಿಸಿದರು.
ಭಾರತಮಾತೆ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವಿವೇಕ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನಿರೂಪಣೆ - ವಿದ್ಯಾವತಿ ಬೆಣ್ಣೂರ , ಸ್ವಾಗತ - ಶಿವಾನಂದ ಮುಳವಾಡ , ಪ್ರಾಸ್ತಾವಿಕ - ಶ್ರೀರಂಗ ಕುಲಕರ್ಣಿ , ವಂದನಾರೆ್ಣ - ಮಹಾನಂದಾ ಪಾಟೀಲ ನಿರ್ವಹಣೆ ಮಾಡಿದರು. ಇದೇ ಸಂದರ್ಭದಲ್ಲಿ ಇತ್ತಿಚೆಗೆ ಅಗಲಿದ ನಾಡೋಜ ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು..
ಜಿ. ಆರ್ ಕುಲಕರ್ಣಿ , ಗಂಗಾಧರ ಸಾಲಕ್ಕಿ , ಸುಕಾಂತ ಕುಲಕರ್ಣಿ , ಕಲ್ಯಾಣರಾವ ದೇಶಪಾಂಡೆ , ಬಿ ಜೆ ಪುರಾಣಿಕ , ಬಳವಂತ ಕುಲಕರ್ಣಿ , ಶ್ರೀರಂಗ ಪುರಾಣಿಕ , ಸೌಮ್ಯಾ ಕುಲಕರ್ಣಿ , ಸುಭಾಷ ಜಂಬೂರೆ, ಶ್ರೀಮತಿ ವಾಣಿ ಮುಳಸಾವಳಗಿ, ಶ್ರೀಮತಿ ವಿಜಯಲಕ್ಷ್ಮೀ ದಿವಾಣಜಿ, ಡಾ. ಮುಕ್ತಾ ಬನ್ನೂರ ಸೇರಿದಂತೆ ಅನೇಕರು ಉಪಸ್ಥಿತರಾಗಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 