‘ಕ್ರಿಯಾಶೀಲ ಮಾನವ ಸಂಪನ್ಮೂಲದ ಅಗತ್ಯವಿದೆ’
‘Active human resources are needed’
ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ಸಂಸ್ಥಾಪಕರ ದಿನದಂದು ಹಿರಿಯ ಸಾಧಕರಿಗೆ ಸನ್ಮಾನ
ಧಾರವಾಡ, 21 : ಇತರೇ ಸಂಪನ್ಮೂಲಗಳಿಗಿಂತ ಇಂದು ರಾಷ್ಟ್ರದೆಲ್ಲೆಡೆ ಮಾನವ ಸಂಪನ್ಮೂಲದ ವಿಕಾಸಕ್ಕೆ ಆದ್ಯತೆ ಲಭಿಸುತ್ತಿದೆ. ದೇಶಕ್ಕೆ ಕ್ರಿಯಾಶೀಲ ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಅರುಣ ಚರಂತಿಮಠ ಹೇಳಿದರು.
ಅವರು ನಗರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ಸಂಸ್ಥಾಪಕರ ದಿನದಂದು ಹಮ್ಮಿಕೊಂಡಿದ್ದ ಹಿರಿಯ ಸಾಧಕರ ಗೌರವಾರೆ್ಣ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಭಾರತವು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಶ್ರೇಷ್ಠ ಮಾನವ ಸಂಪನ್ಮೂಲದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ತಮ್ಮ ಶಾಲೆಯು ಎಲ್ಲ ನೆಲೆಗಳಲ್ಲಿ ಗಮನಹರಿಸುತ್ತಿದೆ ಎಂದರು.
ಗೌರವ ಸಮರೆ್ಣ : ಮೂಲ ಧಾರವಾಡ ಭಾಗದ ಹಿರಿಯರಾದ ಶತಾಯುಷಿ ಬಿ. ಜಿ. ಪಾಟೀಲ, ಮಾಜಿ ಕಾರ್ೋರೇಟರ್ ವಿಜಯಾ ಲಿಂಬಣ್ಣದೇವರಮಠ, ಸಂಗಮೇಶ ಲಿಂಬಣ್ಣದೇವರಮಠ, ಭಾರತೀಯ ಸೇನೆಯ ವಿಶ್ರಾಂತ ಕರ್ನಲ್ ಡಾ. ಮೋಹನ ಮಠ, ಪಾಲಿಕೆಯ ಸದಸ್ಯರುಗಳಾದ ಶಂಕರ ಶೇಳಕೆ, ದೀಪಾ ನೀರಲಕಟ್ಟಿ, ಶಂಭುನಾಥ ಸಾಲಮನಿ, ಮಾಜಿ ಸದಸ್ಯ ಸಿ. ಎಸ್. ಪಾಟೀಲ, ಆನಂದ ಸಿಂಗನಾಥ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ರಂಗನಿರ್ದೇಶಕ ಡಾ.ಶಶಿಧರ ನರೇಂದ್ರ, ಲೇಖಕ ಗುರುಮೂರ್ತಿ ಯರಗಂಬಳಿಮಠ, ಪಕ್ಷಿತಜ್ಞ ಪ್ರಕಾಶ ಗೌಡರ, ವಿವಿಧ ಕ್ಷೇತ್ರಗಳ ಗಣ್ಯರುಗಳಾದ ಶಂಕರ ಬೆಟಗೇರಿ, ಗಂಗಾಧರ ಚೌಕಿಮಠ, ಆರ್. ಎಸ್. ಪಾಟೀಲ, ಎಸ್. ಎಸ್. ಲಕ್ಷ್ಮೇಶ್ವರ, ಬಿ.ಎಲ್. ಶಿವಳ್ಳಿ, ವೀರು ಸುತಗಟ್ಟಿಮಠ, ಬಸವರಾಜ ಕುರಟ್ಟಿಮಠ, ಜಗದೀಶ ಕಣ್ಣೆಗೌಡರ, ಮೊಹಿಯುದ್ದಿನ ಖಾನ ಲೋಹಾನಿ ಅವರನ್ನು ಸನ್ಮಾನಿಸಿ ಗೌರವ ಸಮರ್ಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಸುಜಾತಾ ಚರಂತಿಮಠ, ರವಿ ನಾಯಕ, ಭೈರವ ಚರಂತಿಮಠ, ಸಿ. ಪ್ರೇರಿತಾ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಸ್ವಾಗತಿಸಿದರು. ಪ್ರಿ. ಅಶ್ವಿನಿ ಚಿಕ್ಕಬಳ್ಳಾಪುರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 