ಲಂಡನ್ 16, ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನ್ನು ಖುಲಾಸೆಗೊಳಿಸಿದ ಐರ್ಲೆಂಡ್ ನ್ಯಾಯಾಲಯದ ತೀಪರ್ಿನ ವಿರುದ್ಧ ವಿಶ್ವದಾದ್ಯಂತ ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವನಿತೆಯರು ಪ್ರತಿಭಟನೆ ರೂಪದಲ್ಲಿ ಒಳಉಡುಪು(ಅಂಡರ್ವೇರ್) ಚಿತ್ರಗಳನ್ನು ಟ್ವಿಟರ್ನಲ್ಲಿ ಪ್ರಕಟಿಸುತ್ತಾ ವಿನೂತನ ರೀತಿಯಲ್ಲಿ ತನ್ನ ಸಿಟ್ಟನ್ನು ದಾಖಲಿಸುತ್ತಿದ್ದಾರೆ.
ಏನಿದು ಪ್ರಕರಣ..?
ಐರ್ಲೆಂಡ್ನ ಕಾಕರ್್ ಸಿಟಿಯಲ್ಲಿ 27 ವರ್ಷದ ಯುವಕನೊಬ್ಬ 17 ವರ್ಷದ ತರುಣಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಆದರೆ ಆರೋಪಿಯನ್ನು ಸಿಟಿ ಆಫ್ ಕಾಕರ್್ನ ಕೋಟರ್್ ಖುಲಾಸೆಗೊಳಿಸಿತು. ಆ ಸಮಯದಲ್ಲಿ ಆ ಯುವತಿ ಪ್ರಚೋದನಾಕಾರಿಯಾದ ಲೇಸ್ ಇರುವ ಪಾರದರ್ಶಕ ಒಳ ಉಡುಪು ಧರಿದ್ದಳು ಎಂಬ ಕಾರಣಕ್ಕಾಗಿ ಯುವಕನನ್ನು ದೋಷಮುಕ್ತಗೊಳಿಸಲಾಗಿತ್ತು. ತರುಣಿಯೇ ಇಂಥ ಕಾಮ ಪ್ರಚೋದಕ ಒಳ ಉಡುಪು ಧರಿಸಿ ಯುವಕನನ್ನು ಆಕಷರ್ಿಸಿದ್ದರಿಂದ ಆತ ಮುಂದುವರಿದ. ಇದು ಅತ್ಯಾಚಾರವಾಗುವುದಿಲ್ಲ. ಆತ ತಪ್ಪು ಮಾಡಿಲ್ಲ ಎಂದು ಕೋಟರ್್ ದೋಷಮುಕ್ತಗೊಳಿಸಿರುವುದು ಈಗ ವಿಶ್ವದಾದ್ಯಂತ ಮಹಿಳೆಯರು ಮತ್ತು ಯುವತಿಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 'ಇದು ಒಪ್ಪತಕ್ಕದ್ದಲ್ಲ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟರ್ನಲ್ಲಿ ಮಹಿಳೆಯರು ತಮ್ಮ ಒಳ ಉಡುಪುಗಳನ್ನು ಅನೇಕಾನೇಕ ಚಿತ್ರಗಳನ್ನು ಶೇರ್ ಮಾಡುತ್ತಾ ಪ್ರತಿಭಟನೆ ನಡೆಸಿ ಕೇವಲ ಅಂಡರ್ವೇರ್ ಆಧಾರದ ಮೇಲೆ ನೀಡಿರುವ ಖುಲಾಸೆ ತೀಪರ್ಿನ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಐ ಬಿಲೀವ್ ಹರ್-ಐರ್ಲೆಂಡ್ ಎಂಬ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆ ತೆರೆದು ಅದರಲ್ಲೂ ಅಂಡರ್ವೇರ್ ಚಿತ್ರಗಳೊಂದಿಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ದಾಖಲಿಸುತ್ತಿದ್ದಾರೆ.
