ಸರಕಾರಿ ಸಕಲ ಗೌರವದೊಂದಿಗೆ ಯೋಧ ನಾಯ್ಕರ ಅಂತ್ಯಸಂಸ್ಕಾರ

ಬೈಲಹೊಂಗಲ ತಾಲೂಕಿನ ಮುರಕೀಬಾಂವಿ ಗ್ರಾಮದಲ್ಲಿ ಮೃತ ಯೋಧ ವಿನಾಯಕ ನಾಯ್ಕರ ಪಾಥರ್ಿವ ಶರೀರಕ್ಕೆ ಗಣ್ಯರು ಗೌರವ ಸಲ್ಲಿಸಿದರ


ಬೈಲಹೊಂಗಲ 10: ದೆಹಲಿ ಎಂಇಜಿ ರೆಜಿಮೆಂಟ್ ಆಮರ್ಿ ಪೋರ್ಸನಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ರವಿವಾರ ನಿಧನ ಹೊಂದಿದ ತಾಲೂಕಿನ ಮುರಕೀಬಾಂವಿ ಗ್ರಾಮದ ವೀರಯೋಧ ವಿನಾಯಕ ನಾಯ್ಕರ ಪಾಥರ್ಿವ ಶರೀರದ ಅಂತ್ಯಸಂಸ್ಕಾರ ಮಂಗಳವಾರ ಮುರಕೀಬಾಂವಿ ಗ್ರಾಮದಲ್ಲಿ ಸರಕಾರಿ ಸಕಲ ಗೌರವ ಮತ್ತು ವಿಧಿ ವಿಧಾನದ ಮೂಲಕ ನಡೆಯಿತು.

    ಪಾಥರ್ಿವ ಶರೀರವನ್ನು ಮುರಕೀಬಾಂವಿ ಬಸ್ ನಿಲ್ದಾಣದಿಂದ ಸಿದ್ಧಾರೂಡ ಮಠದವರೆಗೆ ಸಾವಿರಾರು ಗ್ರಾಮಸ್ಥರು ಭವ್ಯ ಮೆರವಣಿಗೆ ಮೂಲಕ ಶ್ರೀಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮೆರವಣಿಗೆ ಉದ್ದಕ್ಕೂ ಮೃತ ಯೋಧನಿಗೆ ಜೈಕಾರ ಹಾಕಿದರು. 

     ಡಿಆರ್ ಪೋಲಿಸ್ ಪಡೆ ಮತ್ತು ಮಿಲಟರಿ ಪಡೆ ಯೋಧರು ಐದು ಸುತ್ತಿನ ಆಕಾಶದೆತ್ತರಕ್ಕೆ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಯೋಧನ ನಿಧನದ ಸುದ್ದಿ ಕೇಳಿ ಮುರಕೀಬಾಂವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ನಿರವ ಮೌನ ಆವರಿಸಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

   ಮಲ್ಲಾಪೂರ ಚಿದಾನಂದ ಸ್ವಾಮೀಜಿ, ದಾಸ್ತಿಕೊಪ್ಪ ಜನಕರಾಜ ಸ್ವಾಮೀಜಿ, ಹವಾಲ್ದಾರ ನಾಗೇಂದ್ರ ಎಂ.ಜಿ, ಸುಬೇದಾರ ರಾಮಪ್ಪ ಗನಿ, ಸಿದ್ದಪ್ಪ ಕುರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ, ತಾಪಂ ಸಹಾಯಕ ನಿದರ್ೆಶಕ ಸುಭಾಶ ಸಂಪಗಾಂವಿ, ಕಂದಾಯ ನೀರಿಕ್ಷಕ ವಿ.ಬಿ.ಬಡಗಾಂವಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎಫ್.ದೊಡಗೌಡರ, ಡಾ. ಮಹಾಂತೇಶ ಕಳ್ಳಿಬಡ್ಡಿ, ನಿಂಗನಗೌಡ ದೊಡಗೌಡರ, ಸಿದ್ದಾರೂಡ ಶಿಕ್ಷಣ ಸಂಸ್ಥೆ ಸಿಬ್ಬಂದಿ, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿಡಿಓ, ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಶಿಕ್ಷಕರು, ವಿದ್ಯಾಥರ್ಿಗಳು, ನೇಸರಗಿ ಪೋಲಿಸ್ ಇಲಾಖೆ ಸಿಬ್ಬಂದಿ, ನಿವೃತ್ತ ಯೋಧರು, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.