ಲೋಕದರ್ಶನ ವರದಿ
ತಾಳಿಕೋಟಿ 12: ಬಕ್ರೀದ್ ಹಬ್ಬವು ಇಸ್ಲಾಮಿನ ಪ್ರವಾದಿ ಇಬ್ರಾಹೀಂ ಹಾಗೂ ಅವರ ಪುತ್ರ ಇಸ್ಮಾಯೀಲರು ದೇವ ಸಂಪ್ರೀತಿಗಾಗಿ ಮಾಡಿದ ತ್ಯಾಗಗಳನ್ನು ಸ್ಮರಿಸುವ ದಿನವಾಗಿದೆ ಎಂದು ಡಾ.ಮಿನ್ಹಾಜುದ್ದೀನ ಖಾಜಿ ತಿಳಿಸಿದರು.
ಬಕ್ರೀದ್ ಹಬ್ಬದ ನಿಮಿತ್ಯ ಸಾವಿರಾರು ಮುಸ್ಲೀಂ ಬಾಂಧವರು ಪಟ್ಟಣದ ನೂತನ ಈದ್ಗಾ ಮೈದಾನದಲ್ಲಿ ಸೇರಿ ಈದ್ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಈದ್ ಪ್ರವಚನವನ್ನು ನೀಡಿದ ಅವರು- ಈ ಹಬ್ಬವು ತ್ಯಾಗ-ಬಲಿದಾನಗಳ ಪ್ರತೀಕವಾಗಿದೆ. ಸುಮಾರು 4 ಸಾವಿರ ವರ್ಷಗಳ ಹಿಂದೆ ಇತಿಹಾಸ ಪುರುಷ ಪ್ರವಾದಿ ಇಬ್ರಾಹೀಂರು ಭೂಮಿಯಿಂದ ಅನಾಯ್ಯ, ಅಕ್ರಮ, ಅಶಾಂತಿಯನ್ನು ಅಳಿಸಿ ಹಾಕಿ ಶಾಂತಿ ಹಾಗೂ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಲು ಅವಿರತ ಹೋರಾಟವನ್ನು ನಡೆಸಿದರು. ಪ್ರವಾದಿ ಮಹಮ್ಮದರು ತಮ್ಮ ಅನುಯಾಯಿಗಳಿಗೆ ಈ ಹಬ್ಬವನ್ನು ಆಚರಿಸಬೇಕೆಂಬ ಆದೇಶ ನಿಡಿದರು ಎಂದು ಅವರು ತಿಳಿಸಿದರು.
ಜಿಲ್ಲಾ ವಕ್ಫ ಸಮೀತಿ ಉಪಾಧ್ಯಕ್ಷ ಸೈಯದ ಶಕೀಲ ಅಹಮ್ಮದ ಖಾಜಿ, ಈದ್ಗಾ ಸಮೀತಿ ಅಧ್ಯಕ್ಷ ಖಾಜಾ ಹುಸೇನ ಡೋಣಿ, ಉಪಾಧ್ಯಕ್ಷ ಅಬ್ದುಲ್ರಜಾಕ ಮನಗೂಳಿ, ಕಾರ್ಯದರ್ಶಿ ಎ.ಡಿ ಇಕೀನ, ಜಾಮಿಯಾ ಮಸ್ಜಿದ ಅಧ್ಯಕ್ಷ ಅಲ್ಲಾಬಕ್ಷ ನಮಾಜಕಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ಮಾಸೂಮ್ ಸಾಬ ಕೆಂಭಾವಿ, ವೆಲ್ಫೇರ್ ಕಮಿಟಿ ಅಧ್ಯಕ್ಷ ಮಹೆಬೂಬ ಚೋರಗಸ್ತಿ, ಮಂಜೂರ ಬೇಪಾರಿ, ಮುಸ್ಲೀಂ ಬ್ಯಾಂಕ ಅಧ್ಯಕ್ಷ ಆದಮಸಾಬ ಅತ್ತಾರ, ನಿರ್ದೇಶಕ ಅಬ್ದುಲ್ಸತ್ತಾರ ಅವಟಿ, ರಾಜಅಹ್ಮದ ಒಂಟಿ, ಮಹೆಬೂಬಶಾ ಮಕಾನದಾರ, ಬುಡನಶಾ ಮಕಾನದಾರ, ಮೋದಿನ ನಗಾಚರ್ಿ, ಜಮಾಅತೆ ಇಸ್ಲಾಮೀ ಹೀಂದ್ ಅಧ್ಯಕ್ಷ ಉಸ್ಮಾನಗನಿ ಖಾಜಿ, ಅಬ್ದುಲಸತ್ತಾರ ಅವಟಿ, ಆದಮಸಾಬ ಅತ್ತಾರ, ನಿರಂಜನಶಾ ಮಕಾನದಾರ, ಮಹೆಬೂಬ ಕೆಂಭಾವಿ, ಅಜರ್ುನಗಿ ಮುನ್ನಾ, ನಬಿ ಹುಣಶ್ಯಾಳ ಇತರರು ಉಪಸ್ಥಿತರಿದ್ದರು.