ಮತ್ತೊಂದು ಗಮನಾರ್ಹ ಸಂಗತಿ ಎಂದರೆ ವಾದ ಮಂಡಿಸುವಾಗ ಆರೋಪಿ ಪರ ವಕೀಲರು, ಆ ಸಮಯದಲ್ಲಿ (ಅತ್ಯಾಚಾರ) ಯುವತಿ ಧರಿಸಿದ್ದ ಲೇಸು ಇರುವ ತೇಳು ಒಳ ಉಡುಪನ್ನು ನ್ಯಾಯಾಲಯದ ಕೊಠಡಿಯಲ್ಲಿ ಮುಕ್ತವಾಗಿ ಪ್ರದಶರ್ಿಸಿದರು. ಆಕೆ ಆ ಸಮಯದಲ್ಲಿ ಯಾವ ರೀತಿ ಅತ್ಯಂತ ಕನಿಷ್ಠ ವಸ್ತ್ರ ಧರಿಸಿದ್ದಳು ಎಂಬುದಕ್ಕೆ ಇದೇ ಸಾಕ್ಷಿ. ಕೇವಲ ಲೇಸ್ ಇರುವ ಪಾರದರ್ಶಕ ಒಳ ಉಡುಪನ್ನು ಆಕೆ ಧರಿಸಿದ್ದಳು. ಆ ಮೂಲಕ ಯುವಕ ಮುಂದುವರಿಯಲು ಆಕಷರ್ಿಸಿ ಪ್ರಚೋದನೆ ನೀಡಿದಳು. ಇದರಲ್ಲಿ ಯುವಕನ ತಪ್ಪಿಲ್ಲ ಎಂದು ವಾದಿಸಿದ್ದರು. ಈ ವಾದವನ್ನೇ ಪರಿಗಣಿಸಿದ ನ್ಯಾಯಾಲಯ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿಲ್ಲ. ಇದು ಒಪ್ಪಿತ ದೈಹಿಕ ಸಂಪರ್ಕ ಎಂದು ಹೇಳಿ ತೀಪರ್ು ನೀಡಿತು. ಎಂಟು ಜನ ನ್ಯಾಯಾಧೀಶರು(ಜ್ಯೂರಿ ಅಥವಾ ತೀಪರ್ುಗಾರರು) ಇದ್ದ ಈ ಪೀಠದಲ್ಲಿ ನಾಲ್ವರು ಮಹಿಳಾ ನ್ಯಾಯಮೂತರ್ಿಗಳೂ ಇದ್ದರು ಎಂಬುದು ವಿಶೇಷ. ಕೇವಲ ಒಳ ಉಡುಪು ಧರಿಸಿದ ಮಾತ್ರಕ್ಕೆ ಅತ್ಯಾಚಾರ ಎಸಗುವುದಕ್ಕೆ ಅಥವಾ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಅನುಮತಿ ನೀಡಿದಂತಾಗುವುದಿಲ್ಲ ಎಂದು ವಿಶ್ವದಾದ್ಯಂತ ಮಹಿಳೆಯರು ಕಿಡಿಕಾರುತ್ತಿದ್ದಾರೆ.
ಮಹಿಳೆ ಯಾವ ರೀತಿ ಒಳ ಉಡುಪು ಧರಿಸುತ್ತಾಳೆ ಎಂಬ ಆಧಾರದ ಮೇಲೆ ಅದನ್ನೇ ವಿಚಾರಣೆಯ ಸಮಯದಲ್ಲಿ ಸಾಕ್ಷಿಯಾಗಿ ಬಳಸಿ ತಪ್ಪಿತಸ್ಥನನ್ನು ದೋಷಮುಕ್ತಗೊಳಿಸಲು ಸಾಧ್ಯವೇ ? ಅತ್ಯಾಚಾರಕ್ಕೆ ಒಳಗಾದ ಮುಗ್ಧ ಯುವತಿಯ ಬಗ್ಗೆ ಇಂಥ ಅಸಹ್ಯಕರ ವಾದವನ್ನು ಮಂಡಿಸಲು ಮತ್ತು ತೀಪರ್ು ನೀಡಲು ಹೇಗೆ ಸಾಧ್ಯ ಎಂದು ಹಲವು ಮಹಿಳೆಯರು ಪ್ರಶ್ನಿಸಿದ್ದಾರೆ.