‘ಅತ್ತಿವೇರಿ ದರ್ಗಾದಲ್ಲಿ 61ನೇ ಉರುಸ್ ಸಂಭ್ರಮ: ಅರಣ್ಯದಲ್ಲೇ ವಾಸ್ತವ್ಯ ಹೂಡಿ ಭಕ್ತಿ ಮೆರೆದ ಭಕ್ತರು”

‘ಅತ್ತಿವೇರಿ ದರ್ಗಾದಲ್ಲಿ 61ನೇ ಉರುಸ್ ಸಂಭ್ರಮ: ಅರಣ್ಯದಲ್ಲೇ ವಾಸ್ತವ್ಯ ಹೂಡಿ ಭಕ್ತಿ ಮೆರೆದ ಭಕ್ತರು” ‘61st Urus celebrations at Attiveri Dargah: Devotees stay in the forest and show devotion’

ಲೋಕದರ್ಶನ ವರದಿ  

ಮುಂಡಗೋಡ  27: ಭಕ್ತಿ ಎಂಥವರನ್ನೂ ಮಣಿಸುತ್ತದೆ ಎಂಬುದಕ್ಕೆ ಅತ್ತಿವೇರಿ ಗ್ರಾಮದ ಈ ದೃಶ್ಯಗಳೇ ಸಾಕ್ಷಿ!ತಾಲೂಕಿನ ಹುನಗುಂದ ಪಂಚಾಯತ್ ವ್ಯಾಪ್ತಿಯ ಅತ್ತಿವೇರಿ ಗ್ರಾಮದಲ್ಲಿರುವ ಹಜರತ್ ರುಸ್ತುಂಶಾವಲಿ ಹಾಗೂ ಹಜರತ್ ಚಮನ್ ಶಾವಲಿ ದರ್ಗಾದ 61ನೇ ಉರುಸ್ ಕಾರ್ಯಕ್ರಮ ಭಕ್ತಿಭಾವದಿಂದ ಮತ್ತು ವಿಜೃಂಭಣೆಯಿಂದ ಜರುಗಿತು.  ಸೌಹಾರ್ದತೆಯನ್ನು ಸಾರುವ ಈ ಉತ್ಸವದಲ್ಲಿ ವಿವಿಧ ಗ್ರಾಮಗಳಿಂದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಪ್ರತಿ ವರ್ಷದಂತೆ ಮಾರ್ಚ್‌ ತಿಂಗಳಲ್ಲಿ ನಡೆಯುವ ಉರುಸ್ ಅಂಗವಾಗಿ ಬುಧವಾರ ಸಂಜೆ ರುಸ್ತುಂಶಾವಲಿ ಯಜ್ಞ ಸ್ಥಳದಲ್ಲಿ ಫಾತೇಹಾ ಕಾರ್ಯಕ್ರಮ ನಡೆದಿದ್ದು, ರಾತ್ರಿ ಹಜರತ್ ಚಮನ್ ಶಾವಲಿ ದರ್ಗಾದಲ್ಲಿ ಸಂದಲ್ ಹಾಗೂ ಗಲೀಫ್ ಹಾಕುವ ವಿಧಿ ನಡೆಯಿತು. ಬಳಿಕ ಹುನಗುಂದ ಗ್ರಾಮದ ಬಿ.ಬಿ. ಫಾತಿಮಾ ಮಸೂದಿಯಿಂದ ಸಂದಲ್ ಮೆರವಣಿಗೆ ನಡೆಸಿ, ಗುರುವಾರ ಬೆಳಗಿನ ಜಾವ ಅತ್ತಿವೇರಿ ದರ್ಗಾಗೆ ತಂದು ಗಲೀಫ್ ಅರ​‍್ಿಸಲಾಯಿತು. ಮೂರು ದಿನಗಳ ಕಾಲ ಉರುಸ್ ಸಮಿತಿಯಿಂದ ಸಾತ್ವಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, 

 ಭಕ್ತರು ತಮ್ಮ ಮನೋಭಿಲಾಷೆ ನೆರವೇರಿದ ಹಿನ್ನೆಲೆ ವಿವಿಧ ಸೇವೆಗಳನ್ನು ಸಲ್ಲಿಸಿದರು. ಕೆಲವರು ಕಪ್ಪು ಕಡಿ ಹಾಗೂ ಸಾತ್ವಿಕ ನೈವೇದ್ಯಗಳನ್ನು ಅರ​‍್ಿಸಿದರು. ದರ್ಗಾದಲ್ಲಿ ಬೇಡಿಕೆ ಇಟ್ಟರೆ ವಲಿಅಲ್ಲಾ ಕೋರಿಕೆ ನೆರವೇರಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿ ಗಟ್ಟಿಯಾಗಿ ನೆಲೆಸಿದೆ. ಉರುಸ್ ಸಂದರ್ಭದಲ್ಲಿ ಒಬ್ಬ ಮಹಿಳೆ ತನ್ನ ಮಗನ ಆರೋಗ್ಯಕ್ಕಾಗಿ ಮಾಡಿದ ಹರಕೆ ನೆರವೇರಿದ ಹಿನ್ನೆಲೆಯಲ್ಲಿ ದರ್ಗಾಕ್ಕೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ ದೃಶ್ಯ ಗಮನ ಸೆಳೆಯಿತು. ಉರುಸ್ ಆರಂಭಕ್ಕೂ ಮುನ್ನವೇ ಭಕ್ತರು ದರ್ಗಾ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ಹಾಕಿಕೊಂಡು ಹಲವು ದಿನಗಳು ವಾಸ್ತವ್ಯ ಹೂಡಿ ದೇವರ ಸೇವೆ ಸಲ್ಲಿಸುವುದು ವಿಶೇಷವಾಗಿತ್ತು. ಉತ್ಸವದ ಅಂಗವಾಗಿ ವ್ಯಾಪಾರ ಮಳಿಗೆಗಳು, ಆಟೋಪಕರಣಗಳು, ಕುಸ್ತಿ ಹಾಗೂ ನಾಟಕ ಕಾರ್ಯಕ್ರಮಗಳು ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದರು. ದರ್ಗಾದ    ಹಾಗೂ ಧಾರ್ಮಿಕ ಕಾರ್ಯಗಳನ್ನು ಹುನಗುಂದದ ಮುಲ್ಲಾ ಕುಟುಂಬದ ಸದಸ್ಯರು ನಡೆಸುತ್ತಿದ್ದು, ಪ್ರಸ್ತುತ ಪೀರ ಅಹ್ಮದ್ ಅಬ್ದುಲ್ ರೆಹಮಾನ್ ಮುಲ್ಲಾ ಮುಖ್ಯ ಮುಜಾವರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.