ಭರದಿಂದ ಸಾಗಿದ ‘ಆಚಾರ್ಯ’ ಚಿತ್ರೀಕರಣ
‘Acharya’ filming proceeds at a brisk pace
ಲೋಕದರ್ಶನ ವರದಿ
ಮೈಸೂರು 13: ಶಂಕರ್ ಫಿಲ್ಮ್‌್ಸ ಮೈಸೂರು ಅವರ ‘ಆಚಾರ್ಯ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಮೈಸೂರಿನ ಟಿ.ಕೆ.ಲೇಓಟ್‌ನಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ಚಲನಚಿತ್ರ ಹಿರಿಯ ನಟರಾದ ಮಂಡ್ಯ ರಮೇಶ್‌ರವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಬಸವಣ್ಣನವರ ಅನುಯಾಯಿಯಾದ ಕಥಾ ನಾಯಕ ಬಸವಣ್ಣನವರ ಆದರ್ಶಗಳನ್ನ ಪಾಲಿಸುತ್ತ ಅವರಂತೆಯೇ ಸಮಾಜ ತಿದ್ದುವ ಕೆಲಸ ಮಾಡುವಾಗ ಈ ಸಮಾಜ ಆತನನ್ನ ಯಾವ ರೀತಿ ನೋಡುತ್ತದೆ,
ಸಮಾಜದ ಕೆಂಗಣ್ಣಿಗೆ ಗುರಿಯಾಗಿ ನಾಯಕ ಏನಾಗುತ್ತಾನೆ ಎಂಬ ಸಂದೇಶ ಚಿತ್ರದಲ್ಲಿದೆ. ಮೈಸೂರ್, ನಂಜನಗೂಡು, ಕುಶಾಲನಗರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ, ಸಧ್ಯ ಮೈಸೂರ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗಿದೆ ಎಂದು ನಿರ್ದೇಶಕ ರವಿಶಂಕರ ನಾಗ್ ತಿಳಿಸಿದರು.
ತಾರಾಗಣದಲ್ಲಿ ಕಲ್ಕಿ ಶ್ರೀವತ್ಸವ್, ಲಕ್ಷ್ಮೀಪತಿ ಬಾಲಾಜಿ, ದಿಶಾ, ಬಲರಾಜ್ ವಾಡಿ, ಶಂಕರ್ ಅಶ್ವಥ್, ಪದ್ಮವಾಸಂತಿ, ಸುಧಾ, ಕೈಲಾಶ್ ಕುಟ್ಟಪ್ಪ, ನಂಜು ಸಿದಪ್ಪ, ಸ್ಯಕ್ ಶಿವಾಜಿ, ಶಿವು, ನರಸಿಂಹ, ಆನಂದ್ ಸಿಂಗ್, ಪಾರ್ಥಸಾರಥಿ , ಲಯನ್ ಗೋಲ್ಡನ್ ಸುರೇಶ್ , ಲಯನ್ ಪ್ರಮಿಳ ಮೊದಲಾದ ಕಲಾವಿದರಿದ್ದಾರೆ.
ಛಾಯಾಗ್ರಹಣ ವಿನಸ್ ಮೂರ್ತಿ, ಸಂಗೀತ ಹೆಜ್ಜಿಗೆ ನಾರಾಯಾ ಸ್ವಾಮಿ, ಸಾಹಸ ಮಾರುತಿ ಮಾಗಡಿ, ಸಂಕಲನ ವೆಂಕಿ ಯುಡಿವಿ, ಡಿಆಯ್-ಕಮಲ್ ಗೋಯಲ್, ಕೋರಿಯೋಗ್ರಫಿ ಮೈಸೂರು ರಾಜು, ಪಿ.ಆರ್.ಓ ಡಾ.ಪ್ರಭು ಗಂಜಿಹಾಳ , ಡಾ. ವೀರೇಶ್ ಹಂಡಿಗಿ, ಸಹ ನಿರ್ದೇಶನ ಸ್ಟಾರ್ ಗಣೇಶ್ ಅವರದಿದ್ದು, ಈ ಮೊದಲು ‘ಮಾವುತ’ ಯಶಸ್ವಿ ಚಿತ್ರ ನಿರ್ದೇಶಿಸಿದ್ದ ರವಿಶಂಕರ್ ನಾಗ್ ಸಾಹಿತ್ಯ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ.
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ 