(ವಿಶ್ವ ಮಹಿಳಾ ದಿನಾಚರಣೆ - ಮಾರ್ಚ 8)
ಮಾರ್ಚ 8 ಅಂತರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರಲ್ಲಿ ಆತ್ಮಗೌರವ, ಚೈತನ್ಯವನ್ನು, ಸ್ವಾವಲಂಬಿಯಾಗಿ ಜೀವಿಸುವ ಉದ್ದೇಶದಿಂದ 1910 ಮಾರ್ಚ 8 ರಂದು ವಿಶ್ವ ಸಂಸ್ಥೆಯು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಘೋಷಿಸಿತು. 2019ನೇಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶ “Think Equal, Build Smart, innovate for change”. Puts innovation by women and girls for women and girls, at the heart of efforts to achieve gender equality..
ನೂರು ವರ್ಷಗಳ ಹಿಂದೆ 1910ರಲ್ಲಿ ಕ್ಯಾರಾ ಜಟ್ಕೆನ್ನಂತ ಕಮ್ಯೂನಿಷ್ಟ ಮಹಿಳೆಯು ಶ್ರಮಿಕ ಮಹಿಳೆಯರಿಗೆ ಚೈತನ್ಯ ಹುಟ್ಟಿಸುವ ಗುರಿಯಿಂದ ಪ್ರಾರಂಭವಾದದ್ದು 'ಅಂತರಾಷ್ಟ್ರೀಯ ಮಹಿಳಾ ದಿನೋತ್ಸವ'. ಮುಂದೆ ಬರಬರುತ್ತ ಶ್ರಮಿಕ ಮಹಿಳೆಯರ ಪದವನ್ನು ಬಿಟ್ಟು ಹೋಯಿತು. 'ಸ್ತ್ರೀಯರೆಲ್ಲರೂ ಒಂದೇ' ಎಂಬ ಅಭಿಪ್ರಾಯಕ್ಕೆ ಬಂದಿದೆ.
ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ ಕಾಲದಿಂದಲು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಮಾನಸಿಕ, ದೈಹಿಕ ಹಿಂಸೆಯಂತಹ ದುಷ್ಕೃತ್ಯಗಳು ನಡೆಯುತ್ತಲೆ ಬಂದಿದೆ.
ಮನುಷ್ಯನ ಜೀವನದಲ್ಲಿ ಹೆಚ್ಚು ಸ್ಮರಣೆಯಲ್ಲಿರೋದು ದೇವರು ಮತ್ತು ಸ್ತ್ರೀ. ಹಾಗೆ ನೋಡಿದರೆ ದೇವರು ಭಯದಲ್ಲಿ ನಮ್ಮ ಅಲೌಕಿಕ ಪ್ರಪಂಚದಲ್ಲಿ ಅವತರಿಸಿದ್ದರೆ, ಹೆಣ್ಣು ನಮ್ಮ ಎದುರಿಗಿನ ಭಾವಜಗತ್ತಿನ ಶಕ್ತಿ, ಹೆಣ್ಣು ನಮ್ಮ ಬದುಕಿನ ಉದ್ದಕ್ಕೂ ಉಸಿರಂತೆ ಒಂದಾದ ಜೀವ ಶಿಶುವಿನಿಂದ ಶೈಶವಾವಸ್ಥೆವರೆಗು ಹೆಣ್ಣು ವಿವಿಧ ಹಂತದಲ್ಲಿ ನಮ್ಮ ಬದುಕಿನ ಜೀವ ಸೆಲೆಯಾಗಿ ಜೊತೆಯಾದವಳು, ಮಾತೆ, ಮಡದಿ, ಸಂಗಾತಿಯಾಗಿ ಕೊನೆಯವರೆಗು ಬದುಕಿನ ಶಕ್ತಿಯಾಗಿ ಸಲುಹಿದವಳು. ಆದರೆ ಬದುಕಿನುದ್ದಕ್ಕೂ ದೇವರು ನಮ್ಮ ಬೆಳವಣಿಗೆಯಲ್ಲಿ ಯಾವುದೇ ಪ್ರಭಾವ ಬೀರುವಷ್ಟು ಶಕ್ತಿ ಹೊಂದಿರುವುದಿಲ್ಲ.
ಅಂತಾರಾಷ್ಟ್ರೀಯ ಮಹಿಳಾದಿನವನ್ನು ಮಹಿಳೆಯರಲ್ಲಿ ಆತ್ಮಗೌರವದಿಂದ ಜೀವಿಸುವ ಉದ್ದೇಶದಿಂದ ಜಗತ್ತಿನಾದ್ಯಂತ ಸ್ತ್ರೀಯರನ್ನು ಕಡೆಗಣಿಸುತ್ತಾ ಸಾಗಿರುವುದು ವಿಪಯರ್ಾಸ. ವಿಶ್ವಮಹಿಳಾ ದಿನದಂದು ಸಭೆ, ಭಾಷಣ, ಭರವಸೆಗಳು ಜೋರಾಗಿರುತ್ತವೆ. ಇದು ಆ ದಿನ ಮಾತ್ರ. ಸಮಾಜ ಸುಧಾರಕರಾದ ರಾಜಾರಾಮ್ ಮೋಹನ್ರಾಯರು ಮಹಿಳೆಯರ ಮೇಲೆ ಜರುಗುತ್ತಿರುವ ಅನ್ಯಾಯ, ಅತ್ಯಾಚಾರ, ಅಸಮಾನತೆಯನ್ನು ನಿವಾರಿಸಲು ಶ್ರಮಿಸಿದರು, ಅವರ ಶ್ರಮಕ್ಕೆ ಸ್ವಲ್ಪ ಮಟ್ಟಿಗ ಫಲ ನೀಡಿದೆ ಆದರೆ ಪೂರ್ಣವಾಗಿ ನಿವಾರಣೆಯಾಗಿಲ್ಲ.
ಆಧುನಿಕ ಮಹಿಳೆಯರು ಸೈನ್ಯದಲ್ಲಿ ಸೇರುತ್ತಿದ್ದಾರೆ, ಅಂತರಿಕ್ಷಕ್ಕೆ ಹಾರಿದ್ದಾರೆ, ವಿಜ್ಞಾನ ತಂತ್ರಜ್ಞಾನದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ವಿಶ್ವ ಸುಂದರಿ, ಭುವನ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಪುರುಷರು ಮಾಡುವ ಎಲ್ಲ ಸಾಧನೆ ಮಾಡಿದರೂ ಸಹ ಇನ್ನೂ ಮನೆಯ ನಾಲ್ಕು ಗೋಡೆ ಮಧ್ಯೆ ಹಾಗೂ ಸಮಾಜದಲ್ಲಿ ವಿವಿಧ ಹಿಂಸೆಗೆ ತುತ್ತಾಗಿ, ಜೀವನ ಅಂತ್ಯಗೊಳ್ಳುತ್ತದೆ. ಮಹಿಳೆಯರು ಶಾರೀರಿಕವಾಗಿ, ಮಾನಸಿಕವಾಗಿ, ಶೋಷಣೆಗೊಳಗಾಗುವುದು ಮಾನವ ಹಕ್ಕುಗಳ ಉಲ್ಲಂಘನೆಯೆಂದು ಹೇಳಲಾಗುತ್ತದೆ. ನಮ್ಮ ಭಾರತದೇಶ ಕಾನೂನಿಗಳಗೇನೂ ಕೊರತೆಯಿಲ್ಲ ಆದರೆ ಅದನ್ನು ಜಾರಿಗೊಳಿಸುವ ಆಡಳಿತ ಕಾರ್ಯನಿರ್ವಹಿಸುತ್ತಿಲ್ಲ. ನಮ್ಮ ದೇಶದ ಕಾನೂನಿಕ ವ್ಯವಸ್ಥೆಯಲ್ಲಿ ಜಾತಿ, ಹಣ, ರಾಜಕೀಯ ಬಲದಿಂದ ಆರೋಪಗಳು ನಿರಪರಾಧಿಗಳಾಗಿ ಹೊರಬರುತ್ತಾರೆ. ನಮ್ಮ ನ್ಯಾಯಂಗ ವ್ಯವಸ್ಥೆಯು ಸಂಪೂರ್ಣ ಸಾಕ್ಷಿಗಳ ಮೇಲೆ ನಿಂತಿದೆ. ಸರಿಯಾದ ಸಾಕ್ಷಿ ಇಲ್ಲವೆಂದರೆ ಅರೋಪಿಯು ನಿರಪರಾದಿಯಾಗುತ್ತಾನೆ. ಇಂತಹ ಸ್ಥಿತಿಯಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ ಪಾಡು ದೇವರಿಗೆ ಗೊತ್ತು.
ನಮ್ಮ ದೇಶದಲ್ಲಿ ಜಾತಿ, ಮತ, ಪಂಥ, ಕಂದಾಚಾರ, ಮೂಢನಂಬಿಕೆಗಳಿಂದ ಸಮಾಜ ತತ್ತರಿಸಿದೆ. ಭ್ರೂಣಹತ್ಯೆ, ಶಿಶುಹತ್ಯೆ, ಲೈಂಗಿಕ ಕಿರುಕುಳ ಹಿಂಸೆ, ಇವೆಲ್ಲವೂ ಮಹಿಳಾ ಸಮುದಾಯವನ್ನು ಕಾಡುತ್ತಲೆ ಇದೆ. ಹೀಗಾಗಿ ಪುರುಷ-ಸ್ತ್ರೀ ಸಂಖ್ಯೆಯಲ್ಲಿ ಸಮತೋಲನ ವ್ಯಾಪಕವಾಗಿದೆ. ಪುರುಷರು ಮಹಿಳೆಯಿರಗೆ ಸರಿಸಮಾನ ಸ್ಥಾನ ಸ್ವಾವಲಂಬನೆಯಿಂದ ಜೀವಿಸಲು ಬಿಡುತ್ತಿಲ್ಲ. ಮಹಿಳೆಯರ ಮೇಲೆ ಶೋಷಣೆ, ತಾರತಮ್ಯ, ಅಸಮಾನತೆ ಇಂದಿಗೂ ಮುಂದುವರೆಯುತ್ತಿದೆ.
ನಮ್ಮ ಭಾರತ ದೇಶ ಸ್ವಾತಂತ್ರ್ಯ ಪಡೆದು 70 ವರ್ಷವಾದರೂ ಸ್ವಾತಂತ್ರ್ಯ ಪಡೆದವರು ಪುರುಷರು ಮಾತ್ರ. ಮಹಿಳೆಯರಿಗಿನ್ನೂ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಗಾಂಧಿಜಿ ಮಧ್ಯರಾತ್ರಿಯೂ ಒಂಟಿ ಮಹಿಳೆ ಭಾರತದಲ್ಲಿ ಸಂಚರಿಸುವ ಸಾಮಥ್ರ್ಯ ಬಂದಾಗ ಅದು ನಿಜವಾದ ಸ್ವಾತಂತ್ರ್ಯ. ಭಾರತೀಯರಲ್ಲಿ ಶಾಪವಾಗಿ ಕಾಡುತ್ತಿರುವ ಅಂಶವೆಂದರೆ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳನ್ನು ತಿರಸ್ಕಾರದಿಂದ ನೋಡುವುದು. ತಾಯಿಯ ಗರ್ಭದಲ್ಲಿಯೇ ಹೆಣ್ಣು ಮಗುವನ್ನು ಹತ್ಯೆ ಮಾಡುವುದು.
ಈ ಸಮಾಜದಲ್ಲಿ ಮಹಿಳೆಯರು ಬೇರೆ ಬೇರೆ ಕಾಯಕಗಳಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅವರ ಸಮಸ್ಯೆಗಳು ಬೇರೆ ಬೇರೆಯಾಗಿವೆ. ಕೆಲವು ಮಹಿಳೆಯರು ಕೊಳೆಯನ್ನು ಶುಭ್ರಮಾಡಿ, ಕೆಲವರು ಕಷ್ಟಪಟ್ಟು ಕೂಲಿ, ಜೀತದಾಳುಗಳಾಗಿ ಕೆಲಸ ಮಾಡುತ್ತಾ ಬದುಕುವ ಶ್ರಮಿಕ ವರ್ಗ ಬೇರೆ, ಯಾವ ಶ್ರಮವೂ ಇಲ್ಲದೆ ಬಡ್ಡಿ ಲಾಭಗಳನ್ನು ಸ್ವೀಕರಿಸುತ್ತಾ ಶ್ರಮ ಜೀವಿಗಳ ಆದಾಯವನ್ನು ಲೂಟಿ ಮಾಡಿ ತಿಂದು, ತೇಗುವ ಮಹಿಳಾವರ್ಗ ಬೇರೆ. ಬದುಕಿದಷ್ಟೂ ದಿನಗಳೂ ಅಕ್ಷರ ಜ್ಞಾನವಿಲ್ಲದೆ ಪಶುಗಳ ಸ್ಥಿತಿಯಲ್ಲಿ ಬದುಕುವ ಶ್ರಮಿಕ ವರ್ಗದ ಸ್ತ್ರೀಯರ ಸಮಸ್ಯೆಗಳು ಬೇರೆ. ಮಹಿಳೆಯರನ್ನು ಮಂತ್ರಿಗಳನಾಗಿ, ಮುಖ್ಯ ಮಂತ್ರಿಗಳನ್ನಾಗಿ, ಪ್ರಧಾನ ಮಂತ್ರಿಗಳನ್ನಾಗಿ ಮಾಡುವುದೇ ಮಹಿಳಾ ಉದ್ದಾರ ಎಂದು ನಂಬಿದರೆ ಅದು ಸತ್ಯಕ್ಕೆ ದೂರವಾದದ್ದು, ರಾಜಕೀಯದಲ್ಲಿ ಇರುವ ಮಹಿಳೆಯರ ಸಮಸ್ಯೆ, ಧನಿಕ ವರ್ಗ ಮಹಿಳೆಯರಿಗೆ ಇರುವುದಿಲ್ಲ. ಭಿನ್ನ ವರ್ಗಗಳಲ್ಲಿ, ಭಿನ್ನ ಜೀವನ ಶೈಲಿಯಲ್ಲಿರುವ ಸಮಸ್ತ ಮಹಿಳೆಯರೆನ್ನೆಲ್ಲರನ್ನೂ ಒಂದೇ ಚೌಕಟ್ಟಿನೊಳಕ್ಕೆ ತಂದು ನಡೆಸುವ ಮಹಿಳಾ ದಿನೋತ್ಸವಗಳು ಶ್ರಮಿಕ ಮಹಿಳೆಯರ ಪಾಲಿಗೆ ಒಂದು ಬ್ರಹ್ಮಾಂಡ. “Women are the Real Architects of society”.
ಡಾ|| ಎಸ್ ರಾಧಾಕೃಷ್ಣನ್ ರವರು ಹೇಳಿದ ಹಾಗೆ ಎಲ್ಲಿಯವರೆಗೆ ಮಹಿಳೆಯರನ್ನು ಆಳಿನಂತೆ ನಡೆಸಿಕೊಳ್ಳುತ್ತೇವೋ ಅಲ್ಲಿಯವರೆಗೆ ಸಮಾಜದಲ್ಲಿ ದುಸ್ಥಿತಿ ಮುಂದುವರೆಯುತ್ತದೆ. ಒಂದು ಜನಾಂಗ ಎಷ್ಟರಮಟ್ಟಿಗೆ ಪ್ರಗತಿ ಸಾಧಿಸಿದೆ ಎಂಬುದನ್ನು ನೋಡಬೇಕಾದರೆ ಆ ಜನಾಂಗ ಸ್ತ್ರೀಯರನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದಾರೆಂಬುದೇ ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು ಅವರ ಮಾತಿನಂತೆ ಹೆಣ್ಣು ಮಕ್ಕಳು ಸುಶಿಕ್ಷೆತರಾಗಿ ಸಮಾಜದಲ್ಲಿ ಗೌರವ ಸ್ಥಾನ ಪಡೆಯುವುದರ ಮೂಲಕ ತಲೆ ಎತ್ತಿ ಬದುಕುವ ಆತ್ಮಾಭಿಮಾನದಿಂದ ಮುನ್ನಡೆಯುವ ಹಕ್ಕು ಅವರಿಗಿದೆ. ಅದನ್ನು ಕಸಿಯುವ ಹಕ್ಕು ಕಡೆಗಣಿಸುವ ಹಕ್ಕು ಯಾರಿಗೂ ಇಲ್ಲ. “That Country and that nation which edo not
respect women have never become great, nor will ever be in future”.
ನಮ್ಮ ದೇಶದಲ್ಲಿ ಕಾನೂನುಗಳು ಬಿಗಿಯಾಗಿರಬೇಕು. ಆಡಳಿತಗಾರರು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸಮಾಡಬೇಕು. ತಪ್ಪು ಮಾಡಿದವರು ಯಾರೇ ಇರಲಿ, ಅವರನ್ನು ರಕ್ಷಿಸಬಾರದು. ಮನುಷ್ಯರು ಮಾನವೀಯತೆ ಮೈಗೂಡಿಸಿಕೊಳ್ಳಬೇಕು. ಪುರುಷನಾದವನು ಸ್ತ್ರೀಯಲ್ಲಿ ತಾಯಿ, ಅಕ್ಕ, ತಂಗಿಯನ್ನು ಕಾಣಬೇಕು. ಅಂತಹ ಮನೋಧರ್ಮ ಮನದಲ್ಲಿ ಮೂಡಿಸಿಕೊಳ್ಳಬೇಕು.
ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವುದಿಲ್ಲ. ಹೆಣ್ಣೊಂದು ಕಲಿತರೆ, ಪಾಠ ಶಾಲೆ ತೇರೆದಂತೆ ಎಂಬ ಗಾದೆಯಂತೆ, ಮಹಿಳೆಯರಿಗೆ ಶಿಕ್ಷಣ ನೀಡಿದರೆ, ಆ ತಾಯಿಯಂದರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಒಳ್ಳೆ ನಾಗರಿಕರನ್ನಾಗಿ ಬೆಳೆಸುತ್ತಾರೆ. ಇದರಿಂದ ನಾಗರಿಕ ಸಮಾಜಕ್ಕೂ ಒಳ್ಳೆಯದಾಗುತ್ತದೆ. ಮಹಿಳೆಯರ ಉದ್ಧಾರ ಮಹಿಳೆಯರಿಂದಲೂ ಆಗದು. ಮಹಿಳೆಯರ ಋಣವನ್ನೇ ಹೊತ್ತ ಪುರುಷರಿಂದಲೂ ಆಗದು. Men should not respect women only because, They are their sisters, mothers, daughters or wives. Men should respect women because they are people and people”.
ಜಗತ್ತಿನಲ್ಲಿ ಜನಾಂಗೀಯ ದ್ವೇಷವಿದೆ, ವರ್ಣ ದ್ವೇಷವಿದೆ, ಮತೀಯವಾದವಿದೆ. ಆದರೇ ಹೆಣ್ಣಿನ ವಿಷಯದಲ್ಲಿ ಈ ಎಲ್ಲ ದ್ವೇಷಗಳ ಮಧ್ಯೆಯೂ ಅವರು ಪ್ರತ್ಯೇಕವಾಗಿ ಹೆಣ್ಣನ್ನೂ ಶೋಷಿಸುತ್ತಲೇ ಈ ಪಂಥ ಪಂಗಡದ ಬೇಧವನ್ನು ಮುಂದುವರಿಸುತ್ತಿದ್ದಾರೆ. ಜಾತೀಯ ಸ್ತರದಲ್ಲಿಯೂ ಆ ಮನೆ ಇನ್ನೊಂದು ಶೋಷಿಸುತ್ತ ಮನೆತನದ ಜಾತಿಯಾಗಿಯೇ ಮುಂದುವರಿದಿದ್ದಾರೆ.
ಮಹಿಳಾ ದಿನೋತ್ಸವ ಆಚರಣೆಗಳೆನ್ನುವುದು, ಶ್ರಮ ಜೀವನದ ಮಹಿಳೆಯರಲ್ಲಿ ಚೈತನ್ಯವನ್ನುಂಟು ಮಾಡುವ ಪ್ರಯತ್ನಗಳನ್ನೇನಾದರೂ ಮಾಡಿದ್ದಾದರೆ ಮಹಿಳಾ ದಿನೋತ್ಸವ ಆಚರಣೆಗಳು ಉಪಯುಕ್ತ ಆಚರಣೆಗಳಾಗುತ್ತವೆ.
“International Women’s Day. What better way to celebrate it than to shine light on the ladies who have contributed to society with their”.
ಜಗದೀಶ ವಡ್ಡಿನ
ಗ್ರಂಥಪಾಲಕರು
ಬಾಡ, ಕಾರವಾರ
ಮೊ: 9632332185